< Salmos 121 >
1 Cántico gradual. ALZARÉ mis ojos á los montes, de donde vendrá mi socorro.
೧ಯಾತ್ರಾಗೀತೆ. ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವುದು?
2 Mi socorro [viene] de Jehová, que hizo los cielos y la tierra.
೨ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ, ನನ್ನ ಸಹಾಯವು ಬರುತ್ತದೆ.
3 No dará tu pie al resbaladero; ni se dormirá el que te guarda.
೩ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ; ನಿನ್ನನ್ನು ಕಾಯುವವನು ತೂಕಡಿಸದಿರಲಿ.
4 He aquí, no se adormecerá ni dormirá el que guarda á Israel.
೪ಇಗೋ, ಇಸ್ರಾಯೇಲರನ್ನು ಕಾಯುವಾತನು, ತೂಕಡಿಸುವುದೂ ಇಲ್ಲ, ನಿದ್ರಿಸುವುದೂ ಇಲ್ಲ.
5 Jehová es tu guardador: Jehová es tu sombra á tu mano derecha.
೫ನಿನ್ನನ್ನು ಕಾಯುವವನು ಯೆಹೋವನೇ; ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ.
6 El sol no te fatigará de día, ni la luna de noche.
೬ಹಗಲಿನಲ್ಲಿ ಸೂರ್ಯನೂ, ಇರುಳಿನಲ್ಲಿ ಚಂದ್ರನೂ, ನಿನ್ನನ್ನು ಬಾಧಿಸುವುದಿಲ್ಲ.
7 Jehová te guardará de todo mal: él guardará tu alma.
೭ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; ನಿನ್ನ ಪ್ರಾಣವನ್ನು ಕಾಯುವನು.
8 Jehová guardará tu salida y tu entrada, desde ahora y para siempre.
೮ನೀನು ಹೋಗುವಾಗಲೂ, ಬರುವಾಗಲೂ, ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.