< 2 കരിന്ഥിനഃ 7 >

1 അതഏവ ഹേ പ്രിയതമാഃ, ഏതാദൃശീഃ പ്രതിജ്ഞാഃ പ്രാപ്തൈരസ്മാഭിഃ ശരീരാത്മനോഃ സർവ്വമാലിന്യമ് അപമൃജ്യേശ്വരസ്യ ഭക്ത്യാ പവിത്രാചാരഃ സാധ്യതാം|
ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.
2 യൂയമ് അസ്മാൻ ഗൃഹ്ലീത| അസ്മാഭിഃ കസ്യാപ്യന്യായോ ന കൃതഃ കോഽപി ന വഞ്ചിതഃ|
ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ; ನಿಮ್ಮಲ್ಲಿ ಯಾರಿಗೂ ನಾವು ಅನ್ಯಾಯ ಮಾಡಲಿಲ್ಲ, ಯಾರಿಗೂ ಹಾನಿಯುಂಟುಮಾಡಿಲ್ಲ, ಯಾರನ್ನೂ ವಂಚಿಸಲಿಲ್ಲ.
3 യുഷ്മാൻ ദോഷിണഃ കർത്തമഹം വാക്യമേതദ് വദാമീതി നഹി യുഷ്മാഭിഃ സഹ ജീവനായ മരണായ വാ വയം യുഷ്മാൻ സ്വാന്തഃകരണൈ ർധാരയാമ ഇതി പൂർവ്വം മയോക്തം|
ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುತ್ತಿಲ್ಲ; ನಿಮ್ಮ ಜೊತೆ ಸಾಯುವುದಕ್ಕೂ, ಬದುಕುವುದಕ್ಕೂ ಎನ್ನುವಷ್ಟರ ಮಟ್ಟಿಗೆ ನೀವು ನಮ್ಮ ಹೃದಯದಲ್ಲಿದ್ದೀರೆಂದು ನಾನು ಮೊದಲೇ ಹೇಳಿದ್ದೆನಲ್ಲಾ.
4 യുഷ്മാൻ പ്രതി മമ മഹേത്സാഹോ ജായതേ യുഷ്മാൻ അധ്യഹം ബഹു ശ്ലാഘേ ച തേന സർവ്വക്ലേശസമയേഽഹം സാന്ത്വനയാ പൂർണോ ഹർഷേണ പ്രഫുല്ലിതശ്ച ഭവാമി|
ನಿಮ್ಮಲ್ಲಿ ನನಗೆ ಬಹಳ ಭರವಸೆ ಉಂಟು, ಗಾಢವಾದ ಅಭಿಮಾನವುಂಟು. ನಾನು ಎಲ್ಲಾ ಸಂಕಟಗಳಲ್ಲಿಯೂ ಎದೆಗುಂದದೆ ಆನಂದಭರಿತನಾಗಿದ್ದೇನೆ.
5 അസ്മാസു മാകിദനിയാദേശമ് ആഗതേഷ്വസ്മാകം ശരീരസ്യ കാചിദപി ശാന്തി ർനാഭവത് കിന്തു സർവ്വതോ ബഹി ർവിരോധേനാന്തശ്ച ഭീത്യാ വയമ് അപീഡ്യാമഹി|
ನಾವು ಮಕೆದೋನ್ಯಕ್ಕೆ ಬಂದ ಮೇಲೂ ನಮ್ಮ ದೇಹಕ್ಕೆ ನೆಮ್ಮದಿ ಇರಲಿಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿಯೂ ನಮಗೆ ತೊಂದರೆಗಳಿದ್ದವು. ಹೊರಗೆ ಜಗಳ, ಒಳಗೆ ಭಯ
6 കിന്തു നമ്രാണാം സാന്ത്വയിതാ യ ഈശ്വരഃ സ തീതസ്യാഗമനേനാസ്മാൻ അസാന്ത്വയത്|
ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸುವ ಮೂಲಕ ನಮ್ಮನ್ನು ಸಂತೈಸಿದನು.
7 കേവലം തസ്യാഗമനേന തന്നഹി കിന്തു യുഷ്മത്തോ ജാതയാ തസ്യ സാന്ത്വനയാപി, യതോഽസ്മാസു യുഷ്മാകം ഹാർദ്ദവിലാപാസക്തത്വേഷ്വസ്മാകം സമീപേ വർണിതേഷു മമ മഹാനന്ദോ ജാതഃ|
ಅವನ ಬರುವಿಕೆಯಿಂದ ಮಾತ್ರವಲ್ಲದೆ ನಿಮ್ಮಿಂದ ಅವನು ಬಹಳ ಸಮಾಧಾನವನ್ನು ಹೊಂದಿದೆನೆಂದೂ, ನಿಮ್ಮ ಹಂಬಲ, ನಿಮ್ಮ ದುಃಖ, ನನ್ನ ಮೇಲಿರುವ ನಿಮ್ಮ ಕಾಳಜಿ; ಇವುಗಳನ್ನು ನಮಗೆ ತಿಳಿಸಿದಾಗ ನಾನು ಇನ್ನೂ ಹೆಚ್ಚಾಗಿ ಸಂತೋಷಪಟ್ಟೆನು.
8 അഹം പത്രേണ യുഷ്മാൻ ശോകയുക്താൻ കൃതവാൻ ഇത്യസ്മാദ് അന്വതപ്യേ കിന്ത്വധുനാ നാനുതപ്യേ| തേന പത്രേണ യൂയം ക്ഷണമാത്രം ശോകയുക്തീഭൂതാ ഇതി മയാ ദൃശ്യതേ|
ನಾನು ಬರೆದ ಪತ್ರದಿಂದ ನಿಮಗೆ ದುಃಖವಾಗಿದ್ದರೂ ನನಗೆ ವಿಷಾದವಿಲ್ಲ, ಅದು ನಿಮ್ಮನ್ನು ಸ್ವಲ್ಪ ಸಮಯ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪ ಪಟ್ಟಿದ್ದರೂ ಈಗ ಸಂತೋಷಪಡುತ್ತೇನೆ.
9 ഇത്യസ്മിൻ യുഷ്മാകം ശോകേനാഹം ഹൃഷ്യാമി തന്നഹി കിന്തു മനഃപരിവർത്തനായ യുഷ്മാകം ശോകോഽഭവദ് ഇത്യനേന ഹൃഷ്യാമി യതോഽസ്മത്തോ യുഷ്മാകം കാപി ഹാനി ര്യന്ന ഭവേത് തദർഥം യുഷ്മാകമ് ഈശ്വരീയഃ ശോകോ ജാതഃ|
ನಿಮಗೆ ಯಾತನೆಯಾಯಿತೆಂದು ನಾನು ಈಗ ಸಂತೋಷಪಡದೆ ನೀವು ದುಃಖಪಟ್ಟು ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಸಂತೋಷಪಡುತ್ತೇನೆ. ನೀವು ದೇವರ ಚಿತ್ತಾನುಸಾರವಾಗಿ ದುಃಖಿಸಿದ್ದರಿಂದ ನಮ್ಮಿಂದಾಗಿ ಯಾವುದರಲ್ಲಿಯೂ ನಿಮಗೆ ನಷ್ಟವಾಗಲಿಲ್ಲವಲ್ಲಾ.
10 സ ഈശ്വരീയഃ ശോകഃ പരിത്രാണജനകം നിരനുതാപം മനഃപരിവർത്തനം സാധയതി കിന്തു സാംസാരികഃ ശോകോ മൃത്യും സാധയതി|
೧೦ದೇವರ ಚಿತ್ತಾನುಸಾರವಾಗಿರುವ ದುಃಖವು ರಕ್ಷಣೆಗೆ ಕಾರಣವಾಗುವ ಮಾನಸಾಂತರವನ್ನುಂಟು ಮಾಡುತ್ತದೆ, ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ.
11 പശ്യത തേനേശ്വരീയേണ ശോകേന യുഷ്മാകം കിം ന സാധിതം? യത്നോ ദോഷപ്രക്ഷാലനമ് അസന്തുഷ്ടത്വം ഹാർദ്ദമ് ആസക്തത്വം ഫലദാനഞ്ചൈതാനി സർവ്വാണി| തസ്മിൻ കർമ്മണി യൂയം നിർമ്മലാ ഇതി പ്രമാണം സർവ്വേണ പ്രകാരേണ യുഷ്മാഭി ർദത്തം|
೧೧ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ.
12 യേനാപരാദ്ധം തസ്യ കൃതേ കിംവാ യസ്യാപരാദ്ധം തസ്യ കൃതേ മയാ പത്രമ് അലേഖി തന്നഹി കിന്തു യുഷ്മാനധ്യസ്മാകം യത്നോ യദ് ഈശ്വരസ്യ സാക്ഷാദ് യുഷ്മത്സമീപേ പ്രകാശേത തദർഥമേവ|
೧೨ನಾನು ನಿಮಗೆ ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ, ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ.
13 ഉക്തകാരണാദ് വയം സാന്ത്വനാം പ്രാപ്താഃ; താഞ്ച സാന്ത്വനാം വിനാവരോ മഹാഹ്ലാദസ്തീതസ്യാഹ്ലാദാദസ്മാഭി ർലബ്ധഃ, യതസ്തസ്യാത്മാ സർവ്വൈ ര്യുഷ്മാഭിസ്തൃപ്തഃ|
೧೩ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ.
14 പൂർവ്വം തസ്യ സമീപേഽഹം യുഷ്മാഭിര്യദ് അശ്ലാഘേ തേന നാലജ്ജേ കിന്തു വയം യദ്വദ് യുഷ്മാൻ പ്രതി സത്യഭാവേന സകലമ് അഭാഷാമഹി തദ്വത് തീതസ്യ സമീപേഽസ്മാകം ശ്ലാഘനമപി സത്യം ജാതം|
೧೪ಯಾಕೆಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದಕ್ಕಾಗಿ ನಾನು ನಾಚಿಕೆಪಡಬೇಕಾಗಿ ಬರಲಿಲ್ಲ. ಬದಲಾಗಿ ನಾವು ನಿಮಗೆ ಹೇಳಿದ ಎಲ್ಲಾ ಮಾತುಗಳು ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವೆಂದು ಕಂಡುಬಂದವು.
15 യൂയം കീദൃക് തസ്യാജ്ഞാ അപാലയത ഭയകമ്പാഭ്യാം തം ഗൃഹീതവന്തശ്ചൈതസ്യ സ്മരണാദ് യുഷ്മാസു തസ്യ സ്നേഹോ ബാഹുല്യേന വർത്തതേ|
೧೫ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ.
16 യുഷ്മാസ്വഹം സർവ്വമാശംസേ, ഇത്യസ്മിൻ മമാഹ്ലാദോ ജായതേ|
೧೬ನಿಮ್ಮ ಮೇಲೆ ನನಗೆ ಎಲ್ಲಾ ವಿಧಗಳಲ್ಲಿಯೂ ಪೂರ್ಣ ಭರವಸೆ ಇರುವುದರಿಂದ ನಾನು ಸಂತೋಷಪಡುತ್ತೇನೆ.

< 2 കരിന്ഥിനഃ 7 >