< پْریرِتاح 3 >
ترِتِییَیامَویلایاں سَتْیاں پْرارْتھَنایاح سَمَیے پِتَرَیوہَنَو سَمْبھُویَ مَنْدِرَں گَچّھَتَح۔ | 1 |
೧ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು.
تَسْمِنّیوَ سَمَیے مَنْدِرَپْرَویشَکاناں سَمِیپے بھِکْشارَنارْتھَں یَں جَنْمَکھَنْجَمانُشَں لوکا مَنْدِرَسْیَ سُنْدَرَنامْنِ دْوارے پْرَتِدِنَمْ اَسْتھاپَیَنْ تَں وَہَنْتَسْتَدْوارَں آنَیَنْ۔ | 2 |
೨ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು.
تَدا پِتَرَیوہَنَو مَنْتِرَں پْرَویشْٹُمْ اُدْیَتَو وِلوکْیَ سَ کھَنْجَسْتَو کِنْچِدْ بھِکْشِتَوانْ۔ | 3 |
೩ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು.
تَسْمادْ یوہَنا سَہِتَح پِتَرَسْتَمْ اَنَنْیَدرِشْٹْیا نِرِیکْشْیَ پْروکْتَوانْ آواں پْرَتِ درِشْٹِں کُرُ۔ | 4 |
೪ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ “ನಮ್ಮನ್ನು ನೋಡು” ಅಂದನು.
تَتَح سَ کِنْچِتْ پْراپْتْیاشَیا تَو پْرَتِ درِشْٹِں کرِتَوانْ۔ | 5 |
೫ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು.
تَدا پِتَرو گَدِتَوانْ مَمَ نِکَٹے سْوَرْنَرُوپْیادِ کِمَپِ ناسْتِ کِنْتُ یَداسْتے تَدْ دَدامِ ناسَرَتِییَسْیَ یِیشُکھْرِیشْٹَسْیَ نامْنا تْوَمُتّھایَ گَمَناگَمَنے کُرُ۔ | 6 |
೬ಆಗ ಪೇತ್ರನು “ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ” ಎಂದು ಹೇಳಿ,
تَتَح پَرَں سَ تَسْیَ دَکْشِنَکَرَں دھرِتْوا تَمْ اُدَتولَیَتْ؛ تینَ تَتْکْشَناتْ تَسْیَ جَنَسْیَ پادَگُلْپھَیوح سَبَلَتْواتْ سَ اُلَّمْپھْیَ پْروتّھایَ گَمَناگَمَنے کَروتْ۔ | 7 |
೭ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು.
تَتو گَمَناگَمَنے کُرْوَّنْ اُلَّمْپھَنْ اِیشْوَرَں دھَنْیَں وَدَنْ تابھْیاں سارْدّھَں مَنْدِرَں پْراوِشَتْ۔ | 8 |
೮ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು.
تَتَح سَرْوّے لوکاسْتَں گَمَناگَمَنے کُرْوَّنْتَمْ اِیشْوَرَں دھَنْیَں وَدَنْتَنْچَ وِلوکْیَ | 9 |
೯ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ;
مَنْدِرَسْیَ سُنْدَرے دْوارے یَ اُپَوِشْیَ بھِکْشِتَوانْ سَایوایَمْ اِتِ جْناتْوا تَں پْرَتِ تَیا گھَٹَنَیا چَمَتْکرِتا وِسْمَیاپَنّاشْچابھَوَنْ۔ | 10 |
೧೦ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು.
یَح کھَنْجَح سْوَسْتھوبھَوَتْ تینَ پِتَرَیوہَنوح کَرَیورْدھْٹَتَیوح سَتوح سَرْوّے لوکا سَنِّدھِمْ آگَچّھَنْ۔ | 11 |
೧೧ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.
تَدْ درِشْٹْوا پِتَرَسْتیبھْیوکَتھَیَتْ، ہے اِسْراییلِییَلوکا یُویَں کُتو نیناشْچَرْیَّں مَنْیَدھْوے؟ آواں نِجَشَکْتْیا یَدْوا نِجَپُنْیینَ کھَنْجَمَنُشْیَمینَں گَمِتَوَنْتاوِتِ چِنْتَیِتْوا آواں پْرَتِ کُتونَنْیَدرِشْٹِں کُرُتھَ؟ | 12 |
೧೨ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.
یَں یِیشُں یُویَں پَرَکَریشُ سَمارْپَیَتَ تَتو یَں پِیلاتو موچَیِتُمْ اےچّھَتْ تَتھاپِ یُویَں تَسْیَ ساکْشانْ نانْگِیکرِتَوَنْتَ اِبْراہِیمَ اِسْہاکو یاکُوبَشْچیشْوَرورْتھادْ اَسْماکَں پُورْوَّپُرُشانامْ اِیشْوَرَح سْوَپُتْرَسْیَ تَسْیَ یِیشو رْمَہِمانَں پْراکاشَیَتْ۔ | 13 |
೧೩ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ.
کِنْتُ یُویَں تَں پَوِتْرَں دھارْمِّکَں پُماںسَں نانْگِیکرِتْیَ ہَتْیاکارِنَمیکَں سْویبھْیو داتُمْ اَیاچَدھْوَں۔ | 14 |
೧೪ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ.
پَشْچاتْ تَں جِیوَنَسْیادھِپَتِمْ اَہَتَ کِنْتْوِیشْوَرَح شْمَشاناتْ تَمْ اُدَسْتھاپَیَتَ تَتْرَ وَیَں ساکْشِنَ آسْمَہے۔ | 15 |
೧೫ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು.
اِمَں یَں مانُشَں یُویَں پَشْیَتھَ پَرِچِنُتھَ چَ سَ تَسْیَ نامْنِ وِشْواسَکَرَناتْ چَلَنَشَکْتِں لَبْدھَوانْ تَسْمِنْ تَسْیَ یو وِشْواسَح سَ تَں یُشْماکَں سَرْوّیشاں ساکْشاتْ سَمْپُورْنَرُوپینَ سْوَسْتھَمْ اَکارْشِیتْ۔ | 16 |
೧೬ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು.
ہے بھْراتَرو یُویَں یُشْماکَمْ اَدھِپَتَیَشْچَ اَجْناتْوا کَرْمّانْییتانِ کرِتَوَنْتَ اِدانِیں مَمَیشَ بودھو جایَتے۔ | 17 |
೧೭“ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು.
کِنْتْوِیشْوَرَح کھْرِیشْٹَسْیَ دُحکھَبھوگے بھَوِشْیَدْوادِناں مُکھیبھْیو یاں یاں کَتھاں پُورْوَّمَکَتھَیَتْ تاح کَتھا اِتّھَں سِدّھا اَکَروتْ۔ | 18 |
೧೮ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು.
اَتَح سْویشاں پاپَموچَنارْتھَں کھیدَں کرِتْوا مَناںسِ پَرِوَرْتَّیَدھْوَں، تَسْمادْ اِیشْوَراتْ سانْتْوَناپْراپْتیح سَمَیَ اُپَسْتھاسْیَتِ؛ | 19 |
೧೯ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ
پُنَشْچَ پُورْوَّکالَمْ آرَبھْیَ پْرَچارِتو یو یِیشُکھْرِیشْٹَسْتَمْ اِیشْوَرو یُشْمانْ پْرَتِ پْریشَیِشْیَتِ۔ | 20 |
೨೦ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು.
کِنْتُ جَگَتَح سرِشْٹِمارَبھْیَ اِیشْوَرو نِجَپَوِتْرَبھَوِشْیَدْوادِگَنونَ یَتھا کَتھِتَوانْ تَدَنُسارینَ سَرْوّیشاں کارْیّاناں سِدّھِپَرْیَّنْتَں تینَ سْوَرْگے واسَح کَرْتَّوْیَح۔ (aiōn ) | 21 |
೨೧ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. (aiōn )
یُشْماکَں پْرَبھُح پَرَمیشْوَرو یُشْماکَں بھْراترِگَنَمَدھْیاتْ مَتْسَدرِشَں بھَوِشْیَدْوَکْتارَمْ اُتْپادَیِشْیَتِ، تَتَح سَ یَتْ کِنْچِتْ کَتھَیِشْیَتِ تَتْرَ یُویَں مَناںسِ نِدھَدّھوَں۔ | 22 |
೨೨ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.
کِنْتُ یَح کَشْچِتْ پْرانِی تَسْیَ بھَوِشْیَدْوادِنَح کَتھاں نَ گْرَہِیشْیَتِ سَ نِجَلوکاناں مَدھْیادْ اُچّھیتْسْیَتے،" اِماں کَتھامْ اَسْماکَں پُورْوَّپُرُشیبھْیَح کیوَلو مُوساح کَتھَیاماسَ اِتِ نَہِ، | 23 |
೨೩ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ.
شِمُوییلْبھَوِشْیَدْوادِنَمْ آرَبھْیَ یاوَنْتو بھَوِشْیَدْواکْیَمْ اَکَتھَیَنْ تے سَرْوَّایوَ سَمَیَسْیَیتَسْیَ کَتھامْ اَکَتھَیَنْ۔ | 24 |
೨೪ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು.
یُویَمَپِ تیشاں بھَوِشْیَدْوادِناں سَنْتاناح، "تَوَ وَںشودْبھَوَپُںسا سَرْوَّدیشِییا لوکا آشِشَں پْراپْتا بھَوِشْیَنْتِ"، اِبْراہِیمے کَتھامیتاں کَتھَیِتْوا اِیشْوَروسْماکَں پُورْوَّپُرُشَیح سارْدّھَں یَں نِیَمَں سْتھِرِیکرِتَوانْ تَسْیَ نِیَمَسْیادھِکارِنوپِ یُویَں بھَوَتھَ۔ | 25 |
೨೫ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ.
اَتَ اِیشْوَرو نِجَپُتْرَں یِیشُمْ اُتّھاپْیَ یُشْماکَں سَرْوّیشاں سْوَسْوَپاپاتْ پَراوَرْتّیَ یُشْمَبھْیَمْ آشِشَں داتُں پْرَتھَمَتَسْتَں یُشْماکَں نِکَٹَں پْریشِتَوانْ۔ | 26 |
೨೬ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.