< Откровение ап. Иоанна Богослова 20 >

1 И видех Ангела сходяща с небесе, имеюща ключь бездны и уже велико в руце своей: (Abyssos g12)
ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. (Abyssos g12)
2 и ят змия, змия древняго, иже есть диавол и сатана, и связа и на тысящу лет,
ಅವನು ಪಿಶಾಚಿಯೂ ಸೈತಾನನೂ ಆಗಿರುವ ಪುರಾತನ ಸರ್ಪವೆಂಬ ಘಟಸರ್ಪವನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
3 и в бездну затвори его, и заключи его, и запечатле над ним, да не прельстит ктому языки, дондеже скончается тысяща лет: и по сих подобает ему отрешену быти на мало время. (Abyssos g12)
ಆ ಸಾವಿರ ವರ್ಷ ಮುಗಿಯುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು. (Abyssos g12)
4 И видех престолы и седящыя на них, и суд дан бысть им: и душы растесаных за свидетелство Иисусово и за слово Божие, иже не поклонишася зверю, ни иконе его, и не прияша начертания на челех своих и на руце своей. И ожиша и воцаришася со Христом тысящу лет:
ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. ಅವರು ಪುನಃ ಜೀವಿತರಾಗಿ ಎದ್ದು ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.
5 прочии же мертвецы не ожиша, дондеже скончается тысяща лет. Се воскресение первое.
ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು.
6 Блажен и свят, иже имать часть в воскресении первем: на нихже смерть вторая не имать области, но будут иерее Богу и Христу и воцарятся с Ним тысящу лет.
ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.
7 И егда скончается тысяща лет, разрешен будет сатана от темницы своея и изыдет прельстити языки сущыя на четырех углех земли, Гога и Магога, собрати их на брань, ихже число яко песок морский.
ಆ ಸಾವಿರ ವರ್ಷಗಳು ಮುಗಿದ ಮೇಲೆ ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು.
8 И взыдоша на широту земли и обыдоша святых стан и град возлюбленный.
ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.
9 И сниде огнь от Бога с небесе и пояде я:
ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.
10 и диавол льстяй их ввержен будет в езеро огненно и жупелно, идеже зверь и лживый пророк: и мучени будут день и нощь во веки веков. (aiōn g165, Limnē Pyr g3041 g4442)
೧೦ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. (aiōn g165, Limnē Pyr g3041 g4442)
11 И видех престол велик бел и Седящаго на нем, Егоже от лица бежа небо и земля, и место не обретеся им.
೧೧ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ.
12 И видех мертвецы малыя и великия стоящя пред Богом, и книги разгнушася: и ина книга отверзеся, яже есть животная: и суд прияша мертвецы от написаных в книгах, по делом их.
೧೨ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು. ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
13 И даде море мертвецы своя, и смерть и ад даста своя мертвецы: и суд прияша по делом своим, (Hadēs g86)
೧೩ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. (Hadēs g86)
14 и смерть и ад ввержена быста в езеро огненное. И се есть вторая смерть. (Hadēs g86, Limnē Pyr g3041 g4442)
೧೪ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. (Hadēs g86, Limnē Pyr g3041 g4442)
15 И иже не обретеся в книзе животней написан, ввержен будет в езеро огненное. (Limnē Pyr g3041 g4442)
೧೫ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು. (Limnē Pyr g3041 g4442)

< Откровение ап. Иоанна Богослова 20 >