< ಪ್ರಕಾಶಿತಂ 15 >
1 ತತಃ ಪರಮ್ ಅಹಂ ಸ್ವರ್ಗೇ ಽಪರಮ್ ಏಕಮ್ ಅದ್ಭುತಂ ಮಹಾಚಿಹ್ನಂ ದೃಷ್ಟವಾನ್ ಅರ್ಥತೋ ಯೈ ರ್ದಣ್ಡೈರೀಶ್ವರಸ್ಯ ಕೋಪಃ ಸಮಾಪ್ತಿಂ ಗಮಿಷ್ಯತಿ ತಾನ್ ದಣ್ಡಾನ್ ಧಾರಯನ್ತಃ ಸಪ್ತ ದೂತಾ ಮಯಾ ದೃಷ್ಟಾಃ|
೧ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.
2 ವಹ್ನಿಮಿಶ್ರಿತಸ್ಯ ಕಾಚಮಯಸ್ಯ ಜಲಾಶಯಸ್ಯಾಕೃತಿರಪಿ ದೃಷ್ಟಾ ಯೇ ಚ ಪಶೋಸ್ತತ್ಪ್ರತಿಮಾಯಾಸ್ತನ್ನಾಮ್ನೋ ಽಙ್ಕಸ್ಯ ಚ ಪ್ರಭೂತವನ್ತಸ್ತೇ ತಸ್ಯ ಕಾಚಮಯಜಲಾಶಯಸ್ಯ ತೀರೇ ತಿಷ್ಠನ್ತ ಈಶ್ವರೀಯವೀಣಾ ಧಾರಯನ್ತಿ,
೨ನಾನು ನೋಡಲಾಗಿ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಬಳಿಯಲ್ಲಿ ನಿಂತಿದ್ದರು.
3 ಈಶ್ವರದಾಸಸ್ಯ ಮೂಸಸೋ ಗೀತಂ ಮೇಷಶಾವಕಸ್ಯ ಚ ಗೀತಂ ಗಾಯನ್ತೋ ವದನ್ತಿ, ಯಥಾ, ಸರ್ವ್ವಶಕ್ತಿವಿಶಿಷ್ಟಸ್ತ್ವಂ ಹೇ ಪ್ರಭೋ ಪರಮೇಶ್ವರ| ತ್ವದೀಯಸರ್ವ್ವಕರ್ಮ್ಮಾಣಿ ಮಹಾನ್ತಿ ಚಾದ್ಭುತಾನಿ ಚ| ಸರ್ವ್ವಪುಣ್ಯವತಾಂ ರಾಜನ್ ಮಾರ್ಗಾ ನ್ಯಾಯ್ಯಾ ಋತಾಶ್ಚ ತೇ|
೩ಅವರು ದೇವರ ದಾಸನಾದ ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ, “ಕರ್ತನಾದ ದೇವರೇ ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ. ಸರ್ವಜನಾಂಗಗಳ ಅರಸನೇ. ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4 ಹೇ ಪ್ರಭೋ ನಾಮಧೇಯಾತ್ತೇ ಕೋ ನ ಭೀತಿಂ ಗಮಿಷ್ಯತಿ| ಕೋ ವಾ ತ್ವದೀಯನಾಮ್ನಶ್ಚ ಪ್ರಶಂಸಾಂ ನ ಕರಿಷ್ಯತಿ| ಕೇವಲಸ್ತ್ವಂ ಪವಿತ್ರೋ ಽಸಿ ಸರ್ವ್ವಜಾತೀಯಮಾನವಾಃ| ತ್ವಾಮೇವಾಭಿಪ್ರಣಂಸ್ಯನ್ತಿ ಸಮಾಗತ್ಯ ತ್ವದನ್ತಿಕಂ| ಯಸ್ಮಾತ್ತವ ವಿಚಾರಾಜ್ಞಾಃ ಪ್ರಾದುರ್ಭಾವಂ ಗತಾಃ ಕಿಲ||
೪ಕರ್ತನೇ, ನಿನಗೆ ಭಯಪಡದವರು ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ? ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು ನಿನ್ನನ್ನು ಆರಾಧಿಸುವರು.”
5 ತದನನ್ತರಂ ಮಯಿ ನಿರೀಕ್ಷಮಾಣೇ ಸತಿ ಸ್ವರ್ಗೇ ಸಾಕ್ಷ್ಯಾವಾಸಸ್ಯ ಮನ್ದಿರಸ್ಯ ದ್ವಾರಂ ಮುಕ್ತಂ|
೫ಇದಾದ ನಂತರ ನಾನು ನೋಡಿದಾಗ ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು.
6 ಯೇ ಚ ಸಪ್ತ ದೂತಾಃ ಸಪ್ತ ದಣ್ಡಾನ್ ಧಾರಯನ್ತಿ ತೇ ತಸ್ಮಾತ್ ಮನ್ದಿರಾತ್ ನಿರಗಚ್ಛನ್| ತೇಷಾಂ ಪರಿಚ್ಛದಾ ನಿರ್ಮ್ಮಲಶೃಭ್ರವರ್ಣವಸ್ತ್ರನಿರ್ಮ್ಮಿತಾ ವಕ್ಷಾಂಸಿ ಚ ಸುವರ್ಣಶೃಙ್ಖಲೈ ರ್ವೇಷ್ಟಿತಾನ್ಯಾಸನ್|
೬ಆ ಆಲಯದೊಳಗಿಂದ ಏಳು ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
7 ಅಪರಂ ಚತುರ್ಣಾಂ ಪ್ರಾಣಿನಾಮ್ ಏಕಸ್ತೇಭ್ಯಃ ಸಪ್ತದೂತೇಭ್ಯಃ ಸಪ್ತಸುವರ್ಣಕಂಸಾನ್ ಅದದಾತ್| (aiōn )
೭ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು. (aiōn )
8 ಅನನ್ತರಮ್ ಈಶ್ವರಸ್ಯ ತೇಜಃಪ್ರಭಾವಕಾರಣಾತ್ ಮನ್ದಿರಂ ಧೂಮೇನ ಪರಿಪೂರ್ಣಂ ತಸ್ಮಾತ್ ತೈಃ ಸಪ್ತದೂತೈಃ ಸಪ್ತದಣ್ಡಾನಾಂ ಸಮಾಪ್ತಿಂ ಯಾವತ್ ಮನ್ದಿರಂ ಕೇನಾಪಿ ಪ್ರವೇಷ್ಟುಂ ನಾಶಕ್ಯತ|
೮ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.