< मथिः 4 >
1 ततः परं यीशुः प्रतारकेण परीक्षितो भवितुम् आत्मना प्रान्तरम् आकृष्टः
೧ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು.
2 सन् चत्वारिंशदहोरात्रान् अनाहारस्तिष्ठन् क्षुधितो बभूव।
೨ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.
3 तदानीं परीक्षिता तत्समीपम् आगत्य व्याहृतवान्, यदि त्वमीश्वरात्मजो भवेस्तर्ह्याज्ञया पाषाणानेतान् पूपान् विधेहि।
೩ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು,
4 ततः स प्रत्यब्रवीत्, इत्थं लिखितमास्ते, "मनुजः केवलपूपेन न जीविष्यति, किन्त्वीश्वरस्य वदनाद् यानि यानि वचांसि निःसरन्ति तैरेव जीविष्यति।"
೪ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.
5 तदा प्रतारकस्तं पुण्यनगरं नीत्वा मन्दिरस्य चूडोपरि निधाय गदितवान्,
೫ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ
6 त्वं यदिश्वरस्य तनयो भवेस्तर्हीतोऽधः पत, यत इत्थं लिखितमास्ते, आदेक्ष्यति निजान् दूतान् रक्षितुं त्वां परमेश्वरः। यथा सर्व्वेषु मार्गेषु त्वदीयचरणद्वये। न लगेत् प्रस्तराघातस्त्वां घरिष्यन्ति ते करैः॥
೬ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
7 तदानीं यीशुस्तस्मै कथितवान् एतदपि लिखितमास्ते, "त्वं निजप्रभुं परमेश्वरं मा परीक्षस्व।"
೭ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು.
8 अनन्तरं प्रतारकः पुनरपि तम् अत्युञ्चधराधरोपरि नीत्वा जगतः सकलराज्यानि तदैश्वर्य्याणि च दर्शयाश्चकार कथयाञ्चकार च,
೮ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,
9 यदि त्वं दण्डवद् भवन् मां प्रणमेस्तर्ह्यहम् एतानि तुभ्यं प्रदास्यामि।
೯ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು.
10 तदानीं यीशुस्तमवोचत्, दूरीभव प्रतारक, लिखितमिदम् आस्ते, "त्वया निजः प्रभुः परमेश्वरः प्रणम्यः केवलः स सेव्यश्च।"
೧೦ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
11 ततः प्रतारकेण स पर्य्यत्याजि, तदा स्वर्गीयदूतैरागत्य स सिषेवे।
೧೧ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.
12 तदनन्तरं योहन् कारायां बबन्धे, तद्वार्त्तां निशम्य यीशुना गालील् प्रास्थीयत।
೧೨ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು.
13 ततः परं स नासरन्नगरं विहाय जलघेस्तटे सिबूलून्नप्ताली एतयोरुवभयोः प्रदेशयोः सीम्नोर्मध्यवर्त्ती य: कफर्नाहूम् तन्नगरम् इत्वा न्यवसत्।
೧೩ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು.
14 तस्मात्, अन्यादेशीयगालीलि यर्द्दन्पारेऽब्धिरोधसि। नप्तालिसिबूलून्देशौ यत्र स्थाने स्थितौ पुरा।
೧೪ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ,
15 तत्रत्या मनुजा ये ये पर्य्यभ्राम्यन् तमिस्रके। तैर्जनैर्बृहदालोकः परिदर्शिष्यते तदा। अवसन् ये जना देशे मृत्युच्छायास्वरूपके। तेषामुपरि लोकानामालोकः संप्रकाशितः॥
೧೫“ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ,
16 यदेतद्वचनं यिशयियभविष्यद्वादिना प्रोक्तं, तत् तदा सफलम् अभूत्।
೧೬ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು.
17 अनन्तरं यीशुः सुसंवादं प्रचारयन् एतां कथां कथयितुम् आरेभे, मनांसि परावर्त्तयत, स्वर्गीयराजत्वं सविधमभवत्।
೧೭ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.
18 ततः परं यीशु र्गालीलो जलधेस्तटेन गच्छन् गच्छन् आन्द्रियस्तस्य भ्राता शिमोन् अर्थतो यं पितरं वदन्ति एतावुभौ जलघौ जालं क्षिपन्तौ ददर्श, यतस्तौ मीनधारिणावास्ताम्।
೧೮ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.
19 तदा स तावाहूय व्याजहार, युवां मम पश्चाद् आगच्छतं, युवामहं मनुजधारिणौ करिष्यामि।
೧೯ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ,
20 तेनैव तौ जालं विहाय तस्य पश्चात् आगच्छताम्।
೨೦ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21 अनन्तरं तस्मात् स्थानात् व्रजन् व्रजन् सिवदियस्य सुतौ याकूब् योहन्नामानौ द्वौ सहजौ तातेन सार्द्धं नौकोपरि जालस्य जीर्णोद्धारं कुर्व्वन्तौ वीक्ष्य तावाहूतवान्।
೨೧ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.
22 तत्क्षणात् तौ नावं स्वतातञ्च विहाय तस्य पश्चाद्गामिनौ बभूवतुः।
೨೨ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
23 अनन्तरं भजनभवने समुपदिशन् राज्यस्य सुसंवादं प्रचारयन् मनुजानां सर्व्वप्रकारान् रोगान् सर्व्वप्रकारपीडाश्च शमयन् यीशुः कृत्स्नं गालील्देशं भ्रमितुम् आरभत।
೨೩ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
24 तेन कृत्स्नसुरियादेशस्य मध्यं तस्य यशो व्याप्नोत्, अपरं भूतग्रस्ता अपस्मारर्गीणः पक्षाधातिप्रभृतयश्च यावन्तो मनुजा नानाविधव्याधिभिः क्लिष्टा आसन्, तेषु सर्व्वेषु तस्य समीपम् आनीतेषु स तान् स्वस्थान् चकार।
೨೪ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.
25 एतेन गालील्-दिकापनि-यिरूशालम्-यिहूदीयदेशेभ्यो यर्द्दनः पाराञ्च बहवो मनुजास्तस्य पश्चाद् आगच्छन्।
೨೫ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.