< Marku 14 >
1 Bijahu pak još dva dana do pashe i do dana prijesnijeh hljebova; i tražahu glavari sveštenièki i književnici kako bi ga iz prijevare uhvatili i ubili.
೧ಪಸ್ಕಹಬ್ಬ ಎಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವುದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು.
2 Ali govorahu: ne o prazniku, da se ne bi narod pobunio.
೨“ಆದರೆ ಹಬ್ಬದ ಸಂದರ್ಭದಲ್ಲಿ ಈ ಕಾರ್ಯವನ್ನು ಮಾಡಬಾರದು. ಏಕೆಂದರೆ ನಮ್ಮ ಮೇಲೆ ಜನರು ದಂಗೆ ಎದ್ದಾರು” ಎಂದು ಮಾತನಾಡಿಕೊಂಡರು.
3 I kad bijaše on u Vitaniji u kuæi Simona gubavoga i sjeðaše za trpezom, doðe žena sa sklenicom mnogocjenoga mira èistoga nardova, i razbivši sklenicu ljevaše mu na glavu.
೩ಆತನು ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.
4 A neki se srðahu govoreæi: zašto se to miro prosipa tako?
೪ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ?
5 Jer se mogaše za nj uzeti više od trista groša i dati siromasima. I vikahu na nju.
೫ಇದನ್ನು ಮುನ್ನೂರು ಬೆಳ್ಳಿನಾಣ್ಯಗಳಿಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಹೇಳಿ ಆಕೆಯನ್ನು ದೂಷಿಸಿದರು.
6 A Isus reèe: ostavite je; šta joj smetate? ona uèini dobro djelo na meni.
೬ಆದರೆ ಯೇಸು, “ಆಕೆಯನ್ನು ಬಿಟ್ಟುಬಿಡಿರಿ, ಆಕೆಗೆ ಏಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ.
7 Jer siromahe imate svagda sa sobom, i kad god hoæete možete im dobro èiniti; a mene nemate svagda.
೭ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸು ಬಂದಾಗ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.
8 Ona što može, uèini: ona pomaza naprijed tijelo moje za ukop.
೮ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ಈಕೆಯು ನನ್ನ ದೇಹವನ್ನು ಶವಸಂಸ್ಕಾರಕ್ಕೆ ಮುಂಚಿತವಾಗಿಯೇ ಈ ತೈಲದಿಂದ ಅಭಿಷೇಕಿಸಿ ಸಿದ್ಧಪಡಿಸಿದ್ದಾಳೆ.
9 Zaista vam kažem: gdje se god uspropovijeda jevanðelje ovo po svemu svijetu, kazaæe se i to za spomen njezin.
೯ಸುವಾರ್ತೆಯು ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವುದೋ ಅಲ್ಲೆಲ್ಲಾ ಈಕೆಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದನು.
10 I Juda Iskariotski, jedan od dvanaestorice, otide ka glavarima sveštenièkijem da im ga izda.
೧೦ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಮುಖ್ಯಯಾಜಕರಿಗೆ ಹಿಡಿದುಕೊಡಲು ಅವರ ಬಳಿಗೆ ಹೋದನು.
11 A oni èuvši obradovaše se, i obrekoše mu novce dati: i tražaše zgodu da ga izda.
೧೧ಅವರು ಅದನ್ನು ಕೇಳಿ ಸಂತೋಷಪಟ್ಟು, ನಿನಗೆ ಹಣಕೊಡುತ್ತೇವೆ ಎಂದು ಮಾತುಕೊಟ್ಟರು. ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ಹುಡುಕುತ್ತಿದ್ದನು.
12 I u prvi dan prijesnijeh hljebova, kad klahu pashu, rekoše mu uèenici njegovi: gdje æeš da idemo da ti zgotovimo pashu da jedeš?
೧೨ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀನು ಪಸ್ಕದ ಭೋಜನ ಮಾಡಲು ನಾವು ಎಲ್ಲಿ ಸಿದ್ಧಮಾಡಬೇಕೆಂದು ಹೇಳು” ಎಂದು ಕೇಳಿದರು.
13 I posla dvojicu od uèenika svojijeh i reèe im: idite u grad, i srešæe vas èovjek koji nosi vodu u krèagu; idite za njim,
೧೩ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು ಅವರಿಗೆ, “ನೀವು ಪಟ್ಟಣದೊಳಗೆ ಹೋಗಿರಿ. ಅಲ್ಲಿ ತುಂಬಿದ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು. ಅವನನ್ನು ಹಿಂಬಾಲಿಸಿರಿ.
14 I gdje uðe kažite gospodaru od one kuæe: uèitelj veli: gdje je gostionica gdje æu jesti pashu s uèenicima svojijem?
೧೪ಅವನು ಯಾವ ಮನೆಯೊಳಗೆ ಹೋಗುವನೋ ಆ ಮನೆಯ ಯಜಮಾನನಿಗೆ, ‘ನಮ್ಮ ಗುರು, ತನ್ನ ಶಿಷ್ಯರ ಸಂಗಡ ಪಸ್ಕದ ಭೋಜನ ಮಾಡಲು ಕೊಠಡಿ ಎಲ್ಲಿದೆ?’ ಎಂಬುದಾಗಿ ಕೇಳುತ್ತಿದ್ದಾನೆ ಎಂದು ಹೇಳಿರಿ.
15 I on æe vam pokazati veliku sobu prostrtu gotovu: ondje nam zgotovite.
೧೫“ಅವನು ಸಜ್ಜುಗೊಳಿಸಿ ಸಿದ್ಧಮಾಡಿರುವ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನಮಗೆ ಭೋಜನಕ್ಕೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿ ಕೊಟ್ಟನು.
16 I iziðoše uèenici njegovi, i doðoše u grad, i naðoše kao što im kaza, i ugotoviše pashu.
೧೬ಶಿಷ್ಯರು ಹೊರಟು ಪಟ್ಟಣದೊಳಗೆ ಹೋಗಿ ಯೇಸು ತಮಗೆ ಹೇಳಿದಂತೆ ಎಲ್ಲವನ್ನು ಕಂಡು ಪಸ್ಕವನ್ನು ಸಿದ್ಧಮಾಡಿದರು.
17 I kad bi uveèe, doðe sa dvanaestoricom.
೧೭ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.
18 I kad sjeðahu za trpezom i jeðahu reèe Isus: zaista vam kažem: jedan od vas, koji jede sa mnom, izdaæe me.
೧೮ಅವರು ಕುಳಿತುಕೊಂಡು ಊಟಮಾಡುತ್ತಿದ್ದಾಗ ಯೇಸು, “ನನ್ನೊಂದಿಗೆ ಊಟಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದನು.
19 A oni se zabrinuše, i stadoše govoriti jedan za drugijem: da ne ja? i drugi: da ne ja?
೧೯ಆಗ ಅವರು ಬಹು ದುಃಖದಿಂದ ಒಬ್ಬೊಬ್ಬರಾಗಿ ಆತನಿಗೆ “ನಾನಲ್ಲವಲ್ಲಾ?” ಎಂದು ಕೇಳತೊಡಗಿದರು.
20 A on odgovarajuæi reèe im: jedan od dvanaestorice koji umoèi sa mnom u zdjelu.
೨೦ಆತನು ಉತ್ತರವಾಗಿ ಅವರಿಗೆ “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ನನ್ನ ಸಂಗಡ ಬಟ್ಟಲಲ್ಲಿ ರೊಟ್ಟಿಯನ್ನು ಅದ್ದುವವನೇ.
21 Sin èovjeèij dakle ide kao što je pisano za njega; ali teško onome èovjeku koji izda sina èovjeèijega; bolje bi mu bilo da se nije rodio onaj èovjek.
೨೧ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಯಾರು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ದುರ್ಗತಿಯನ್ನು ಏನೆಂದು ಹೇಳಲಿ? ಅವನು ಹುಟ್ಟದಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗಿತ್ತು” ಅಂದನು.
22 I kad jeðahu uze Isus hljeb i blagoslovivši prelomi ga, i dade im, i reèe: uzmite, jedite; ovo je tijelo moje.
೨೨ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಡುತ್ತಾ “ಇದನ್ನು ತೆಗೆದುಕೊಳ್ಳಿರಿ, ಇದು ನನ್ನ ದೇಹ” ಎಂದನು.
23 I uze èašu i davši hvalu dade im; i piše iz nje svi.
೨೩ತರುವಾಯ ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸುತ್ತಿ ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟನು. ಅವರೆಲ್ಲರೂ ಅದರಿಂದ ಕುಡಿದರು.
24 I reèe im: ovo je krv moja novoga zavjeta koja æe se proliti za mnoge.
೨೪ಯೇಸು ಅವರಿಗೆ, “ಇದು ನನ್ನ ರಕ್ತ, ಬಹು ಜನರಿಗಾಗಿ ಸುರಿಸಲ್ಪಡುವಒಡಂಬಡಿಕೆಯ ರಕ್ತ.
25 Zaista vam kažem: više neæu piti od roda vinogradskoga do onoga dana kad æu ga piti novoga u carstvu Božijemu.
೨೫ನಿಮಗೆ ಸತ್ಯವಾಗಿ ಹೇಳುತ್ತೇನೆ; ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದನು.
26 I otpojavši hvalu iziðoše na goru Maslinsku.
೨೬ಬಳಿಕ ಅವರು ಒಂದು ಕೀರ್ತನೆ ಹಾಡಿ ಎಣ್ಣೆಮರಗಳ ಗುಡ್ಡಕ್ಕೆ ಹೊರಟು ಹೋದರು.
27 I reèe im Isus: svi æete se vi sablazniti o mene ovu noæ; jer je pisano: udariæu pastira i ovce æe se razbjeæi.
೨೭ಆಗ ಯೇಸು ಅವರಿಗೆ, “ನೀವೆಲ್ಲರೂ ನನ್ನನ್ನು ಬಿಟ್ಟು ಓಡಿಹೋಗುವಿರಿ. ಏಕೆಂದರೆ; “‘ನಾನುಕುರುಬನನ್ನು ಹೊಡೆಯುವೆನು; ಕುರಿಗಳು ಚದರಿ ಹೋಗುವವು’ ಎಂದು ಬರೆದಿದೆಯಲ್ಲಾ ಅಂದನು.
28 Ali po vaskrseniju svojemu ja idem pred vama u Galileju.
೨೮ಆದರೂ ನಾನು ಸತ್ತು ಜೀವಿತನಾಗಿ ಎದ್ದಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು.
29 A Petar mu reèe: ako se i svi sablazne, ali ja neæu.
೨೯ಪೇತ್ರನು ಯೇಸುವಿಗೆ, “ಎಲ್ಲರೂ ಬಿಟ್ಟುಹೋದರೂ ನಾನು ನಿನ್ನನ್ನು ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.
30 I reèe mu Isus: zaista ti kažem: noæas dok dvaput pijetao ne zapjeva tri puta æeš me se odreæi.
೩೦ಯೇಸುವು ಆತನಿಗೆ, “ಸತ್ಯವಾಗಿ ಹೇಳುತ್ತೇನೆ ಇಂದು ಈ ರಾತ್ರಿಯಲ್ಲಿಯೇಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ” ಎಂದನು.
31 A on još veæma govoraše: da bih znao s tobom i umrijeti neæu te se odreæi. Tako i svi govorahu.
೩೧ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.
32 I doðoše u selo koje se zove Getsimanija, i reèe uèenicima svojijem: sjedite ovdje dok ja idem da se pomolim Bogu.
೩೨ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಆತನು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥನೆ ಮಾಡುವ ತನಕ, ನೀವು ಇಲ್ಲೇ ಕುಳಿತುಕೊಂಡಿರಿ” ಎಂದು ಹೇಳಿದನು.
33 I uze sa sobom Petra i Jakova i Jovana, i zabrinu se i poèe tužiti.
೩೩ಪೇತ್ರ, ಯಾಕೋಬ, ಯೋಹಾನರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬಹು ಬೆಚ್ಚಿಬೆರಗಾಗಿ ಮನಗುಂದಿದವನಾದನು.
34 I reèe im: žalosna je duša moja do smrti; poèekajte ovdje, i stražite.
೩೪ಮತ್ತು ಆತನು ಅವರಿಗೆ “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ ನೀವು ಇಲ್ಲೇ ಕಾದುಕೊಂಡಿದ್ದು ಎಚ್ಚರವಾಗಿರಿ” ಎಂದು ಹೇಳಿದನು.
35 I otišavši malo pade na zemlju, i moljaše se da bi ga mimoišao èas ako je moguæe.
೩೫ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿಹೋಗುವಂತೆ ಪ್ರಾರ್ಥಿಸಿದನು.
36 I govoraše: Ava oèe! sve je moguæe tebi; pronesi èašu ovu mimo mene; ali opet ne kako ja hoæu nego kako ti.
೩೬“ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ. ಈ ಪಾನಪಾತ್ರೆಯನ್ನು ನನ್ನಿಂದ ತೆಗೆದುಬಿಡು ಆದರೂ ಇದು ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದನು.
37 I doðe i naðe ih gdje spavaju, i reèe Petru: Simone! Zar spavaš? Ne može li jednoga èasa postražiti?
೩೭ಆ ಮೇಲೆ ಆತನು ಬಂದು ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರೆಮಾಡುತ್ತಿರುವೆಯಾ? ಒಂದು ಗಳಿಗೆಯಾದರೂ ಎಚ್ಚರವಾಗಿರಲಾರೆಯಾ?
38 Stražite i molite se Bogu da ne padnete u napast; jer je duh srèan ali je tijelo slabo.
೩೮ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ; ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು.
39 I opet otišavši pomoli se Bogu one iste rijeèi govoreæi.
೩೯ಆ ಮೇಲೆ ಪುನಃ ಹೋಗಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು.
40 I vrativši se naðe ih opet gdje spavaju; jer im bijahu oèi otežale; i ne znadijahu šta bi mu odgovorili.
೪೦ಯೇಸು ಹಿಂತಿರುಗಿ ಬಂದಾಗ ಅವರು ಪುನಃ ನಿದ್ರೆ ಮಾಡುವುದನ್ನು ಕಂಡನು ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. ಮತ್ತು ಆತನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.
41 I doðe treæi put, i reèe im: jednako spavate i poèivate; dosta je; doðe èas; evo se predaje sin èovjeèij u ruke grješnicima.
೪೧ಆತನು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನು ನಿದ್ರಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಿರಾ? ಸಾಕು, ಆ ಗಳಿಗೆ ಸಮೀಪಿಸಿದೆ; ಮನುಷ್ಯಕುಮಾರನು ಪಾಪಿಗಳ ಕೈಗೆ ಒಪ್ಪಿಸಲ್ಪಡುತ್ತಾನೆ.
42 Ustanite da idemo; evo izdajnik se moj približi.
೪೨ಏಳಿರಿ, ಹೋಗೋಣ. ಇಗೋ, ನನ್ನನ್ನು ಪಾಪಿಗಳ ಕೈಗೆ ಹಿಡಿದುಕೊಡುವವನು ಸಮೀಪಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.
43 I odmah dok on još govoraše, doðe Juda, jedan od dvanaestorice, i s njim ljudi mnogi s noževima i s koljem od glavara sveštenièkijeh i od književnika i starješina.
೪೩ಯೇಸು ಇನ್ನೂ ಮಾತನಾಡುತ್ತಾ ಇರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಮುಖ್ಯಯಾಜಕರೂ, ಶಾಸ್ತ್ರಿಗಳೂ ಮತ್ತು ಹಿರಿಯರ ಕಡೆಯಿಂದ ಒಂದು ಗುಂಪು ಖಡ್ಗ, ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗೆ ಬಂದರು.
44 I izdajnik njegov dade im znak govoreæi: koga ja cjelivam onaj je: držite ga, i vodite ga èuvajuæi.
೪೪ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುವೆನೊ ಅವನೇ ಆತನು! ಅವನನ್ನು ಹಿಡಿದು ಭದ್ರವಾಗಿ ಕರೆದೊಯ್ಯಿರಿ” ಎಂದು ಮೊದಲೇ ಸೂಚನೆಕೊಟ್ಟಿದ್ದನು.
45 I došavši odmah pristupi k njemu, i reèe: Ravi! ravi! i cjeliva ga.
೪೫ಅದರಂತೆಯೇ ಯೂದನು ಅಲ್ಲಿಗೆ ಬಂದಕೂಡಲೇ ಅವನು ಯೇಸುವಿನ ಬಳಿಗೆ ಹೋಗಿ, “ಗುರುವೇ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
46 A oni metnuše ruke svoje na nj i uhvatiše ga.
೪೬ಅವರು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
47 A jedan od onijeh što stajahu ondje izvadi nož te udari slugu poglavara sveštenièkoga, i otsijeèe mu uho.
೪೭ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ತನ್ನ ಖಡ್ಗವನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
48 I odgovarajuæi Isus reèe im: kao na hajduka izišli ste s noževima i s koljem da me uhvatite,
೪೮ಅವರು ಯೇಸುವನ್ನು ಹಿಡಿದಾಗ ಆತನು ಅವರಿಗೆ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ?
49 A svaki dan sam bio kod vas u crkvi i uèio, i ne uhvatiste me. Ali da se zbude pismo.
೪೯ನಾನು ಪ್ರತಿದಿನವು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಶಾಸ್ತ್ರದಲ್ಲಿ ಬರೆದದ್ದು ನೆರವೇರುವಂತೆ ಹೀಗೆಲ್ಲಾ ಆಯಿತು” ಎಂದು ಉತ್ತರ ಕೊಟ್ಟನು.
50 I ostavivši ga uèenici svi pobjegoše.
೫೦ಆಗ ಆತನ ಸಂಗಡವಿದ್ದವರೆಲ್ಲರು ಆತನನ್ನು ಬಿಟ್ಟು ಓಡಿಹೋದರು.
51 I za njim iðaše nekakav mladiæ ogrnut platnom po golu tijelu; i uhvatiše onoga mladiæa.
೫೧ಆಗ ಯುವಕನೊಬ್ಬನು ಮೈಮೇಲೆ ನಾರುಮಡಿಯನ್ನು ಮಾತ್ರ ಸುತ್ತಿಕೊಂಡವನಾಗಿ ಯೇಸುವಿನ ಹಿಂದೆ ಬರುತ್ತಿದ್ದನು;
52 A on ostavivši platno go pobježe od njih.
೫೨ಅವರು ಅವನನ್ನು ಹಿಡಿಯಲೂ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು.
53 I dovedoše Isusa k poglavaru sveštenièkome, i stekoše se k njemu svi glavari sveštenièki i književnici i starješine.
೫೩ಅವರು ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದರು. ಆತನ ಸಂಗಡ ಮುಖ್ಯಯಾಜಕರೆಲ್ಲರೂ, ಹಿರಿಯರು, ಶಾಸ್ತ್ರಿಗಳು ಕೂಡಿಬಂದರು.
54 I Petar ide za njim izdaleka do u dvor poglavara sveštenièkoga, i sjeðaše sa slugama, i grijaše se kod ognja.
೫೪ಮತ್ತು ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾಯಾಜಕನ ಅಂಗಳದೊಳಗೆ ಬಂದು ಕಾವಲುಗಾರರ ಸಂಗಡ ಸೇರಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು.
55 A glavari sveštenièki i sva skupština tražahu na Isusa svjedoèanstva da ga ubiju; i ne naðoše;
೫೫ಆಗ ಮುಖ್ಯಯಾಜಕರು ಮತ್ತು ಹಿರೀಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಆತನ ವಿರುದ್ಧವಾಗಿ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ.
56 Jer mnogi svjedoèahu lažno na njega i svjedoèanstva ne bijahu jednaka.
೫೬ಅನೇಕರು ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ.
57 I jedni ustavši svjedoèahu na njega lažno govoreæi:
೫೭ತರುವಾಯ ಕೆಲವರು ಎದ್ದು ನಿಂತು, “‘ಇವನು ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದು ಆಲಯವನ್ನು ಮೂರು ದಿನಗಳಲ್ಲಿ ಕಟ್ಟುವೆನು’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂಬುದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು.
58 Mi smo èuli gdje on govori: ja æu razvaliti ovu crkvu koja je rukama naèinjena, i za tri dana naèiniæu drugu koja neæe biti rukama naèinjena.
೫೮
59 I ni ovo svjedoèanstvo njihovo ne bijaše jednako.
೫೯ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ.
60 I ustavši poglavar sveštenièki na srijedu zapita Isusa govoreæi: zar ništa ne odgovaraš što ovi na tebe svjedoèe?
೬೦ಆಗ ಮಹಾಯಾಜಕನು ಅವರ ಮಧ್ಯದಲ್ಲಿ ಎದ್ದು ನಿಂತು, “ನೀನೇನೂ ಉತ್ತರ ಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಎಂದು ಯೇಸುವನ್ನು ಕೇಳಿದನು.
61 A on muèaše i ništa ne odgovaraše. Opet poglavar sveštenièki zapita i reèe: jesi li ti Hristos, sin blagoslovenoga?
೬೧ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು.
62 A Isus reèe: jesam; i vidjeæete sina èovjeèijega gdje sjedi s desne strane sile i ide na oblacima nebeskijem.
೬೨ಯೇಸುವು “ಹೌದು ನಾನೇ! “ಇದಲ್ಲದೆಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದನು.
63 A poglavar sveštenièki razdrije svoje haljine, i reèe: šta nam trebaju više svjedoci?
೬೩ಇದನ್ನು ಕೇಳಿ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನೂ ನಮಗೆ ಸಾಕ್ಷಿಗಳ ಅಗತ್ಯವೇನಿದೆ?
64 Èuste hulu na Boga; šta mislite? A oni svi kazaše da je zaslužio smrt.
೬೪ಇವನು ಮಾಡಿದ ದೇವದೂಷಣೆಯನ್ನು ನೀವು ಕೇಳಿದಿರಲ್ಲಾ, ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, ಇವನಿಗೆ ಮರಣದಂಡನೆ ಆಗಬೇಕು ಎಂದು ತೀರ್ಪು ಮಾಡಿದರು.
65 I poèeše jedni pljuvati na nj, i pokrivati mu lice, i æušati ga, i govoriti mu: proreci; i sluge ga bijahu po obrazima.
೬೫ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು.
66 I kad bijaše Petar dolje na dvoru, doðe jedna od sluškinja poglavara sveštenièkoga,
೬೬ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಬಂದು ಅವನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಕಂಡು,
67 I vidjevši Petra gdje se grije pogleda na nj i reèe: i ti si bio s Isusom Nazareæaninom.
೬೭ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು” ಎಂದಳು.
68 A on se odreèe govoreæi: ne znam niti razumijem šta ti govoriš. I iziðe napolje pred dvor: i pijetao zapjeva.
೬೮ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ, ಅರ್ಥವಾಗುತ್ತಲೂ ಇಲ್ಲ!” ಎಂದು ಹೇಳಿ ಮುಖ್ಯದ್ವಾರದೊಳಗಿಂದ ಹೊರಾಂಗಣಕ್ಕೆ ಹೋದನು.
69 I opet kad ga vidje sluškinja, poèe govoriti onima što stajahu ondje: ovaj je od njih.
೬೯ಆ ದಾಸಿಯು ಅವನನ್ನು ಪುನಃ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು” ಎಂದು ಹೇಳಲಾರಂಭಿಸಿದಳು.
70 A on se opet odricaše. I malo zatijem opet oni što stajahu ondje rekoše Petru: vaistinu si od njih: jer si Galilejac, i govor ti je onakovi.
೭೦ಆಗ ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ಯಾಕೆಂದರೆ ನೀನು ಗಲಿಲಾಯದವನೇ” ಎಂದರು.
71 A on se poèe kleti i preklinjati: ne znam toga èovjeka za koga vi govorite.
೭೧ಆದರೆ ಅವನು, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿದಾಗ, ಕೋಳಿ ಎರಡನೆಯ ಸಾರಿ ಕೂಗಿತು.
72 I drugi put zapjeva pijetao. I opomenu se Petar rijeèi što mu reèe Isus: dok pijetao dvaput ne zapjeva odreæi æeš me se triput. I stade plakati.
೭೨ಆಗ ಪೇತ್ರನು, “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ” ಎಂದು ಯೇಸು ತನಗೆ ಹೇಳಿದ ಮಾತನ್ನು ನೆನಪಿಗೆ ಬಂದ ಕಾರಣ, ವ್ಯಥೆಪಟ್ಟು ದುಃಖಭರಿತನಾಗಿ ಅತ್ತನು.