< Apostolska dela 2 >
1 In ko pride petdeseti dan, bili so vsi ene misli vkupej.
ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು.
2 Kar vstane šum z neba kakor puhanje silnega vetra, in napolni vso hišo, kjer so sedeli.
ಆಗ ಬೀಸುತ್ತಿರುವ ಬಿರುಗಾಳಿಯ ರಭಸವಾದ ಶಬ್ದವು ಫಕ್ಕನೆ ಪರಲೋಕದಿಂದ ಬಂದು ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
3 Ter prikažejo jim se razdeljeni jeziki kakor ognjeni, in sedejo na vsakega od njih.
ಅಗ್ನಿ ಜ್ವಾಲೆಗಳು ಬೆಂಕಿಯ ನಾಲಿಗೆಗಳಂತೆ ವಿಂಗಡವಾಗಿ ಬಂದು ಪ್ರತಿಯೊಬ್ಬರ ಮೇಲೆ ಇಳಿಯುವುದನ್ನು ಅವರು ಕಂಡರು.
4 In vsi se napolnijo Duha svetega, in začnó govoriti v drugih jezikih, kakor jim je Duh dajal izgovarjati.
ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.
5 Prebivali pa so v Jeruzalemu Judje, možjé pobožni, od vsakega naroda, kteri so pod nebom.
ಆಗ ಜಗತ್ತಿನ ಪ್ರತಿಯೊಂದು ದೇಶದಿಂದಲೂ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿದ್ದರು.
6 Ko se je pa zaslišal ta glas, snide se množica, in groza jih obide; kajti slišal je vsak od njih, da govoré v njegovem jeziku.
ಈ ಶಬ್ದ ಕೇಳಿದಾಗ, ಜನರ ಗುಂಪೊಂದು ಕೂಡಿಬಂದಿತು. ಬಂದವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿಯೇ ಆ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿ, ಆಶ್ಚರ್ಯಗೊಂಡರು.
7 In zavzemali so se in čudili, govoreč med seboj: Glej, niso li vsi ti, ki govoré, Galilejci?
ಅವರು ಅತ್ಯಾಶ್ಚರ್ಯವುಳ್ಳವರಾಗಿ, “ಇಲ್ಲಿ ಮಾತನಾಡುತ್ತಿರುವವರೆಲ್ಲರೂ ಗಲಿಲಾಯದವರಲ್ಲವೇ?
8 In kako mi slišimo vsak svoj jezik, v kterem smo se rodili?
ನಾವೆಲ್ಲರೂ ನಮ್ಮ ನಮ್ಮ ಮಾತೃಭಾಷೆಗಳಲ್ಲಿಯೇ ಇವರು ಮಾತಾಡುತ್ತಿರುವುದನ್ನು ಕೇಳುತ್ತಿರುವುದು ಹೇಗೆ?
9 Parčani in Medijani in Elamljani, in kteri prebivamo v Mezopotamiji, in pa Judeji in Kapadociji, Pontu in v Aziji,
ಪಾರ್ಥಿಯರು, ಮೇದ್ಯರು ಹಾಗೂ ಏಲಾಮ್ಯರು, ಮೆಸೊಪೊಟೇಮಿಯ, ಯೂದಾಯ, ಕಪ್ಪದೋಕ್ಯ, ಪೊಂತ, ಏಷ್ಯಾ,
10 Frigiji in pa Pamfiliji, Egiptu in v straneh Libije, ktera je pri Cireni, in prišelci iz Rima, Judje in pojudeni,
ಫ್ರುಗ್ಯ ಮತ್ತು ಪಂಫುಲ್ಯ, ಈಜಿಪ್ಟ್ ಹಾಗೂ ಕುರೇನೆದ ಹತ್ತಿರದ ಲಿಬ್ಯದ ಭಾಗಗಳ ನಿವಾಸಿಗಳು; ರೋಮ್ ಪಟ್ಟಣದಿಂದ ಬಂದ ಸಂದರ್ಶಕರು ಇಲ್ಲಿ ಬಂದಿದ್ದಾರೆ.
11 Krečani in Arabljani: slišimo, da nam govoré v naših jezikih velika dela Božja.
ಇವರಲ್ಲದೆ, ಯೆಹೂದ್ಯರು ಮತ್ತು ಯೆಹೂದಿ ವಿಶ್ವಾಸಕ್ಕೆ ಬಂದಿದ್ದವರೂ ಇಲ್ಲಿದ್ದಾರೆ. ಅವರೊಂದಿಗೆ ಕ್ರೇತದವರು ಹಾಗೂ ಅರಬೀಯರು ನಮ್ಮ ಭಾಷೆಗಳಲ್ಲಿಯೇ ದೇವರ ಮಹತ್ಕಾರ್ಯಗಳನ್ನು ಹೇಳುತ್ತಿರುವದನ್ನು ಕೇಳುತ್ತಿದ್ದೇವಲ್ಲಾ!” ಎಂದು ಹೇಳಿದರು.
12 In vsi so se zavzemali, in strmeli so, govoreč eden drugemu: Kaj če to biti?
ಅವರು ಆಶ್ಚರ್ಯದಿಂದಲೂ ಗಲಿಬಿಲಿಗೊಂಡವರಾಗಿಯೂ, “ಇದರ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಪ್ರಶ್ನೆಮಾಡಿಕೊಂಡರು.
13 A drugi so se posmehovali, in govorili so: "Sladkega vinca so se napili."
ಆದರೆ, ಅವರಲ್ಲಿ ಕೆಲವರು, ಅವರ ಬಗ್ಗೆ ಹಾಸ್ಯಮಾಡುತ್ತಾ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದರು.
14 Tedaj se vstopi Peter z enajsterimi, in povzdigne glas svoj, in reče jim: Možjé Judje in vsi, kteri prebivate okoli Jeruzalema! to vam bodi na znanje, in poslušajte besede moje.
ಆಗ ಹನ್ನೊಂದು ಜನರೊಂದಿಗೆ ಪೇತ್ರನು ಎದ್ದು ನಿಂತುಕೊಂಡು, ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದೇನೆಂದರೆ: “ಯೆಹೂದ್ಯರೇ, ಯೆರೂಸಲೇಮಿನ ಸರ್ವನಿವಾಸಿಗಳೇ, ಇದರ ಬಗ್ಗೆ ನಾನು ವಿವರಿಸುತ್ತೇನೆ, ಕೇಳಿರಿ. ನಾನು ಹೇಳುವುದನ್ನು ಜಾಗರೂಕತೆಯಿಂದ ಆಲಿಸಿರಿ.
15 Ti namreč niso, kakor vi menite, pijani, ko je še le tretja ura dné;
ನೀವು ಊಹಿಸಿದಂತೆ, ಈ ಜನರು ಕುಡಿದು ಮತ್ತರಾಗಿಲ್ಲ. ಈಗ ಸಮಯ ಬೆಳಿಗ್ಗೆ ಒಂಬತ್ತು ಗಂಟೆ!
16 Nego to je, kar je rečeno po preroku Joelu:
ಇದು ಪ್ರವಾದಿ ಯೋವೇಲನ ಪ್ರವಾದನೆಯ ನೆರವೇರುವಿಕೆಯಾಗಿದೆ:
17 "In poslednje dní bo, pravi Bog, izlil bom od duha svojega na vse človeštvo, in prerokovali bodo sinovi vaši in hčere vaše; in mladeniči vaši bodo videli prikazni, in starcem vašim se bodo sanjale sanje.
“ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು, ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು, ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು.
18 In tudi na hlapce svoje in na dekle svoje bom tiste dní izlil od duha svojega in prerokovali bodo.
ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.
19 In pokazal bom čudeže gori na nebu, in znamenja doli na zemlji: kri in ogenj in kajenja dima.
ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
20 Solnce se bo premenilo v temo, in mesec v kri, predno pride véliki in slavni dan Gospodov.
ಕರ್ತದೇವರ ಮಹಿಮೆಯುಳ್ಳ ಮಹಾದಿನವೂ ಬರುವುದಕ್ಕೆ ಮೊದಲು ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
21 In zgodilo se bo, da vsak, kdor bo klical ime Gospodovo, zveličal se bo."
ಆಗ ಕರ್ತದೇವರ ಹೆಸರನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ ಆಗುವುದು.’
22 Možjé Izraelci! slišali ste te besede: Jezusa Nazarečana, moža, kterega je Bog potrdil med vami z močmí in čudeži in znamenji, ktera je Bog po njem storil med vami, kakor tudi sami véste,
“ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.
23 Tega, po posebnem sklepu in previdnosti Božjej izdanega, vzeli ste, in po rokah krivičnikov pribili in umorili;
ದೇವರು ತಾವು ಮುಂಚಿತವಾಗಿ ನಿರ್ಣಯಿಸಿದ ಪ್ರಕಾರವೂ ತಾವು ಮೊದಲೇ ತಿಳಿದಿರುವಂತೆ ದೇವರು ಯೇಸುವನ್ನು ತಾವಾಗಿಯೇ ನಿಮಗೆ ಒಪ್ಪಿಸಿಕೊಟ್ಟರು. ನೀವಾದರೋ ದುಷ್ಟರ ಸಹಾಯದಿಂದ ಯೇಸುವನ್ನು ಶಿಲುಬೆಗೆ ಹಾಕಿ ಕೊಲೆಮಾಡಿದಿರಿ.
24 Kterega je Bog obudil, razvezavši vezí smrti, ker ni bilo mogoče, da bi ga bila ona držala,
ಆದರೆ ದೇವರು ಯೇಸುವನ್ನು ಮರಣ ವೇದನೆಯಿಂದ ಬಿಡಿಸಿ ಜೀವಂತವಾಗಿ ಎಬ್ಬಿಸಿದರು. ಏಕೆಂದರೆ ಯೇಸುವನ್ನು ಹಿಡಿದಿಟ್ಟುಕೊಂಡಿರಲು ಮರಣಕ್ಕೆ ಸಾಧ್ಯವಾಗಲಿಲ್ಲ.
25 Kajti David pravi za-nj: "Gledal sem Gospoda vedno pred seboj, ker je na desnej strani mene, da ne omahnem.
ದಾವೀದನು ಯೇಸುಸ್ವಾಮಿಯವರ ಬಗ್ಗೆ ಹೀಗೆ ಹೇಳಿದ್ದಾನೆ: “‘ನಾನು ಕರ್ತದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ನಾನು ಕದಲದಂತೆ ಕರ್ತದೇವರು ನನ್ನ ಬಲಗಡೆಯಲ್ಲಿದ್ದಾರೆ.
26 Za to se je oveselilo srce moje, in obradoval se je jezik moj; pa še tudi telo moje bo počivalo v upanji;
ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ನಿರೀಕ್ಷೆಯಿಂದ ನೆಲೆಯಾಗಿರುವುದು.
27 Ker ne boš pustil duše moje v peklu, in tudi ne boš dal, da bi svetnik tvoj videl trohnenje. (Hadēs )
ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ, ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ. (Hadēs )
28 Naznanil si mi pota življenja; napolnil me boš z veseljem pred obličjem svojim."
ನೀವು ನನಗೆ ಜೀವಮಾರ್ಗಗಳನ್ನು ತಿಳಿಯಪಡಿಸಿರುವಿರಿ; ನಿಮ್ಮ ಸನ್ನಿಧಿಯಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿರಿ.’
29 Možjé bratje! naj bo dovoljeno govoriti vam svobodno ob očaku Davidu, da je umrl in pokopan bil, in grob njegov je med nami do tega dné.
“ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.
30 Prerok torej, in vedoč, da mu je Bog s prisego prisegel, da bo po telesu iz semena ledja njegovega zbudil Kristusa, in ga posadil na prestol njegov:
ಆದರೆ ಪ್ರವಾದಿಯಾಗಿದ್ದ ದಾವೀದನ ಸಂತತಿಯವರಲ್ಲಿ ಒಬ್ಬರನ್ನು ಅವನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು, ಎಂದು ಆಣೆಯಿಟ್ಟು ದೇವರು ವಾಗ್ದಾನ ಮಾಡಿದ್ದನ್ನು ದಾವೀದನು ತಿಳಿದಿದ್ದನು.
31 Videl je naprej, in povedal je za vstajenje Kristusovo, da se duša njegova ni pustila v peklu, in tudi telo njegovo ni videlo trohnenja. (Hadēs )
ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’ (Hadēs )
32 Tega Jezusa je Bog obudil, čemur smo mi vsi priče.
ದೇವರು ಈ ಯೇಸುವನ್ನೇ ಮರಣದಿಂದ ಎಬ್ಬಿಸಿದರು. ಇದಕ್ಕೆ ನಾವೆಲ್ಲರೂ ಸಾಕ್ಷಿಗಳು.
33 Z desnico Božjo torej povišan, in prejemši obljubo svetega Duha od očeta, izlil je to, kar vi sedaj vidite in slišite.
ಆದ್ದರಿಂದ ಯೇಸು ದೇವರ ಬಲಗಡೆಗೆ ಏರಿಹೋಗಿ ವಾಗ್ದಾನಮಾಡಿದ ಪವಿತ್ರಾತ್ಮ ದೇವರನ್ನು ತಂದೆಯಿಂದ ಪಡೆದುಕೊಂಡರು. ಈಗ ನೀವು ಕಂಡು ಕೇಳಿರುವ ಆ ಪವಿತ್ರಾತ್ಮ ವರವನ್ನು ಯೇಸುವೇ ಇವರ ಮೇಲೆ ಸುರಿಸಿದ್ದಾರೆ.
34 Kajti David ni šel gor na nebesa, nego sam pravi: "Rekel je Gospod gospodu mojemu: Sedí meni na desno,
ದಾವೀದನು ಪರಲೋಕಕ್ಕೆ ಏರಿಹೋಗಲಿಲ್ಲವಾದರೂ ಹೀಗೆ ಹೇಳಿದ್ದಾನೆ: “‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
35 Dokler ne položim sovražnikov tvojih nogam tvojim za podnožje."
ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.”’
36 Za gotovo torej vedi vsa hiša Izraelova, da ga je za Gospoda in Kristusa naredil Bog, tega Jezusa, kterega ste vi križali.
“ಆದ್ದರಿಂದ ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಕರ್ತ ಹಾಗೂ ಕ್ರಿಸ್ತ ಆಗಿಯೂ ಮಾಡಿದ್ದಾರೆ ಎಂಬುದು ಎಲ್ಲಾ ಇಸ್ರಾಯೇಲ್ ಮನೆತನದವರಿಗೆ ಸ್ಪಷ್ಟವಾಗಿ ತಿಳಿದಿರಲಿ,” ಎಂದನು.
37 Ko so pa to slišali, zbode jih v srce, ter rekó Petru in drugim aposteljnom: Kaj nam je storiti, možjé bratje?
ಜನರು ಇದನ್ನು ಕೇಳಿದಾಗ ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ, “ಸಹೋದರರೇ, ನಾವೇನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು.
38 Peter jim pa reče: Spokorite se, in krsti naj se vsakdo izmed vas v ime Jezusa Kristusa za odpuščanje grehov; in prejeli boste dar svetega Duha.
ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. ಆಗ ನೀವು ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಿರಿ.
39 Kajti za vas je obljuba, in za otroke vaše, in za vse, kteri so daleč, kterekoli bo poklical Gospod Bog naš.
ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರ ಇರುವ ಎಲ್ಲರಿಗೂ ನಮ್ಮ ಕರ್ತದೇವರು ತಮ್ಮ ಕಡೆಗೆ ಕರೆಯುವ ಎಲ್ಲರಿಗಾಗಿಯೂ ಇರುವುದು,” ಎಂದನು.
40 In z mnogimi drugimi besedami je pričeval in opominjal jih, govoreč: Otmite se od tega hudobnega roda.
ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, ಸಾಕ್ಷಿ ನುಡಿದು, “ಈ ಕೆಟ್ಟ ಸಂತತಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ,” ಎಂದು ಹೇಳಿದನು.
41 Kteri so torej besedo njegovo radi sprejeli, krstili so se; in pridružilo se je tisti dan kake tri tisoči duš.
ಪೇತ್ರನ ಸಂದೇಶವನ್ನು ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿದರು.
42 Bili so pa stanovitni v nauku apostolskem in v družbi in v lomljenji kruha in v molitvah:
ಅವರೆಲ್ಲರು ಅಪೊಸ್ತಲರ ಬೋಧನೆಯಲ್ಲಿ, ಅನ್ಯೋನ್ಯತೆಯಲ್ಲಿ, ರೊಟ್ಟಿ ಮುರಿಯುವುದರಲ್ಲಿ, ಪ್ರಾರ್ಥನೆ ಮಾಡುವುದರಲ್ಲಿ ತಮ್ಮನ್ನು ಸಮರ್ಪಿಸಿಕೊಂಡು,
43 Obšel pa je vsako dušo strah, in veliko čudežev in znamenj se je godilo po aposteljnih.
ಪ್ರತಿಯೊಬ್ಬರೂ ಭಯಭಕ್ತಿಉಳ್ಳವರಾಗಿದ್ದರು. ಅಪೊಸ್ತಲರು ಅನೇಕ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದರು.
44 Vsi pa, kteri so verovali, bili so vkupej, in imeli so vse občno,
ವಿಶ್ವಾಸಿಗಳೆಲ್ಲರೂ ಒಟ್ಟಾಗಿದ್ದು, ತಮ್ಮಲ್ಲಿರುವ ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.
45 In lastnine in imenja so prodajali, in razdajali so jih vsem, kakor je kdo potreboval.
ಅವರು ಆಸ್ತಿಪಾಸ್ತಿಯನ್ನು ಮಾರಿ ಅವರವರ ಅವಶ್ಯಕತೆಗೆ ಅನುಸಾರವಾಗಿ ಎಲ್ಲರಿಗೂ ಹಂಚುತ್ತಿದ್ದರು.
46 In vsak dan so bili stanovitno ene misli v tempeljnu, in lomili so po hišah kruh, in prejemali so jed z veseljem in priprostim srcem,
ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.
47 Hvaleč Boga in imajoč milost pri vsem ljudstvu. A Gospod je pridajal cerkvi vsak dan teh, kteri so se zveličevali.
ಅವರು ದೇವರಿಗೆ ಸ್ತೋತ್ರ ಮಾಡುತ್ತಾ, ಜನರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಕ್ಷಣೆ ಹೊಂದಿದವರನ್ನು ಕರ್ತ ಯೇಸುವು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಿದ್ದರು.