< Ezequiel 21 >

1 La Palabra de Yavé vino a mí:
ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2 Hijo de hombre, pon tu rostro hacia Jerusalén y predica contra las cosas sagradas. Profetiza contra la tierra de Israel:
“ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖವಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸಿ,
3 Yavé dice: Ciertamente Yo estoy contra ti. Sacaré mi espada de su vaina. Cortaré de ti a inocentes y a culpables.
‘ಇಸ್ರಾಯೇಲ್ ದೇಶಕ್ಕೆ ಹೇಳಬೇಕಾದದ್ದೇನೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರಗೆ ತೆಗೆದು, ನಿನ್ನೊಳಗಿರುವ ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವೆನು.
4 Mi espada saldrá de su vaina contra toda persona de sur a norte. Cortaré de ti al justo y al perverso.
ಆಮೇಲೆ ನಾನು ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವುದರಿಂದ ನನ್ನ ಖಡ್ಗವು ದಕ್ಷಿಣದಿಂದ ಮೊದಲುಗೊಂಡು ಉತ್ತರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆಯನ್ನು ಬಿಟ್ಟು ಹೋಗುವುದು.
5 Toda persona sabrá que Yo, Yavé, saqué mi espada de su vaina, y que no volverá a ella.
ಆಗ ಯೆಹೋವ ದೇವರಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹೊರಗೆ ತೆಗೆದೆನೆಂದು ಜನರೆಲ್ಲರಿಗೂ ತಿಳಿಯುವುದು, ಅದು ಮತ್ತೆ ತಿರುಗಿ ಬರುವುದೇ ಇಲ್ಲ.’
6 Y tú, hijo de hombre, gime a vista de ellos con corazón quebrantado y amargo dolor.
“ಆದ್ದರಿಂದ ಮನುಷ್ಯಪುತ್ರನೇ, ನರಳಾಡು! ಮುರಿದ ಹೃದಯ ಮತ್ತು ಕಹಿ ದುಃಖದಿಂದ ಅವರ ಮುಂದೆ ನರಳಾಡು.
7 Cuando te pregunten: ¿Por qué gimes? dirás: Por causa de una noticia que cuando llegue desfallecerá todo corazón. Todas las manos se debilitarán. Todo espíritu se angustiará y toda rodilla se aflojará como el agua. Ciertamente viene y se cumplirá, dice ʼAdonay Yavé.
‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
8 La Palabra de Yavé vino a mí:
ಯೆಹೋವ ದೇವರ ವಾಕ್ಯವು ನನಗೆ ಬಂದಿತು,
9 Hijo de hombre, profetiza: Yavé dice: ¡Espada, espada afilada y pulida!
“ಮನುಷ್ಯಪುತ್ರನೇ, ಪ್ರವಾದಿಸಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು: “‘ಆ ಒಂದು ಖಡ್ಗವು ಹದಮಾಡಲಾಗಿದೆ; ಮೆರುಗೂ ಸಹ ಮಾಡಲಾಗಿದೆ.
10 Afilada, para una matanza, pulida para que resplandezca como un relámpago. ¿Nos regocijaremos? Al cetro de mi hijo lo desprecia como a cualquier vara.
ಸಂಹರಿಸಲು ಸಾಣೆಹಿಡಿದಿದೆ; ಮಿಂಚುವಂತೆ ಮಸೆಯಲಾಗಿದೆ. “‘ಹಾಗಾದರೆ ನನ್ನ ಮಗ ಯೆಹೂದದ ರಾಜದಂಡದಲ್ಲಿ ನಾವು ಸಂತೋಷ ಪಡಬಹುದೋ? ಅಂಥ ಪ್ರತಿಯೊಂದು ಬೆತ್ತವನ್ನೂ ಖಡ್ಗವು ತಿರಸ್ಕರಿಸುತ್ತದೆ.
11 Él la entregó para que sea pulida y manejada. ¡La espada está afilada y pulida para ponerla en mano del matador!
“‘ಖಡ್ಗವು ಕೈಯಲ್ಲಿ ಅದು ಹಿಡಿಯಲಾಗುವ ಹಾಗೆ ಮಸೆಯಲು ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಖಡ್ಗಕ್ಕೆ ಹದವನ್ನೂ, ಸಾಣೆಯನ್ನೂ ಮಾಡಲಾಗಿದೆ.
12 Clama y lamenta, hijo de hombre, porque esto es contra mi pueblo y todos los magistrados de Israel. Ellos son entregados a la espada juntamente con mi pueblo. Por tanto golpea tu muslo.
ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು. ಏಕೆಂದರೆ ಅದು ನನ್ನ ಜನರ ಮೇಲೆಯೂ, ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಇರುವುದು. ಖಡ್ಗದ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವುದು. ಆದ್ದರಿಂದ ನಿನ್ನ ಎದೆಯನ್ನು ಬಡಿದುಕೋ.
13 Porque se hizo la prueba. ¡Que se duplique y se triplique el furor de la espada homicida! ¿Qué si la espada desprecia aun el cetro? Él no será más, dice ʼAdonay Yavé.
“‘ಪರಿಶೋಧನೆಯು ಖಂಡಿತವಾಗಿ ಬರುವುದಿಲ್ಲ. ಖಡ್ಗವು ತಿರಸ್ಕರಿಸುವ ಯೆಹೂದದ ರಾಜದಂಡವು ಮುಂದುವರಿಯದಿದ್ದರೆ ಹೇಗೆ? ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
14 Hijo de hombre, profetiza y bate las manos. Que se duplique y se triplique el furor de la espada homicida, la espada de la gran matanza que los traspasará.
“ಆದ್ದರಿಂದ ನೀನು ಮನುಷ್ಯಪುತ್ರನೇ, ಕೈಗೆ ಕೈತಟ್ಟಿ ಪ್ರವಾದಿಸು. ಹತರಾದವರ ಖಡ್ಗವಾದ ಆ ಖಡ್ಗವೇ ಎರಡರಷ್ಟು, ಮೂರರಷ್ಟು ಸಂಹರಿಸಲಿ. ಪ್ರಜೆಯನ್ನು ಹತಿಸುವ ಆ ಖಡ್ಗ ಸುತ್ತಲೂ ಬೀಸಿ ಆ ಕೊಠಡಿಗಳಲ್ಲಿ ಸೇರುವವರನ್ನು ಆ ದೊಡ್ಡ ಖಡ್ಗ ಸಂಹರಿಸುವುದು.
15 Entregué la espada brillante para que desmaye el corazón y se multipliquen los muertos en todas sus puertas. ¡Ay! Dispuesta está para que relumbre, preparada para degollar.
ಅವರ ಹೃದಯವು ಕರಗುವ ಹಾಗೆಯೂ, ಅವರ ಎಲ್ಲಾ ಬಾಗಿಲುಗಳಲ್ಲಿ ಪತನವು ಹೆಚ್ಚಾಗುವ ಹಾಗೆಯೂ ಖಡ್ಗದ ಮೊನೆ ಇಟ್ಟಿದ್ದೇನೆ. ಆಹಾ, ಮಿಂಚಿನಂತೆ ಹೊಡೆಯಲು ಈ ಬಲೆ ಹೆಣೆಯಲಾಗಿದೆ ಅದನ್ನು ಕೊಲೆಮಾಡುವುದಕ್ಕೆ ಮಸೆಯಲಾಗಿದೆ.
16 Corta a la derecha, golpea a la izquierda, a dondequiera que te muevas.
ಖಡ್ಗವೇ ಬಲಕ್ಕೆ ಹೊಡೆ, ಎಡಕ್ಕೆ ಹೊಡೆ, ನಿನ್ನ ಅಲಗು ತಿರುಗಿದ ಕಡೆಗೆಲ್ಲಾ ಹೊಡೆ.
17 Yo también batiré mis manos y calmaré mi furor. Yo, Yavé, hablé.
ನಾನೂ ಸಹ ಕೈತಟ್ಟಿ ನನ್ನ ರೋಷವನ್ನು ತೀರಿಸಿಕೊಳ್ಳುವೆನು, ಎಂದು ಯೆಹೋವ ದೇವರಾದ ನಾನು ಹೇಳಿದ್ದೇನೆ.”
18 La Palabra de Yavé vino a mí:
ಯೆಹೋವ ದೇವರ ವಾಕ್ಯವು ನನಗೆ ಬಂದಿತು:
19 Y tú, hijo de hombre, traza dos caminos para la espada del rey de Babilonia. Los dos saldrán de una misma tierra. Pon una señal al comienzo de cada camino que indique a la espada la ciudad adonde va.
“ಮನುಷ್ಯಪುತ್ರನೇ, ಬಾಬಿಲೋನಿನ ಅರಸನ ಖಡ್ಗವು ಬರುವ ಹಾಗೆ ನೀನು ಎರಡು ಮಾರ್ಗಗಳನ್ನು ನೇಮಿಸಿಕೋ. ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟ ಹಾಗಿರಲಿ. ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
20 Señala el camino para que la espada vaya a Rabá de los hijos de Amón, a Judá y contra Jerusalén, la ciudad fortificada.
ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ, ಯೆಹೂದದ ಕೋಟೆ ಕೊತ್ತಲಗಳಿಂದ ಕುಡಿದ ಯೆರೂಸಲೇಮಿಗೂ ಆ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.
21 Porque el rey de Babilonia se detuvo en una encrucijada al comienzo de dos caminos. Allí usó la brujería: sacudió las flechas, consultó a sus ídolos y observó el hígado.
ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ.
22 La brujería señaló a su mano derecha, a Jerusalén, para ordenar el ataque, comenzar la matanza, levantar el grito de guerra, emplazar vigas largas y pesadas a fin de lanzarlas contra las puertas, levantar terraplenes y hacer torres de asalto.
ಅವನ ಬಲಗೈಯಲ್ಲಿ ಯೆರೂಸಲೇಮಿಗಾಗಿ ಶಕುನವು ಇತ್ತು. ಅಲ್ಲಿ ಅವನು ಬಡಿಯುವ ಆಯುಧಗಳನ್ನಿಟ್ಟು, ಬಾಯಿಬಿಟ್ಟು ಸಂಹಾರ ಧ್ವನಿಗೈದು, ಆರ್ಭಟವಿಟ್ಟು ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ದಿಬ್ಬ ಹಾಕಿ, ಒಡ್ಡು ಕಟ್ಟಿದ್ದು ಸೂಚನೆಯಾಗಿದೆ.
23 Pero a ellos les pareció falsa la brujería, porque les habían hecho solemnes juramentos. Pero él recuerda la iniquidad de ellos para que sean atrapados.
ಆದರೆ ಅವರು ತಾವು ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ನಂಬಿಕೆ ಇಟ್ಟಿದ್ದರಿಂದ, ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವುದು. ಆದರೆ ಅವನು ಅವರ ಅಕ್ರಮವನ್ನು ಜ್ಞಾಪಕಪಡಿಸಿ, ಅವರನ್ನು ಸೆರೆಯಾಗಿ ಒಯ್ಯುವನು.
24 Por tanto ʼAdonay Yavé dice: Porque su iniquidad fue recordada. Sus transgresiones fueron descubiertas de tal modo que en todas sus obras aparecen sus pecados, pues llegaron al recuerdo. Serán entregados en su mano.
“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಿಮ್ಮ ದ್ರೋಹಗಳು ಪ್ರಕಟವಾಗಿ, ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ, ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಗೆ ಸಿಕ್ಕಿ ಬೀಳುವಿರಿ.
25 Tú, ¡oh profano y perverso rey de Israel, tu día llegó, la hora del castigo final!
“‘ದುಷ್ಟನಾದ ಭ್ರಷ್ಟ ಇಸ್ರಾಯೇಲಿನ ರಾಜಕುಮಾರನೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
26 ʼAdonay Yavé dice: ¡Quítate el turbante y despójate de la corona! ¡Ya no serás lo mismo! ¡Exáltese lo bajo y humíllese lo alto!
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಮೊದಲಿದ್ದ ಹಾಗೆಯೇ ಇರುವುದಿಲ್ಲ; ತಗ್ಗಿಸಿಕೊಂಡವನನ್ನು ಹೆಚ್ಚಿಸಿ, ಹೆಚ್ಚಿಸಿಕೊಂಡವನನ್ನು ತಗ್ಗಿಸು.
27 ¡A ruina, a ruina, a ruina la convertiré! Y no existirá más hasta que venga Aquél a Quien corresponde el juicio, a Quien lo entregaré.
ಬಾ, ನಾಶನ! ನಾಶನ! ನಾನು ಅದನ್ನು ಪಾಳು ಬೀಳುವಂತೆ ಮಾಡುವೆನು. ಅದು ಯಾರದೋ, ಅವನು ಬರುವವರೆಗೆ ನಾನು ಅದನ್ನು ಪುನಃ ಕಟ್ಟಿಸುವುದಿಲ್ಲ; ಅವನಿಗೆ ನಾನು ಅದನ್ನು ಒಪ್ಪಿಸುವೆನು.’
28 Y tú, hijo de hombre, profetiza: ʼAdonay Yavé dice contra los hijos de Amón y sus afrentas: Una espada pulida está desenvainada para matar y resplandecer en la matanza.
“ಮನುಷ್ಯಪುತ್ರನೇ, ನೀನು ಪ್ರವಾದಿಸಿ, ಸಾರ್ವಭೌಮ ಯೆಹೋವ ದೇವರು ಅಮ್ಮೋನಿಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾರೆ, ‘ಹೌದು, ನೀನು ಹೀಗೆ ಹೇಳು: “‘ಒಂದು ಖಡ್ಗವು, ಒಂದು ಖಡ್ಗವು ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಬಹಳವಾಗಿ ಮಸೆಯಲಾಗಿದೆ. ಥಳಥಳಿಸುತ್ತಾ ನುಂಗುವಹಾಗಿದೆ.
29 Te profetizan vanidad. Te adivinan mentira para que la apliques al cuello de los perversos sentenciados a muerte, cuyo día llega en el tiempo del castigo final.
ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ, ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಹೀಗೆ ನಿನ್ನನ್ನು ಹತರಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ. ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
30 Te devolveré a tu vaina en el lugar donde fuiste forjada. Te juzgaré en la tierra de tu origen.
“‘ಖಡ್ಗವನ್ನು ಒರೆಗೆ ಸೇರಿಸು, ನೀನು ಸೃಷ್ಟಿಯಾದ ಸ್ಥಳದಲ್ಲಿಯೇ ನಿನ್ನ ಪೂರ್ವಜರ ನಾಡಿನಲ್ಲಿಯೇ ನಿನಗೆ ನ್ಯಾಯತೀರಿಸುವೆನು.
31 Derramaré mi furor sobre ti, soplaré contra ti con el fuego de mi ira y te entregaré en mano de hombres temerarios, artesanos de destrucción.
ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರವಾದ ಬೆಂಕಿ ನಿನ್ನ ಮೇಲೆ ಊದಿ ನಾಶಪಡಿಸುವುದರಲ್ಲಿ ಗಟ್ಟಿಗರಾದ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು.
32 Serás combustible para el fuego. Tu sangre será la humedad de la tierra. No habrá recuerdo de ti, porque Yo, Yavé, hablé.
ನೀನು ಅಗ್ನಿಗೆ ಆಹುತಿಯಾಗುವೆ. ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು. ಇನ್ನು ಮೇಲೆ ನೀನು ಜ್ಞಾಪಕಕ್ಕೆ ಬರುವುದಿಲ್ಲವೆಂದು, ಯೆಹೋವ ದೇವರಾದ ನಾನೇ ಹೇಳಿದ್ದೇನೆ.’”

< Ezequiel 21 >