< Sudije 19 >

1 I u to vrijeme, kad ne bješe cara u Izrailju, bješe jedan Levit koji življaše kao došljak kraj gore Jefremove, i uze inoèu iz Vitlejema Judina.
ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ಎಫ್ರಾಯೀಮ್ ಪರ್ವತಪ್ರದೇಶದ ಒಂದು ದೂರ ಸ್ಥಳದಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಯೆಹೂದದ ಬೇತ್ಲೆಹೇಮಿನವಳಾದ ಒಬ್ಬ ಸ್ತ್ರೀಯು ಅವನಿಗೆ ಉಪಪತ್ನಿಯಾಗಿದ್ದಳು.
2 A inoèa njegova èinjaše preljubu kod njega, pa otide od njega kuæi oca svojega u Vitlejem Judin, i osta ondje èetiri mjeseca.
ಆಕೆಯು ಇವನನ್ನು ಬಿಟ್ಟು ಜಾರತ್ವಮಾಡಿ, ಯೆಹೂದದ ಬೇತ್ಲೆಹೇಮಿನಲ್ಲಿದ್ದ ತನ್ನ ತವರುಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳು ಇದ್ದಳು.
3 A muž njezin usta i otide za njom da joj lijepo govori i da je dovede natrag, imajuæi sa sobom momka svojega, i dva magarca; i ona ga uvede u kuæu oca svojega, i kad ga vidje otac njezin obradova se dolasku njegovu.
ಅನಂತರ ಆಕೆಯ ಗಂಡನಾದ ಆ ಲೇವಿಯನು ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ ತಿರುಗಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಒಬ್ಬ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅಲ್ಲಿಗೆ ಹೋದನು. ಆಕೆಯು ಅವನನ್ನು ತನ್ನ ತವರುಮನೆಯಲ್ಲಿ ಸೇರಿಸಿಕೊಂಡಳು; ಆಕೆಯ ತಂದೆಯೂ ಅವನನ್ನು ನೋಡಿ ಸಂತೋಷಪಟ್ಟನು.
4 I ustavi ga tast njegov, otac mladièin, i osta kod njega tri dana, i ondje jeðahu i pijahu i noæivahu.
ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಮೂರು ದಿನ ಅಲ್ಲೇ ಉಳಿಸಿಕೊಂಡನು; ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು.
5 A èetvrti dan kad ustaše rano, usta i on da ide; ali otac mladièin reèe zetu svojemu: potkrijepi srce svoje zalogajem hljeba, pa onda idite.
ಅವರು ನಾಲ್ಕನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಸ್ವಲ್ಪ ಊಟಮಾಡಿ ಬಲಹೊಂದು; ಆಮೇಲೆ ಹೋಗಬಹುದು” ಎಂದು ಹೇಳಲು
6 I tako sjedoše i jedoše obojica zajedno i napiše se; pa reèe otac mladièin mužu: hajde ostani još noæas, i budi veseo.
ಅವರಿಬ್ಬರೂ ಕುಳಿತುಕೊಂಡು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆಯು ಪುನಃ ಅವನಿಗೆ, “ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇದ್ದು ಸಂತೋಷಪಡು” ಎಂದು ಹೇಳಿದರೂ ಆ ಲೇವಿಯನು ಹೊರಡುವುದಕ್ಕಿದ್ದನು;
7 Ali èovjek usta da ide; ali tast njegov navali na nj, te opet noæi ondje.
ಆದರೆ ಅವನ ಮಾವನು ಬಹಳ ಒತ್ತಾಯ ಮಾಡಿದ್ದರಿಂದ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು.
8 Potom urani petoga dana da ide; i reèe mu otac mladièin: potkrijepi srce svoje. I jeduæi zajedno zabaviše se dokle i dan naže.
ಅವರು ಐದನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು, “ದಯವಿಟ್ಟು ಮಧ್ಯಾಹ್ನದವರೆಗೆ ಇಲ್ಲೇ ಇದ್ದು ಬಲಹೊಂದು” ಎಂದು ಅವನನ್ನು ಬೇಡಿಕೊಳ್ಳಲು ಅವರು ತಿರುಗಿ ಊಟಕ್ಕೆ ನಿಂತನು.
9 Tada usta èovjek da ide, on i inoèa mu i momak; a tast njegov, otac mladièin, reèe mu: eto, dan je veæ nagao, veèe je, prenoæite ovdje; eto dockan je, prenoæi ovdje, i budi veseo, pa sjutra uranite na put, i idi k svojemu šatoru.
ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.
10 Ali èovjek ne htje noæiti; nego usta i poðe; i doðe do Jevusa, a to je Jerusalim, i s njim dva magarca natovarena i inoèa njegova.
೧೦ಆದರೆ ಆ ಲೇವಿಯನು ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ, ಉಪಪತ್ನಿಯನ್ನು ಕರೆದುಕೊಂಡು ಹೊರಟನು.
11 A kad bijahu blizu Jevusa, dan bijaše nagao vrlo, pa reèe sluga gospodaru svojemu: hajde brže da se svratimo u taj grad Jevus, i tu da noæimo.
೧೧ಅವರು ಯೆಬೂಸಿಯರ ಊರಾದ ಯೆರೂಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತುಮುಳುಗುವ ಸಮಯವಾಗಿದ್ದರಿಂದ ಸೇವಕನು ದಣಿಗೆ, “ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ, ಅಲ್ಲಿ ರಾತ್ರಿಯನ್ನು ಕಳೆಯೋಣ” ಅಂದನು.
12 A gospodar mu reèe: neæemo svrtati u tuð grad, koji nije sinova Izrailjevijeh, nego æemo iæi do Gavaje.
೧೨ಆಗ ದಣಿಯು, “ನಾವು ಇಸ್ರಾಯೇಲ್ಯರಿಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯಬಾರದು; ಗಿಬೆಯಕ್ಕೆ ಹೋಗೋಣ” ಅಂದನು.
13 Još reèe momku svojemu: hajde brže da stignemo u koje od tijeh mjesta i da noæimo u Gavaji ili u Rami.
೧೩ಅವನು ತಿರುಗಿ ತನ್ನ ಆಳಿಗೆ, “ನಾವು ಬೇಗನೆ ಹೋಗಿ ಮುಂದಿರುವ ಗಿಬೆಯದಲ್ಲಾಗಲಿ, ರಾಮದಲ್ಲಾಗಲಿ ಇಳಿದುಕೊಳ್ಳೋಣ ಬಾ” ಅಂದನು.
14 I minuše onuda i otidoše; i sunce ih zaðe blizu Gavaje Venijaminove.
೧೪ಹೀಗೆ ಅವರು ಮುಂದೆ ಸಾಗಿ ಬೆನ್ಯಾಮೀನ್ಯರ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯನು ಮುಳುಗಿದ್ದನು.
15 I okretoše onamo da otidu i prenoæe u Gavaji; i kad uðe, sjede na ulici gradskoj; i ne bi nikoga da ih primi u kuæu da prenoæe.
೧೫ಅವರು ಇಳಿದುಕೊಳ್ಳುವುದಕ್ಕೋಸ್ಕರ ಗಿಬೆಯಕ್ಕೆ ಹೋದರು. ಆದರೆ ಯಾರೂ ಅವರನ್ನು ಮನೆಯಲ್ಲಿ ಉಳಿದುಕೊಳ್ಳಲು ಅವಕಾಶಕೊಡದ ಕಾರಣ ಅವರು ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು.
16 I gle, jedan starac vraæaše se s posla svojega iz polja uveèe, a bijaše iz gore Jefremove i življaše kao došljak u Gavaji; a ljudi onoga mjesta bjehu sinovi Venijaminovi.
೧೬ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು.
17 I on podigav oèi svoje ugleda onoga èovjeka putnika na ulici gradskoj; i reèe mu starac: kuda ideš? i otkuda ideš?
೧೭ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು
18 A on mu odgovori: idemo od Vitlejema Judina do na kraj gore Jefremove; odande sam, pa sam išao do Vitlejema Judina, a sada idem k domu Gospodnjemu, i nema nikoga da me primi u kuæu.
೧೮ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ.
19 A imamo i slame i piæe za magarce svoje, i hljeba i vina za se i za sluškinju tvoju i za momka koji je sa slugom tvojim; imamo svega dosta.
೧೯ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ, ದ್ರಾಕ್ಷಾರಸವೂ ಇರುತ್ತವೆ. ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ” ಎಂದು ಹೇಳಿದನು.
20 A starac mu reèe: budi miran; što ti god nedostaje, ja æu se starati za to; samo nemoj noæiti na ulici.
೨೦ಆಗ ಆ ಮುದುಕನು, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ;
21 I uvede ga u svoju kuæu, i položi magarcima; potom opraše noge, i jedoše i piše.
೨೧ಈ ರಾತ್ರಿಯನ್ನು ಬೀದಿಯಲ್ಲಿ ಕಳೆಯಬೇಡ, ನನ್ನ ಮನೆಗೆ ಬಾ” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಕತ್ತೆಗಳಿಗೆ ಮೇವು ಕೊಟ್ಟನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿ ಅನ್ನಪಾನಗಳನ್ನು ತೆಗೆದುಕೊಂಡರು.
22 A kad se razveseliše, gle, ljudi onoga grada, bezakonici, opkoliše kuæu, i stadoše lupati u vrata, i rekoše starcu, gospodaru od kuæe, govoreæi: izvedi toga èovjeka što je ušao u tvoju kuæu, da ga poznamo.
೨೨ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ದುಷ್ಟ ಜನರು ಬಂದು ಆ ಮನೆಯನ್ನು ಸುತ್ತಿಕೊಂಡು, ಬಾಗಿಲನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ; ಅವನೊಡನೆ ನಾವು ಸಂಗಮಿಸಬೇಕು” ಎಂದು ಕೂಗಿದರು.
23 I izašav k njima onaj èovjek, gospodar od kuæe, reèe im: ne, braæo, ne èinite zla; kad je èovjek ušao u moju kuæu, ne èinite toga bezumlja.
೨೩ಆಗ ಆ ಮುದುಕನು ಹೊರಗೆ ಹೋಗಿ ಅವರಿಗೆ, “ಸಹೋದರರೇ, ಇಂಥ ದುಷ್ಟತನವನ್ನು ನಡೆಸಬೇಡಿರಿ; ಅವನು ಆಶ್ರಯಕ್ಕಾಗಿ ನನ್ನ ಮನೆಗೆ ಬಂದಿದ್ದಾನೆ; ನೀವು ಇಂಥ ಹುಚ್ಚುತನವನ್ನು ಮಾಡಬೇಡಿರಿ.
24 Evo kæi moja djevojka i inoèa njegova, njih æu vam izvesti, pa njih osramotite i èinite s njima što vam je volja, samo èovjeku ovomu ne èinite toga bezumlja.
೨೪ಇನ್ನೂ ಮದುವೆಯಾಗದೆ ಇರುವ ನನ್ನ ಮಗಳನ್ನೂ, ಅವನ ಉಪಪತ್ನಿಯನ್ನೂ ಹೊರಗೆ ತರುತ್ತೇನೆ; ಅವರನ್ನು ಭಂಗಪಡಿಸಿರಿ; ನಿಮ್ಮ ಮನಸ್ಸಿಗೆ ಬಂದ ಹಾಗೆ ಅವರಿಗೆ ಮಾಡಿರಿ. ಈ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ” ಅಂದನು.
25 Ali ga ne htješe poslušati oni ljudi; tada onaj èovjek uze inoèu svoju i izvede je napolje k njima, i oni je poznaše, i zlostaviše je cijelu noæ do zore, i pustiše je kad zora zabijelje.
೨೫ಆದರೆ ಅವರು ಆ ಮುದುಕನಿಗೆ ಕಿವಿಗೊಡದೆ ಹೋದುದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹೊರಗೆ ಅವರ ಬಳಿಗೆ ಕಳುಹಿಸಿಬಿಟ್ಟನು. ಅವರು ಆಕೆಯನ್ನು ಕೆಡಿಸಿ, ರಾತ್ರಿಯೆಲ್ಲಾ ಬಹುಕ್ರೂರತನದಿಂದ ವರ್ತಿಸಿ, ಬೆಳಗಾಗುವಾಗ ಆಕೆಯನ್ನು ಬಿಟ್ಟುಹೋದರು.
26 I došavši žena u zoru pade kod vrata od kuæe onoga èovjeka gdje bješe gospodar njezin, i leža dokle se ne rasvanu.
೨೬ಆ ಸ್ತ್ರೀಯು ಸೂರ್ಯೋದಯಕ್ಕೆ ಮುಂಚೆಯೇ ಬಂದು ತನ್ನ ಯಜಮಾನನು ಇಳಿದುಕೊಂಡಿದ್ದ ಮನೆಯ ಬಾಗಿಲಲ್ಲಿ ಬಂದು ಬಿದ್ದವಳು ಬೆಳಗಾದರೂ ಏಳಲೇ ಇಲ್ಲ.
27 A gospodar njezin usta ujutru, i kad otvori vrata i izaðe da ide svojim putem, a to žena inoèa njegova ležaše na vratima kuænijem, i ruke joj na pragu.
೨೭ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು.
28 I reèe joj: ustani da idemo. Ali ne bi odgovora; tada je metnu na magarca, i ustavši èovjek poðe u mjesto svoje,
೨೮ಅವನು, “ಏಳು, ಹೋಗೋಣ” ಎಂದು ಆಕೆಯನ್ನು ಕರೆಯಲು ಪ್ರತ್ಯುತ್ತರವೇ ಇಲ್ಲ. ಆಗ ಅವನು ಆಕೆಯ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಮನೆಗೆ ಹೋದನು.
29 I došav kuæi svojoj uze maè, i uze inoèu svoju i isijeèe je s kostima na dvanaest komada i razasla u sve krajeve Izrailjeve.
೨೯ಅವನು ತನ್ನ ಮನೆಗೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು, ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ, ಅವುಗಳನ್ನು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು.
30 I ko god vidje govoraše: nije se uèinilo niti se vidjelo tako što otkad izidoše sinovi Izrailjevi iz Misira do danas. Promislite o tom i vijeæajte i govorite.
೩೦ಅವುಗಳನ್ನು ಕಂಡವರೆಲ್ಲರೂ, “ಇಸ್ರಾಯೇಲರು ಐಗುಪ್ತವನ್ನು ಬಿಟ್ಟು ಬಂದ ದಿನದಿಂದ ಈ ದಿನದವರೆಗೆ ಇಂಥ ಕೃತ್ಯವು ನಡೆಯಲೇ ಇಲ್ಲ, ನಾವು ಅದನ್ನು ನೋಡಿಯೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು” ಅಂದುಕೊಂಡರು.

< Sudije 19 >