< ପ୍ରକାଶିତଂ 14 >

1 ତତଃ ପରଂ ନିରୀକ୍ଷମାଣେନ ମଯା ମେଷଶାୱକୋ ଦୃଷ୍ଟଃ ସ ସିଯୋନପର୍ୱ୍ୱତସ୍ୟୋପର୍ୟ୍ୟତିଷ୍ଠତ୍, ଅପରଂ ଯେଷାଂ ଭାଲେଷୁ ତସ୍ୟ ନାମ ତତ୍ପିତୁଶ୍ଚ ନାମ ଲିଖିତମାସ୍ତେ ତାଦୃଶାଶ୍ଚତୁଶ୍ଚତ୍ୱାରିଂଶତ୍ସହସ୍ରାଧିକା ଲକ୍ଷଲୋକାସ୍ତେନ ସାର୍ଦ୍ଧମ୍ ଆସନ୍|
ನಾನು ನೋಡಲಾಗಿ, ಕುರಿಮರಿ ಆಗಿರುವವರು ಚೀಯೋನ್ ಪರ್ವತದ ಮೇಲೆ ನಿಂತಿದ್ದರು. ಕುರಿಮರಿಯವರ ಜೊತೆಯಲ್ಲಿ ಒಂದು ಲಕ್ಷ ನಲವತ್ನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಕುರಿಮರಿಯವರ ಹೆಸರೂ ಕುರಿಮರಿಯವರ ತಂದೆಯ ಹೆಸರೂ ಬರೆಯಲಾಗಿದ್ದವು.
2 ଅନନ୍ତରଂ ବହୁତୋଯାନାଂ ରୱ ଇୱ ଗୁରୁତରସ୍ତନିତସ୍ୟ ଚ ରୱ ଇୱ ଏକୋ ରୱଃ ସ୍ୱର୍ଗାତ୍ ମଯାଶ୍ରାୱି| ମଯା ଶ୍ରୁତଃ ସ ରୱୋ ୱୀଣାୱାଦକାନାଂ ୱୀଣାୱାଦନସ୍ୟ ସଦୃଶଃ|
ಇದಲ್ಲದೆ ಪರಲೋಕದಿಂದ ಜಲ ಪ್ರವಾಹದಂತೆಯೂ ಮಹಾ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಕಿನ್ನರಿಗಳನ್ನು ನುಡಿಸುತ್ತಿರುವ ಕಿನ್ನರರ ಶಬ್ದದಂತಿತ್ತು.
3 ସିଂହସନସ୍ୟାନ୍ତିକେ ପ୍ରାଣିଚତୁଷ୍ଟଯସ୍ୟ ପ୍ରାଚୀନୱର୍ଗସ୍ୟ ଚାନ୍ତିକେ ଽପି ତେ ନୱୀନମେକଂ ଗୀତମ୍ ଅଗାଯନ୍ କିନ୍ତୁ ଧରଣୀତଃ ପରିକ୍ରୀତାନ୍ ତାନ୍ ଚତୁଶ୍ଚତ୍ୱାରିଂଶତ୍ୟହସ୍ରାଧିକଲକ୍ଷଲୋକାନ୍ ୱିନା ନାପରେଣ କେନାପି ତଦ୍ ଗୀତଂ ଶିକ୍ଷିତୁଂ ଶକ୍ୟତେ|
ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
4 ଇମେ ଯୋଷିତାଂ ସଙ୍ଗେନ ନ କଲଙ୍କିତା ଯତସ୍ତେ ଽମୈଥୁନା ମେଷଶାୱକୋ ଯତ୍ କିମପି ସ୍ଥାନଂ ଗଚ୍ଛେତ୍ ତତ୍ସର୍ୱ୍ୱସ୍ମିନ୍ ସ୍ଥାନେ ତମ୍ ଅନୁଗଚ୍ଛନ୍ତି ଯତସ୍ତେ ମନୁଷ୍ୟାଣାଂ ମଧ୍ୟତଃ ପ୍ରଥମଫଲାନୀୱେଶ୍ୱରସ୍ୟ ମେଷଶାୱକସ୍ୟ ଚ କୃତେ ପରିକ୍ରୀତାଃ|
ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು.
5 ତେଷାଂ ୱଦନେଷୁ ଚାନୃତଂ କିମପି ନ ୱିଦ୍ୟତେ ଯତସ୍ତେ ନିର୍ଦ୍ଦୋଷା ଈଶ୍ୱରସିଂହାସନସ୍ୟାନ୍ତିକେ ତିଷ୍ଠନ୍ତି|
ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.
6 ଅନନ୍ତରମ୍ ଆକାଶମଧ୍ୟେନୋଡ୍ଡୀଯମାନୋ ଽପର ଏକୋ ଦୂତୋ ମଯା ଦୃଷ୍ଟଃ ସୋ ଽନନ୍ତକାଲୀଯଂ ସୁସଂୱାଦଂ ଧାରଯତି ସ ଚ ସୁସଂୱାଦଃ ସର୍ୱ୍ୱଜାତୀଯାନ୍ ସର୍ୱ୍ୱୱଂଶୀଯାନ୍ ସର୍ୱ୍ୱଭାଷାୱାଦିନଃ ସର୍ୱ୍ୱଦେଶୀଯାଂଶ୍ଚ ପୃଥିୱୀନିୱାସିନଃ ପ୍ରତି ତେନ ଘୋଷିତୱ୍ୟଃ| (aiōnios g166)
ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು. (aiōnios g166)
7 ସ ଉଚ୍ଚୈଃସ୍ୱରେଣେଦଂ ଗଦତି ଯୂଯମୀଶ୍ୱରାଦ୍ ବିଭୀତ ତସ୍ୟ ସ୍ତୱଂ କୁରୁତ ଚ ଯତସ୍ତଦୀଯୱିଚାରସ୍ୟ ଦଣ୍ଡ ଉପାତିଷ୍ଠତ୍ ତସ୍ମାଦ୍ ଆକାଶମଣ୍ଡଲସ୍ୟ ପୃଥିୱ୍ୟାଃ ସମୁଦ୍ରସ୍ୟ ତୋଯପ୍ରସ୍ରୱଣାନାଞ୍ଚ ସ୍ରଷ୍ଟା ଯୁଷ୍ମାଭିଃ ପ୍ରଣମ୍ୟତାଂ|
ಅವನು, “ನೀವು ದೇವರಿಗೆ ಭಯಪಟ್ಟು ಅವರಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಅವರು ನ್ಯಾಯತೀರ್ಪು ಮಾಡುವ ಸಮಯ ಬಂದಿದೆ. ಭೂಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದ ದೇವರನ್ನೇ ಆರಾಧಿಸಿರಿ!” ಎಂದು ಮಹಾಧ್ವನಿಯಿಂದ ಹೇಳಿದನು.
8 ତତ୍ପଶ୍ଚାଦ୍ ଦ୍ୱିତୀଯ ଏକୋ ଦୂତ ଉପସ୍ଥାଯାୱଦତ୍ ପତିତା ପତିତା ସା ମହାବାବିଲ୍ ଯା ସର୍ୱ୍ୱଜାତୀଯାନ୍ ସ୍ୱକୀଯଂ ୱ୍ୟଭିଚାରରୂପଂ କ୍ରୋଧମଦମ୍ ଅପାଯଯତ୍|
ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು, “‘ಬಿದ್ದಳು, ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ಸಕಲ ಜನಾಂಗಗಳಿಗೆ ತನ್ನ ಅತ್ಯಾಸಕ್ತಿಯ ಅನೈತಿಕತೆವೆಂಬ ದ್ರಾಕ್ಷಾರಸವನ್ನು ಕುಡಿಸಿದಳು,” ಎಂದು ಹೇಳಿದನು.
9 ତତ୍ପଶ୍ଚାଦ୍ ତୃତୀଯୋ ଦୂତ ଉପସ୍ଥାଯୋଚ୍ଚୈରୱଦତ୍, ଯଃ କଶ୍ଚିତ ତଂ ଶଶୁଂ ତସ୍ୟ ପ୍ରତିମାଞ୍ଚ ପ୍ରଣମତି ସ୍ୱଭାଲେ ସ୍ୱକରେ ୱା କଲଙ୍କଂ ଗୃହ୍ଲାତି ଚ
ಅವರ ಹಿಂದೆ ಮೂರನೆಯವನಾದ ಒಬ್ಬ ದೇವದೂತನು ಬಂದು, “ಯಾವುದಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ, ಕೈಯ ಮೇಲಾಗಲಿ ಗುರುತು ಹಾಕಿಸಿಕೊಂಡರೆ,
10 ସୋ ଽପୀଶ୍ୱରସ୍ୟ କ୍ରୋଧପାତ୍ରେ ସ୍ଥିତମ୍ ଅମିଶ୍ରିତଂ ମଦତ୍ ଅର୍ଥତ ଈଶ୍ୱରସ୍ୟ କ୍ରୋଧମଦଂ ପାସ୍ୟତି ପୱିତ୍ରଦୂତାନାଂ ମେଷଶାୱକସ୍ୟ ଚ ସାକ୍ଷାଦ୍ ୱହ୍ନିଗନ୍ଧକଯୋ ର୍ୟାତନାଂ ଲପ୍ସ୍ୟତେ ଚ|
ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆ ಹಾಕಿದ ಅವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಕುರಿಮರಿಯಾಗಿರುವವರ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
11 ତେଷାଂ ଯାତନାଯା ଧୂମୋ ଽନନ୍ତକାଲଂ ଯାୱଦ୍ ଉଦ୍ଗମିଷ୍ୟତି ଯେ ଚ ପଶୁଂ ତସ୍ୟ ପ୍ରତିମାଞ୍ଚ ପୂଜଯନ୍ତି ତସ୍ୟ ନାମ୍ନୋ ଽଙ୍କଂ ୱା ଗୃହ୍ଲନ୍ତି ତେ ଦିୱାନିଶଂ କଞ୍ଚନ ୱିରାମଂ ନ ପ୍ରାପ୍ସ୍ୟନ୍ତି| (aiōn g165)
ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು. (aiōn g165)
12 ଯେ ମାନୱା ଈଶ୍ୱରସ୍ୟାଜ୍ଞା ଯୀଶୌ ୱିଶ୍ୱାସଞ୍ଚ ପାଲଯନ୍ତି ତେଷାଂ ପୱିତ୍ରଲୋକାନାଂ ସହିଷ୍ଣୁତଯାତ୍ର ପ୍ରକାଶିତୱ୍ୟଂ|
ಇದಕ್ಕಾಗಿಯೇ ದೇವರ ಆಜ್ಞೆಗಳನ್ನೂ ಯೇಸುವಿನಲ್ಲಿ ನಂಬಿಕೆಯನ್ನೂ ಕಾಪಾಡುವ ದೇವಜನರ ತಾಳ್ಮೆಯ ಸಹಿಷ್ಣುತೆ ಇದರಲ್ಲಿದೆ.
13 ଅପରଂ ସ୍ୱର୍ଗାତ୍ ମଯା ସହ ସମ୍ଭାଷମାଣ ଏକୋ ରୱୋ ମଯାଶ୍ରାୱି ତେନୋକ୍ତଂ ତ୍ୱଂ ଲିଖ, ଇଦାନୀମାରଭ୍ୟ ଯେ ପ୍ରଭୌ ମ୍ରିଯନ୍ତେ ତେ ମୃତା ଧନ୍ୟା ଇତି; ଆତ୍ମା ଭାଷତେ ସତ୍ୟଂ ସ୍ୱଶ୍ରମେଭ୍ୟସ୍ତୈ ର୍ୱିରାମଃ ପ୍ରାପ୍ତୱ୍ୟଃ ତେଷାଂ କର୍ମ୍ମାଣି ଚ ତାନ୍ ଅନୁଗଚ୍ଛନ୍ତି|
ಪರಲೋಕದಿಂದ ಒಂದು ಧ್ವನಿಯು ನನಗೆ, “ಇಂದಿನಿಂದ ಕರ್ತರಲ್ಲಿ ವಿಶ್ವಾಸವುಳ್ಳವರು ಧನ್ಯರು ಎಂಬುದಾಗಿ ಬರೆ!” ಎಂದು ಹೇಳಿತು. ಅದಕ್ಕೆ ಪವಿತ್ರಾತ್ಮ ದೇವರು, “ಹೌದು, ಅವರ ಪ್ರಯಾಸಗಳು ತೀರಿದವು ಅವರಿಗೆ ವಿಶ್ರಾಂತಿಯಾಗುವುದು, ಅವರ ಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ!” ಎಂದು ಹೇಳುತ್ತಾರೆ.
14 ତଦନନ୍ତରଂ ନିରୀକ୍ଷମାଣେନ ମଯା ଶ୍ୱେତୱର୍ଣ ଏକୋ ମେଘୋ ଦୃଷ୍ଟସ୍ତନ୍ମେଘାରୂଢୋ ଜନୋ ମାନୱପୁତ୍ରାକୃତିରସ୍ତି ତସ୍ୟ ଶିରସି ସୁୱର୍ଣକିରୀଟଂ କରେ ଚ ତୀକ୍ଷ୍ଣଂ ଦାତ୍ରଂ ତିଷ୍ଠତି|
ನಾನು ನೋಡಲಾಗಿ, ಒಂದು ಬಿಳಿ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯಪುತ್ರರಂತೆ ಒಬ್ಬರು ಕುಳಿತಿರುವುದನ್ನು ಕಂಡೆನು. ಅವರ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
15 ତତଃ ପରମ୍ ଅନ୍ୟ ଏକୋ ଦୂତୋ ମନ୍ଦିରାତ୍ ନିର୍ଗତ୍ୟୋଚ୍ଚୈଃସ୍ୱରେଣ ତଂ ମେଘାରୂଢଂ ସମ୍ଭାଷ୍ୟାୱଦତ୍ ତ୍ୱଯା ଦାତ୍ରଂ ପ୍ରସାର୍ୟ୍ୟ ଶସ୍ୟଚ୍ଛେଦନଂ କ୍ରିଯତାଂ ଶସ୍ୟଚ୍ଛେଦନସ୍ୟ ସମଯ ଉପସ୍ଥିତୋ ଯତୋ ମେଦିନ୍ୟାଃ ଶସ୍ୟାନି ପରିପକ୍କାନି|
ಆಗ ಮತ್ತೊಬ್ಬ ದೂತನು ದೇವಾಲಯದೊಳಗಿಂದ ಬಂದು ಮೇಘದ ಮೇಲೆ ಕುಳಿತಿದ್ದವರಿಗೆ, “ಭೂಮಿಯ ಪೈರು ಮಾಗಿದೆ. ಕೊಯ್ಯುವ ಕಾಲ ಬಂದಿರುವುದರಿಂದ, ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ!” ಎಂದು ಮಹಾಧ್ವನಿಯಿಂದ ಕೂಗಿದನು.
16 ତତସ୍ତେନ ମେଘାରୂଢେନ ପୃଥିୱ୍ୟାଂ ଦାତ୍ରଂ ପ୍ରସାର୍ୟ୍ୟ ପୃଥିୱ୍ୟାଃ ଶସ୍ୟଚ୍ଛେଦନଂ କୃତଂ|
ಮೇಘದ ಮೇಲೆ ಕುಳಿತಿದ್ದವರು ತಮ್ಮ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದರು. ಆಗ ಭೂಮಿಯ ಪೈರು ಕೊಯ್ಯಲಾಯಿತು.
17 ଅନନ୍ତରମ୍ ଅପର ଏକୋ ଦୂତଃ ସ୍ୱର୍ଗସ୍ଥମନ୍ଦିରାତ୍ ନିର୍ଗତଃ ସୋ ଽପି ତୀକ୍ଷ୍ଣଂ ଦାତ୍ରଂ ଧାରଯତି|
ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
18 ଅପରମ୍ ଅନ୍ୟ ଏକୋ ଦୂତୋ ୱେଦିତୋ ନିର୍ଗତଃ ସ ୱହ୍ନେରଧିପତିଃ ସ ଉଚ୍ଚୈଃସ୍ୱରେଣ ତଂ ତୀକ୍ଷ୍ଣଦାତ୍ରଧାରିଣଂ ସମ୍ଭାଷ୍ୟାୱଦତ୍ ତ୍ୱଯା ସ୍ୱଂ ତୀକ୍ଷ୍ଣଂ ଦାତ୍ରଂ ପ୍ରସାର୍ୟ୍ୟ ମେଦିନ୍ୟା ଦ୍ରାକ୍ଷାଗୁଚ୍ଛଚ୍ଛେଦନଂ କ୍ରିଯତାଂ ଯତସ୍ତତ୍ଫଲାନି ପରିଣତାନି|
ತರುವಾಯ ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಬಲಿಪೀಠದ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ, ಭೂಮಿಯ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರ್ತಿಯಾಗಿ ಮಾಗಿವೆ!” ಎಂದು ಮಹಾಧ್ವನಿಯಿಂದ ಕೂಗಿದನು.
19 ତତଃ ସ ଦୂତଃ ପୃଥିୱ୍ୟାଂ ସ୍ୱଦାତ୍ରଂ ପ୍ରସାର୍ୟ୍ୟ ପୃଥିୱ୍ୟା ଦ୍ରାକ୍ଷାଫଲଚ୍ଛେଦନମ୍ ଅକରୋତ୍ ତତ୍ଫଲାନି ଚେଶ୍ୱରସ୍ୟ କ୍ରୋଧସ୍ୱରୂପସ୍ୟ ମହାକୁଣ୍ଡସ୍ୟ ମଧ୍ୟଂ ନିରକ୍ଷିପତ୍|
ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ, ಭೂಮಿಯ ದ್ರಾಕ್ಷಿಹಣ್ಣನ್ನು ಕೂಡಿಸಿ, ದೇವರ ಕೋಪವೆಂಬ ದೊಡ್ಡ ದ್ರಾಕ್ಷಿಯ ತೊಟ್ಟಿಯಲ್ಲಿ ಹಾಕಿದನು.
20 ତତ୍କୁଣ୍ଡସ୍ଥଫଲାନି ଚ ବହି ର୍ମର୍ଦ୍ଦିତାନି ତତଃ କୁଣ୍ଡମଧ୍ୟାତ୍ ନିର୍ଗତଂ ରକ୍ତଂ କ୍ରୋଶଶତପର୍ୟ୍ୟନ୍ତମ୍ ଅଶ୍ୱାନାଂ ଖଲୀନାନ୍ ଯାୱଦ୍ ୱ୍ୟାପ୍ନୋତ୍|
ಆಗ ಪಟ್ಟಣದ ಹೊರಗೆ ದ್ರಾಕ್ಷಿಯ ತೊಟ್ಟಿಯನ್ನು ತುಳಿಯಲಾಯಿತು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು, ಕುದುರೆಗಳ ಕಡಿವಾಣವನ್ನು ಮುಟ್ಟುವಷ್ಟು ಮುನ್ನೂರು ಕಿಲೋಮೀಟರ್ ದೂರ ಹರಿಯಿತು.

< ପ୍ରକାଶିତଂ 14 >