< ಪ್ರಕಾಶಿತಂ 9 >

1 ತತಃ ಪರಂ ಸಪ್ತಮದೂತೇನ ತೂರ್ಯ್ಯಾಂ ವಾದಿತಾಯಾಂ ಗಗನಾತ್ ಪೃಥಿವ್ಯಾಂ ನಿಪತಿತ ಏಕಸ್ತಾರಕೋ ಮಯಾ ದೃಷ್ಟಃ, ತಸ್ಮೈ ರಸಾತಲಕೂಪಸ್ಯ ಕುಞ್ಜಿಕಾದಾಯಿ| (Abyssos g12)
ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು. (Abyssos g12)
2 ತೇನ ರಸಾತಲಕೂಪೇ ಮುಕ್ತೇ ಮಹಾಗ್ನಿಕುಣ್ಡಸ್ಯ ಧೂಮ ಇವ ಧೂಮಸ್ತಸ್ಮಾತ್ ಕೂಪಾದ್ ಉದ್ಗತಃ| ತಸ್ಮಾತ್ ಕೂಪಧೂಮಾತ್ ಸೂರ್ಯ್ಯಾಕಾಶೌ ತಿಮಿರಾವೃತೌ| (Abyssos g12)
ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. (Abyssos g12)
3 ತಸ್ಮಾದ್ ಧೂಮಾತ್ ಪತಙ್ಗೇಷು ಪೃಥಿವ್ಯಾಂ ನಿರ್ಗತೇಷು ನರಲೋಕಸ್ಥವೃಶ್ಚಿಕವತ್ ಬಲಂ ತೇಭ್ಯೋಽದಾಯಿ|
ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು.
4 ಅಪರಂ ಪೃಥಿವ್ಯಾಸ್ತೃಣಾನಿ ಹರಿದ್ವರ್ಣಶಾಕಾದಯೋ ವೃಕ್ಷಾಶ್ಚ ತೈ ರ್ನ ಸಿಂಹಿತವ್ಯಾಃ ಕಿನ್ತು ಯೇಷಾಂ ಭಾಲೇಷ್ವೀಶ್ವರಸ್ಯ ಮುದ್ರಾಯಾ ಅಙ್ಕೋ ನಾಸ್ತಿ ಕೇವಲಂ ತೇ ಮಾನವಾಸ್ತೈ ರ್ಹಿಂಸಿತವ್ಯಾ ಇದಂ ತ ಆದಿಷ್ಟಾಃ|
ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು.
5 ಪರನ್ತು ತೇಷಾಂ ಬಧಾಯ ನಹಿ ಕೇವಲಂ ಪಞ್ಚ ಮಾಸಾನ್ ಯಾವತ್ ಯಾತನಾದಾನಾಯ ತೇಭ್ಯಃ ಸಾಮರ್ಥ್ಯಮದಾಯಿ| ವೃಶ್ಚಿಕೇನ ದಷ್ಟಸ್ಯ ಮಾನವಸ್ಯ ಯಾದೃಶೀ ಯಾತನಾ ಜಾಯತೇ ತೈರಪಿ ತಾದೃಶೀ ಯಾತನಾ ಪ್ರದೀಯತೇ|
ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು.
6 ತಸ್ಮಿನ್ ಸಮಯೇ ಮಾನವಾ ಮೃತ್ಯುಂ ಮೃಗಯಿಷ್ಯನ್ತೇ ಕಿನ್ತು ಪ್ರಾಪ್ತುಂ ನ ಶಕ್ಷ್ಯನ್ತಿ, ತೇ ಪ್ರಾಣಾನ್ ತ್ಯಕ್ತುಮ್ ಅಭಿಲಷಿಷ್ಯನ್ತಿ ಕಿನ್ತು ಮೃತ್ಯುಸ್ತೇಭ್ಯೋ ದೂರಂ ಪಲಾಯಿಷ್ಯತೇ|
ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು.
7 ತೇಷಾಂ ಪತಙ್ಗಾನಾಮ್ ಆಕಾರೋ ಯುದ್ಧಾರ್ಥಂ ಸುಸಜ್ಜಿತಾನಾಮ್ ಅಶ್ವಾನಾಮ್ ಆಕಾರಸ್ಯ ತುಲ್ಯಃ, ತೇಷಾಂ ಶಿರಃಸು ಸುವರ್ಣಕಿರೀಟಾನೀವ ಕಿರೀಟಾನಿ ವಿದ್ಯನ್ತೇ, ಮುಖಮಣ್ಡಲಾನಿ ಚ ಮಾನುಷಿಕಮುಖತುಲ್ಯಾನಿ,
ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು.
8 ಕೇಶಾಶ್ಚ ಯೋಷಿತಾಂ ಕೇಶಾನಾಂ ಸದೃಶಾಃ, ದನ್ತಾಶ್ಚ ಸಿಂಹದನ್ತತುಲ್ಯಾಃ,
ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.
9 ಲೌಹಕವಚವತ್ ತೇಷಾಂ ಕವಚಾನಿ ಸನ್ತಿ, ತೇಷಾಂ ಪಕ್ಷಾಣಾಂ ಶಬ್ದೋ ರಣಾಯ ಧಾವತಾಮಶ್ವರಥಾನಾಂ ಸಮೂಹಸ್ಯ ಶಬ್ದತುಲ್ಯಃ|
ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು.
10 ವೃಶ್ಚಿಕಾನಾಮಿವ ತೇಷಾಂ ಲಾಙ್ಗೂಲಾನಿ ಸನ್ತಿ, ತೇಷು ಲಾಙ್ಗೂಲೇಷು ಕಣ್ಟಕಾನಿ ವಿದ್ಯನ್ತೇ, ಅಪರಂ ಪಞ್ಚ ಮಾಸಾನ್ ಯಾವತ್ ಮಾನವಾನಾಂ ಹಿಂಸನಾಯ ತೇ ಸಾಮರ್ಥ್ಯಪ್ರಾಪ್ತಾಃ|
೧೦ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು.
11 ತೇಷಾಂ ರಾಜಾ ಚ ರಸಾತಲಸ್ಯ ದೂತಸ್ತಸ್ಯ ನಾಮ ಇಬ್ರೀಯಭಾಷಯಾ ಅಬದ್ದೋನ್ ಯೂನಾನೀಯಭಾಷಯಾ ಚ ಅಪಲ್ಲುಯೋನ್ ಅರ್ಥತೋ ವಿನಾಶಕ ಇತಿ| (Abyssos g12)
೧೧ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು. (Abyssos g12)
12 ಪ್ರಥಮಃ ಸನ್ತಾಪೋ ಗತವಾನ್ ಪಶ್ಯ ಇತಃ ಪರಮಪಿ ದ್ವಾಭ್ಯಾಂ ಸನ್ತಾಪಾಭ್ಯಾಮ್ ಉಪಸ್ಥಾತವ್ಯಂ|
೧೨ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು.
13 ತತಃ ಪರಂ ಷಷ್ಠದೂತೇನ ತೂರ್ಯ್ಯಾಂ ವಾದಿತಾಯಾಮ್ ಈಶ್ವರಸ್ಯಾನ್ತಿಕೇ ಸ್ಥಿತಾಯಾಃ ಸುವರ್ಣವೇದ್ಯಾಶ್ಚತುಶ್ಚೂಡಾತಃ ಕಸ್ಯಚಿದ್ ರವೋ ಮಯಾಶ್ರಾವಿ|
೧೩ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.
14 ಸ ತೂರೀಧಾರಿಣಂ ಷಷ್ಠದೂತಮ್ ಅವದತ್, ಫರಾತಾಖ್ಯೇ ಮಹಾನದೇ ಯೇ ಚತ್ವಾರೋ ದೂತಾ ಬದ್ಧಾಃ ಸನ್ತಿ ತಾನ್ ಮೋಚಯ|
೧೪ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು.
15 ತತಸ್ತದ್ದಣ್ಡಸ್ಯ ತದ್ದಿನಸ್ಯ ತನ್ಮಾಸಸ್ಯ ತದ್ವತ್ಸರಸ್ಯ ಚ ಕೃತೇ ನಿರೂಪಿತಾಸ್ತೇ ಚತ್ವಾರೋ ದೂತಾ ಮಾನವಾನಾಂ ತೃತೀಯಾಂಶಸ್ಯ ಬಧಾರ್ಥಂ ಮೋಚಿತಾಃ|
೧೫ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು.
16 ಅಪರಮ್ ಅಶ್ವಾರೋಹಿಸೈನ್ಯಾನಾಂ ಸಂಖ್ಯಾ ಮಯಾಶ್ರಾವಿ, ತೇ ವಿಂಶತಿಕೋಟಯ ಆಸನ್|
೧೬ಕುದುರೆ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.
17 ಮಯಾ ಯೇ ಽಶ್ವಾ ಅಶ್ವಾರೋಹಿಣಶ್ಚ ದೃಷ್ಟಾಸ್ತ ಏತಾದೃಶಾಃ, ತೇಷಾಂ ವಹ್ನಿಸ್ವರೂಪಾಣಿ ನೀಲಪ್ರಸ್ತರಸ್ವರೂಪಾಣಿ ಗನ್ಧಕಸ್ವರೂಪಾಣಿ ಚ ವರ್ಮ್ಮಾಣ್ಯಾಸನ್, ವಾಜಿನಾಞ್ಚ ಸಿಂಹಮೂರ್ದ್ಧಸದೃಶಾ ಮೂರ್ದ್ಧಾನಃ, ತೇಷಾಂ ಮುಖೇಭ್ಯೋ ವಹ್ನಿಧೂಮಗನ್ಧಕಾ ನಿರ್ಗಚ್ಛನ್ತಿ|
೧೭ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು.
18 ಏತೈಸ್ತ್ರಿಭಿ ರ್ದಣ್ಡೈರರ್ಥತಸ್ತೇಷಾಂ ಮುಖೇಭ್ಯೋ ನಿರ್ಗಚ್ಛದ್ಭಿ ರ್ವಹ್ನಿಧೂಮಗನ್ಧಕೈ ರ್ಮಾನುಷಾಣಾಂ ತುತೀಯಾಂಶೋ ಽಘಾನಿ|
೧೮ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು.
19 ತೇಷಾಂ ವಾಜಿನಾಂ ಬಲಂ ಮುಖೇಷು ಲಾಙ್ಗೂಲೇಷು ಚ ಸ್ಥಿತಂ, ಯತಸ್ತೇಷಾಂ ಲಾಙ್ಗೂಲಾನಿ ಸರ್ಪಾಕಾರಾಣಿ ಮಸ್ತಕವಿಶಿಷ್ಟಾನಿ ಚ ತೈರೇವ ತೇ ಹಿಂಸನ್ತಿ|
೧೯ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು.
20 ಅಪರಮ್ ಅವಶಿಷ್ಟಾ ಯೇ ಮಾನವಾ ತೈ ರ್ದಣ್ಡೈ ರ್ನ ಹತಾಸ್ತೇ ಯಥಾ ದೃಷ್ಟಿಶ್ರವಣಗಮನಶಕ್ತಿಹೀನಾನ್ ಸ್ವರ್ಣರೌಪ್ಯಪಿತ್ತಲಪ್ರಸ್ತರಕಾಷ್ಠಮಯಾನ್ ವಿಗ್ರಹಾನ್ ಭೂತಾಂಶ್ಚ ನ ಪೂಜಯಿಷ್ಯನ್ತಿ ತಥಾ ಸ್ವಹಸ್ತಾನಾಂ ಕ್ರಿಯಾಭ್ಯಃ ಸ್ವಮನಾಂಸಿ ನ ಪರಾವರ್ತ್ತಿತವನ್ತಃ
೨೦ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ.
21 ಸ್ವಬಧಕುಹಕವ್ಯಭಿಚಾರಚೌರ್ಯ್ಯೋಭ್ಯೋ ಽಪಿ ಮನಾಂಸಿ ನ ಪರಾವರ್ತ್ತಿತವನ್ತಃ|
೨೧ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

< ಪ್ರಕಾಶಿತಂ 9 >