< യിഹൂദാഃ 1 >
1 യീശുഖ്രീഷ്ടസ്യ ദാസോ യാകൂബോ ഭ്രാതാ യിഹൂദാസ്താതേനേശ്വരേണ പവിത്രീകൃതാൻ യീശുഖ്രീഷ്ടേന രക്ഷിതാംശ്ചാഹൂതാൻ ലോകാൻ പ്രതി പത്രം ലിഖതി|
೧ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,
2 കൃപാ ശാന്തിഃ പ്രേമ ച ബാഹുല്യരൂപേണ യുഷ്മാസ്വധിതിഷ്ഠതു|
೨ನಿಮಗೆ ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.
3 ഹേ പ്രിയാഃ, സാധാരണപരിത്രാണമധി യുഷ്മാൻ പ്രതി ലേഖിതും മമ ബഹുയത്നേ ജാതേ പൂർവ്വകാലേ പവിത്രലോകേഷു സമർപിതോ യോ ധർമ്മസ്തദർഥം യൂയം പ്രാണവ്യയേനാപി സചേഷ്ടാ ഭവതേതി വിനയാർഥം യുഷ്മാൻ പ്രതി പത്രലേഖനമാവശ്യകമ് അമന്യേ|
೩ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
4 യസ്മാദ് ഏതദ്രൂപദണ്ഡപ്രാപ്തയേ പൂർവ്വം ലിഖിതാഃ കേചിജ്ജനാ അസ്മാൻ ഉപസൃപ്തവന്തഃ, തേ ഽധാർമ്മികലോകാ അസ്മാകമ് ഈശ്വരസ്യാനുഗ്രഹം ധ്വജീകൃത്യ ലമ്പടതാമ് ആചരന്തി, അദ്വിതീയോ ഽധിപതി ര്യോ ഽസ്മാകം പ്രഭു ര്യീശുഖ്രീഷ്ടസ്തം നാങ്ഗീകുർവ്വന്തി|
೪ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.
5 തസ്മാദ് യൂയം പുരാ യദ് അവഗതാസ്തത് പുന ര്യുഷ്മാൻ സ്മാരയിതുമ് ഇച്ഛാമി, ഫലതഃ പ്രഭുരേകകൃത്വഃ സ്വപ്രജാ മിസരദേശാദ് ഉദധാര യത് തതഃ പരമ് അവിശ്വാസിനോ വ്യനാശയത്|
೫ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.
6 യേ ച സ്വർഗദൂതാഃ സ്വീയകർതൃത്വപദേ ന സ്ഥിത്വാ സ്വവാസസ്ഥാനം പരിത്യക്തവന്തസ്താൻ സ മഹാദിനസ്യ വിചാരാർഥമ് അന്ധകാരമയേ ഽധഃസ്ഥാനേ സദാസ്ഥായിഭി ർബന്ധനൈരബധ്നാത്| (aïdios )
೬ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. (aïdios )
7 അപരം സിദോമമ് അമോരാ തന്നികടസ്ഥനഗരാണി ചൈതേഷാം നിവാസിനസ്തത്സമരൂപം വ്യഭിചാരം കൃതവന്തോ വിഷമമൈഥുനസ്യ ചേഷ്ടയാ വിപഥം ഗതവന്തശ്ച തസ്മാത് താന്യപി ദൃഷ്ടാന്തസ്വരൂപാണി ഭൂത്വാ സദാതനവഹ്നിനാ ദണ്ഡം ഭുഞ്ജതേ| (aiōnios )
೭ಸೊದೋಮ್ ಗೊಮೋರ ಪಟ್ಟಣಗಳವರೂ, ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. (aiōnios )
8 തഥൈവേമേ സ്വപ്നാചാരിണോഽപി സ്വശരീരാണി കലങ്കയന്തി രാജാധീനതാം ന സ്വീകുർവ്വന്ത്യുച്ചപദസ്ഥാൻ നിന്ദന്തി ച|
೮ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.
9 കിന്തു പ്രധാനദിവ്യദൂതോ മീഖായേലോ യദാ മൂസസോ ദേഹേ ശയതാനേന വിവദമാനഃ സമഭാഷത തദാ തിസ്മൻ നിന്ദാരൂപം ദണ്ഡം സമർപയിതും സാഹസം ന കൃത്വാകഥയത് പ്രഭുസ്ത്വാം ഭർത്സയതാം|
೯ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, “ಕರ್ತನು ನಿನ್ನನ್ನು ಗದರಿಸಲಿ” ಎಂದನು.
10 കിന്ത്വിമേ യന്ന ബുധ്യന്തേ തന്നിന്ദന്തി യച്ച നിർബ്ബോധപശവ ഇവേന്ദ്രിയൈരവഗച്ഛന്തി തേന നശ്യന്തി|
೧೦ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
11 താൻ ധിക്, തേ കാബിലോ മാർഗേ ചരന്തി പാരിതോഷികസ്യാശാതോ ബിലിയമോ ഭ്രാന്തിമനുധാവന്തി കോരഹസ്യ ദുർമ്മുഖത്വേന വിനശ്യന്തി ച|
೧೧ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.
12 യുഷ്മാകം പ്രേമഭോജ്യേഷു തേ വിഘ്നജനകാ ഭവന്തി, ആത്മമ്ഭരയശ്ച ഭൂത്വാ നിർലജ്ജയാ യുഷ്മാഭിഃ സാർദ്ധം ഭുഞ്ജതേ| തേ വായുഭിശ്ചാലിതാ നിസ്തോയമേഘാ ഹേമന്തകാലികാ നിഷ്ഫലാ ദ്വി ർമൃതാ ഉന്മൂലിതാ വൃക്ഷാഃ,
೧೨ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, ನಿಮ್ಮ ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, ಸಂಪೂರ್ಣವಾಗಿ ಸತ್ತ, ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.
13 സ്വകീയലജ്ജാഫേണോദ്വമകാഃ പ്രചണ്ഡാഃ സാമുദ്രതരങ്ഗാഃ സദാകാലം യാവത് ഘോരതിമിരഭാഗീനി ഭ്രമണകാരീണി നക്ഷത്രാണി ച ഭവന്തി| (aiōn )
೧೩ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ. (aiōn )
14 ആദമതഃ സപ്തമഃ പുരുഷോ യോ ഹനോകഃ സ താനുദ്ദിശ്യ ഭവിഷ്യദ്വാക്യമിദം കഥിതവാൻ, യഥാ, പശ്യ സ്വകീയപുണ്യാനാമ് അയുതൈ ർവേഷ്ടിതഃ പ്രഭുഃ|
೧೪ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,
15 സർവ്വാൻ പ്രതി വിചാരാജ്ഞാസാധനായാഗമിഷ്യതി| തദാ ചാധാർമ്മികാഃ സർവ്വേ ജാതാ യൈരപരാധിനഃ| വിധർമ്മകർമ്മണാം തേഷാം സർവ്വേഷാമേവ കാരണാത്| തഥാ തദ്വൈപരീത്യേനാപ്യധർമ്മാചാരിപാപിനാം| ഉക്തകഠോരവാക്യാനാം സർവ്വേഷാമപി കാരണാത്| പരമേശേന ദോഷിത്വം തേഷാം പ്രകാശയിഷ്യതേ||
೧೫ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು” ಎಂಬುದಾಗಿ ಪ್ರವಾದಿಸಿದನು.
16 തേ വാക്കലഹകാരിണഃ സ്വഭാഗ്യനിന്ദകാഃ സ്വേച്ഛാചാരിണോ ദർപവാദിമുഖവിശിഷ്ടാ ലാഭാർഥം മനുഷ്യസ്താവകാശ്ച സന്തി|
೧೬ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, ಬಂಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.
17 കിന്തു ഹേ പ്രിയതമാഃ, അസ്മാകം പ്രഭോ ര്യീശുഖ്രീഷ്ടസ്യ പ്രേരിതൈ ര്യദ് വാക്യം പൂർവ്വം യുഷ്മഭ്യം കഥിതം തത് സ്മരത,
೧೭ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
18 ഫലതഃ ശേഷസമയേ സ്വേച്ഛാതോ ഽധർമ്മാചാരിണോ നിന്ദകാ ഉപസ്ഥാസ്യന്തീതി|
೧೮“ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು.
19 ഏതേ ലോകാഃ സ്വാൻ പൃഥക് കുർവ്വന്തഃ സാംസാരികാ ആത്മഹീനാശ്ച സന്തി|
೧೯ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, ಪ್ರಾಕೃತ ಮನುಷ್ಯರೂ, ದೇವರಾತ್ಮ ಇಲ್ಲದವರೂ ಆಗಿದ್ದಾರೆ.
20 കിന്തു ഹേ പ്രിയതമാഃ, യൂയം സ്വേഷാമ് അതിപവിത്രവിശ്വാസേ നിചീയമാനാഃ പവിത്രേണാത്മനാ പ്രാർഥനാം കുർവ്വന്ത
೨೦ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ.
21 ഈശ്വരസ്യ പ്രേമ്നാ സ്വാൻ രക്ഷത, അനന്തജീവനായ ചാസ്മാകം പ്രഭോ ര്യീശുഖ്രീഷ്ടസ്യ കൃപാം പ്രതീക്ഷധ്വം| (aiōnios )
೨೧ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. (aiōnios )
22 അപരം യൂയം വിവിച്യ കാംശ്ചിദ് അനുകമ്പധ്വം
೨೨ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ,
23 കാംശ്ചിദ് അഗ്നിത ഉദ്ധൃത്യ ഭയം പ്രദർശ്യ രക്ഷത, ശാരീരികഭാവേന കലങ്കിതം വസ്ത്രമപി ഋതീയധ്വം|
೨೩ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.
24 അപരഞ്ച യുഷ്മാൻ സ്ഖലനാദ് രക്ഷിതുമ് ഉല്ലാസേന സ്വീയതേജസഃ സാക്ഷാത് നിർദ്ദോഷാൻ സ്ഥാപയിതുഞ്ച സമർഥോ
೨೪ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ,
25 യോ ഽസ്മാകമ് അദ്വിതീയസ്ത്രാണകർത്താ സർവ്വജ്ഞ ഈശ്വരസ്തസ്യ ഗൗരവം മഹിമാ പരാക്രമഃ കർതൃത്വഞ്ചേദാനീമ് അനന്തകാലം യാവദ് ഭൂയാത്| ആമേൻ| (aiōn )
೨೫ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್. (aiōn )