< ยากูพ: 5 >
1 เห ธนวนฺต: , ยูยมฺ อิทานีํ ศฺฤณุต ยุษฺมาภิราคมิษฺยตฺเกฺลศเหโต: กฺรนฺทฺยตำ วิลปฺยตาญฺจฯ
ಧನಿಕರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.
2 ยุษฺมากํ ทฺรวิณํ ชีรฺณํ กีฏภุกฺตา: สุเจลกา: ฯ
ನಿಮ್ಮ ಐಶ್ವರ್ಯವು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿಹಿಡಿದಿದೆ.
3 กนกํ รชตญฺจาปิ วิกฺฤตึ ปฺรคมิษฺยติ, ตตฺกลงฺกศฺจ ยุษฺมากํ ปาปํ ปฺรมาณยิษฺยติ, หุตาศวจฺจ ยุษฺมากํ ปิศิตํ ขาทยิษฺยติฯ อิตฺถมฺ อนฺติมฆเสฺรษุ ยุษฺมาภิ: สญฺจิตํ ธนํฯ
ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದಿವೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದುಬಿಡುವುದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ.
4 ปศฺยต ไย: กฺฤษีวไล รฺยุษฺมากํ ศสฺยานิ ฉินฺนานิ เตโภฺย ยุษฺมาภิ รฺยทฺ เวตนํ ฉินฺนํ ตทฺ อุจฺไจ รฺธฺวนึ กโรติ เตษำ ศสฺยจฺเฉทกานามฺ อารฺตฺตราว: เสนาปเต: ปรเมศฺวรสฺย กรฺณกุหรํ ปฺรวิษฺฏ: ฯ
ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.
5 ยูยํ ปฺฤถิวฺยำ สุขโภคํ กามุกตาญฺจาริตวนฺต: , มหาโภชสฺย ทิน อิว นิชานฺต: กรณานิ ปริตรฺปิตวนฺตศฺจฯ
ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸಿಗೆ ಬಂದಂತೆ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.
6 อปรญฺจ ยุษฺมาภิ รฺธารฺมฺมิกสฺย ทณฺฑาชฺญา หตฺยา จาการิ ตถาปิ ส ยุษฺมานฺ น ปฺรติรุทฺธวานฺฯ
ನಿಮ್ಮನ್ನು ವಿರೋಧ ಮಾಡದ ನಿರ್ದೋಷಿಗೆ ದಂಡನೆಯನ್ನು ವಿಧಿಸಿ, ಕೊಂದುಹಾಕಿದ್ದೀರಿ.
7 เห ภฺราตร: , ยูยํ ปฺรโภราคมนํ ยาวทฺ ไธรฺยฺยมาลมฺพธฺวํฯ ปศฺยต กฺฤษิวโล ภูเม รฺพหุมูลฺยํ ผลํ ปฺรตีกฺษมาโณ ยาวตฺ ปฺรถมมฺ อนฺติมญฺจ วฺฤษฺฏิชลํ น ปฺราปฺโนติ ตาวทฺ ไธรฺยฺยมฺ อาลมฺพเตฯ
ಪ್ರಿಯರೇ, ಕರ್ತ ಯೇಸು ಬರುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ. ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.
8 ยูยมปิ ไธรฺยฺยมาลมฺพฺย สฺวานฺต: กรณานิ สฺถิรีกุรุต, ยต: ปฺรโภรุปสฺถิติ: สมีปวรฺตฺตินฺยภวตฺฯ
ನೀವೂ ದೀರ್ಘಶಾಂತಿಯಿಂದಿರಿ. ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಏಕೆಂದರೆ ಕರ್ತ ಯೇಸುವಿನ ಪುನರಾಗಮನ ಹತ್ತಿರವಾಯಿತು.
9 เห ภฺราตร: , ยูยํ ยทฺ ทณฺฑฺยา น ภเวต ตทรฺถํ ปรสฺปรํ น คฺลายต, ปศฺยต วิจารยิตา ทฺวารสมีเป ติษฺฐติฯ
ಪ್ರಿಯರೇ, ನೀವು ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿರಿ. ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾರೆ.
10 เห มม ภฺราตร: , เย ภวิษฺยทฺวาทิน: ปฺรโภ รฺนามฺนา ภาษิตวนฺตสฺตานฺ ยูยํ ทุ: ขสหนสฺย ไธรฺยฺยสฺย จ ทฺฤษฺฏานฺตานฺ ชานีตฯ
ನನ್ನ ಪ್ರಿಯರೇ, ಕರ್ತದೇವರ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯವಾಗಿ ಆದರ್ಶವಾಗಿ ಇಟ್ಟುಕೊಳ್ಳಿರಿ.
11 ปศฺยต ไธรฺยฺยศีลา อสฺมาภิ รฺธนฺยา อุจฺยนฺเตฯ อายูโพ ไธรฺยฺยํ ยุษฺมาภิรศฺราวิ ปฺรโภ: ปริณามศฺจาทรฺศิ ยต: ปฺรภุ รฺพหุกฺฤป: สกรุณศฺจาสฺติฯ
ಇಗೋ, ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ, ಕರ್ತದೇವರು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ತಿಳಿದು, ಕರ್ತದೇವರು ಬಹಳ ಒಳ್ಳೆಯವರೂ ದಯಾಳುವೂ ಆಗಿದ್ದಾರೆಂದು ತಿಳಿದಿದ್ದೀರಷ್ಟೆ.
12 เห ภฺราตร: วิเศษต อิทํ วทามิ สฺวรฺคสฺย วา ปฺฤถิวฺยา วานฺยวสฺตุโน นาม คฺฤหีตฺวา ยุษฺมาภิ: โก'ปิ ศปโถ น กฺริยตำ, กินฺตุ ยถา ทณฺฑฺยา น ภวต ตทรฺถํ ยุษฺมากํ ตไถว ตนฺนหิ เจติวากฺยํ ยเถษฺฏํ ภวตุฯ
ಮುಖ್ಯವಾಗಿ ನನ್ನ ಪ್ರಿಯರೇ, ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ನಾವುದರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ “ಹೌದು” ಎನ್ನಿರಿ. ಇಲ್ಲವಾದರೆ “ಇಲ್ಲ” ಎನ್ನಿರಿ. ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.
13 ยุษฺมากํ กศฺจิทฺ ทุ: ขี ภวติ? ส ปฺรารฺถนำ กโรตุฯ กศฺจิทฺ วานนฺทิโต ภวติ? ส คีตํ คายตุฯ
ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷ ಪಡುವವನಿದ್ದಾನೋ? ಅವನು ಕೀರ್ತನೆಗಳನ್ನು ಹಾಡಲಿ.
14 ยุษฺมากํ กศฺจิตฺ ปีฑิโต 'สฺติ? ส สมิเต: ปฺราจีนานฺ อาหฺวาตุ เต จ ปโภ รฺนามฺนา ตํ ไตเลนาภิษิจฺย ตสฺย กฺฤเต ปฺรารฺถนำ กุรฺวฺวนฺตุฯ
ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯನನ್ನು ಕರೆಕಳುಹಿಸಲಿ. ಅವರು ಕರ್ತ ಯೇಸುವಿನ ಹೆಸರಿನಿಂದ ಎಣ್ಣೆ ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ.
15 ตสฺมาทฺ วิศฺวาสชาตปฺรารฺถนยา ส โรคี รกฺษำ ยาสฺยติ ปฺรภุศฺจ ตมฺ อุตฺถาปยิษฺยติ ยทิ จ กฺฤตปาโป ภเวตฺ ตรฺหิ ส ตํ กฺษมิษฺยเตฯ
ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುತ್ತದೆ. ಕರ್ತ ಯೇಸು ಅವನನ್ನು ಎಬ್ಬಿಸುವರು. ಪಾಪಗಳನ್ನು ಮಾಡಿದವನಾಗಿದ್ದರೆ ಅವನು ಕ್ಷಮೆಯನ್ನು ಪಡೆಯುತ್ತಾನೆ.
16 ยูยํ ปรสฺปรมฺ อปราธานฺ องฺคีกุรุธฺวมฺ อาโรคฺยปฺราปฺตฺยรฺถญฺไจกชโน 'นฺยสฺย กฺฤเต ปฺรารฺถนำ กโรตุ ธารฺมฺมิกสฺย สยตฺนา ปฺรารฺถนา พหุศกฺติวิศิษฺฏา ภวติฯ
ನೀವು ಸ್ವಸ್ಥವಾಗಬೇಕಾದರೆ, ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು, ಅರಿಕೆಮಾಡಿ, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಪ್ರಾರ್ಥನೆಯು ಶಕ್ತಿಯುತವೂ ಪರಿಣಾಮಕಾರಿಯೂ ಆಗಿರುತ್ತದೆ.
17 ย เอลิโย วยมิว สุขทุ: ขโภคี มรฺตฺตฺย อาสีตฺ ส ปฺรารฺถนยานาวฺฤษฺฏึ ยาจิตวานฺ เตน เทเศ สารฺทฺธวตฺสรตฺรยํ ยาวทฺ วฺฤษฺฏิ รฺน พภูวฯ
ಎಲೀಯನು ನಮ್ಮಂಥ ಮಾನವ ಸ್ವಭಾವವುಳ್ಳವನಾಗಿದ್ದನು. ಅವನು ಮಳೆ ಬರಬಾರದೆಂದು ಆಸಕ್ತಿಯಿಂದ ಪ್ರಾರ್ಥಿಸಲು, ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ.
18 ปศฺจาตฺ เตน ปุน: ปฺรารฺถนายำ กฺฤตายามฺ อากาศโสฺตยานฺยวรฺษีตฺ ปฺฤถิวี จ สฺวผลานิ ปฺราโรหยตฺฯ
ತಿರುಗಿ ಅವನು ಪ್ರಾರ್ಥನೆಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಿಸಿತು.
19 เห ภฺราตร: , ยุษฺมากํ กสฺมึศฺจิตฺ สตฺยมตาทฺ ภฺรษฺเฏ ยทิ กศฺจิตฺ ตํ ปราวรฺตฺตยติ
ಪ್ರಿಯರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ,
20 ตรฺหิ โย ชน: ปาปินํ วิปถภฺรมณาตฺ ปราวรฺตฺตยติ ส ตสฺยาตฺมานํ มฺฤตฺยุต อุทฺธริษฺยติ พหุปาปานฺยาวริษฺยติ เจติ ชานาตุฯ
ಅವನು ಆ ಪಾಪ ಮಾಡಿದವನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ, ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ, ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲಿ.