< ಇಬ್ರಿಣಃ 6 >
1 ವಯಂ ಮೃತಿಜನಕಕರ್ಮ್ಮಭ್ಯೋ ಮನಃಪರಾವರ್ತ್ತನಮ್ ಈಶ್ವರೇ ವಿಶ್ವಾಸೋ ಮಜ್ಜನಶಿಕ್ಷಣಂ ಹಸ್ತಾರ್ಪಣಂ ಮೃತಲೋಕಾನಾಮ್ ಉತ್ಥಾನಮ್
೧ಆದುದರಿಂದ ಕ್ರಿಸ್ತನ ವಿಷಯವಾದ ಪ್ರಾಥಮಿಕ ಉಪದೇಶವನ್ನು ಬಿಟ್ಟು, ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ, ದೇವರಲ್ಲಿ ನಂಬಿಕೆಯೂ, ದೀಕ್ಷಾಸ್ನಾನಗಳ ಬೋಧನೆಯೂ, ಹಸ್ತಾರ್ಪಣೆಯೂ, ಸತ್ತವರಿಗೆ ಪುನರುತ್ಥಾನವೂ ಮತ್ತು ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದರ ಕುರಿತು ಪದೇಪದೇ ಅಸ್ತಿವಾರವನ್ನೆ ಹಾಕುತಿರದೆ ನಾವು ಪರಿಪಕ್ವತೆಯೆಡೆಗೆ ಸಾಗೋಣ. (aiōnios )
2 ಅನನ್ತಕಾಲಸ್ಥಾಯಿವಿಚಾರಾಜ್ಞಾ ಚೈತೈಃ ಪುನರ್ಭಿತ್ತಿಮೂಲಂ ನ ಸ್ಥಾಪಯನ್ತಃ ಖ್ರೀಷ್ಟವಿಷಯಕಂ ಪ್ರಥಮೋಪದೇಶಂ ಪಶ್ಚಾತ್ಕೃತ್ಯ ಸಿದ್ಧಿಂ ಯಾವದ್ ಅಗ್ರಸರಾ ಭವಾಮ| (aiōnios )
೨
3 ಈಶ್ವರಸ್ಯಾನುಮತ್ಯಾ ಚ ತದ್ ಅಸ್ಮಾಭಿಃ ಕಾರಿಷ್ಯತೇ|
೩ದೇವರು ಅನುಮತಿಸುವುದಾದರೆ ನಾವು ಇವುಗಳನ್ನು ಮಾಡುವೆವು.
4 ಯ ಏಕಕೃತ್ವೋ ದೀಪ್ತಿಮಯಾ ಭೂತ್ವಾ ಸ್ವರ್ಗೀಯವರರಸಮ್ ಆಸ್ವದಿತವನ್ತಃ ಪವಿತ್ರಸ್ಯಾತ್ಮನೋಽಂಶಿನೋ ಜಾತಾ
೪ಒಂದು ಸಾರಿ ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ ದಾನವನ್ನು ಅನುಭವಿಸಿದವರು, ಪವಿತ್ರಾತ್ಮನಲ್ಲಿ ಪಾಲುಗಾರರಾದವರು,
5 ಈಶ್ವರಸ್ಯ ಸುವಾಕ್ಯಂ ಭಾವಿಕಾಲಸ್ಯ ಶಕ್ತಿಞ್ಚಾಸ್ವದಿತವನ್ತಶ್ಚ ತೇ ಭ್ರಷ್ಟ್ವಾ ಯದಿ (aiōn )
೫ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ, (aiōn )
6 ಸ್ವಮನೋಭಿರೀಶ್ವರಸ್ಯ ಪುತ್ರಂ ಪುನಃ ಕ್ರುಶೇ ಘ್ನನ್ತಿ ಲಜ್ಜಾಸ್ಪದಂ ಕುರ್ವ್ವತೇ ಚ ತರ್ಹಿ ಮನಃಪರಾವರ್ತ್ತನಾಯ ಪುನಸ್ತಾನ್ ನವೀನೀಕರ್ತ್ತುಂ ಕೋಽಪಿ ನ ಶಕ್ನೋತಿ|
೬ಅವರಲ್ಲಿ ತಿರುಗಿ ಮಾನಸಾಂತರವನ್ನು ಹುಟ್ಟಿಸುವುದು ಅಸಾಧ್ಯ, ಯಾಕೆಂದರೆ ಅವರು ತಾವಾಗಿಯೇ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗವಾಗಿ ಅವಮಾನಪಡಿಸುವವರೂ ಆಗಿರುತ್ತಾರೆ.
7 ಯತೋ ಯಾ ಭೂಮಿಃ ಸ್ವೋಪರಿ ಭೂಯಃ ಪತಿತಂ ವೃಷ್ಟಿಂ ಪಿವತೀ ತತ್ಫಲಾಧಿಕಾರಿಣಾಂ ನಿಮಿತ್ತಮ್ ಇಷ್ಟಾನಿ ಶಾಕಾದೀನ್ಯುತ್ಪಾದಯತಿ ಸಾ ಈಶ್ವರಾದ್ ಆಶಿಷಂ ಪ್ರಾಪ್ತಾ|
೭ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
8 ಕಿನ್ತು ಯಾ ಭೂಮಿ ರ್ಗೋಕ್ಷುರಕಣ್ಟಕವೃಕ್ಷಾನ್ ಉತ್ಪಾದಯತಿ ಸಾ ನ ಗ್ರಾಹ್ಯಾ ಶಾಪಾರ್ಹಾ ಚ ಶೇಷೇ ತಸ್ಯಾ ದಾಹೋ ಭವಿಷ್ಯತಿ|
೮ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. ಕೊನೆಗದು ಸುಡಲ್ಪಡುತ್ತದೆ.
9 ಹೇ ಪ್ರಿಯತಮಾಃ, ಯದ್ಯಪಿ ವಯಮ್ ಏತಾದೃಶಂ ವಾಕ್ಯಂ ಭಾಷಾಮಹೇ ತಥಾಪಿ ಯೂಯಂ ತತ ಉತ್ಕೃಷ್ಟಾಃ ಪರಿತ್ರಾಣಪಥಸ್ಯ ಪಥಿಕಾಶ್ಚಾಧ್ವ ಇತಿ ವಿಶ್ವಸಾಮಃ|
೯ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮರಾಗಿದ್ದೀರೆಂದು ನಂಬಿದ್ದೇವೆ.
10 ಯತೋ ಯುಷ್ಮಾಭಿಃ ಪವಿತ್ರಲೋಕಾನಾಂ ಯ ಉಪಕಾರೋ ಽಕಾರಿ ಕ್ರಿಯತೇ ಚ ತೇನೇಶ್ವರಸ್ಯ ನಾಮ್ನೇ ಪ್ರಕಾಶಿತಂ ಪ್ರೇಮ ಶ್ರಮಞ್ಚ ವಿಸ್ಮರ್ತ್ತುಮ್ ಈಶ್ವರೋಽನ್ಯಾಯಕಾರೀ ನ ಭವತಿ|
೧೦ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ.
11 ಅಪರಂ ಯುಷ್ಮಾಕಮ್ ಏಕೈಕೋ ಜನೋ ಯತ್ ಪ್ರತ್ಯಾಶಾಪೂರಣಾರ್ಥಂ ಶೇಷಂ ಯಾವತ್ ತಮೇವ ಯತ್ನಂ ಪ್ರಕಾಶಯೇದಿತ್ಯಹಮ್ ಇಚ್ಛಾಮಿ|
೧೧ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ.
12 ಅತಃ ಶಿಥಿಲಾ ನ ಭವತ ಕಿನ್ತು ಯೇ ವಿಶ್ವಾಸೇನ ಸಹಿಷ್ಣುತಯಾ ಚ ಪ್ರತಿಜ್ಞಾನಾಂ ಫಲಾಧಿಕಾರಿಣೋ ಜಾತಾಸ್ತೇಷಾಮ್ ಅನುಗಾಮಿನೋ ಭವತ|
೧೨ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.
13 ಈಶ್ವರೋ ಯದಾ ಇಬ್ರಾಹೀಮೇ ಪ್ರತ್ಯಜಾನಾತ್ ತದಾ ಶ್ರೇಷ್ಠಸ್ಯ ಕಸ್ಯಾಪ್ಯಪರಸ್ಯ ನಾಮ್ನಾ ಶಪಥಂ ಕರ್ತ್ತುಂ ನಾಶಕ್ನೋತ್, ಅತೋ ಹೇತೋಃ ಸ್ವನಾಮ್ನಾ ಶಪಥಂ ಕೃತ್ವಾ ತೇನೋಕ್ತಂ ಯಥಾ,
೧೩ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ ತನ್ನ ಮೇಲೆ ಆಣೆಯಿಟ್ಟು,
14 "ಸತ್ಯಮ್ ಅಹಂ ತ್ವಾಮ್ ಆಶಿಷಂ ಗದಿಷ್ಯಾಮಿ ತವಾನ್ವಯಂ ವರ್ದ್ಧಯಿಷ್ಯಾಮಿ ಚ| "
೧೪“ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ.
15 ಅನೇನ ಪ್ರಕಾರೇಣ ಸ ಸಹಿಷ್ಣುತಾಂ ವಿಧಾಯ ತಸ್ಯಾಃ ಪ್ರತ್ಯಾಶಾಯಾಃ ಫಲಂ ಲಬ್ಧವಾನ್|
೧೫ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು.
16 ಅಥ ಮಾನವಾಃ ಶ್ರೇಷ್ಠಸ್ಯ ಕಸ್ಯಚಿತ್ ನಾಮ್ನಾ ಶಪನ್ತೇ, ಶಪಥಶ್ಚ ಪ್ರಮಾಣಾರ್ಥಂ ತೇಷಾಂ ಸರ್ವ್ವವಿವಾದಾನ್ತಕೋ ಭವತಿ|
೧೬ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು.
17 ಇತ್ಯಸ್ಮಿನ್ ಈಶ್ವರಃ ಪ್ರತಿಜ್ಞಾಯಾಃ ಫಲಾಧಿಕಾರಿಣಃ ಸ್ವೀಯಮನ್ತ್ರಣಾಯಾ ಅಮೋಘತಾಂ ಬಾಹುಲ್ಯತೋ ದರ್ಶಯಿತುಮಿಚ್ಛನ್ ಶಪಥೇನ ಸ್ವಪ್ರತಿಜ್ಞಾಂ ಸ್ಥಿರೀಕೃತವಾನ್|
೧೭ಹಾಗೆಯೇ ದೇವರು ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು.
18 ಅತಏವ ಯಸ್ಮಿನ್ ಅನೃತಕಥನಮ್ ಈಶ್ವರಸ್ಯ ನ ಸಾಧ್ಯಂ ತಾದೃಶೇನಾಚಲೇನ ವಿಷಯದ್ವಯೇನ ಸಮ್ಮುಖಸ್ಥರಕ್ಷಾಸ್ಥಲಸ್ಯ ಪ್ರಾಪ್ತಯೇ ಪಲಾಯಿತಾನಾಮ್ ಅಸ್ಮಾಕಂ ಸುದೃಢಾ ಸಾನ್ತ್ವನಾ ಜಾಯತೇ|
೧೮ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು.
19 ಸಾ ಪ್ರತ್ಯಾಶಾಸ್ಮಾಕಂ ಮನೋನೌಕಾಯಾ ಅಚಲೋ ಲಙ್ಗರೋ ಭೂತ್ವಾ ವಿಚ್ಛೇದಕವಸ್ತ್ರಸ್ಯಾಭ್ಯನ್ತರಂ ಪ್ರವಿಷ್ಟಾ|
೧೯ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ.
20 ತತ್ರೈವಾಸ್ಮಾಕಮ್ ಅಗ್ರಸರೋ ಯೀಶುಃ ಪ್ರವಿಶ್ಯ ಮಲ್ಕೀಷೇದಕಃ ಶ್ರೇಣ್ಯಾಂ ನಿತ್ಯಸ್ಥಾಯೀ ಯಾಜಕೋಽಭವತ್| (aiōn )
೨೦ಅಲ್ಲಿಗೆ ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ. (aiōn )