< Levitski Zakonik 2 >
1 A kad ko hoæe da prinese na žrtvu Gospodu dar, bijelo brašno neka bude žrtva njegova, i neka je polije uljem i metne na nju kad.
೧“‘ಯಾವನಾದರೂ ಯೆಹೋವನಿಗೆ ಧಾನ್ಯನೈವೇದ್ಯವನ್ನು ಮಾಡಬೇಕೆಂದಿದ್ದರೆ ಅದು ಗೋದಿಹಿಟ್ಟಿನದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಹೊಯ್ದು ಅದರ ಮೇಲೆ ಧೂಪವನ್ನು ಇಡಬೇಕು.
2 I neka je donese sinovima Aronovijem sveštenicima, i neka sveštenik uzme toga brašna punu šaku i ulja i sav kad, i neka to zapali sveštenik na oltaru za spomen njezin; to je žrtva ognjena na ugodni miris Gospodu.
೨ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.
3 A što ostane od toga dara, neka bude Aronu i sinovima njegovijem; to je svetinja nad svetinjama izmeðu žrtava koje se pale Gospodu.
೩ಆ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷಗಳಲ್ಲಿ ಅತಿಪರಿಶುದ್ಧವಾಗಿದೆ.
4 Ako li hoæeš da prineseš dar peèen u peæi, neka budu pogaèe prijesne od bijeloga brašna, zamiješene s uljem, ili kolaèi prijesni, namazani uljem.
೪“‘ನೀವು ಒಲೆಯಲ್ಲಿ ಅಡಿಗೆಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿಹಿಟ್ಟಿನ ಹೋಳಿಗೆಗಳು ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳು ಆಗಿರಬೇಕು.
5 Ako li ti je dar peèeno što u tavi, neka je od bijeloga brašna bez kvasca zamiješeno s uljem.
೫ನೀವು ಅರ್ಪಿಸುವ ಧಾನ್ಯ ನೈವೇದ್ಯವು ಕಬ್ಬಿಣದ ಹಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿಹಿಟ್ಟಿನದಾಗಿರಬೇಕು.
6 Razlomi ga na dijelove, i polij uljem; to je dar.
೬ನೀವು ಅದನ್ನು ಚೂರುಚೂರಾಗಿ ಮುರಿದು, ಅದರ ಮೇಲೆ ಎಣ್ಣೆ ಹೊಯ್ಯಬೇಕು. ಇದು ಧಾನ್ಯನೈವೇದ್ಯವಾಗಿದೆ.
7 Ako li ti je dar gotovljen u kotliæu, neka je od bijeloga brašna s uljem.
೭ನೀವು ಅರ್ಪಿಸುವ ಧಾನ್ಯ ನೈವೇದ್ಯ ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿಹಿಟ್ಟಿನದಾಗಿರಬೇಕು.
8 I donesi dar koji naèiniš od toga Gospodu, i podaj ga svešteniku, i on æe ga odnijeti na oltar;
೮ನೀವು ಈ ಪದಾರ್ಥಗಳಿಂದ ಮಾಡಿದ ನೈವೇದ್ಯವನ್ನು ಯೆಹೋವನಿಗೆ ಸಮರ್ಪಿಸುವಾಗ ಅದನ್ನು ಯಾಜಕನಿಗೆ ಒಪ್ಪಿಸಬೇಕು; ಅವನೇ ಅದನ್ನು ಯಜ್ಞವೇದಿಯ ಬಳಿಗೆ ತರಬೇಕು.
9 I uzeæe sveštenik od dara spomen njegov, i zapaliæe ga na oltaru; to je žrtva ognjena na ugodni miris Gospodu.
೯ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪಭಾಗವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.
10 A što ostane od dara, neka bude Aronu i sinovima njegovijem; to je svetinja nad svetinjama izmeðu žrtava koje se pale Gospodu.
೧೦ಧಾನ್ಯ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಕೊಡಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದ್ದರಿಂದ ಅತಿಪರಿಶುದ್ಧವಾಗಿದೆ.
11 Nijedan dar koji prinosite Gospodu da ne bude s kvascem; jer ni kvasca ni meda ne treba da palite na žrtvu ognjenu Gospodu.
೧೧“‘ನೀವು ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸುವ ಯಾವ ಪದಾರ್ಥವನ್ನು ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಅಥವಾ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಹೋಮಮಾಡಬಾರದು.
12 Samo u žrtvi od prvina možete to prinijeti Gospodu; ali na oltar ne meæite za ugodni miris.
೧೨ಅವುಗಳನ್ನು ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬಹುದೇ ಹೊರತು ಯಜ್ಞವೇದಿಯ ಮೇಲೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಅವುಗಳನ್ನು ಹೋಮಮಾಡಬಾರದು.
13 A svaki dar koji prinosiš osoli solju, i nemoj ostaviti dara svojega bez soli zavjeta Boga svojega; sa svakim darom svojim prinesi soli.
೧೩ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವುದರಿಂದ ಅದು ಯಾವ ನೈವೇದ್ಯ ಪದಾರ್ಥವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪನ್ನು ಸೇರಿಸಲೇಬೇಕು.
14 A kad prinosiš dar od prvina Gospodu, klasove nove osuši na ognju, i što istreš iz klasova novih prinesi na dar od prvina svojih.
೧೪“‘ನೀವು ಯೆಹೋವನಿಗೆ ಧಾನ್ಯ ನೈವೇದ್ಯದ ಪ್ರಥಮಫಲವನ್ನು ಸಮರ್ಪಣೆ ಮಾಡಬೇಕಾದರೆ ಗೋದಿಯ ತಾಜವಾದ ಹಸೀ ತೆನೆಗಳನ್ನು ಬೆಂಕಿಯಲ್ಲಿ ಸುಟ್ಟು, ಉಮ್ಮಿಗೆಯನ್ನು ಸಮರ್ಪಿಸಬೇಕು.
15 I polij ga uljem i kad metni na nj; to je dar.
೧೫ಅದು ಧಾನ್ಯನೈವೇದ್ಯ ವಸ್ತುವಾದ್ದರಿಂದ ನೀವು ಅದರ ಮೇಲೆ ಎಣ್ಣೆ ಹೊಯ್ದು ಧೂಪವಿಡಬೇಕು.
16 I sveštenik uzevši istrvenoga žita i ulja sa svijem kadom neka zapali spomen. To je žrtva ognjena Gospodu.
೧೬ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಉಮ್ಮಿಗೆಯಲ್ಲಿಯೂ ಮತ್ತು ಎಣ್ಣೆಯಲ್ಲಿಯೂ ಸ್ವಲ್ಪಭಾಗವನ್ನು ತೆಗೆದುಕೊಂಡು ಧೂಪವೆಲ್ಲವನ್ನು ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಯೆಹೋವನಿಗೆ ಹೋಮಮಾಡಬೇಕು.