< Éxodo 6 >
1 Pero el Señor le dijo a Moisés: “Ahora verás lo que le haré al Faraón. Con mi gran fuerza lo obligaré a dejarlos ir; por mi poder los enviará fuera de su país”.
೧ಆನಂತರ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ನೀನು ಈಗ ನೋಡುವೆ. ಅವನು ನನ್ನ ಬಲವಾದ ಹಸ್ತವನ್ನು ನೋಡಿ ಅವರನ್ನು ಹೋಗಗೊಡಿಸುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ದೇಶದಿಂದ ಹೊರಡಿಸುವನು” ಅಂದನು.
2 Dios habló a Moisés y le dijo: “¡Yo soy Yahvé!
೨ದೇವರು ಮೋಶೆಯ ಸಂಗಡ ಪುನಃ ಮಾತನಾಡಿ ಇಂತೆಂದನು, “ನಾನೇ ಯೆಹೋವನು,
3 Me revelé como Dios Todopoderoso a Abraham, a Isaac y a Jacob, pero ellos no conocían mi nombre, ‘Yahvé’.
೩ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಸರ್ವಶಕ್ತನಾದ ದೇವರಾಗಿ ಕಾಣಿಸಿಕೊಂಡಿದ್ದೆನು. ಆದರೆ ಯೆಹೋವನೆಂಬ ನನ್ನ ಹೆಸರಿನಲ್ಲಿ ಅವರಿಗೆ ಗೋಚರವಾಗಿರಲಿಲ್ಲ.
4 También confirmé mi acuerdo solemne con ellos de darles la tierra de Canaán, el país donde vivían como extranjeros.
೪ನಾನು ಅವರಿಗೆ ಕಾನಾನ್ ದೇಶವನ್ನು ಅಂದರೆ, ಅವರು ಪರದೇಶದವರಾಗಿ ವಾಸವಾಗಿದ್ದ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬಡಿಕೆಯನ್ನು ಮಾಡಿಕೊಂಡಿರುವೆನು.
5 Además he escuchado los gemidos de los israelitas que los egipcios tratan como esclavos, y no he olvidado el acuerdo que les prometí.
೫ಐಗುಪ್ತರು ದಾಸರಾಗಿ ಮಾಡಿಕೊಂಡಿರುವ ಇಸ್ರಾಯೇಲರ ಗೋಳು ಈಗ ನನಗೆ ಕೇಳಿಸಿತು. ನಾನು ಮಾಡಿದ ವಾಗ್ದಾನವನ್ನು ಪುನಃ ನೆನಪುಮಾಡಿಕೊಂಡೆನು.
6 “Así que di a los israelitas: ‘Yo soy el Señor y los salvaré del trabajo forzoso que les imponen los egipcios; yo los liberaré su esclavitud. Los rescataré usando mi poder e imponiendo fuertes castigos.
೬ಆದುದರಿಂದ, ನೀನು ಇಸ್ರಾಯೇಲರಿಗೆ ನನ್ನ ಹೆಸರಿನಲ್ಲಿ ಹೇಳಬೇಕಾದದ್ದೇನೆಂದರೆ, ‘ನಾನೇ ಯೆಹೋವನು ಐಗುಪ್ತರು ನಿಮ್ಮಿಂದ ಮಾಡಿಸುವ ಬಿಟ್ಟೀ ಕೆಲಸಗಳನ್ನು ತಪ್ಪಿಸಿ, ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ, ನನ್ನ ಕೈಚಾಚಿ ಅವರಿಗೆ ಮಹಾ ಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು.
7 Yo los convertiré en mi propio pueblo. Entonces sabrán que soy el Señor su Dios, que los rescató de la esclavitud en Egipto.
೭ನಾನು ನಿಮ್ಮನ್ನು ನನ್ನ ಪ್ರಜೆಗಳನ್ನಾಗಿ ಆರಿಸಿಕೊಂಡು ನಿಮಗೆ ದೇವರಾಗಿರುವೆನು. ಐಗುಪ್ತ್ಯರು ಮಾಡಿಸುವ ಬಿಟ್ಟೀ ಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನೆಂಬ ನಾನೇ ನಿಮ್ಮ ದೇವರಾಗಿದ್ದೇನೆ ಎಂಬುದು ನಿಮಗೆ ತಿಳಿಯುವುದು.
8 Los llevaré a la tierra que prometí solemnemente darles a Abraham, Isaac y Jacob. Se las daré y será de ellos. ¡Yo soy el Señor!’”
೮ಇದಲ್ಲದೆ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ನಾನು ಕೈ ಎತ್ತಿ ಪ್ರಮಾಣಮಾಡಿದ ದೇಶದಲ್ಲಿ ನಿಮ್ಮನ್ನು ಬರಮಾಡಿ, ಅದನ್ನು ನಿಮಗೆ ಸ್ವತ್ತಾಗಿ ಕೊಡುವೆನೆಂದು ಹೇಳಿದವನು ಯೆಹೋವನೆಂಬ ನಾನೇ’ ಎಂದು ಅವರಿಗೆ ಹೇಳು” ಅಂದನು.
9 Moisés le explicó esto a los israelitas, pero ellos no lo escucharon, porque estaban muy desanimados, y por el duro trabajo que se veían obligados a hacer.
೯ಮೋಶೆ ಈ ಮಾತುಗಳನ್ನು ಅದೇ ಪ್ರಕಾರವಾಗಿ ಇಸ್ರಾಯೇಲರಿಗೆ ಹೇಳಿದಾಗ, ಅವರ ಮನಸ್ಸು ಕುಗ್ಗಿಹೋದದ್ದರಿಂದಲೂ, ಕಠಿಣವಾಗಿ ದಾಸತ್ವದ ಸೇವೆ ಮಾಡಬೇಕಾಗಿ ಬಂದದ್ದರಿಂದಲೂ ಅವರು ಮೋಶೆಯ ಮಾತಿಗೆ ಕಿವಿಗೊಡಲೇ ಇಲ್ಲ.
10 El Señor le dijo a Moisés:
೧೦ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ,
11 “Ve y habla con el Faraón, rey de Egipto. Dile que deje a los israelitas salir de su país”.
೧೧“ನೀನು ಐಗುಪ್ತ್ಯರ ಅರಸನಾದ ಫರೋಹನ ಬಳಿಗೆ ಹೋಗಿ ಅವನು ಇಸ್ರಾಯೇಲರನ್ನು ತನ್ನ ದೇಶದಿಂದ ಹೊರಟು ಹೋಗುವಂತೆ ಅವನ ಸಂಗಡ ಮಾತನಾಡು” ಅಂದನು.
12 Pero Moisés respondió: “Ni siquiera mi propio pueblo me escucha. ¿Por qué me escucharía el Faraón, sobre todo si soy tan mal orador?”
೧೨ಅದಕ್ಕೆ ಮೋಶೆ ಯೆಹೋವನ ಸನ್ನಿಧಿಯಲ್ಲಿ, “ಇಗೋ, ಇಸ್ರಾಯೇಲರೇ ನನ್ನ ಮಾತುಗಳನ್ನು ಕೇಳುತ್ತಿಲ್ಲ; ಹೀಗಿರುವಾಗ ತೊದಲು ಮಾತನಾಡುವ ನನ್ನ ಮಾತುಗಳಿಗೆ ಫರೋಹನು ಕಿವಿಗೊಟ್ಟಾನೇ?” ಅಂದನು.
13 Pero el Señor les habló a Moisés y a Aarón, y les dijo lo que debían hacer con respecto al pueblo de Israel y con Faraón, rey de Egipto, para sacar a los israelitas de Egipto.
೧೩ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಾಯೇಲರ ಬಳಿಗೂ ಐಗುಪ್ತದ ಅರಸನಾದ ಫರೋಹನ ಬಳಿಗೂ ಕಳುಹಿಸಿದನು.
14 Estos eran los jefes de la familia de Israel: Los hijos de Rubén, el primogénito de Israel, eran Janoc y Falú, Jezrón y Carmi. Estas fueron las familias de Rubén.
೧೪ಇಸ್ರಾಯೇಲ್ ಗೋತ್ರಗಳ ಕುಟುಂಬಗಳ ಮುಖ್ಯಸ್ಥರು: ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲು, ಹೆಚ್ರೋನ್, ಕರ್ಮೀ. ಇವರೇ ರೂಬೇನಿನಿಂದ ಉಂಟಾದ ಗೋತ್ರಗಳ ಮೂಲ ಪುರುಷರು.
15 Los hijos de Simeón fueron Jemuel, Jamín, Oad, Joaquín, Zojar y Saúl (hijo de una mujer cananea). Estas fueron las familias de Simeón.
೧೫ಸಿಮೆಯೋನನ ಮಕ್ಕಳಾದ; ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ ಇವರು ಸಿಮೆಯೋನನಿಂದುಂಟಾದ ಗೋತ್ರಗಳಿಗೆ ಮೂಲ ಪುರುಷರು.
16 Estos fueron los nombres de los hijos de Leví según sus registros genealógicos: Gersón, Coat y Merari. Leví vivió durante 137 años.
೧೬ವಂಶಾವಳಿಗಳ ಪ್ರಕಾರ ಲೇವಿಯರ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ, ಇವರೇ. ಲೇವಿಯು ನೂರ ಮೂವತ್ತೇಳು ವರ್ಷ ಬದುಕಿದ್ದನು.
17 Los hijos de Gersón, por familias, fueron Libní y Simí.
೧೭ಗೋತ್ರಗಳಿಗನುಸಾರವಾಗಿ ಗೇರ್ಷೋನನ ಮಕ್ಕಳು: ಲಿಬ್ನೀ ಮತ್ತು ಶಿಮ್ಮಿ.
18 Los hijos de Coat fueron Amram, Izar, Hebrón y Uziel. Coat vivió durante 133 años.
೧೮ಕೊಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೆಹಾತನು ನೂರ ಮೂವತ್ತಮೂರು ವರ್ಷ ಬದುಕಿದನು.
19 Los hijos de Merari fueron Majlí y Musí. Estas eran las familias de los levitas según sus registros genealógicos.
೧೯ಮೆರಾರೀಯ ಮಕ್ಕಳು: ಮಹ್ಲೀ, ಮೂಷೀ ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ ಆಗಿದ್ದವು.
20 Amram se casó con la hermana de su padre, Jocabed, y ella tuvo sus hijos Aarón y Moisés. Amram vivió durante 137 años.
೨೦ಅಮ್ರಾಮನು ತನ್ನ ತಂದೆಯ ತಂಗಿ ಯೋಕೆಬೆದಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದನು.
21 Los hijos de Izar fueron Coré, Neferón y Zicrí.
೨೧ಇಚ್ಹಾರನ ಮಕ್ಕಳು ಕೋರಹ, ನೆಫೆಗ್ ಮತ್ತು ಚಿಕ್ರಿ.
22 Los hijos de Uziel fueron Misael, Elzafán y Sitri.
೨೨ಉಜ್ಜೀಯೇಲನ ಮಕ್ಕಳು: ಮೀಷಾಯೇಲ್, ಎಲ್ಜಾಫಾನ್ ಮತ್ತು ಸಿತ್ರಿ.
23 Aarón se casó con Elisabet, hija de Aminadab y hermana de Nasón. Ella tuvo sus hijos Nadab y Abiú, Eleazar e Itamar.
೨೩ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆಗಿದ್ದ, ಎಲೀಶೇಬಳನ್ನು ಮದುವೆಯಾದನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು.
24 Los hijos de Coré fueron Asir, Elcana y Abiasaf. Estas eran las familias de Coré.
೨೪ಕೋರಹನ ಮಕ್ಕಳು: ಅಸ್ಸೀರ್, ಎಲ್ಕಾನ್, ಅಬೀಯಾಸಾಫ್ ಇವರೇ ಕೋರಹೀಯರ ಗೋತ್ರಗಳು.
25 Eleazar, hijo de Aarón, se casó con una de las hijas de Futiel, y tuvo su hijo Finés. Estos son los ancestros de las familias levitas, listados según sus clanes. Eleazar hijo de Aarón se casó con una de las hijas de Futiel, y ella dio a luz a su hijo, Finés. Estos son los jefes de las familias levitas, listados por familia.
೨೫ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡನು. ಆಕೆ ಅವನಿಗೆ ಫೀನೆಹಾಸನನ್ನು ಹೆತ್ತಳು. ಅವರವರ ಗೋತ್ರದ ಪ್ರಕಾರ ಇವರೇ ಲೇವಿಯರ ಪೂರ್ವಿಕರು.
26 Aarón y Moisés mencionados aquí son los que el Señor dijo, “Saquen a los israelitas de Egipto, divididos en sus respectivas tribus”.
೨೬ಇಸ್ರಾಯೇಲರನ್ನು ಅವರ ಗೋತ್ರಗಳಿಗನುಸಾರವಾಗಿ, ಐಗುಪ್ತದೇಶದಿಂದ ಹೊರಗೆ ಬರಮಾಡಬೇಕೆಂದು ಯೆಹೋವನು ಯಾರಿಗೆ ಹೇಳಿದನೋ ಅವರೇ ಆರೋನ್ ಮತ್ತು ಮೋಶೆ.
27 Moisés y Aarón también fueron los que fueron a hablar con el Faraón, rey de Egipto, sobre la salida de los israelitas de Egipto.
೨೭ಇಸ್ರಾಯೇಲರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಐಗುಪ್ತ್ಯರ ಅರಸನಾದ ಫರೋಹನ ಸಂಗಡ ಮಾತನಾಡಿದಂತಹ ಮೋಶೆ ಮತ್ತು ಆರೋನರು ಇವರೇ.
28 Cuando el Señor habló a Moisés en Egipto,
೨೮ಯೆಹೋವನು ಐಗುಪ್ತದೇಶದಲ್ಲಿ, ಮೋಶೆಯ ಸಂಗಡ ಮಾತನಾಡಿದಾಗ
29 le dijo: “Yo soy el Señor. Dile al Faraón, rey de Egipto, todo lo que te digo”
೨೯ಆತನು ಮೋಶೆಗೆ, “ನಾನು ಯೆಹೋವನು ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಐಗುಪ್ತ್ಯರ ಅರಸನಾದ ಫರೋಹನನಿಗೆ ತಿಳಿಸು” ಎಂದನು.
30 Pero Moisés respondió: “No soy un buen orador, ¿por qué me escucharía el Faraón?”
೩೦ಆದರೆ ಮೋಶೆಯು ಯೆಹೋವನಿಗೆ, “ಇಗೋ, ಸ್ವಾಮಿ ನಾನು ಮಾತನಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳಾನು” ಅಂದನು.