< Второзаконие 34 >
1 И взыде Моисей от аравофа Моавля на гору Навав, на верх Фазга, яже есть прямо Иерихону: и показа ему Господь всю землю Галаадску даже до Дана,
೧ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು ಕಾನಾನ್ ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದ ವರೆಗೂ ಗಿಲ್ಯಾದ್ ಸೀಮೆ,
2 и всю землю Неффалимлю, и всю землю Ефремову и Манассиину, и всю землю Иудину даже до моря последняго,
೨ನಫ್ತಾಲಿ ಪ್ರದೇಶ, ಎಫ್ರಾಯೀಮ್ ಮತ್ತು ಮನಸ್ಸೆ ಕುಲಗಳವರ ಸೀಮೆ, ಪಶ್ಚಿಮಸಮುದ್ರದವರೆಗೂ ಯೆಹೂದ ಸೀಮೆ,
3 и пустыню и окрестная (села) Иерихона, град Фиников даже до Сигора,
೩ದಕ್ಷಿಣಪ್ರದೇಶ, ಚೋಗರೂರಿನ ತನಕ ಯೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿರುವ ಮೈದಾನ ಇದನ್ನೆಲ್ಲಾ ಅವನಿಗೆ ತೋರಿಸಿ,
4 и рече Господь к Моисею: сия земля, еюже кляхся Аврааму и Исааку и Иакову, глаголя: семени вашему дам ю: и показах ю очесем твоим, и тамо не внидеши.
೪“ನಾನು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನಮಾಡಿದ ದೇಶವು ಇದೇ; ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿ ದಾಟಿ ಅಲ್ಲಿಗೆ ಹೋಗಕೂಡದು” ಎಂದು ಹೇಳಿದನು.
5 И скончася тамо Моисей раб Господень в земли Моавли словом Господним.
೫ಯೆಹೋವನ ಮಾತಿನಂತೆ ಆತನ ಸೇವಕನಾದ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮರಣ ಹೊಂದಿದನು.
6 И погребоша его в земли Моавли близ дому Фогорова. И не уведа никтоже погребения его даже до дне сего.
೬ಮೋವಾಬ್ಯರ ದೇಶದಲ್ಲಿ ಬೇತ್‍ಪೆಗೋರದ ಎದುರಾಗಿರುವ ಕಣಿವೆಯಲ್ಲಿ (ಯೆಹೋವನು) ಅವನ ದೇಹವನ್ನು ಸಮಾಧಿಮಾಡಿದನು; ಅವನ ಸಮಾಧಿ ಎಲ್ಲಿದೆಯೋ ಇಂದಿನ ವರೆಗೆ ಯಾರಿಗೂ ತಿಳಿಯದು.
7 Моисею же бе сто и двадесять лет, егда скончася: не отемнесте очи его, ни истлеста устне его.
೭ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.
8 И плакашася сынове Израилевы Моисеа во Аравофе Моавли у Иордана близ Иерихона тридесять дний. И скончашася дние плача сетования о Моисей.
೮ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರು ಮೋಶೆಗೋಸ್ಕರ ಮೂವತ್ತು ದಿನಗಳ ವರೆಗೆ ದುಃಖಿಸಿದರು. ಅಲ್ಲಿಗೆ ಮೋಶೆಯ ಪ್ರಲಾಪದ ದಿನಗಳು ಮುಗಿದವು.
9 И Иисус сын Навин наполнися духа разума: возложи бо Моисей руце свои на него. И послушаша его сынове Израилевы, и сотвориша якоже заповеда Господь Моисею.
೯ಮೋಶೆಯು ನೂನನ ಮಗನಾದ ಯೆಹೋಶುವನ ಮೇಲೆ ಕೈಯಿಟ್ಟಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರವಾಗಿ ಇಸ್ರಾಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು.
10 И не воста ктому пророк во Израили якоже Моисей, егоже позна Господь лицем к лицу,
೧೦ಮೋಶೆಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ, ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು.
11 во всех знамениих и чудесех, егоже посла Господь сотворити я в земли Египетстей фараону и рабом его и всей земли его,
೧೧ಆತನು ಐಗುಪ್ತದೇಶದಲ್ಲಿ ಫರೋಹನ ಮುಂದೆಯೂ, ಅವನ ಪ್ರಜಾಪರಿವಾರದವರ ಮುಂದೆಯೂ ವಿಧವಿಧವಾದ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಯೆಹೋವನು ಅವನನ್ನು ಕಳುಹಿಸಿದನು.
12 дивная великая, и руку крепкую (и мышцу высокую), яже сотвори Моисей пред всем Израилем.
೧೨ಅವನು ಇಸ್ರಾಯೇಲರ ಕಣ್ಣ ಮುಂದೆ ವಿಶೇಷವಾದ ಭುಜಪರಾಕ್ರಮವನ್ನೂ ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು.