< Псалтирь 54 >

1 В конец, в песнех разума Давиду, внегда приити Зифеем и рещи Саулови: не се ли, Давид скрыся в нас? Боже, во имя Твое спаси мя и в силе Твоей суди ми.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಜಿಫೆಂಬ ಸ್ಥಳದವರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ, ಮಸ್ಕಿಲ್ ರಾಗದಲ್ಲಿ ದಾವೀದನು ರಚಿಸಿದ ಕೀರ್ತನೆ. ದೇವರೇ, ನಿಮ್ಮ ಹೆಸರಿನಿಂದ ನನ್ನನ್ನು ರಕ್ಷಿಸಿರಿ. ನಿಮ್ಮ ಬಲದಿಂದ ನನಗೆ ನ್ಯಾಯತೀರಿಸಿರಿ.
2 Боже, услыши молитву мою, внуши глаголы уст моих:
ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ನನ್ನ ಬಾಯಿಯ ಮಾತಿಗೆ ಕಿವಿಕೊಡಿರಿ.
3 яко чуждии восташа на мя, и крепцыи взыскаша душу мою, и не предложиша Бога пред собою.
ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಕ್ರೂರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವದೇ ಇಲ್ಲ.
4 Се бо, Бог помогает ми, и Господь заступник души моей:
ನಿಜವಾಗಿಯೂ ದೇವರು ನನ್ನ ಸಹಾಯಕರು. ಯೆಹೋವ ದೇವರು ನನ್ನ ಪ್ರಾಣವನ್ನು ಕಾಪಾಡುವವರು.
5 отвратит злая врагом моим: истиною Твоею потреби их.
ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ. ನಿಮ್ಮ ನಂಬಿಗಸ್ತಿಕೆಯಿಂದ ನೀವು ಅವರನ್ನು ದಂಡಿಸಿರಿ.
6 Волею пожру Тебе, исповемся имени Твоему, Господи, яко благо:
ನಾನು ನಿಮಗೆ ಸ್ವಂತ ಇಚ್ಛೆಯಿಂದ ಬಲಿಯನ್ನು ಅರ್ಪಿಸುವೆನು. ಯೆಹೋವ ದೇವರೇ, ನಿಮ್ಮ ಒಳ್ಳೆಯ ಹೆಸರನ್ನು ಕೊಂಡಾಡುವೆನು.
7 яко от всякия печали избавил мя еси, и на враги моя воззре око мое.
ಏಕೆಂದರೆ ಎಲ್ಲಾ ಇಕ್ಕಟ್ಟಿನಿಂದ ನನ್ನನ್ನು ಬಿಡಿಸಿದ ದೇವರು ನೀವೇ. ನನ್ನ ವೈರಿಗಳ ಮೇಲೆ ಜಯ ಸಾಧಿಸಿದ್ದನ್ನು ನಾನು ನೋಡುವೆನು.

< Псалтирь 54 >