< پْریرِتاح 18 >
تَدْگھَٹَناتَح پَرَں پَولَ آتھِینِینَگَرادْ یاتْراں کرِتْوا کَرِنْتھَنَگَرَمْ آگَچّھَتْ۔ | 1 |
೧ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.
تَسْمِنْ سَمَیے کْلَودِیَح سَرْوّانْ یِہُودِییانْ رومانَگَرَں وِہایَ گَنْتُمْ آجْناپَیَتْ، تَسْماتْ پْرِسْکِلّانامْنا جایَیا سارْدّھَمْ اِتالِیادیشاتْ کِنْچِتْپُورْوَّمْ آگَمَتْ یَح پَنْتَدیشے جاتَ آکِّلَناما یِہُودِییَلوکَح پَولَسْتَں ساکْشاتْ پْراپْیَ تَیوح سَمِیپَمِتَوانْ۔ | 2 |
೨ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿನಗಳ ಮೊದಲೇ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.
تَو دُوشْیَنِرْمّانَجِیوِنَو، تَسْماتْ پَرَسْپَرَمْ ایکَورِتِّکَتْواتْ سَ تابھْیاں سَہَ اُشِتْوا تَتْ کَرْمّاکَروتْ۔ | 3 |
೩ಪೌಲನು ಅವರ ಮನೆಗೆ ಹೋಗಿ ತಾನೂ, ಅವರೂ ಒಂದೇ ಕಸುಬಿನವರಾಗಿದ್ದುದರಿಂದ ಅವರ ಸಂಗಡವಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರಮಾಡುವುದು ಅವರ ಕಸುಬಾಗಿತ್ತು.
پَولَح پْرَتِوِشْرامَوارَں بھَجَنَبھَوَنَں گَتْوا وِچارَں کرِتْوا یِہُودِییانْ اَنْیَدیشِییاںشْچَ پْرَورِتِّں گْراہِتَوانْ۔ | 4 |
೪ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.
سِیلَتِیمَتھِیَیو رْماکِدَنِیادیشاتْ سَمیتَیوح سَتوح پَولَ اُتَّپْتَمَنا بھُوتْوا یِیشُرِیشْوَرینابھِشِکْتو بھَوَتِیتِ پْرَمانَں یِہُودِییاناں سَمِیپے پْراداتْ۔ | 5 |
೫ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.
کِنْتُ تے تِیوَ وِرودھَں وِدھایَ پاشَنْڈِییَکَتھاں کَتھِتَوَنْتَسْتَتَح پَولو وَسْتْرَں دھُنْوَنْ ایتاں کَتھاں کَتھِتَوانْ، یُشْماکَں شونِتَپاتاپَرادھو یُشْمانْ پْرَتْییوَ بھَوَتُ، تیناہَں نِرَپَرادھو دْیارَبھْیَ بھِنَّدیشِییاناں سَمِیپَں یامِ۔ | 6 |
೬ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,
سَ تَسْماتْ پْرَسْتھایَ بھَجَنَبھَوَنَسَمِیپَسْتھَسْیَ یُسْتَنامْنَ اِیشْوَرَبھَکْتَسْیَ بھِنَّدیشِییَسْیَ نِویشَنَں پْراوِشَتْ۔ | 7 |
೭ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು.
تَتَح کْرِیشْپَناما بھَجَنَبھَوَنادھِپَتِح سَپَرِوارَح پْرَبھَو وْیَشْوَسِیتْ، کَرِنْتھَنَگَرِییا بَہَوو لوکاشْچَ سَماکَرْنْیَ وِشْوَسْیَ مَجِّتا اَبھَوَنْ۔ | 8 |
೮ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು.
کْشَنَدایاں پْرَبھُح پَولَں دَرْشَنَں دَتْوا بھاشِتَوانْ، ما بھَیشِیح، ما نِرَسِیح کَتھاں پْرَچارَیَ۔ | 9 |
೯ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,
اَہَں تْوَیا سارْدّھَمْ آسَ ہِںسارْتھَں کوپِ تْواں سْپْرَشْٹُں نَ شَکْشْیَتِ نَگَرےسْمِنْ مَدِییا لوکا بَہَوَ آسَتے۔ | 10 |
೧೦ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.
تَسْماتْ پَولَسْتَنَّگَرے پْرایینَ سارْدّھَوَتْسَرَپَرْیَّنْتَں سَںسْتھاییشْوَرَسْیَ کَتھامْ اُپادِشَتْ۔ | 11 |
೧೧ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.
گالِّیَناما کَشْچِدْ آکھایادیشَسْیَ پْراڈْوِواکَح سَمَبھَوَتْ، تَتو یِہُودِییا ایکَواکْیاح سَنْتَح پَولَمْ آکْرَمْیَ وِچارَسْتھانَں نِیتْوا | 12 |
೧೨ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು;
مانُشَ ایشَ وْیَوَسْتھایَ وِرُدّھَمْ اِیشْوَرَبھَجَنَں کَرْتُّں لوکانْ کُپْرَورِتِّں گْراہَیَتِیتِ نِویدِتَوَنْتَح۔ | 13 |
೧೩“ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.
تَتَح پَولے پْرَتْیُتَّرَں داتُمْ اُدْیَتے سَتِ گالِّیا یِہُودِییانْ وْیاہَرَتْ، یَدِ کَسْیَچِدْ اَنْیایَسْیَ واتِشَیَدُشْٹَتاچَرَنَسْیَ وِچاروبھَوِشْیَتْ تَرْہِ یُشْماکَں کَتھا مَیا سَہَنِییابھَوِشْیَتْ۔ | 14 |
೧೪ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ.
کِنْتُ یَدِ کیوَلَں کَتھایا وا نامْنو وا یُشْماکَں وْیَوَسْتھایا وِوادو بھَوَتِ تَرْہِ تَسْیَ وِچارَمَہَں نَ کَرِشْیامِ، یُویَں تَسْیَ مِیماںساں کُرُتَ۔ | 15 |
೧೫ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,
تَتَح سَ تانْ وِچارَسْتھانادْ دُورِیکرِتَوانْ۔ | 16 |
೧೬ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು.
تَدا بھِنَّدیشِییاح سوسْتھِنِنامانَں بھَجَنَبھَوَنَسْیَ پْرَدھانادھِپَتِں دھرِتْوا وِچارَسْتھانَسْیَ سَمُّکھے پْراہَرَنْ تَتھاپِ گالِّیا تیشُ سَرْوَّکَرْمَّسُ نَ مَنو نْیَدَدھاتْ۔ | 17 |
೧೭ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
پَولَسْتَتْرَ پُنَرْبَہُدِنانِ نْیَوَسَتْ، تَتو بھْراترِگَنادْ وِسَرْجَنَں پْراپْیَ کِنْچَنَوْرَتَنِمِتَّں کِںکْرِیانَگَرے شِرو مُنْڈَیِتْوا پْرِسْکِلّاکِّلابھْیاں سَہِتو جَلَپَتھینَ سُرِیادیشَں گَتَوانْ۔ | 18 |
೧೮ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು.
تَتَ اِپھِشَنَگَرَ اُپَسْتھایَ تَتْرَ تَو وِسرِجْیَ سْوَیَں بھَجَنَبھْوَنَں پْرَوِشْیَ یِہُودِییَیح سَہَ وِچارِتَوانْ۔ | 19 |
೧೯ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.
تے سْوَیح سارْدّھَں پُنَح کَتِپَیَدِنانِ سْتھاتُں تَں وْیَنَیَنْ، سَ تَدَنُرَرِیکرِتْیَ کَتھامیتاں کَتھِتَوانْ، | 20 |
೨೦ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ,
یِرُوشالَمِ آگامْیُتْسَوَپالَنارْتھَں مَیا گَمَنِییَں؛ پَشْچادْ اِیشْوَریچّھایاں جاتایاں یُشْماکَں سَمِیپَں پْرَتْیاگَمِشْیامِ۔ تَتَح پَرَں سَ تَے رْوِسرِشْٹَح سَنْ جَلَپَتھینَ اِپھِشَنَگَراتْ پْرَسْتھِتَوانْ۔ | 21 |
೨೧“ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,
تَتَح کَیسَرِیامْ اُپَسْتھِتَح سَنْ نَگَرَں گَتْوا سَماجَں نَمَسْکرِتْیَ تَسْمادْ آنْتِیَکھِیانَگَرَں پْرَسْتھِتَوانْ۔ | 22 |
೨೨ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.
تَتْرَ کِیَتْکالَں یاپَیِتْوا تَسْماتْ پْرَسْتھایَ سَرْوّیشاں شِشْیاناں مَناںسِ سُسْتھِرانِ کرِتْوا کْرَمَشو گَلاتِیاپھْرُگِیادیشَیو رْبھْرَمِتْوا گَتَوانْ۔ | 23 |
೨೩ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.
تَسْمِنّیوَ سَمَیے سِکَنْدَرِیانَگَرے جاتَ آپَلّوناما شاسْتْرَوِتْ سُوَکْتا یِہُودِییَ ایکو جَنَ اِپھِشَنَگَرَمْ آگَتَوانْ۔ | 24 |
೨೪ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.
سَ شِکْشِتَپْرَبھُمارْگو مَنَسودْیوگِی چَ سَنْ یوہَنو مَجَّنَماتْرَں جْناتْوا یَتھارْتھَتَیا پْرَبھوح کَتھاں کَتھَیَنْ سَمُپادِشَتْ۔ | 25 |
೨೫ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.
ایشَ جَنو نِرْبھَیَتْوینَ بھَجَنَبھَوَنے کَتھَیِتُمْ آرَبْدھَوانْ، تَتَح پْرِسْکِلّاکِّلَو تَسْیوپَدیشَکَتھاں نِشَمْیَ تَں سْوَیوح سَمِیپَمْ آنِییَ شُدّھَرُوپینیشْوَرَسْیَ کَتھامْ اَبودھَیَتامْ۔ | 26 |
೨೬ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
پَشْچاتْ سَ آکھایادیشَں گَنْتُں مَتِں کرِتَوانْ، تَدا تَتْرَتْیَح شِشْیَگَنو یَتھا تَں گرِہْلاتِ تَدَرْتھَں بھْراترِگَنینَ سَماشْوَسْیَ پَتْرے لِکھِتے سَتِ، آپَلّاسْتَتْروپَسْتھِتَح سَنْ اَنُگْرَہینَ پْرَتْیَیِناں بَہُوپَکارانْ اَکَروتْ، | 27 |
೨೭ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.
پھَلَتو یِیشُرَبھِشِکْتَسْتْراتیتِ شاسْتْرَپْرَمانَں دَتْوا پْرَکاشَرُوپینَ پْرَتِپَنَّں کرِتْوا یِہُودِییانْ نِرُتَّرانْ کرِتَوانْ۔ | 28 |
೨೮ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು.