< Псалми 40 >

1 Дуго чеках Господа, и саже се к мени, и чу вику моју.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ನಾನು ಯೆಹೋವ ದೇವರಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಅವರು ನನ್ನ ಕಡೆಗೆ ತಿರುಗಿ, ನನ್ನ ಮೊರೆಯನ್ನು ಕೇಳಿದರು.
2 Извади ме из јаме, која бучи, и из глиба, и постави на камен ноге моје, и утврди стопе моје.
ನನ್ನನ್ನು ಜಾರುವ ಗುಂಡಿಯೊಳಗಿಂದ ಎತ್ತಿದರು. ಕೆಸರಿನ ಮಣ್ಣಿನಿಂದ ಎಬ್ಬಿಸಿದರು. ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ, ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದರು.
3 И метну у уста моја песму нову, хвалу Богу нашем. Виде многи, и почињу се бојати Господа, и уздати се у Њега.
ನನ್ನ ಬಾಯಲ್ಲಿ ನೂತನ ಹಾಡನ್ನು ಹುಟ್ಟಿಸಿದ್ದಾರೆ, ಆ ಹಾಡು ನಮ್ಮ ದೇವರ ಸ್ತೋತ್ರವೇ. ಅನೇಕರು ಇದನ್ನು ಕಂಡು, ಭಯಪಟ್ಟು ಯೆಹೋವ ದೇವರಲ್ಲಿ ಭರವಸೆ ಇಡುವರು.
4 Благо ономе који на Господа ставља надање своје, и не обраћа се охолима и оним који теже на лаж.
ಯೆಹೋವ ದೇವರನ್ನು ತನ್ನ ಭರವಸೆಯಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳದೆಯೂ ಇರುವ ಮನುಷ್ಯನು ಧನ್ಯನು.
5 Многа су чудеса Твоја, која си учинио Господе, Боже мој, и многе су мисли Твоје с нама. Нема Ти равна. Хтео бих јављати и казивати, али им броја нема.
ನನ್ನ ದೇವರಾದ ಯೆಹೋವ ದೇವರೇ, ನೀವು ಮಾಡಿದ ನಿಮ್ಮ ಅದ್ಭುತಕಾರ್ಯಗಳು ಎಷ್ಟೋ! ನಮ್ಮ ಕಡೆ ನಿಮಗಿರುವ ಯೋಜನೆಗಳೂ ಬಹಳ, ನಿಮಗೆ ಸರಿಸಾಟಿ ಯಾರೂ ಇಲ್ಲ. ನಿಮ್ಮ ಕೃತ್ಯಗಳನ್ನು ನಾನು ತಿಳಿಸಿ ಹೇಳಬೇಕಾದರೆ, ಅವು ಎಣಿಸಲು ಅಸಾಧ್ಯ.
6 Жртве и дарове нећеш; Ти си ми уши отворио; жртву паљеницу и која се за грех приноси не тражиш.
ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ. ಆದರೆ ನೀವು ನನ್ನ ಕಿವಿಗಳನ್ನು ತೆರೆದಿರುವಿರಿ. ದಹನಬಲಿಗಳನ್ನೂ ಪಾಪ ಪರಿಹಾರದ ಬಲಿಗಳನ್ನೂ ನೀವು ಬಯಸಲಿಲ್ಲ.
7 И по томе рекох: Ево идем, као што је у књизи писано за мене;
ಆಗ ನಾನು, “ಇಗೋ, ನಾನು ಇದ್ದೇನೆ, ನಾನು ಬಂದಿದ್ದೇನೆ. ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿದೆ.
8 Хоћу чинити вољу Твоју, Боже мој, и закон је Твој мени у срцу.
ನನ್ನ ದೇವರೇ, ನಿಮ್ಮ ಚಿತ್ತವನ್ನು ಮಾಡಲು ಬಯಸುತ್ತೇನೆ; ನಿಮ್ಮ ನಿಯಮವು ನನ್ನ ಅಂತರಂಗದಲ್ಲಿ ಇದೆ.”
9 Казујем правду на сабору великом; ево, уста својих не устављам; Господе, Ти знаш.
ನಾನು ನಿಮ್ಮ ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿದೆನು; ಇಗೋ, ನಾನು ನನ್ನ ತುಟಿಗಳಿಂದ ಸಾರದೆ ಇರಲಿಲ್ಲವೆಂದು ನೀವೇ ತಿಳಿದಿದ್ದೀರಿ.
10 Правде Твоје не сакривам у срцу свом, казујем верност Твоју и спасење Твоје; и не тајим милости Твоје и истине Твоје од сабора великог.
ನಾನು ನಿಮ್ಮ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಿಟ್ಟುಕೊಳ್ಳಲಿಲ್ಲ. ನಿಮ್ಮ ನಂಬಿಗಸ್ತಿಕೆಯನ್ನೂ ನಿಮ್ಮ ರಕ್ಷಣೆಯನ್ನೂ ನಿಮ್ಮ ಪ್ರೀತಿಯನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡದೆ ಸಾರಿದೆನು.
11 Господе, немој затворити срца свог од мене; милост Твоја и истина Твоја једнако нека ме чувају.
ಯೆಹೋವ ದೇವರೇ, ನಿಮ್ಮ ಕರುಣೆಯನ್ನು ನನ್ನಿಂದ ಹಿಂತೆಗೆಯಬೇಡಿರಿ; ನಿಮ್ಮ ಪ್ರೀತಿಯೂ ನಿಮ್ಮ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
12 Јер ме опколише зла небројена; стигоше ме неправде моје, да не могу гледати; има их више него косе на глави мојој, срце ме моје остави.
ಲೆಕ್ಕವಿಲ್ಲದಷ್ಟು ಕೇಡುಗಳು ನನ್ನನ್ನು ಸುತ್ತಿಕೊಂಡಿವೆ. ನಾನು ಏನೂ ನೋಡಲಾರದಷ್ಟು ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿವೆ; ನನ್ನ ಪಾಪಗಳು ತಲೆಯ ಕೂದಲುಗಳಿಗಿಂತ ಹೆಚ್ಚಾಗಿವೆ, ಆದ್ದರಿಂದ ನನ್ನ ಹೃದಯವು ಕುಂದಿಹೋಗಿದೆ.
13 Господе, вољан буди избавити ме, Господе, похитај ми у помоћ.
ಯೆಹೋವ ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ. ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.
14 Нек се постиде и посраме сви који траже погибао души мојој! Нек се врате натраг и постиде који ми желе зло.
ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು ನಾಚಿಕೆಪಟ್ಟು ಗಲಿಬಿಲಿಯಾಗಲಿ. ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ ಹಿಂಜರಿದು ಅವಮಾನ ಹೊಂದಲಿ.
15 Нек се поврате у сметњи својој који ми говоре: Ха! Ха!
“ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯಿಂದಲೇ ವಿಸ್ಮಯಗೊಳ್ಳಲಿ.
16 Нека се теше и веселе Тобом сви који траже Тебе Господе, и који љубе спасење Твоје, нека једнако говоре: Велик Господ!
ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ; ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ಯೆಹೋವ ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.
17 Ја сам несрећан и ништ, нека се Господ постара за ме! Ти си помоћ моја и Избавитељ мој, Боже мој, не часи.
ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ; ಆದರೂ ಯೆಹೋವ ದೇವರು ನನ್ನ ಹಿತಚಿಂತಕರಾಗಿದ್ದಾರೆ. ನನ್ನ ದೇವರೇ ನೀವೇ ನನ್ನ ಸಹಾಯವೂ ನನ್ನ ವಿಮೋಚಕರೂ ಆಗಿದ್ದೀರಿ, ನೀವು ತಡಮಾಡಬೇಡಿರಿ.

< Псалми 40 >