< ប្រេរិតាះ 17 >
1 បៅលសីលៅ អាម្ផិបល្យាបល្លោនិយានគរាភ្យាំ គត្វា យត្រ យិហូទីយានាំ ភជនភវនមេកម៑ អាស្តេ តត្រ ថិឞលនីកីនគរ ឧបស្ថិតៅ។
೧ಪೌಲ ಮತ್ತು ಸೀಲರು ಮುಂದೆ ಪ್ರಯಾಣಮಾಡಿ ಅಂಫಿಫೊಲಿ ಮತ್ತು ಅಪೊಲೋನ್ಯ ಎಂಬ ಪಟ್ಟಣಗಳನ್ನು ದಾಟಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು.
2 តទា បៅលះ ស្វាចារានុសារេណ តេឞាំ សមីបំ គត្វា វិឝ្រាមវារត្រយេ តៃះ សាទ៌្ធំ ធម៌្មបុស្តកីយកថាយា វិចារំ ក្ឫតវាន៑។
೨ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳಲ್ಲಿ ದೇವರ ವಾಕ್ಯದಿಂದ ಅವರ ಸಂಗಡ ವಾದಿಸಿ,
3 ផលតះ ខ្រីឞ្ដេន ទុះខភោគះ កត៌្តវ្យះ ឝ្មឝានទុត្ថានញ្ច កត៌្តវ្យំ យុឞ្មាកំ សន្និធៅ យស្យ យីឝោះ ប្រស្តាវំ ករោមិ ស ឦឝ្វរេណាភិឞិក្តះ ស ឯតាះ កថាះ ប្រកាឝ្យ ប្រមាណំ ទត្វា ស្ថិរីក្ឫតវាន៑។
೩ಆಯಾ ವಾಕ್ಯಗಳ ಅರ್ಥವನ್ನು ವಿವರಿಸಿ; ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು, ಎದ್ದು ಬರುವುದು ಅಗತ್ಯವೆಂತಲೂ “ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನೆಂತಲೂ” ಸ್ಥಿರಪಡಿಸಿದನು.
4 តស្មាត៑ តេឞាំ កតិបយជនា អន្យទេឝីយា ពហវោ ភក្តលោកា ពហ្យះ ប្រធាននាយ៌្យឝ្ច វិឝ្វស្យ បៅលសីលយោះ បឝ្ចាទ្គាមិនោ ជាតាះ។
೪ಅವರಲ್ಲಿ ಕೆಲವರೂ ದೈವಭಕ್ತರಾದ ಗ್ರೀಕರ ದೊಡ್ಡ ಗುಂಪು ಮತ್ತು ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಮತ್ತು ಸೀಲರನ್ನು ಸೇರಿಕೊಂಡರು.
5 កិន្តុ វិឝ្វាសហីនា យិហូទីយលោកា ឦឞ៌្យយា បរិបូណ៌ាះ សន្តោ ហដដ្ស្យ កតិនយលម្បដលោកាន៑ សង្គិនះ ក្ឫត្វា ជនតយា នគរមធ្យេ មហាកលហំ ក្ឫត្វា យាសោនោ គ្ឫហម៑ អាក្រម្យ ប្រេរិតាន៑ ធ្ឫត្វា លោកនិវហស្យ សមីបម៑ អានេតុំ ចេឞ្ដិតវន្តះ។
೫ನಂಬದಿರುವ ಯೆಹೂದ್ಯರು ಹೊಟ್ಟೆಕಿಚ್ಚುಪಟ್ಟು ಪೇಟೆಯಲ್ಲಿ ತಿರುಗಾಡುವ ಕೆಲವು ಪುಂಡರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿ ಊರಲ್ಲಿ ಗದ್ದಲ ಎಬ್ಬಿಸಿ ಪೌಲ ಮತ್ತು ಸೀಲರನ್ನು ಪಟ್ಟಣದ ಸಭೆ ಎದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯನ್ನು ಮುತ್ತಿದರು.
6 តេឞាមុទ្ទេឝម៑ អប្រាប្យ ច យាសោនំ កតិបយាន៑ ភ្រាត្ឫំឝ្ច ធ្ឫត្វា នគរាធិបតីនាំ និកដមានីយ ប្រោច្ចៃះ កថិតវន្តោ យេ មនុឞ្យា ជគទុទ្វាដិតវន្តស្តេ ៜត្រាប្យុបស្ថិតាះ សន្តិ,
೬ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಮತ್ತು ಕೆಲವು ಮಂದಿ ಸಹೋದರರನ್ನೂ ಊರಿನ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋಗಿ; “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಆ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.
7 ឯឞ យាសោន៑ អាតិថ្យំ ក្ឫត្វា តាន៑ គ្ឫហីតវាន៑។ យីឝុនាមក ឯកោ រាជស្តីតិ កថយន្តស្តេ កៃសរស្យាជ្ញាវិរុទ្ធំ កម៌្ម កុវ៌្វតិ។
೭ಯಾಸೋನನು ಅವರನ್ನು ಸೇರಿಸಿಕೊಂಡಿದ್ದಾನೆ, ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಚಕ್ರವರ್ತಿಯ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ” ಎಂದು ಕೂಗಿದರು.
8 តេឞាំ កថាមិមាំ ឝ្រុត្វា លោកនិវហោ នគរាធិបតយឝ្ច សមុទ្វិគ្នា អភវន៑។
೮ಪಟ್ಟಣದವರು ಮತ್ತು ಪಟ್ಟಣದ ಅಧಿಕಾರಿಗಳು ಈ ಮಾತುಗಳನ್ನು ಕೇಳಿ ಕಳವಳಪಟ್ಟು
9 តទា យាសោនស្តទន្យេឞាញ្ច ធនទណ្ឌំ គ្ឫហីត្វា តាន៑ បរិត្យក្តវន្តះ។
೯ಯಾಸೋನ ಮೊದಲಾದವರಿಂದ ಜಾಮೀನು ತೆಗೆದುಕೊಂಡು ತರುವಾಯ ಅವರನ್ನು ಬಿಟ್ಟುಬಿಟ್ಟರು.
10 តតះ បរំ ភ្រាត្ឫគណោ រជន្យាំ បៅលសីលៅ ឝីឃ្រំ ពិរយានគរំ ប្រេឞិតវាន៑ តៅ តត្រោបស្ថាយ យិហូទីយានាំ ភជនភវនំ គតវន្តៅ។
೧೦ಆ ಸಹೋದರರು ರಾತ್ರಿಯಲ್ಲಿ ಪೌಲ ಮತ್ತು ಸೀಲರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು. ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು.
11 តត្រស្ថា លោកាះ ថិឞលនីកីស្ថលោកេភ្យោ មហាត្មាន អាសន៑ យត ឥត្ថំ ភវតិ ន វេតិ ជ្ញាតុំ ទិនេ ទិនេ ធម៌្មគ្រន្ថស្យាលោចនាំ ក្ឫត្វា ស្វៃរំ កថាម៑ អគ្ឫហ្លន៑។
೧೧ಆ ಸಭೆಯವರು ದೇವರ ವಾಕ್ಯವನ್ನು ಸಿದ್ಧ ಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಅಲ್ಲವೋ ಎಂದು ಕಂಡುಕೊಳ್ಳಲು ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದದರಿಂದ ಅವರು ಥೆಸಲೋನಿಕದವರಿಗಿಂತ ಸದ್ಗುಣವುಳವರಾಗಿದ್ದರು.
12 តស្មាទ៑ អនេកេ យិហូទីយា អន្យទេឝីយានាំ មាន្យា ស្ត្រិយះ បុរុឞាឝ្ចានេកេ វ្យឝ្វសន៑។
೧೨ಹೀಗಿರಲಾಗಿ ಅವರಲ್ಲಿ ಕುಲೀನರಾದ ಅನೇಕ ಗ್ರೀಕ್ ಹೆಂಗಸರು, ಗಂಡಸರು ನಂಬಿದರು.
13 កិន្តុ ពិរយានគរេ បៅលេនេឝ្វរីយា កថា ប្រចាយ៌្យត ឥតិ ថិឞលនីកីស្ថា យិហូទីយា ជ្ញាត្វា តត្ស្ថានមប្យាគត្យ លោកានាំ កុប្រវ្ឫត្តិម៑ អជនយន៑។
೧೩ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಪ್ರಸಿದ್ಧಪಡಿಸುತ್ತಾನೆಂಬ ವರ್ತಮಾನವು ಥೆಸಲೋನಿಕದ ಯೆಹೂದ್ಯರಿಗೆ ತಿಳಿದು ಬಂದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ಪ್ರಚೋದಿಸಿ ಕದಡಿದರು.
14 អតឯវ តស្មាត៑ ស្ថានាត៑ សមុទ្រេណ យាន្តីតិ ទឝ៌យិត្វា ភ្រាតរះ ក្ឞិប្រំ បៅលំ ប្រាហិណ្វន៑ កិន្តុ សីលតីមថិយៅ តត្រ ស្ថិតវន្តៅ។
೧೪ಕೂಡಲೇ ಸಹೋದರರು ಪೌಲನನ್ನು ಸಮುದ್ರದ ತನಕ ಹೋಗುವುದಕ್ಕೆ ಕಳುಹಿಸಿಕೊಟ್ಟರು. ಆದರೆ ಸೀಲನೂ, ತಿಮೊಥೆಯನೂ ಅಲ್ಲೇ ನಿಂತರು.
15 តតះ បរំ បៅលស្យ មាគ៌ទឝ៌កាស្តម៑ អាថីនីនគរ ឧបស្ថាបយន៑ បឝ្ចាទ៑ យុវាំ តូណ៌ម៑ ឯតត៑ ស្ថានំ អាគមិឞ្យថះ សីលតីមថិយៅ ប្រតីមាម៑ អាជ្ញាំ ប្រាប្យ តេ ប្រត្យាគតាះ។
೧೫ಪೌಲನನ್ನು ಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋದರು, ಸೀಲನನ್ನೂ, ತಿಮೊಥೆಯನನ್ನೂ ಭೇಟಿಯಾದ ಕೂಡಲೆ ಬೇಗ ತನ್ನ ಬಳಿಗೆ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಹೊಂದಿ ಹೊರಟುಬಂದರು.
16 បៅល អាថីនីនគរេ តាវបេក្ឞ្យ តិឞ្ឋន៑ តន្នគរំ ប្រតិមាភិះ បរិបូណ៌ំ ទ្ឫឞ្ដ្វា សន្តប្តហ្ឫទយោ ៜភវត៑។
೧೬ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಅವನ ಆತ್ಮವು ಕುದಿಯಿತು.
17 តតះ ស ភជនភវនេ យាន៑ យិហូទីយាន៑ ភក្តលោកាំឝ្ច ហដ្ដេ ច យាន៑ អបឝ្យត៑ តៃះ សហ ប្រតិទិនំ វិចារិតវាន៑។
೧೭ಆದುದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳೊಂದಿಗೆ ಮತ್ತು ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ಚರ್ಚಿಸಿದನು.
18 កិន្ត្វិបិកូរីយមតគ្រហិណះ ស្តោយិកីយមតគ្រាហិណឝ្ច កិយន្តោ ជនាស្តេន សាទ៌្ធំ វ្យវទន្ត។ តត្រ កេចិទ៑ អកថយន៑ ឯឞ វាចាលះ កិំ វក្តុម៑ ឥច្ឆតិ? អបរេ កេចិទ៑ ឯឞ ជនះ កេឞាញ្ចិទ៑ វិទេឝីយទេវានាំ ប្រចារក ឥត្យនុមីយតេ យតះ ស យីឝុម៑ ឧត្ថិតិញ្ច ប្រចារយត៑។
೧೮ಇದಲ್ಲದೆ ಎಪಿಕೂರಿಯನ್ನರು, ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು; “ಈ ವಾಚಾಳಿ ಏನು ಹೇಳ ಬೇಕೆಂದಿದ್ದಾನೆ?” ಅಂದರು. ಅವನು ಯೇಸುವಿನ ವಿಷಯವಾಗಿ ಮತ್ತು ಸತ್ತವರು ಎದ್ದು ಬರುವರೆಂಬುದರ ಕುರಿತು ಸಾರುತ್ತಿದ್ದುದರಿಂದ; “ಇವನು ಅನ್ಯದೇಶದ ದೇವರುಗಳನ್ನು ಪ್ರಚಾರಮಾಡುವವನಾಗಿ ಕಂಡುಬರುತ್ತಾನೆಂದು” ಬೇರೆ ಕೆಲವರು ಹೇಳಿದರು.
19 តេ តម៑ អរេយបាគនាម វិចារស្ថានម៑ អានីយ ប្រាវោចន៑ ឥទំ យន្នវីនំ មតំ ត្វំ ប្រាចីកឝ ឥទំ កីទ្ឫឝំ ឯតទ៑ អស្មាន៑ ឝ្រាវយ;
೧೯ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ; “ನೀನು ಹೇಳುವ ಈ ಹೊಸ ಉಪದೇಶವನ್ನು ನಾವು ತಿಳಿದುಕೊಳ್ಳಬಹುದೇ?
20 យាមិមាម៑ អសម្ភវកថាម៑ អស្មាកំ កណ៌គោចរីក្ឫតវាន៑ អស្យា ភាវាត៌្ហះ ក ឥតិ វយំ ជ្ញាតុម៑ ឥច្ឆាមះ។
೨೦ಅಪೂರ್ವವಾದ ಸಂಗತಿಗಳನ್ನು ನಮಗೆ ತಿಳಿಸುತ್ತಿದ್ದೀಯಲ್ಲಾ; ಆದಕಾರಣ ಅದೇನು ಎಂಬುದರ ಕುರಿತು ತಿಳಿಯಬೇಕೆಂದು ನಮಗೆ ಅಪೇಕ್ಷೆಯಿದೆ” ಅಂದರು.
21 តទាថីនីនិវាសិនស្តន្នគរប្រវាសិនឝ្ច កេវលំ កស្យាឝ្ចន នវីនកថាយាះ ឝ្រវណេន ប្រចារណេន ច កាលម៑ អយាបយន៑។
೨೧ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವುದನ್ನೂ, ಕೇಳುವುದನ್ನೂ ಬಿಟ್ಟು, ಬೇರೆ ಯಾವುದಕ್ಕೂ ಸಮಯ ಕೊಡುತ್ತಿರಲಿಲ್ಲ.
22 បៅលោៜរេយបាគស្យ មធ្យេ តិឞ្ឋន៑ ឯតាំ កថាំ ប្រចារិតវាន៑, ហេ អាថីនីយលោកា យូយំ សវ៌្វថា ទេវបូជាយាម៑ អាសក្តា ឥត្យហ ប្រត្យក្ឞំ បឝ្យាមិ។
೨೨ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ; “ಅಥೇನೆಯ ಜನರೇ, ನೀವು ಎಲ್ಲಾದರಲ್ಲಿಯೂ ಅತಿ ದೈವಭಕ್ತಿವಂತರೆಂದು ನನಗೆ ತೋರುತ್ತಿದೆ.
23 យតះ បយ៌្យដនកាលេ យុឞ្មាកំ បូជនីយានិ បឝ្យន៑ ‘អវិជ្ញាតេឝ្វរាយ’ ឯតល្លិបិយុក្តាំ យជ្ញវេទីមេកាំ ទ្ឫឞ្ដវាន៑; អតោ ន វិទិត្វា យំ បូជយធ្វេ តស្យៃវ តត្វំ យុឞ្មាន៑ ប្រតិ ប្រចារយាមិ។
೨೩ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು; ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿದ್ದೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ ಅಂದನು.
24 ជគតោ ជគត្ស្ថានាំ សវ៌្វវស្តូនាញ្ច ស្រឞ្ដា យ ឦឝ្វរះ ស ស្វគ៌ប្ឫថិវ្យោរេកាធិបតិះ សន៑ ករនិម៌្មិតមន្ទិរេឞុ ន និវសតិ;
೨೪“ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ;
25 ស ឯវ សវ៌្វេភ្យោ ជីវនំ ប្រាណាន៑ សវ៌្វសាមគ្រីឝ្ច ប្រទទាតិ; អតឯវ ស កស្យាឝ្ចិត៑ សាមគ្យ្រា អភាវហេតោ រ្មនុឞ្យាណាំ ហស្តៃះ សេវិតោ ភវតីតិ ន។
೨೫ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ.
26 ស ភូមណ្ឌលេ និវាសាត៌្ហម៑ ឯកស្មាត៑ ឝោណិតាត៑ សវ៌្វាន៑ មនុឞ្យាន៑ ស្ឫឞ្ដ្វា តេឞាំ បូវ៌្វនិរូបិតសមយំ វសតិសីមាញ្ច និរចិនោត៑;
೨೬ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ,
27 តស្មាត៑ លោកៃះ កេនាបិ ប្រការេណ ម្ឫគយិត្វា បរមេឝ្វរស្យ តត្វំ ប្រាប្តុំ តស្យ គវេឞណំ ករណីយម៑។
೨೭ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.
28 កិន្តុ សោៜស្មាកំ កស្មាច្ចិទបិ ទូរេ តិឞ្ឋតីតិ នហិ, វយំ តេន និឝ្វសនប្រឝ្វសនគមនាគមនប្រាណធារណានិ កុម៌្មះ, បុនឝ្ច យុឞ្មាកមេវ កតិបយាះ កវយះ កថយន្តិ ‘តស្យ វំឝា វយំ ស្មោ ហិ’ ឥតិ។
೨೮ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.
29 អតឯវ យទិ វយម៑ ឦឝ្វរស្យ វំឝា ភវាមស្តហ៌ិ មនុឞ្យៃ រ្វិទ្យយា កៅឝលេន ច តក្ឞិតំ ស្វណ៌ំ រូប្យំ ទ្ឫឞទ៑ វៃតេឞាមីឝ្វរត្វម៑ អស្មាភិ រ្ន ជ្ញាតវ្យំ។
೨೯“ನಾವು ದೇವರ ಸಂತಾನದವರಾದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ, ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ, ಬೆಳ್ಳಿ ಮತ್ತು ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು.
30 តេឞាំ បូវ៌្វីយលោកានាម៑ អជ្ញានតាំ ប្រតីឝ្វរោ យទ្យបិ នាវាធត្ត តថាបីទានីំ សវ៌្វត្រ សវ៌្វាន៑ មនះ បរិវត៌្តយិតុម៑ អាជ្ញាបយតិ,
೩೦ಆ ಆಜ್ಞಾನದ ಕಾಲಗಳನ್ನು ದೇವರು ಗಣನೆಗೆ ತೆಗೆದುಕೊಳ್ಳಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಿದ್ದಾನೆ.
31 យតះ ស្វនិយុក្តេន បុរុឞេណ យទា ស ប្ឫថិវីស្ថានាំ សវ៌្វលោកានាំ វិចារំ ករិឞ្យតិ តទ្ទិនំ ន្យរូបយត៑; តស្យ ឝ្មឝានោត្ថាបនេន តស្មិន៑ សវ៌្វេភ្យះ ប្រមាណំ ប្រាទាត៑។
೩೧ಏಕೆಂದರೆ, ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವುದಕ್ಕೆ ಒಂದು ದಿನವನ್ನು ಗೊತ್ತು ಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಎಲ್ಲರಿಗೂ ದೃಷ್ಟಾಂತವನ್ನು ಕೊಟ್ಟಿದ್ದಾನೆ” ಅಂದನು.
32 តទា ឝ្មឝានាទ៑ ឧត្ថានស្យ កថាំ ឝ្រុត្វា កេចិទ៑ ឧបាហមន៑, កេចិទវទន៑ ឯនាំ កថាំ បុនរបិ ត្វត្តះ ឝ្រោឞ្យាមះ។
೩೨ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಪೌಲನನ್ನು ಅಪಹಾಸ್ಯಮಾಡಿದರು, ಬೇರೆ ಕೆಲವರು; “ನೀನು ಈ ವಿಷಯದಲ್ಲಿ ಹೇಳುವುದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ” ಅಂದರು.
33 តតះ បៅលស្តេឞាំ សមីបាត៑ ប្រស្ថិតវាន៑។
೩೩ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.
34 តថាបិ កេចិល្លោកាស្តេន សាទ៌្ធំ មិលិត្វា វ្យឝ្វសន៑ តេឞាំ មធ្យេ ៜរេយបាគីយទិយនុសិយោ ទាមារីនាមា កាចិន្នារី កិយន្តោ នរាឝ្ចាសន៑។
೩೪ಕೆಲವರು ಅವನನ್ನು ಸೇರಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ, ದಾಮರಿಯೆಂಬಾಕೆಯೂ ಹಾಗು ಇನ್ನೂ ಕೆಲವರೂ ಇದ್ದರು.