< ಇಫಿಷಿಣಃ 1 >

1 ಈಶ್ವರಸ್ಯೇಚ್ಛಯಾ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲ ಇಫಿಷನಗರಸ್ಥಾನ್ ಪವಿತ್ರಾನ್ ಖ್ರೀಷ್ಟಯೀಶೌ ವಿಶ್ವಾಸಿನೋ ಲೋಕಾನ್ ಪ್ರತಿ ಪತ್ರಂ ಲಿಖತಿ|
ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ,
2 ಅಸ್ಮಾಕಂ ತಾತಸ್ಯೇಶ್ವರಸ್ಯ ಪ್ರಭೋ ರ್ಯೀಶುಖ್ರೀಷ್ಟಸ್ಯ ಚಾನುಗ್ರಹಃ ಶಾನ್ತಿಶ್ಚ ಯುಷ್ಮಾಸು ವರ್ತ್ತತಾಂ|
ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
3 ಅಸ್ಮಾಕಂ ಪ್ರಭೋ ರ್ಯೀಶೋಃ ಖ್ರೀಷ್ಟಸ್ಯ ತಾತ ಈಶ್ವರೋ ಧನ್ಯೋ ಭವತು; ಯತಃ ಸ ಖ್ರೀಷ್ಟೇನಾಸ್ಮಭ್ಯಂ ಸರ್ವ್ವಮ್ ಆಧ್ಯಾತ್ಮಿಕಂ ಸ್ವರ್ಗೀಯವರಂ ದತ್ತವಾನ್|
ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
4 ವಯಂ ಯತ್ ತಸ್ಯ ಸಮಕ್ಷಂ ಪ್ರೇಮ್ನಾ ಪವಿತ್ರಾ ನಿಷ್ಕಲಙ್ಕಾಶ್ಚ ಭವಾಮಸ್ತದರ್ಥಂ ಸ ಜಗತಃ ಸೃಷ್ಟೇ ಪೂರ್ವ್ವಂ ತೇನಾಸ್ಮಾನ್ ಅಭಿರೋಚಿತವಾನ್, ನಿಜಾಭಿಲಷಿತಾನುರೋಧಾಚ್ಚ
ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು.
5 ಯೀಶುನಾ ಖ್ರೀಷ್ಟೇನ ಸ್ವಸ್ಯ ನಿಮಿತ್ತಂ ಪುತ್ರತ್ವಪದೇಽಸ್ಮಾನ್ ಸ್ವಕೀಯಾನುಗ್ರಹಸ್ಯ ಮಹತ್ತ್ವಸ್ಯ ಪ್ರಶಂಸಾರ್ಥಂ ಪೂರ್ವ್ವಂ ನಿಯುಕ್ತವಾನ್|
ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ ಮೊದಲೇ ಸಂಕಲ್ಪಮಾಡಿದ್ದನು.
6 ತಸ್ಮಾದ್ ಅನುಗ್ರಹಾತ್ ಸ ಯೇನ ಪ್ರಿಯತಮೇನ ಪುತ್ರೇಣಾಸ್ಮಾನ್ ಅನುಗೃಹೀತವಾನ್,
ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.
7 ವಯಂ ತಸ್ಯ ಶೋಣಿತೇನ ಮುಕ್ತಿಮ್ ಅರ್ಥತಃ ಪಾಪಕ್ಷಮಾಂ ಲಬ್ಧವನ್ತಃ|
ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು.
8 ತಸ್ಯ ಯ ಈದೃಶೋಽನುಗ್ರಹನಿಧಿಸ್ತಸ್ಮಾತ್ ಸೋಽಸ್ಮಭ್ಯಂ ಸರ್ವ್ವವಿಧಂ ಜ್ಞಾನಂ ಬುದ್ಧಿಞ್ಚ ಬಾಹುಲ್ಯರೂಪೇಣ ವಿತರಿತವಾನ್|
ಈ ಕೃಪೆಯನ್ನು ಆತನು ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ.
9 ಸ್ವರ್ಗಪೃಥಿವ್ಯೋ ರ್ಯದ್ಯದ್ ವಿದ್ಯತೇ ತತ್ಸರ್ವ್ವಂ ಸ ಖ್ರೀಷ್ಟೇ ಸಂಗ್ರಹೀಷ್ಯತೀತಿ ಹಿತೈಷಿಣಾ
ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ.
10 ತೇನ ಕೃತೋ ಯೋ ಮನೋರಥಃ ಸಮ್ಪೂರ್ಣತಾಂ ಗತವತ್ಸು ಸಮಯೇಷು ಸಾಧಯಿತವ್ಯಸ್ತಮಧಿ ಸ ಸ್ವಕೀಯಾಭಿಲಾಷಸ್ಯ ನಿಗೂಢಂ ಭಾವಮ್ ಅಸ್ಮಾನ್ ಜ್ಞಾಪಿತವಾನ್|
೧೦ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
11 ಪೂರ್ವ್ವಂ ಖ್ರೀಷ್ಟೇ ವಿಶ್ವಾಸಿನೋ ಯೇ ವಯಮ್ ಅಸ್ಮತ್ತೋ ಯತ್ ತಸ್ಯ ಮಹಿಮ್ನಃ ಪ್ರಶಂಸಾ ಜಾಯತೇ,
೧೧ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು.
12 ತದರ್ಥಂ ಯಃ ಸ್ವಕೀಯೇಚ್ಛಾಯಾಃ ಮನ್ತ್ರಣಾತಃ ಸರ್ವ್ವಾಣಿ ಸಾಧಯತಿ ತಸ್ಯ ಮನೋರಥಾದ್ ವಯಂ ಖ್ರೀಷ್ಟೇನ ಪೂರ್ವ್ವಂ ನಿರೂಪಿತಾಃ ಸನ್ತೋಽಧಿಕಾರಿಣೋ ಜಾತಾಃ|
೧೨ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
13 ಯೂಯಮಪಿ ಸತ್ಯಂ ವಾಕ್ಯಮ್ ಅರ್ಥತೋ ಯುಷ್ಮತ್ಪರಿತ್ರಾಣಸ್ಯ ಸುಸಂವಾದಂ ನಿಶಮ್ಯ ತಸ್ಮಿನ್ನೇವ ಖ್ರೀಷ್ಟೇ ವಿಶ್ವಸಿತವನ್ತಃ ಪ್ರತಿಜ್ಞಾತೇನ ಪವಿತ್ರೇಣಾತ್ಮನಾ ಮುದ್ರಯೇವಾಙ್ಕಿತಾಶ್ಚ|
೧೩ನೀವು ಸಹ ನಿಮ್ಮ ರಕ್ಷಣಾ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ.
14 ಯತಸ್ತಸ್ಯ ಮಹಿಮ್ನಃ ಪ್ರಕಾಶಾಯ ತೇನ ಕ್ರೀತಾನಾಂ ಲೋಕಾನಾಂ ಮುಕ್ತಿ ರ್ಯಾವನ್ನ ಭವಿಷ್ಯತಿ ತಾವತ್ ಸ ಆತ್ಮಾಸ್ಮಾಕಮ್ ಅಧಿಕಾರಿತ್ವಸ್ಯ ಸತ್ಯಙ್ಕಾರಸ್ಯ ಪಣಸ್ವರೂಪೋ ಭವತಿ|
೧೪ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ ಪವಿತ್ರಾತ್ಮನು ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
15 ಪ್ರಭೌ ಯೀಶೌ ಯುಷ್ಮಾಕಂ ವಿಶ್ವಾಸಃ ಸರ್ವ್ವೇಷು ಪವಿತ್ರಲೋಕೇಷು ಪ್ರೇಮ ಚಾಸ್ತ ಇತಿ ವಾರ್ತ್ತಾಂ ಶ್ರುತ್ವಾಹಮಪಿ
೧೫ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ,
16 ಯುಷ್ಮಾನಧಿ ನಿರನ್ತರಮ್ ಈಶ್ವರಂ ಧನ್ಯಂ ವದನ್ ಪ್ರಾರ್ಥನಾಸಮಯೇ ಚ ಯುಷ್ಮಾನ್ ಸ್ಮರನ್ ವರಮಿಮಂ ಯಾಚಾಮಿ|
೧೬ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ.
17 ಅಸ್ಮಾಕಂ ಪ್ರಭೋ ರ್ಯೀಶುಖ್ರೀಷ್ಟಸ್ಯ ತಾತೋ ಯಃ ಪ್ರಭಾವಾಕರ ಈಶ್ವರಃ ಸ ಸ್ವಕೀಯತತ್ತ್ವಜ್ಞಾನಾಯ ಯುಷ್ಮಭ್ಯಂ ಜ್ಞಾನಜನಕಮ್ ಪ್ರಕಾಶಿತವಾಕ್ಯಬೋಧಕಞ್ಚಾತ್ಮಾನಂ ದೇಯಾತ್|
೧೭ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ.
18 ಯುಷ್ಮಾಕಂ ಜ್ಞಾನಚಕ್ಷೂಂಷಿ ಚ ದೀಪ್ತಿಯುಕ್ತಾನಿ ಕೃತ್ವಾ ತಸ್ಯಾಹ್ವಾನಂ ಕೀದೃಶ್ಯಾ ಪ್ರತ್ಯಾಶಯಾ ಸಮ್ಬಲಿತಂ ಪವಿತ್ರಲೋಕಾನಾಂ ಮಧ್ಯೇ ತೇನ ದತ್ತೋಽಧಿಕಾರಃ ಕೀದೃಶಃ ಪ್ರಭಾವನಿಧಿ ರ್ವಿಶ್ವಾಸಿಷು ಚಾಸ್ಮಾಸು ಪ್ರಕಾಶಮಾನಸ್ಯ
೧೮ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ,
19 ತದೀಯಮಹಾಪರಾಕ್ರಮಸ್ಯ ಮಹತ್ವಂ ಕೀದೃಗ್ ಅನುಪಮಂ ತತ್ ಸರ್ವ್ವಂ ಯುಷ್ಮಾನ್ ಜ್ಞಾಪಯತು|
೧೯ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ.
20 ಯತಃ ಸ ಯಸ್ಯಾಃ ಶಕ್ತೇಃ ಪ್ರಬಲತಾಂ ಖ್ರೀಷ್ಟೇ ಪ್ರಕಾಶಯನ್ ಮೃತಗಣಮಧ್ಯಾತ್ ತಮ್ ಉತ್ಥಾಪಿತವಾನ್,
೨೦ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ
21 ಅಧಿಪತಿತ್ವಪದಂ ಶಾಸನಪದಂ ಪರಾಕ್ರಮೋ ರಾಜತ್ವಞ್ಚೇತಿನಾಮಾನಿ ಯಾವನ್ತಿ ಪದಾನೀಹ ಲೋಕೇ ಪರಲೋಕೇ ಚ ವಿದ್ಯನ್ತೇ ತೇಷಾಂ ಸರ್ವ್ವೇಷಾಮ್ ಊರ್ದ್ಧ್ವೇ ಸ್ವರ್ಗೇ ನಿಜದಕ್ಷಿಣಪಾರ್ಶ್ವೇ ತಮ್ ಉಪವೇಶಿತವಾನ್, (aiōn g165)
೨೧ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. (aiōn g165)
22 ಸರ್ವ್ವಾಣಿ ತಸ್ಯ ಚರಣಯೋರಧೋ ನಿಹಿತವಾನ್ ಯಾ ಸಮಿತಿಸ್ತಸ್ಯ ಶರೀರಂ ಸರ್ವ್ವತ್ರ ಸರ್ವ್ವೇಷಾಂ ಪೂರಯಿತುಃ ಪೂರಕಞ್ಚ ಭವತಿ ತಂ ತಸ್ಯಾ ಮೂರ್ದ್ಧಾನಂ ಕೃತ್ವಾ
೨೨ಇದಲ್ಲದೆ ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು.
23 ಸರ್ವ್ವೇಷಾಮ್ ಉಪರ್ಯ್ಯುಪರಿ ನಿಯುಕ್ತವಾಂಶ್ಚ ಸೈವ ಶಕ್ತಿರಸ್ಮಾಸ್ವಪಿ ತೇನ ಪ್ರಕಾಶ್ಯತೇ|
೨೩ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ.

< ಇಫಿಷಿಣಃ 1 >