< Génesis 34 >
1 Entonces Dina, la hija que Lea había tenido con Jacob, salió a ver a las mujeres de ese país.
ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವುದಕ್ಕಾಗಿ ಹೊರಗೆ ಹೋದಳು.
2 Y cuando Siquem, hijo de Hamor heveo, que era el jefe de aquella tierra, la vio, la tomó por la fuerza y tuvo relaciones con ella.
ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ತೆಗೆದುಕೊಂಡುಹೋಗಿ ಮಾನಭಂಗ ಮಾಡಿದನು.
3 Entonces su corazón se enamoró de Dina, la hija de Jacob, y él le dijo palabras de consuelo.
ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು.
4 Y Siquem dijo a Hamor su padre: Tráeme esta niña por mi mujer.
ಶೆಕೆಮನು ತನ್ನ ತಂದೆ ಹಮೋರನಿಗೆ, “ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ಹೇಳು,” ಎಂದನು.
5 Ahora Jacob tenía noticias de lo que Siquem le había hecho a su hija; pero sus hijos estaban en los campos con el ganado, y Jacob no dijo nada hasta que llegaron.
ಯಾಕೋಬನು ತನ್ನ ಮಗಳಾದ ದೀನಳನ್ನು ಶೆಕೆಮನು ಕೆಡಿಸಿದ್ದಾನೆಂದು ಕೇಳಿದಾಗ, ಅವನ ಮಕ್ಕಳು ಅವನ ಪಶುಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವವರೆಗೆ ಯಾಕೋಬನು ಸುಮ್ಮನಿದ್ದನು.
6 Entonces Hamor, padre de Siquem, salió a hablar con Jacob.
ಆಗ ಶೆಕೆಮನ ತಂದೆ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು.
7 Y los hijos de Jacob vinieron de los campos cuando tuvieron noticias de él, y fueron heridos y muy enojados por la vergüenza que había hecho en Israel al tener relaciones con la hija de Jacob; y ellos dijeron: Tal cosa no se debe hacer.
ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು.
8 Y Hamor les dijo: Siquem, hijo mío, está lleno de deseo por tu hija; Les ruego que se la den por esposa.
ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
9 y se junten nuestros dos pueblos; danos a tus hijas, y toma a nuestras hijas para ustedes.
ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ.
10 Continúa viviendo con nosotros, y el país estará abierto para ti; hacer comercio y obtener propiedades allí.
ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ, ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು.
11 Y Siquem dijo a su padre y a sus hermanos: Si prestas oído a mi petición, todo lo que dices te lo daré.
ಬಳಿಕ ಶೆಕೆಮನು ಆಕೆಯ ತಂದೆಗೂ, ಆಕೆಯ ಸಹೋದರರಿಗೂ, “ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ, ನೀವು ಕೇಳಿದ್ದನ್ನು ನಾನು ನಿಮಗೆ ಕೊಡುವೆನು.
12 Por grande que sea el precio de la novia y el pago, yo lo daré; solo déjame tener a la niña por mi esposa.
ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ,” ಎಂದನು.
13 Pero los hijos de Jacob dieron una respuesta falsa a Siquem y a Hamor su padre, por lo que le habían hecho a Dina su hermana.
ಆಗ ಯಾಕೋಬನ ಮಕ್ಕಳು ಶೆಕೆಮನಿಗೂ, ಅವನ ತಂದೆ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಏಕೆಂದರೆ ಅವನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದನು.
14 Y dijeron: No es posible que entreguemos a nuestra hermana a uno que no tenga circuncisión, porque eso sería motivo de vergüenza para nosotros:
ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿ ಇಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು. ಅದು ನಮಗೆ ಅವಮಾನ.
15 Pero con esta condición sólo llegaremos a un acuerdo con ustedes: si cada varón entre ustedes llega a ser como nosotros y se somete a la circuncisión;
ಆದರೆ ನೀವು ನಮ್ಮ ಹಾಗಿದ್ದು, ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಂಡರೆ ಮಾತ್ರ ನಾವು ನಿಮಗೆ ಒಪ್ಪುವೆವು.
16 Entonces te daremos nuestras hijas y tomaremos sus hijas, y viviremos contigo como un solo pueblo.
ನಮ್ಮ ಪುತ್ರಿಯರನ್ನು ನಿಮಗೆ ಕೊಟ್ಟು, ನಿಮ್ಮ ಪುತ್ರಿಯರನ್ನು ತೆಗೆದುಕೊಳ್ಳುವೆವು. ಇದಲ್ಲದೆ ನಾವು ನಿಮ್ಮೊಂದಿಗೆ ವಾಸಮಾಡಿ, ಒಂದೇ ಜನಾಂಗವಾಗುವೆವು.
17 Pero si no te sometes a la circuncisión como decimos, entonces tomaremos a nuestra hija y nos iremos.
ಆದರೆ ನೀವು ನಮ್ಮ ಮಾತನ್ನು ಕೇಳದೆ, ಸುನ್ನತಿ ಮಾಡಿಸಿಕೊಳ್ಳದೆ ಹೋದರೆ, ನಮ್ಮ ಹುಡುಗಿಯನ್ನು ನಾವು ಕರೆದುಕೊಂಡು ಹೋಗಿಬಿಡುತ್ತೇವೆ,” ಎಂದು ಹೇಳಿದರು.
18 Y sus palabras fueron agradables a Hamor y a su hijo Siquem.
ಅವರ ಮಾತುಗಳು ಹಮೋರನಿಗೂ, ಅವನ ಮಗ ಶೆಕೆಮನಿಗೂ ಯೋಗ್ಯವಾಗಿ ಕಂಡವು.
19 Y sin pérdida de tiempo, el joven hizo como dijeron, porque se deleitaba con la hija de Jacob, y era la más noble de la casa de su padre.
ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
20 Entonces Hamor y Siquem, su hijo, fueron al lugar de reunión de su pueblo, y dijeron a los hombres de la ciudad:
ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ,
21 Es el deseo de estos hombres estar en paz con nosotros; que sigan viviendo en este país y comerciando aquí, porque el país está abierto de par en par delante de ellos; tomemos a sus hijas como esposas y déjenos darles nuestras hijas.
“ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ದೇಶದಲ್ಲಿ ವಾಸಮಾಡಿ, ಅದರಲ್ಲಿ ವ್ಯಾಪಾರಮಾಡಲಿ. ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಪುತ್ರಿಯರನ್ನು ನಮಗೆ ಹೆಂಡತಿಯರನ್ನಾಗಿ ಮಾಡಿಕೊಳ್ಳೋಣ ಮತ್ತು ನಮ್ಮ ಪುತ್ರಿಯರನ್ನು ಅವರಿಗೆ ಕೊಡೋಣ.
22 Pero estos hombres harán un acuerdo con nosotros para seguir viviendo con nosotros y llegar a ser un solo pueblo, solo con la condición de que cada varón entre nosotros se someta a la circuncisión como lo han hecho.
ಸುನ್ನತಿ ಮಾಡಿಸಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಮಾಡುವುದಕ್ಕೂ, ಒಂದೇ ಜನಾಂಗವಾಗುವುದಕ್ಕೂ ಒಪ್ಪುವರು.
23 Entonces, serán nuestros, sus vacas y sus bienes, y todas sus bestias así que lleguemos a un acuerdo con ellos para que puedan seguir viviendo con nosotros.
ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು.
24 Entonces todos los hombres de la ciudad escucharon las palabras de Hamor y Siquem su hijo; y cada varón en la ciudad se sometió a la circuncisión.
ಆಗ ಪಟ್ಟಣದ ದ್ವಾರದಲ್ಲಿ ಹೋಗುವ ಗಂಡಸರೆಲ್ಲರೂ ಹಮೋರನೂ, ಅವನ ಮಗ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ, ಒಪ್ಪಿಕೊಂಡರು. ಹೀಗೆ ಪಟ್ಟಣದಲ್ಲಿದ್ದ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
25 Pero al tercer día después, antes de que las heridas estuvieran sanas, dos de los hijos de Jacob, Simeón y Leví, hermanos de Dina, tomaron sus espadas, y vinieron a la ciudad por sorpresa y mataron a todos los varones.
ಮೂರನೆಯ ದಿನದಲ್ಲಿ ಅವರಿಗೆ ನೋವುಂಟಾದಾಗ, ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ, ದೀನಳ ಸಹೋದರರಾದ ಸಿಮೆಯೋನನೂ, ಲೇವಿಯೂ ತಮ್ಮ ತಮ್ಮ ಖಡ್ಗಗಳನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು, ಗಂಡಸರನ್ನೆಲ್ಲಾ ಕೊಂದುಹಾಕಿದರು.
26 Y mató Hamor y su hijo a cuchillo, y tomaron a Dina de la casa de Siquem, y se fueron.
ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು.
27 Y los hijos de Jacob vinieron sobre ellos cuando fueron heridos, y asolaron la ciudad por lo que le habían hecho a su hermana;
ಅವರು ತಮ್ಮ ಸಹೋದರಿಯನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಬಂದು ಆ ಊರನ್ನೇ ಕೊಳ್ಳೆಹೊಡೆದರು.
28 Tomaron sus rebaños, sus vacas, sus asnos y todo lo que había en su pueblo y en sus campos,
ಪಟ್ಟಣದಲ್ಲಿಯೂ, ಹೊಲದಲ್ಲಿಯೂ ಇದ್ದ ಅವರ ಕುರಿ, ದನ, ಕತ್ತೆಗಳನ್ನು ತೆಗೆದುಕೊಂಡರು.
29 Y todas sus riquezas, y todos sus pequeños y sus mujeres los llevaron prisioneros; todo en sus casas lo robaron.
ಅವರ ಎಲ್ಲಾ ಆಸ್ತಿಯನ್ನೂ, ಅವರ ಎಲ್ಲಾ ಚಿಕ್ಕ ಮಕ್ಕಳನ್ನೂ, ಅವರ ಹೆಂಡತಿಯರನ್ನೂ ಸೆರೆಹಿಡಿದು, ಮನೆಯಲ್ಲಿ ಇದ್ದದ್ದೆಲ್ಲವನ್ನೂ ಅವರು ಕೊಳ್ಳೆಹೊಡೆದರು.
30 Y Jacob dijo a Simeón y a Leví: Tú me has causado molestias, y has maldecido a los pueblos de esta tierra, entre los cananeos y los ferezeos; y como somos pocos, se unirán contra mi y harán guerra; y será mi destrucción y de toda mi gente.
ಆಗ ಯಾಕೋಬನು ಸಿಮೆಯೋನನಿಗೂ, ಲೇವಿಗೂ, “ನೀವು ನನ್ನನ್ನು ಈ ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯವಾಗುವಂತೆ ಮಾಡಿ, ನನ್ನನ್ನು ಕಳವಳಪಡಿಸಿದಿರಿ. ನಾವು ಸ್ವಲ್ಪ ಜನರು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ದಾಳಿಮಾಡುವರು. ಆಗ ನಾನೂ, ನನ್ನ ಮನೆಯವರೂ ನಾಶವಾಗುವೆವು,” ಎಂದನು.
31 Pero ellos dijeron: ¿Debíamos dejarle usar a nuestra hermana como una mujer prostituta?
ಆದರೆ ಅವರು, “ಅವನು ನಮ್ಮ ತಂಗಿಯನ್ನು ವೇಶ್ಯೆಯಂತೆ ನಡೆಸಬಹುದೋ?” ಎಂದರು.