< प्रकाशितं 11 >

1 अनन्तरं परिमाणदण्डवद् एको नलो मह्यमदायि, स च दूत उपतिष्ठन् माम् अवदत्, उत्थायेश्वरस्य मन्दिरं वेदीं तत्रत्यसेवकांश्च मिमीष्व।
ದಂಡದಂತಿದ್ದ ಒಂದು ಅಳತೆ ಕೋಲು ನನಗೆ ಕೊಡಲಾಯಿತು. ನನಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡಿ, ಆಲಯದಲ್ಲಿ ಆರಾಧನೆ ಮಾಡುವವರನ್ನು ಎಣಿಸು.
2 किन्तु मन्दिरस्य बहिःप्राङ्गणं त्यज न मिमीष्व यतस्तद् अन्यजातीयेभ्यो दत्तं, पवित्रं नगरञ्च द्विचत्वारिंशन्मासान् यावत् तेषां चरणै र्मर्द्दिष्यते।
ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು. ಏಕೆಂದರೆ ಅದು ಯೆಹೂದ್ಯರಲ್ಲದವರಿಗಾಗಿ ಬಿಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು.
3 पश्चात् मम द्वाभ्यां साक्षिभ्यां मया सामर्थ्यं दायिष्यते तावुष्ट्रलोमजवस्त्रपरिहितौ षष्ठ्यधिकद्विशताधिकसहस्रदिनानि यावद् भविष्यद्वाक्यानि वदिष्यतः।
ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,”
4 तावेव जगदीश्वरस्यान्तिके तिष्ठन्तौ जितवृक्षौ दीपवृक्षौ च।
ಇವರು, “ಎಣ್ಣೆಯ ಮರಗಳೂ ಭೂಲೋಕದ ಒಡೆಯ ಆಗಿರುವವರ ಮುಂದೆ ನಿಂತಿರುವ ಎರಡು ದೀಪಸ್ತಂಭಗಳೂ ಆಗಿದ್ದಾರೆ.”
5 यदि केचित् तौ हिंसितुं चेष्टन्ते तर्हि तयो र्वदनाभ्याम् अग्नि र्निर्गत्य तयोः शत्रून् भस्मीकरिष्यति। यः कश्चित् तौ हिंसितुं चेष्टते तेनैवमेव विनष्टव्यं।
ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಇವರ ಬಾಯೊಳಗಿಂದ ಬೆಂಕಿ ಹೊರಟು, ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಅವನಿಗೂ ಅದೇ ರೀತಿಯಾಗಿ ಕೊಲೆಯಾಗಬೇಕು.
6 तयो र्भविष्यद्वाक्यकथनदिनेषु यथा वृष्टि र्न जायते तथा गगनं रोद्धुं तयोः सामर्थ्यम् अस्ति, अपरं तोयानि शोणितरूपाणि कर्त्तुं निजाभिलाषात् मुहुर्मुहुः सर्व्वविधदण्डैः पृथिवीम् आहन्तुञ्च तयोः सामर्थ्यमस्ति।
ತಾವು ಪ್ರವಾದಿಸುತ್ತಿರುವ ದಿನಗಳಲ್ಲಿ, ಮಳೆ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಇರುವುದು. ಇದಲ್ಲದೆ ಇವರಿಗೆ ಬಯಸಿದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಬಾಧಿಸುವುದಕ್ಕೂ ಅಧಿಕಾರ ಇರುತ್ತದೆ.
7 अपरं तयोः साक्ष्ये समाप्ते सति रसातलाद् येनोत्थितव्यं स पशुस्ताभ्यां सह युद्ध्वा तौ जेष्यति हनिष्यति च। (Abyssos g12)
ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು. (Abyssos g12)
8 ततस्तयोः प्रभुरपि यस्यां महापुर्य्यां क्रुशे हतो ऽर्थतो यस्याः पारमार्थिकनामनी सिदोमं मिसरश्चेति तस्या महापुर्य्यांः सन्निवेशे तयोः कुणपे स्थास्यतः।
ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಗಳು ಸಾಂಕೇತಿಕವಾಗಿ ಸೊದೋಮ್ ಹಾಗೂ ಈಜಿಪ್ಟ್ ಎಂದೂ ಹೆಸರುಗಳಿರುವುದು. ಇವರ ಒಡೆಯ ಆಗಿರುವವರನ್ನು ಸಹ ಅಲ್ಲಿಯೇ ಶಿಲುಬೆಗೆ ಹಾಕಲಾಗಿತ್ತು.
9 ततो नानाजातीया नानावंशीया नानाभाषावादिनो नानादेशीयाश्च बहवो मानवाः सार्द्धदिनत्रयं तयोः कुणपे निरीक्षिष्यन्ते, तयोः कुणपयोः श्मशाने स्थापनं नानुज्ञास्यन्ति।
ಆಗ ಸಕಲ ಪ್ರಜೆ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು, ಇವರ ಶವಗಳನ್ನು ಸಮಾಧಿಯಲ್ಲಿಡಲು ಅನುಮತಿಸದೆ, ಮೂರುವರೆ ದಿನಗಳವರೆಗೂ ನೋಡುತ್ತಾ ಇರುವರು.
10 पृथिवीनिवासिनश्च तयो र्हेतोरानन्दिष्यन्ति सुखभोगं कुर्व्वन्तः परस्परं दानानि प्रेषयिष्यन्ति च यतस्ताभ्यां भविष्यद्वादिभ्यां पृथिवीनिवासिनो यातनां प्राप्ताः।
ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ, ಇದರ ವಿಷಯವಾಗಿ ಭೂನಿವಾಸಿಗಳು ಸಂತೋಷಿಸಿ, ಹರ್ಷಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
11 तस्मात् सार्द्धदिनत्रयात् परम् ईश्वरात् जीवनदायक आत्मनि तौ प्रविष्टे तौ चरणैरुदतिष्ठतां, तेन यावन्तस्तावपश्यन् ते ऽतीव त्रासयुक्ता अभवन्।
ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮವು ಬಂದು, ಆ ಶವಗಳಲ್ಲಿ ಪ್ರವೇಶಿಸಲು, ಅವು ಕಾಲೂರಿ ನಿಂತವು. ಅವರನ್ನು ಕಂಡವರಿಗೆ ಮಹಾ ಭಯವುಂಟಾಯಿತು.
12 ततः परं तौ स्वर्गाद् उच्चैरिदं कथयन्तं रवम् अशृणुतां युवां स्थानम् एतद् आरोहतां ततस्तयोः शत्रुषु निरीक्षमाणेषु तौ मेघेन स्वर्गम् आरूढवन्तौ।
ಆಗ ಅವರಿಗೆ, “ಇಲ್ಲಿ ಮೇಲಕ್ಕೆ ಬನ್ನಿರಿ,” ಎಂದು ಮಹಾಧ್ವನಿಯು ಕೇಳಿಸಿತು. ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
13 तद्दण्डे महाभूमिकम्पे जाते पुर्य्या दशमांशः पतितः सप्तसहस्राणि मानुषाश्च तेन भूमिकम्पेन हताः, अवशिष्टाश्च भयं गत्वा स्वर्गीयेश्वरस्य प्रशंसाम् अकीर्त्तयन्।
ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.
14 द्वितीयः सन्तापो गतः पश्य तृतीयः सन्तापस्तूर्णम् आगच्छति।
ಎರಡನೆಯ ವಿಪತ್ತು ಕಳೆದುಹೋಯಿತು. ಮೂರನೆಯ ವಿಪತ್ತು ಬೇಗನೆ ಬರಲಿದೆ.
15 अनन्तरं सप्तदूतेन तूर्य्यां वादितायां स्वर्ग उच्चैः स्वरैर्वागियं कीर्त्तिता, राजत्वं जगतो यद्यद् राज्यं तदधुनाभवत्। अस्मत्प्रभोस्तदीयाभिषिक्तस्य तारकस्य च। तेन चानन्तकालीयं राजत्वं प्रकरिष्यते॥ (aiōn g165)
ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.” (aiōn g165)
16 अपरम् ईश्वरस्यान्तिके स्वकीयसिंहासनेषूपविष्टाश्चतुर्विंशतिप्राचीना भुवि न्यङ्भूखा भूत्वेश्वरं प्रणम्यावदन्,
ತರುವಾಯ ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ದೇವರಿಗೆ ಅಡ್ಡಬಿದ್ದು,
17 हे भूत वर्त्तमानापि भविष्यंश्च परेश्वर। हे सर्व्वशक्तिमन् स्वामिन् वयं ते कुर्म्महे स्तवं। यत् त्वया क्रियते राज्यं गृहीत्वा ते महाबलं।
ಹೀಗೆ ಹೇಳಿದರು: “ಕರ್ತ ಆಗಿರುವ, ಸರ್ವಶಕ್ತರಾದ ದೇವರೇ, ಮೊದಲು ಇದ್ದು ಈಗಲೂ ಇರುವವರೂ, ನೀವು ನಿಮ್ಮ ಮಹಾ ಅಧಿಕಾರವನ್ನು ಪಡೆದು ಆಳಿದ್ದರಿಂದ ನಿಮಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
18 विजातीयेषु कुप्यत्सु प्रादुर्भूता तव क्रुधा। मृतानामपि कालो ऽसौ विचारो भविता यदा। भृत्याश्च तव यावन्तो भविष्यद्वादिसाधवः। ये च क्षुद्रा महान्तो वा नामतस्ते हि बिभ्यति। यदा सर्व्वेभ्य एतेभ्यो वेतनं वितरिष्यते। गन्तव्यश्च यदा नाशो वसुधाया विनाशकैः॥
ರಾಷ್ಟ್ರಗಳು ಕೋಪಗೊಂಡವು, ನಿಮ್ಮ ರೋಷವು ಈಗ ಬಂದಿದೆ. ಸತ್ತವರು ತೀರ್ಪು ಹೊಂದುವ ಸಮಯ ಬಂದಿದೆ. ನೀವು ನಿಮ್ಮ ಸೇವಕರಾದ ಪ್ರವಾದಿಗಳಿಗೂ ದೇವಜನರಿಗೂ ನಿಮ್ಮ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು, ಲೋಕ ನಾಶಕರನ್ನು ದಂಡಿಸುವಿರಿ.”
19 अनन्तरम् ईश्वरस्य स्वर्गस्थमन्दिरस्य द्वारं मुक्तं तन्मन्दिरमध्ये च नियममञ्जूषा दृश्याभवत्, तेन तडितो रवाः स्तनितानि भूमिकम्पो गुरुतरशिलावृष्टिश्चैतानि समभवन्।
ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.

< प्रकाशितं 11 >