< 1 Reyes 3 >
1 Aconteció que Salomón hizo una alianza matrimonial con el Faraón de Egipto. Se casó con la hija del faraón y la llevó a vivir a la Ciudad de David hasta que terminó de construir su palacio, el Templo del Señor y las murallas que rodeaban Jerusalén.
೧ಸೊಲೊಮೋನನು ಐಗುಪ್ತದ ಅರಸನಾದ ಫರೋಹನ ಅಳಿಯನಾದನು. ಅವನು ಫರೋಹನ ಮಗಳನ್ನು ಮದುವೆಮಾಡಿಕೊಂಡು ತನ್ನ ಅರಮನೆಯನ್ನೂ, ಯೆಹೋವನ ಆಲಯವನ್ನೂ ಮತ್ತು ಯೆರೂಸಲೇಮಿನ ಸುತ್ತಣ ಗೋಡೆಯನ್ನೂ ಕಟ್ಟಿ ಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲಿ ಇರಿಸಿದನು.
2 Sin embargo, en aquellos días el pueblo seguía sacrificando en los altares porque aún no se había construido un Templo para honrar al Señor.
೨ಆ ವರೆಗೂ ಯೆಹೋವನ ನಾಮಕ್ಕೋಸ್ಕರ ಆಲಯವಿರಲಿಲ್ಲವಾದುದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞವನ್ನು ಆರ್ಪಿಸುತ್ತಿದ್ದರು.
3 Salomón demostró que amaba al Señor siguiendo las instrucciones de su padre David, excepto que sacrificaba y quemaba ofrendas en los altares.
೩ಸೊಲೊಮೋನನು ಯೆಹೋವನನ್ನು ಪ್ರೀತಿಸಿ, ತನ್ನ ತಂದೆಯಾದ ದಾವೀದನ ವಿಧಿಗಳನ್ನು ಕೈಕೊಳ್ಳುವವನಾಗಿದ್ದರೂ ಆ ಪೂಜಾಸ್ಥಳಗಳಲ್ಲಿಯೇ ಯಜ್ಞವನ್ನರ್ಪಿಸುತ್ತಿದ್ದನು. ಅಲ್ಲಿಯೇ ಧೂಪಹಾಕುತ್ತಿದ್ದನು.
4 El rey fue a Gabaón para sacrificar allí, pues era el lugar alto más importante. Salomón presentó mil holocaustos en el altar de ese lugar.
೪ಒಮ್ಮೆ ಅರಸನಾದ ಸೊಲೊಮೋನನು ಯಜ್ಞಮಾಡುವುದಕ್ಕಾಗಿ ಪೂಜಾಸ್ಥಳಗಳಲ್ಲಿ ಪ್ರಧಾನವಾಗಿದ್ದ ಗಿಬ್ಯೋನಿಗೆ ಹೋಗಿ ಅಲ್ಲಿನ ಯಜ್ಞವೇದಿಯ ಮೇಲೆ ಸಹಸ್ರ ಯಜ್ಞಗಳನ್ನು ಸಮರ್ಪಿಸಿದನು.
5 El Señor se le apareció a Salomón en un sueño en Gabaón. Dios le dijo: “Pide lo que quieras”.
೫ದೇವರಾದ ಯೆಹೋವನು ಆ ರಾತ್ರಿ ಕನಸ್ಸಿನಲ್ಲಿ ಅವನಿಗೆ ಗಿಬ್ಯೋನಿನಲ್ಲಿ ಕಾಣಿಸಿಕೊಂಡು, “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಲು ಸೊಲೊಮೋನನು,
6 Entonces Salomón respondió: “Le mostraste a tu siervo David, mi padre, un gran amor fiel porque vivió su vida ante ti con fidelidad, haciendo lo correcto y comprometido con los principios. Has seguido mostrando este gran amor incondicional dándole un hijo para que se sentara en su trono hasta el día de hoy.
೬“ನಿನಗೆ ನಂಬಿಗಸ್ತನಾಗಿಯೂ, ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನೀನು ಮಹಾ ಕೃಪೆಯನ್ನು ತೋರಿಸಿದ್ದೀ. ಅವನ ಮೇಲೆ ಬಹಳವಾಗಿ ಕೃಪೆಯಿಟ್ಟು ಈಹೊತ್ತು ಅವನ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿದ್ದರಲ್ಲಿ ಅದನ್ನು ಸಂಪೂರ್ಣಗೊಳಿಸಿರುವೆ.
7 “Ahora, Señor Dios, me has hecho rey en lugar de mi padre David. Pero soy como un joven inexperto que no sabe qué hacer.
೭ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು. ವ್ಯವಹಾರ ಜ್ಞಾನವಿಲ್ಲದವನು.
8 Yo, tu siervo, estoy aquí en medio de tu pueblo elegido, un gran pueblo que es tan numeroso que no se puede contar.
೮ನಿನ್ನ ಸೇವಕನಾದ ನಾನು ಲೆಕ್ಕಿಸಲಾಗದಂಥ ಮಹಾ ಜನಾಂಗವಾಗಿರುವ ನಿನ್ನ ಸ್ವಕೀಯ ಪ್ರಜೆಯ ಮಧ್ಯದಲ್ಲಿದ್ದೇನೆ.
9 Así que, por favor, dame una mente receptiva para poder gobernar bien a tu pueblo, entendiendo la diferencia entre el bien y el mal, porque ¿quién puede gobernar a este difícil pueblo tuyo?”.
೯ಆದುದರಿಂದ ಅವರನ್ನು ಆಳುವುದಕ್ಕೂ, ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸು. ಈ ಮಹಾ ಜನಾಂಗವನ್ನು ಆಳಬಲ್ಲ ಸಮರ್ಥರು ಯಾರಿದ್ದಾರೆ?” ಎಂದು ಬೇಡಿಕೊಂಡನು.
10 El Señor consideró que lo que Salomón pedía era bueno.
೧೦ಸೊಲೊಮೋನನ ಈ ಬಿನ್ನಹವನ್ನು ಕರ್ತನಾದ ದೇವರು ಮೆಚ್ಚಿದನು.
11 Así que Dios le dijo: “Como pediste esto, y no pediste una larga vida, ni riquezas, ni la muerte de tus enemigos, sino que pediste entendimiento para saber lo que es correcto,
೧೧ಆಗ ದೇವರು ಅವನಿಗೆ, “ನೀನು ನಿನಗೋಸ್ಕರ ದೀರ್ಘಾಯುಷ್ಯವನ್ನಾಗಲೀ, ಐಶ್ವರ್ಯವನ್ನಾಗಲಿ ವೈರಿಗಳ ಪ್ರಾಣವನ್ನಾಗಲಿ ಕೇಳಿಕೊಳ್ಳದೆ ನ್ಯಾಯನಿರ್ಣಯಿಸುವುದಕ್ಕಾಗಿ ವಿವೇಕವನ್ನು ಬೇಡಿಕೊಂಡದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ.
12 te estoy dando lo que pediste. Te estoy dando una mente sabia, con un entendimiento de lo que es correcto, más que cualquier otro antes de ti o después de ti.
೧೨ನೋಡು, ನಿನಗೆ ಜ್ಞಾನವನ್ನು ಮತ್ತು ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
13 También te estoy dando lo que no pediste, riqueza y estatus, tanto que ningún rey se comparará contigo durante toda tu vida.
೧೩ಇದಲ್ಲದೆ ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಐಶ್ವರ್ಯದಲ್ಲಿಯೂ, ಗೌರವ ಘನತೆಗಳಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
14 Y si sigues mis caminos, guardando mis leyes y mis mandatos, como hizo tu padre David, te daré una larga vida”.
೧೪ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಮಾರ್ಗದಲ್ಲಿ ನಡೆದು, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುವುದಾದರೆ ನಿನ್ನ ಆಯುಷ್ಯವನ್ನು ಹೆಚ್ಚಿಸುವೆನು” ಎಂದನು.
15 Entonces Saalomón se despertó y se dio cuenta de que había tenido un sueño. Volvió a Jerusalén y se puso delante del Arca del Pacto del Señor y presentó holocaustos y ofrendas de paz, y celebró un banquete para todos sus funcionarios.
೧೫ಸೊಲೊಮೋನನು ನಿದ್ರೆಯಿಂದ ಎಚ್ಚತ್ತಾಗ ಅದು ಕನಸೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದ ನಂತರ ಯೆಹೋವನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ಸರ್ವಾಂಗಹೋಮಗಳನ್ನು ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ತನ್ನ ಎಲ್ಲಾ ಸೇವಕರಿಗಾಗಿ ಔತಣಮಾಡಿಸಿದನು.
16 Más tarde, dos prostitutas vinieron al rey y se presentaron ante él para ser juzgadas.
೧೬ಅದೇ ಕಾಲದಲ್ಲಿ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
17 Una de las mujeres tomó la palabra y dijo: “Si le place a Su Majestad: Comparto casa con esta mujer. Tuve un bebé mientras ella vivía en la casa.
೧೭ಅವರಲ್ಲಿ ಒಬ್ಬಳು ಅರಸನಿಗೆ, “ನನ್ನ ಒಡೆಯಾ ಕೇಳು, ನಾನು ಮತ್ತು ಈ ಹೆಂಗಸು ಒಂದೇ ಮನೆಯಲ್ಲಿ ವಾಸಮಾಡುತ್ತಿದ್ದೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಮಗುವನ್ನು ಹೆತ್ತೆನು.
18 Tres días después del nacimiento de mi bebé, esta mujer también tuvo un bebé. Estábamos juntos; no había nadie más en la casa, sólo nosotros dos.
೧೮ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು. ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ
19 Durante la noche, el hijo de esta mujer murió porque ella se volcó sobre él.
೧೯ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
20 Ella se levantó en medio de la noche y tomó a mi hijo de mi lado mientras yo dormía. Lo puso junto a ella para abrazarlo, y puso a su hijo muerto junto a mí.
೨೦ಮಧ್ಯರಾತ್ರಿಯಲ್ಲಿಯೇ ಇವಳೆದ್ದು ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಪಕ್ಕದಲ್ಲಿಟ್ಟುಕೊಂಡಳು. ಸತ್ತು ಹೋದ ತನ್ನ ಮಗುವನ್ನು ನನ್ನ ಪಕ್ಕದಲ್ಲಿರಿಸಿದಳು.
21 Cuando me levanté por la mañana para amamantar a mi hijo, vi que estaba muerto. Cuando lo miré de cerca a la luz me di cuenta de que no era mi hijo”.
೨೧ನಾನು ಹೊತ್ತಾರೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ” ಎಂದು ಹೇಳಿದಳು.
22 La otra mujer argumentó: “¡No! Mi hijo es el que está vivo. Tu hijo es el que está muerto”. La primera mujer objetó: “¡No! Tu hijo es el que está muerto. Mi hijo es el que está vivo”. Siguieron discutiendo delante del rey.
೨೨ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗನು ಸತ್ತಿರುವವನು ನಿನ್ನ ಮಗನು” ಎಂದು ನುಡಿದಳು. ಮೊದಲನೆಯವಳು ತಿರುಗಿ, “ಅಲ್ಲ, ಸತ್ತಿರುವವನು ನಿನ್ನ ಮಗನು, ಬದುಕಿರುವವನು ನನ್ನ ಮಗನು” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
23 El rey intervino diciendo: “Así que esta mujer dice: ‘Mi hijo es el que está vivo. Tu hijo es el que está muerto’, mientras que la otra mujer dice: ‘No, tu hijo es el que está muerto. Mi hijo es el que está vivo’”.
೨೩ಆಗ ಅರಸನು, “ಜೀವದಿಂದಿರುವ ಕೂಸು ನನ್ನದು. ಸತ್ತಿರುವುದು ನಿನ್ನದು ಎಂದು ಒಬ್ಬಳು ಹೇಳುತ್ತಾಳೆ. ಇನ್ನೊಬ್ಬಳು ಅಲ್ಲ ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು ಅನ್ನುತ್ತಾಳೆ.
24 “Tráiganme una espada”, ordenó el rey. Y le trajeron una espada.
೨೪ನನಗೊಂದು ಕತ್ತಿಯನ್ನು ತಂದು ಕೊಡಿರಿ” ಎಂದು ಸೇವಕರಿಗೆ ಹೇಳಿದನು.
25 “Corten al niño que está vivo en dos, y denle la mitad a una mujer y la otra mitad a la otra”, ordenó.
೨೫ಅವರು ಕತ್ತಿಯನ್ನು ತರಲು ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು ಎರಡು ಭಾಗ ಮಾಡಿ ಅರ್ಧವನ್ನು ಇವಳಿಗೂ ಅರ್ಧವನ್ನು ಅವಳಿಗೂ ಕೊಡಿರಿ” ಎಂದು ಅಪ್ಪಣೆ ಮಾಡಿದನು.
26 Pero la mujer cuyo hijo estaba vivo le tenía tanto amor de madre que le gritó al rey: “¡Por favor, Su Majestad, dale el niño! No lo mates”. Pero la otra mujer dijo: “¡No será mío ni tuyo, córtalo en dos!”.
೨೬ಆಗ ಜೀವದಿಂದಿದ್ದ ಕೂಸಿನ ನಿಜವಾದ ತಾಯಿ ಕೂಸಿನ ವಿಷಯದಲ್ಲಿ ಕರಳು ಮರುಗಿ ಅರಸನಿಗೆ, “ನನ್ನ ಒಡೆಯಾ ಬೇಡ, ಬದುಕಿರುವ ಕೂಸನ್ನು ಅವಳಿಗೆ ಕೊಟ್ಟುಬಿಡು. ಅದನ್ನು ಕೊಲ್ಲಿಸಬೇಡ” ಎಂದು ಬೇಡಿಕೊಳ್ಳುವಲ್ಲಿ ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ ಕತ್ತರಿಸಲಿ” ಎಂದು ಕೂಗಿದಳು.
27 El rey dio su veredicto. “Dale el niño que está vivo a la primera mujer”, ordenó. “Por ningún motivo lo mates, pues ella es su verdadera madre”.
೨೭ಕೂಡಲೇ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿರಿ. ಆ ಸ್ತ್ರೀಗೆ ಕೊಡಿರಿ. ಅವಳೇ ಅದರ ತಾಯಿ” ಎಂದು ಆಜ್ಞಾಪಿಸಿದನು.
28 Cuando todos en Israel se enteraron del veredicto que había dado el rey, sintieron un gran respeto por él, porque reconocieron la sabiduría que Dios le había dado para juzgar correctamente.
೨೮ಇಸ್ರಾಯೇಲರೆಲ್ಲರೂ ಈ ತೀರ್ಪನ್ನು ಕೇಳಿ ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೈವಜ್ಞಾನವಿದೆ ಎಂದು ತಿಳಿದು ಅವನಿಗೆ ಬಹಳವಾಗಿ ಭಯಪಟ್ಟರು.