< ತೀತಃ 3 >
1 ತೇ ಯಥಾ ದೇಶಾಧಿಪಾನಾಂ ಶಾಸಕಾನಾಞ್ಚ ನಿಘ್ನಾ ಆಜ್ಞಾಗ್ರಾಹಿಣ್ಶ್ಚ ಸರ್ವ್ವಸ್ಮೈ ಸತ್ಕರ್ಮ್ಮಣೇ ಸುಸಜ್ಜಾಶ್ಚ ಭವೇಯುಃ
೧ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕಂತಲೂ, ಸಕಲಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕೆಂತಲೂ,
2 ಕಮಪಿ ನ ನಿನ್ದೇಯು ರ್ನಿವ್ವಿರೋಧಿನಃ ಕ್ಷಾನ್ತಾಶ್ಚ ಭವೇಯುಃ ಸರ್ವ್ವಾನ್ ಪ್ರತಿ ಚ ಪೂರ್ಣಂ ಮೃದುತ್ವಂ ಪ್ರಕಾಶಯೇಯುಶ್ಚೇತಿ ತಾನ್ ಆದಿಶ|
೨ಯಾರನ್ನೂ ದೂಷಿಸದೆ, ಕುತರ್ಕ ಮಾಡದೆ ಎಲ್ಲಾ ಜನರಿಗೂ ಪೂರ್ಣಸದ್ಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ, ಅವರಿಗೆ ನೆನಪಿಸು.
3 ಯತಃ ಪೂರ್ವ್ವಂ ವಯಮಪಿ ನಿರ್ಬ್ಬೋಧಾ ಅನಾಜ್ಞಾಗ್ರಾಹಿಣೋ ಭ್ರಾನ್ತಾ ನಾನಾಭಿಲಾಷಾಣಾಂ ಸುಖಾನಾಞ್ಚ ದಾಸೇಯಾ ದುಷ್ಟತ್ವೇರ್ಷ್ಯಾಚಾರಿಣೋ ಘೃಣಿತಾಃ ಪರಸ್ಪರಂ ದ್ವೇಷಿಣಶ್ಚಾಭವಾಮಃ|
೩ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.
4 ಕಿನ್ತ್ವಸ್ಮಾಕಂ ತ್ರಾತುರೀಶ್ವರಸ್ಯ ಯಾ ದಯಾ ಮರ್ತ್ತ್ಯಾನಾಂ ಪ್ರತಿ ಚ ಯಾ ಪ್ರೀತಿಸ್ತಸ್ಯಾಃ ಪ್ರಾದುರ್ಭಾವೇ ಜಾತೇ
೪ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ,
5 ವಯಮ್ ಆತ್ಮಕೃತೇಭ್ಯೋ ಧರ್ಮ್ಮಕರ್ಮ್ಮಭ್ಯಸ್ತನ್ನಹಿ ಕಿನ್ತು ತಸ್ಯ ಕೃಪಾತಃ ಪುನರ್ಜನ್ಮರೂಪೇಣ ಪ್ರಕ್ಷಾಲನೇನ ಪ್ರವಿತ್ರಸ್ಯಾತ್ಮನೋ ನೂತನೀಕರಣೇನ ಚ ತಸ್ಮಾತ್ ಪರಿತ್ರಾಣಾಂ ಪ್ರಾಪ್ತಾಃ
೫ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ ನವೀಕರಣದ ಮೂಲಕವಾಗಿಯೂ ಆತನು ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು.
6 ಸ ಚಾಸ್ಮಾಕಂ ತ್ರಾತ್ರಾ ಯೀಶುಖ್ರೀಷ್ಟೇನಾಸ್ಮದುಪರಿ ತಮ್ ಆತ್ಮಾನಂ ಪ್ರಚುರತ್ವೇನ ವೃಷ್ಟವಾನ್|
೬ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ ಸುರಿಸಿದನು. (aiōnios )
7 ಇತ್ಥಂ ವಯಂ ತಸ್ಯಾನುಗ್ರಹೇಣ ಸಪುಣ್ಯೀಭೂಯ ಪ್ರತ್ಯಾಶಯಾನನ್ತಜೀವನಸ್ಯಾಧಿಕಾರಿಣೋ ಜಾತಾಃ| (aiōnios )
೭
8 ವಾಕ್ಯಮೇತದ್ ವಿಶ್ವಸನೀಯಮ್ ಅತೋ ಹೇತೋರೀಶ್ವರೇ ಯೇ ವಿಶ್ವಸಿತವನ್ತಸ್ತೇ ಯಥಾ ಸತ್ಕರ್ಮ್ಮಾಣ್ಯನುತಿಷ್ಠೇಯುಸ್ತಥಾ ತಾನ್ ದೃಢಮ್ ಆಜ್ಞಾಪಯೇತಿ ಮಮಾಭಿಮತಂ| ತಾನ್ಯೇವೋತ್ತಮಾನಿ ಮಾನವೇಭ್ಯಃ ಫಲದಾನಿ ಚ ಭವನ್ತಿ|
೮ಇದು ನಂಬತಕ್ಕ ಮಾತಾಗಿದೆ; ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಅದು ಉತ್ತಮವೂ, ಮನುಷ್ಯರಿಗೆ ಪ್ರಯೋಜನಕಾರಿಯೂ ಆಗಿವೆ.
9 ಮೂಢೇಭ್ಯಃ ಪ್ರಶ್ನವಂಶಾವಲಿವಿವಾದೇಭ್ಯೋ ವ್ಯವಸ್ಥಾಯಾ ವಿತಣ್ಡಾಭ್ಯಶ್ಚ ನಿವರ್ತ್ತಸ್ವ ಯತಸ್ತಾ ನಿಷ್ಫಲಾ ಅನರ್ಥಕಾಶ್ಚ ಭವನ್ತಿ|
೯ಆದರೆ ಬುದ್ಧಿಯಿಲ್ಲದ ತರ್ಕಗಳಿಂದಲೂ, ವಂಶಾವಳಿಗಳಿಂದಲೂ, ಜಗಳಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ.
10 ಯೋ ಜನೋ ಬಿಭಿತ್ಸುಸ್ತಮ್ ಏಕವಾರಂ ದ್ವಿರ್ವ್ವಾ ಪ್ರಬೋಧ್ಯ ದೂರೀಕುರು,
೧೦ಸಭೆಯಲ್ಲಿ ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟು ಬಿಡು;
11 ಯತಸ್ತಾದೃಶೋ ಜನೋ ವಿಪಥಗಾಮೀ ಪಾಪಿಷ್ಠ ಆತ್ಮದೋಷಕಶ್ಚ ಭವತೀತಿ ತ್ವಯಾ ಜ್ಞಾಯತಾಂ|
೧೧ಅಂಥವನು ಸನ್ಮಾರ್ಗದಿಂದ ದೂರವಾದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.
12 ಯದಾಹಮ್ ಆರ್ತ್ತಿಮಾಂ ತುಖಿಕಂ ವಾ ತವ ಸಮೀಪಂ ಪ್ರೇಷಯಿಷ್ಯಾಮಿ ತದಾ ತ್ವಂ ನೀಕಪಲೌ ಮಮ ಸಮೀಪಮ್ ಆಗನ್ತುಂ ಯತಸ್ವ ಯತಸ್ತತ್ರೈವಾಹಂ ಶೀತಕಾಲಂ ಯಾಪಯಿತುಂ ಮತಿಮ್ ಅಕಾರ್ಷಂ|
೧೨ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನಿಸು.
13 ವ್ಯವಸ್ಥಾಪಕಃ ಸೀನಾ ಆಪಲ್ಲುಶ್ಚೈತಯೋಃ ಕಸ್ಯಾಪ್ಯಭಾವೋ ಯನ್ನ ಭವೇತ್ ತದರ್ಥಂ ತೌ ಯತ್ನೇನ ತ್ವಯಾ ವಿಸೃಜ್ಯೇತಾಂ|
೧೩ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು; ಅವರಿಗೇನೂ ಕೊರತೆಯಾಗಬಾರದು.
14 ಅಪರಮ್ ಅಸ್ಮದೀಯಲೋಕಾ ಯನ್ನಿಷ್ಫಲಾ ನ ಭವೇಯುಸ್ತದರ್ಥಂ ಪ್ರಯೋಜನೀಯೋಪಕಾರಾಯಾ ಸತ್ಕರ್ಮ್ಮಾಣ್ಯನುಷ್ಠಾತುಂ ಶಿಕ್ಷನ್ತಾಂ|
೧೪ನಮ್ಮ ಜನರು ಸತ್ಕ್ರಿಯೆಹೀನರಾಗದಂತೆ ಬೋಧಿಸು. ತಮ್ಮ ಸಹಮಾನವರ ಕೊರತೆಗಳನ್ನು ಗುರುತಿಸಿ ನೆರವು ನೀಡಲಿ. ಪರೋಪಕಾರವನ್ನು ಕಲಿತುಕೊಂಡು ಸಾರ್ಥಕ ಜೀವನ ನಡೆಸಲಿ.
15 ಮಮ ಸಙ್ಗಿನಃ ಸವ್ವೇ ತ್ವಾಂ ನಮಸ್ಕುರ್ವ್ವತೇ| ಯೇ ವಿಶ್ವಾಸಾದ್ ಅಸ್ಮಾಸು ಪ್ರೀಯನ್ತೇ ತಾನ್ ನಮಸ್ಕುರು; ಸರ್ವ್ವೇಷು ಯುಷ್ಮಾಸ್ವನುಗ್ರಹೋ ಭೂಯಾತ್| ಆಮೇನ್|
೧೫ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆಯುಳ್ಳವರಾಗಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಸಲ್ಲಿಸು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.