< ಪ್ರೇರಿತಾಃ 20 >
1 ಇತ್ಥಂ ಕಲಹೇ ನಿವೃತ್ತೇ ಸತಿ ಪೌಲಃ ಶಿಷ್ಯಗಣಮ್ ಆಹೂಯ ವಿಸರ್ಜನಂ ಪ್ರಾಪ್ಯ ಮಾಕಿದನಿಯಾದೇಶಂ ಪ್ರಸ್ಥಿತವಾನ್|
೧ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಜೊತೆಗೆ ಕರೆಯಿಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು.
2 ತೇನ ಸ್ಥಾನೇನ ಗಚ್ಛನ್ ತದ್ದೇಶೀಯಾನ್ ಶಿಷ್ಯಾನ್ ಬಹೂಪದಿಶ್ಯ ಯೂನಾನೀಯದೇಶಮ್ ಉಪಸ್ಥಿತವಾನ್|
೨ಆ ಸೀಮೆಯಲ್ಲಿ ಸಂಚಾರಮಾಡಿ ಅಲ್ಲಿಯವರನ್ನು ಅನೇಕ ಸಂದೇಶಗಳಿಂದ ಧೈರ್ಯಪಡಿಸಿ ಗ್ರೀಸ್ ದೇಶಕ್ಕೆ ಬಂದನು.
3 ತತ್ರ ಮಾಸತ್ರಯಂ ಸ್ಥಿತ್ವಾ ತಸ್ಮಾತ್ ಸುರಿಯಾದೇಶಂ ಯಾತುಮ್ ಉದ್ಯತಃ, ಕಿನ್ತು ಯಿಹೂದೀಯಾಸ್ತಂ ಹನ್ತುಂ ಗುಪ್ತಾ ಅತಿಷ್ಠನ್ ತಸ್ಮಾತ್ ಸ ಪುನರಪಿ ಮಾಕಿದನಿಯಾಮಾರ್ಗೇಣ ಪ್ರತ್ಯಾಗನ್ತುಂ ಮತಿಂ ಕೃತವಾನ್|
೩ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು.
4 ಬಿರಯಾನಗರೀಯಸೋಪಾತ್ರಃ ಥಿಷಲನೀಕೀಯಾರಿಸ್ತಾರ್ಖಸಿಕುನ್ದೌ ದರ್ಬ್ಬೋನಗರೀಯಗಾಯತೀಮಥಿಯೌ ಆಶಿಯಾದೇಶೀಯತುಖಿಕತ್ರಫಿಮೌ ಚ ತೇನ ಸಾರ್ದ್ಧಂ ಆಶಿಯಾದೇಶಂ ಯಾವದ್ ಗತವನ್ತಃ|
೪ಪುರ್ರನ ಮಗನಾದ ಬೆರೋಯ ಪಟ್ಟಣದ ಸೋಪತ್ರನೂ, ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ, ಸೆಕುಂದನೂ ದೆರ್ಬೆಪಟ್ಟಣದ ಗಾಯನೂ, ತಿಮೊಥೆಯನೂ, ಆಸ್ಯಸೀಮೆಯವರಲ್ಲಿ ತುಖಿಕನೂ, ತ್ರೊಫಿಮನೂ, ಆಸ್ಯಸೀಮೆಯ ವರೆಗೂ ಅವನ ಜೊತೆಯಲ್ಲಿ ಹೋದರು.
5 ಏತೇ ಸರ್ವ್ವೇ ಽಗ್ರಸರಾಃ ಸನ್ತೋ ಽಸ್ಮಾನ್ ಅಪೇಕ್ಷ್ಯ ತ್ರೋಯಾನಗರೇ ಸ್ಥಿತವನ್ತಃ|
೫ಅವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾಯುತ್ತಿದ್ದರು
6 ಕಿಣ್ವಶೂನ್ಯಪೂಪೋತ್ಸವದಿನೇ ಚ ಗತೇ ಸತಿ ವಯಂ ಫಿಲಿಪೀನಗರಾತ್ ತೋಯಪಥೇನ ಗತ್ವಾ ಪಞ್ಚಭಿ ರ್ದಿನೈಸ್ತ್ರೋಯಾನಗರಮ್ ಉಪಸ್ಥಾಯ ತತ್ರ ಸಪ್ತದಿನಾನ್ಯವಾತಿಷ್ಠಾಮ|
೬ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿನಗಳಲ್ಲಿ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿನಗಳ ಕಾಲ ತಂಗಿದ್ದೆವು.
7 ಸಪ್ತಾಹಸ್ಯ ಪ್ರಥಮದಿನೇ ಪೂಪಾನ್ ಭಂಕ್ತು ಶಿಷ್ಯೇಷು ಮಿಲಿತೇಷು ಪೌಲಃ ಪರದಿನೇ ತಸ್ಮಾತ್ ಪ್ರಸ್ಥಾತುಮ್ ಉದ್ಯತಃ ಸನ್ ತದಹ್ನಿ ಪ್ರಾಯೇಣ ಕ್ಷಪಾಯಾ ಯಾಮದ್ವಯಂ ಯಾವತ್ ಶಿಷ್ಯೇಭ್ಯೋ ಧರ್ಮ್ಮಕಥಾಮ್ ಅಕಥಯತ್|
೭ವಾರದ ಮೊದಲನೆಯ ದಿನದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಸೇರಿಬಂದಾಗ ಪೌಲನು ಅಲ್ಲಿ ನೆರೆದಂತಹ ವಿಶ್ವಾಸಿಗಳಿಗೆ ಬೋಧನೆಮಾಡಿದನು. ಮರುದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಬೋಧಿಸುತ್ತಾ ಮಧ್ಯರಾತ್ರಿಯವರೆಗೂ ಉಪನ್ಯಾಸವನ್ನು ನೀಡಿದನು.
8 ಉಪರಿಸ್ಥೇ ಯಸ್ಮಿನ್ ಪ್ರಕೋಷ್ಠೇ ಸಭಾಂ ಕೃತ್ವಾಸನ್ ತತ್ರ ಬಹವಃ ಪ್ರದೀಪಾಃ ಪ್ರಾಜ್ವಲನ್|
೮ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.
9 ಉತುಖನಾಮಾ ಕಶ್ಚನ ಯುವಾ ಚ ವಾತಾಯನ ಉಪವಿಶನ್ ಘೋರತರನಿದ್ರಾಗ್ರಸ್ತೋ ಽಭೂತ್ ತದಾ ಪೌಲೇನ ಬಹುಕ್ಷಣಂ ಕಥಾಯಾಂ ಪ್ರಚಾರಿತಾಯಾಂ ನಿದ್ರಾಮಗ್ನಃ ಸ ತಸ್ಮಾದ್ ಉಪರಿಸ್ಥತೃತೀಯಪ್ರಕೋಷ್ಠಾದ್ ಅಪತತ್, ತತೋ ಲೋಕಾಸ್ತಂ ಮೃತಕಲ್ಪಂ ಧೃತ್ವೋದತೋಲಯನ್|
೯ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು.
10 ತತಃ ಪೌಲೋಽವರುಹ್ಯ ತಸ್ಯ ಗಾತ್ರೇ ಪತಿತ್ವಾ ತಂ ಕ್ರೋಡೇ ನಿಧಾಯ ಕಥಿತವಾನ್, ಯೂಯಂ ವ್ಯಾಕುಲಾ ಮಾ ಭೂತ ನಾಯಂ ಪ್ರಾಣೈ ರ್ವಿಯುಕ್ತಃ|
೧೦ಆದರೆ ಪೌಲನು ಇಳಿದು ಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು; “ಗೋಳಾಡಬೇಡಿರಿ, ಅವನು ಜೀವಂತವಾಗಿದ್ದಾನೆ” ಎಂದು ಹೇಳಿದನು.
11 ಪಶ್ಚಾತ್ ಸ ಪುನಶ್ಚೋಪರಿ ಗತ್ವಾ ಪೂಪಾನ್ ಭಂಕ್ತ್ವಾ ಪ್ರಭಾತಂ ಯಾವತ್ ಕಥೋಪಕಥನೇ ಕೃತ್ವಾ ಪ್ರಸ್ಥಿತವಾನ್|
೧೧ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹೊರಟುಹೋದನು.
12 ತೇ ಚ ತಂ ಜೀವನ್ತಂ ಯುವಾನಂ ಗೃಹೀತ್ವಾ ಗತ್ವಾ ಪರಮಾಪ್ಯಾಯಿತಾ ಜಾತಾಃ|
೧೨ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಸಮಾಧಾನವಾಯಿತು.
13 ಅನನ್ತರಂ ವಯಂ ಪೋತೇನಾಗ್ರಸರಾ ಭೂತ್ವಾಸ್ಮನಗರಮ್ ಉತ್ತೀರ್ಯ್ಯ ಪೌಲಂ ಗ್ರಹೀತುಂ ಮತಿಮ್ ಅಕುರ್ಮ್ಮ ಯತಃ ಸ ತತ್ರ ಪದ್ಭ್ಯಾಂ ವ್ರಜಿತುಂ ಮತಿಂ ಕೃತ್ವೇತಿ ನಿರೂಪಿತವಾನ್|
೧೩ನಾವು ಮೊದಲೇ ಅಲ್ಲಿಗೆ ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ತಮ್ಮೊಂದಿಗೆ ಹತ್ತಿಸಿಕೊಳ್ಳಬೇಕೆಂದು ಸಮುದ್ರ ಪ್ರಯಾಣಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆ ಮಾಡಿ ತಾನು ಕಾಲುನಡಿಗೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದ್ದನು.
14 ತಸ್ಮಾತ್ ತತ್ರಾಸ್ಮಾಭಿಃ ಸಾರ್ದ್ಧಂ ತಸ್ಮಿನ್ ಮಿಲಿತೇ ಸತಿ ವಯಂ ತಂ ನೀತ್ವಾ ಮಿತುಲೀನ್ಯುಪದ್ವೀಪಂ ಪ್ರಾಪ್ತವನ್ತಃ|
೧೪ಅಸ್ಸೊಸಿನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹಡಗಿನಲ್ಲಿ ಸೇರಿಸಿಕೊಂಡು ಮಿತಿಲೇನೆ ಪಟ್ಟಣಕ್ಕೆ ಹೊರಟೆವು.
15 ತಸ್ಮಾತ್ ಪೋತಂ ಮೋಚಯಿತ್ವಾ ಪರೇಽಹನಿ ಖೀಯೋಪದ್ವೀಪಸ್ಯ ಸಮ್ಮುಖಂ ಲಬ್ಧವನ್ತಸ್ತಸ್ಮಾದ್ ಏಕೇನಾಹ್ನಾ ಸಾಮೋಪದ್ವೀಪಂ ಗತ್ವಾ ಪೋತಂ ಲಾಗಯಿತ್ವಾ ತ್ರೋಗುಲ್ಲಿಯೇ ಸ್ಥಿತ್ವಾ ಪರಸ್ಮಿನ್ ದಿವಸೇ ಮಿಲೀತನಗರಮ್ ಉಪಾತಿಷ್ಠಾಮ|
೧೫ಅಲ್ಲಿಂದ ಹೊರಟು ಮರುದಿನ ಖೀಯೊಸ್ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು.
16 ಯತಃ ಪೌಲ ಆಶಿಯಾದೇಶೇ ಕಾಲಂ ಯಾಪಯಿತುಮ್ ನಾಭಿಲಷನ್ ಇಫಿಷನಗರಂ ತ್ಯಕ್ತ್ವಾ ಯಾತುಂ ಮನ್ತ್ರಣಾಂ ಸ್ಥಿರೀಕೃತವಾನ್; ಯಸ್ಮಾದ್ ಯದಿ ಸಾಧ್ಯಂ ಭವತಿ ತರ್ಹಿ ನಿಸ್ತಾರೋತ್ಸವಸ್ಯ ಪಞ್ಚಾಶತ್ತಮದಿನೇ ಸ ಯಿರೂಶಾಲಮ್ಯುಪಸ್ಥಾತುಂ ಮತಿಂ ಕೃತವಾನ್|
೧೬ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮ ದಿನದ ಹಬ್ಬಕ್ಕೆ ಯೆರೂಸಲೇಮಿನಲ್ಲಿರಬೇಕೆಂದು ಅವಸರಪಡುತ್ತಾ ಇದ್ದುದರಿಂದ ಆಸ್ಯಸೀಮೆಯಲ್ಲಿ ಕಾಲವನ್ನು ಕಳೆಯುವುದಕ್ಕೆ ಮನಸ್ಸಿಲ್ಲದೆ ಎಫೆಸ ಪಟ್ಟಣವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದನು.
17 ಪೌಲೋ ಮಿಲೀತಾದ್ ಇಫಿಷಂ ಪ್ರತಿ ಲೋಕಂ ಪ್ರಹಿತ್ಯ ಸಮಾಜಸ್ಯ ಪ್ರಾಚೀನಾನ್ ಆಹೂಯಾನೀತವಾನ್|
೧೭ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರಿಸಿದನು.
18 ತೇಷು ತಸ್ಯ ಸಮೀಪಮ್ ಉಪಸ್ಥಿತೇಷು ಸ ತೇಭ್ಯ ಇಮಾಂ ಕಥಾಂ ಕಥಿತವಾನ್, ಅಹಮ್ ಆಶಿಯಾದೇಶೇ ಪ್ರಥಮಾಗಮನಮ್ ಆರಭ್ಯಾದ್ಯ ಯಾವದ್ ಯುಷ್ಮಾಕಂ ಸನ್ನಿಧೌ ಸ್ಥಿತ್ವಾ ಸರ್ವ್ವಸಮಯೇ ಯಥಾಚರಿತವಾನ್ ತದ್ ಯೂಯಂ ಜಾನೀಥ;
೧೮ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇನಂದರೆ; “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿನದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿಯೂ ಹೇಗೆ ನಡೆದುಕೊಂಡೆನೆಂಬುದನ್ನು ನೀವೇ ಬಲ್ಲಿರಿ.
19 ಫಲತಃ ಸರ್ವ್ವಥಾ ನಮ್ರಮನಾಃ ಸನ್ ಬಹುಶ್ರುಪಾತೇನ ಯಿಹುದೀಯಾನಾಮ್ ಕುಮನ್ತ್ರಣಾಜಾತನಾನಾಪರೀಕ್ಷಾಭಿಃ ಪ್ರಭೋಃ ಸೇವಾಮಕರವಂ|
೧೯ಯೆಹೂದ್ಯರ ಒಳಸಂಚುಗಳಿಂದ ಸಂಭವಿಸಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ, ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೇನೆ.
20 ಕಾಮಪಿ ಹಿತಕಥಾಂ ನ ಗೋಪಾಯಿತವಾನ್ ತಾಂ ಪ್ರಚಾರ್ಯ್ಯ ಸಪ್ರಕಾಶಂ ಗೃಹೇ ಗೃಹೇ ಸಮುಪದಿಶ್ಯೇಶ್ವರಂ ಪ್ರತಿ ಮನಃ ಪರಾವರ್ತ್ತನೀಯಂ ಪ್ರಭೌ ಯೀಶುಖ್ರೀಷ್ಟೇ ವಿಶ್ವಸನೀಯಂ
೨೦ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವುದಕ್ಕೂ, ಸಭೆಯಲ್ಲಿಯೂ, ಮನೆಮನೆಯಲ್ಲಿಯೂ, ಉಪದೇಶಿಸುವದಕ್ಕೂ ಹಿಂತೆಗೆಯದೆ
21 ಯಿಹೂದೀಯಾನಾಮ್ ಅನ್ಯದೇಶೀಯಲೋಕಾನಾಞ್ಚ ಸಮೀಪ ಏತಾದೃಶಂ ಸಾಕ್ಷ್ಯಂ ದದಾಮಿ|
೨೧ಯೆಹೂದ್ಯರಿಗೂ, ಗ್ರೀಕರಿಗೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ದೃಢವಾಗಿ ಬೋಧಿಸುವವನಾಗಿದ್ದೆನು, ಇದೆಲ್ಲಾ ನಿಮಗೇ ತಿಳಿದಿದೆ.
22 ಪಶ್ಯತ ಸಾಮ್ಪ್ರತಮ್ ಆತ್ಮನಾಕೃಷ್ಟಃ ಸನ್ ಯಿರೂಶಾಲಮ್ನಗರೇ ಯಾತ್ರಾಂ ಕರೋಮಿ, ತತ್ರ ಮಾಮ್ಪ್ರತಿ ಯದ್ಯದ್ ಘಟಿಷ್ಯತೇ ತಾನ್ಯಹಂ ನ ಜಾನಾಮಿ;
೨೨ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು.
23 ಕಿನ್ತು ಮಯಾ ಬನ್ಧನಂ ಕ್ಲೇಶಶ್ಚ ಭೋಕ್ತವ್ಯ ಇತಿ ಪವಿತ್ರ ಆತ್ಮಾ ನಗರೇ ನಗರೇ ಪ್ರಮಾಣಂ ದದಾತಿ|
೨೩ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು.
24 ತಥಾಪಿ ತಂ ಕ್ಲೇಶಮಹಂ ತೃಣಾಯ ನ ಮನ್ಯೇ; ಈಶ್ವರಸ್ಯಾನುಗ್ರಹವಿಷಯಕಸ್ಯ ಸುಸಂವಾದಸ್ಯ ಪ್ರಮಾಣಂ ದಾತುಂ, ಪ್ರಭೋ ರ್ಯೀಶೋಃ ಸಕಾಶಾದ ಯಸ್ಯಾಃ ಸೇವಾಯಾಃ ಭಾರಂ ಪ್ರಾಪ್ನವಂ ತಾಂ ಸೇವಾಂ ಸಾಧಯಿತುಂ ಸಾನನ್ದಂ ಸ್ವಮಾರ್ಗಂ ಸಮಾಪಯಿತುಞ್ಚ ನಿಜಪ್ರಾಣಾನಪಿ ಪ್ರಿಯಾನ್ ನ ಮನ್ಯೇ|
೨೪ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.
25 ಅಧುನಾ ಪಶ್ಯತ ಯೇಷಾಂ ಸಮೀಪೇಽಹಮ್ ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಚಾರ್ಯ್ಯ ಭ್ರಮಣಂ ಕೃತವಾನ್ ಏತಾದೃಶಾ ಯೂಯಂ ಮಮ ವದನಂ ಪುನ ರ್ದ್ರಷ್ಟುಂ ನ ಪ್ರಾಪ್ಸ್ಯಥ ಏತದಪ್ಯಹಂ ಜಾನಾಮಿ|
೨೫ಇಗೋ, ಇಷ್ಟು ದಿನ ನಿಮ್ಮಲ್ಲಿ ಸಂಚಾರಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ನೋಡುವುದಿಲ್ಲವೆಂದು ಬಲ್ಲೆನು.
26 ಯುಷ್ಮಭ್ಯಮ್ ಅಹಮ್ ಈಶ್ವರಸ್ಯ ಸರ್ವ್ವಾನ್ ಆದೇಶಾನ್ ಪ್ರಕಾಶಯಿತುಂ ನ ನ್ಯವರ್ತ್ತೇ|
೨೬ಆದಕಾರಣ ನಾನು ಈ ಹೊತ್ತು ಖಂಡಿತವಾಗಿ ಹೇಳುತ್ತೇನೆ, ನಿಮ್ಮಲ್ಲಿ ಯಾರಾದರೂ ನಾಶವಾದರೆ ಅದು ನನ್ನ ತಪ್ಪಿನಿಂದಲ್ಲ.
27 ಅಹಂ ಸರ್ವ್ವೇಷಾಂ ಲೋಕಾನಾಂ ರಕ್ತಪಾತದೋಷಾದ್ ಯನ್ನಿರ್ದೋಷ ಆಸೇ ತಸ್ಯಾದ್ಯ ಯುಷ್ಮಾನ್ ಸಾಕ್ಷಿಣಃ ಕರೋಮಿ|
೨೭ಏಕೆಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.
28 ಯೂಯಂ ಸ್ವೇಷು ತಥಾ ಯಸ್ಯ ವ್ರಜಸ್ಯಾಧ್ಯಕ್ಷನ್ ಆತ್ಮಾ ಯುಷ್ಮಾನ್ ವಿಧಾಯ ನ್ಯಯುಙ್ಕ್ತ ತತ್ಸರ್ವ್ವಸ್ಮಿನ್ ಸಾವಧಾನಾ ಭವತ, ಯ ಸಮಾಜಞ್ಚ ಪ್ರಭು ರ್ನಿಜರಕ್ತಮೂಲ್ಯೇನ ಕ್ರೀತವಾನ ತಮ್ ಅವತ,
೨೮ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.
29 ಯತೋ ಮಯಾ ಗಮನೇ ಕೃತಏವ ದುರ್ಜಯಾ ವೃಕಾ ಯುಷ್ಮಾಕಂ ಮಧ್ಯಂ ಪ್ರವಿಶ್ಯ ವ್ರಜಂ ಪ್ರತಿ ನಿರ್ದಯತಾಮ್ ಆಚರಿಷ್ಯನ್ತಿ,
೨೯ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವುದೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವುದಿಲ್ಲ.
30 ಯುಷ್ಮಾಕಮೇವ ಮಧ್ಯಾದಪಿ ಲೋಕಾ ಉತ್ಥಾಯ ಶಿಷ್ಯಗಣಮ್ ಅಪಹನ್ತುಂ ವಿಪರೀತಮ್ ಉಪದೇಕ್ಷ್ಯನ್ತೀತ್ಯಹಂ ಜಾನಾಮಿ|
೩೦ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಅಸತ್ಯವಾದ ಬೋಧನೆಗಳನ್ನು ಮಾಡಿ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು.
31 ಇತಿ ಹೇತೋ ರ್ಯೂಯಂ ಸಚೈತನ್ಯಾಃ ಸನ್ತಸ್ತಿಷ್ಟತ, ಅಹಞ್ಚ ಸಾಶ್ರುಪಾತಃ ಸನ್ ವತ್ಸರತ್ರಯಂ ಯಾವದ್ ದಿವಾನಿಶಂ ಪ್ರತಿಜನಂ ಬೋಧಯಿತುಂ ನ ನ್ಯವರ್ತ್ತೇ ತದಪಿ ಸ್ಮರತ|
೩೧ಆದಕಾರಣ ನಾನು ಕಣ್ಣೀರು ಸುರಿಸುತ್ತಾ ಮೂರು ವರ್ಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿ ಹೇಳಿದೆನೆಂಬುದನ್ನು ನೀವು ನೆನಪಿಸಿಕೊಂಡು ಎಚ್ಚರವಾಗಿರಿ.
32 ಇದಾನೀಂ ಹೇ ಭ್ರಾತರೋ ಯುಷ್ಮಾಕಂ ನಿಷ್ಠಾಂ ಜನಯಿತುಂ ಪವಿತ್ರೀಕೃತಲೋಕಾನಾಂ ಮಧ್ಯೇಽಧಿಕಾರಞ್ಚ ದಾತುಂ ಸಮರ್ಥೋ ಯ ಈಶ್ವರಸ್ತಸ್ಯಾನುಗ್ರಹಸ್ಯ ಯೋ ವಾದಶ್ಚ ತಯೋರುಭಯೋ ರ್ಯುಷ್ಮಾನ್ ಸಮಾರ್ಪಯಮ್|
೩೨ನಾನೀಗ ನಿಮ್ಮನ್ನು ದೇವರಿಗೂ, ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವುದಕ್ಕೂ, ಪರಿಶುದ್ಧರೊಂದಿಗೆ ನಿಮಗೆ ಹಕ್ಕನ್ನು ಅನುಗ್ರಹಿಸುವುದಕ್ಕೆ ಶಕ್ತನಾಗಿದ್ದಾನೆ.
33 ಕಸ್ಯಾಪಿ ಸ್ವರ್ಣಂ ರೂಪ್ಯಂ ವಸ್ತ್ರಂ ವಾ ಪ್ರತಿ ಮಯಾ ಲೋಭೋ ನ ಕೃತಃ|
೩೩ನಾನು ಯಾರ ಬೆಳ್ಳಿಬಂಗಾರವನ್ನಾಗಲಿ, ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ.
34 ಕಿನ್ತು ಮಮ ಮತ್ಸಹಚರಲೋಕಾನಾಞ್ಚಾವಶ್ಯಕವ್ಯಯಾಯ ಮದೀಯಮಿದಂ ಕರದ್ವಯಮ್ ಅಶ್ರಾಮ್ಯದ್ ಏತದ್ ಯೂಯಂ ಜಾನೀಥ|
೩೪ಈ ಕೈಗಳಿಂದಲೇ ಕೆಲಸಮಾಡಿ, ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ನೀವೇ ಬಲ್ಲಿರಿ.
35 ಅನೇನ ಪ್ರಕಾರೇಣ ಗ್ರಹಣದ್ ದಾನಂ ಭದ್ರಮಿತಿ ಯದ್ವಾಕ್ಯಂ ಪ್ರಭು ರ್ಯೀಶುಃ ಕಥಿತವಾನ್ ತತ್ ಸ್ಮರ್ತ್ತುಂ ದರಿದ್ರಲೋಕಾನಾಮುಪಕಾರಾರ್ಥಂ ಶ್ರಮಂ ಕರ್ತ್ತುಞ್ಚ ಯುಷ್ಮಾಕಮ್ ಉಚಿತಮ್ ಏತತ್ಸರ್ವ್ವಂ ಯುಷ್ಮಾನಹಮ್ ಉಪದಿಷ್ಟವಾನ್|
೩೫ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು.
36 ಏತಾಂ ಕಥಾಂ ಕಥಯಿತ್ವಾ ಸ ಜಾನುನೀ ಪಾತಯಿತ್ವಾ ಸರ್ವೈಃ ಸಹ ಪ್ರಾರ್ಥಯತ|
೩೬ಈ ಮಾತುಗಳನ್ನು ಅವನು ಹೇಳಿದ ಮೇಲೆ ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆಮಾಡಿದನು.
೩೭ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.
38 ಪುನ ರ್ಮಮ ಮುಖಂ ನ ದ್ರಕ್ಷ್ಯಥ ವಿಶೇಷತ ಏಷಾ ಯಾ ಕಥಾ ತೇನಾಕಥಿ ತತ್ಕಾರಣಾತ್ ಶೋಕಂ ವಿಲಾಪಞ್ಚ ಕೃತ್ವಾ ಕಣ್ಠಂ ಧೃತ್ವಾ ಚುಮ್ಬಿತವನ್ತಃ| ಪಶ್ಚಾತ್ ತೇ ತಂ ಪೋತಂ ನೀತವನ್ತಃ|
೩೮ತರುವಾಯ ಅವರು ಹಡಗಿನವರೆಗೆ ಅವನ ಸಂಗಡ ಹೋಗಿ ಅವನನ್ನು ಬೀಳ್ಕೊಟ್ಟರು.