< ပြကာၑိတံ 9 >
1 တတး ပရံ သပ္တမဒူတေန တူရျျာံ ဝါဒိတာယာံ ဂဂနာတ် ပၖထိဝျာံ နိပတိတ ဧကသ္တာရကော မယာ ဒၖၐ္ဋး, တသ္မဲ ရသာတလကူပသျ ကုဉ္ဇိကာဒါယိ၊ (Abyssos )
ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು. (Abyssos )
2 တေန ရသာတလကူပေ မုက္တေ မဟာဂ္နိကုဏ္ဍသျ ဓူမ ဣဝ ဓူမသ္တသ္မာတ် ကူပါဒ် ဥဒ္ဂတး၊ တသ္မာတ် ကူပဓူမာတ် သူရျျာကာၑော် တိမိရာဝၖတော်၊ (Abyssos )
ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು. (Abyssos )
3 တသ္မာဒ် ဓူမာတ် ပတင်္ဂေၐု ပၖထိဝျာံ နိရ္ဂတေၐု နရလောကသ္ထဝၖၑ္စိကဝတ် ဗလံ တေဘျော'ဒါယိ၊
ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು.
4 အပရံ ပၖထိဝျာသ္တၖဏာနိ ဟရိဒွရ္ဏၑာကာဒယော ဝၖက္ၐာၑ္စ တဲ ရ္န သိံဟိတဝျား ကိန္တု ယေၐာံ ဘာလေၐွီၑွရသျ မုဒြာယာ အင်္ကော နာသ္တိ ကေဝလံ တေ မာနဝါသ္တဲ ရှိံသိတဝျာ ဣဒံ တ အာဒိၐ္ဋား၊
ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು.
5 ပရန္တု တေၐာံ ဗဓာယ နဟိ ကေဝလံ ပဉ္စ မာသာန် ယာဝတ် ယာတနာဒါနာယ တေဘျး သာမရ္ထျမဒါယိ၊ ဝၖၑ္စိကေန ဒၐ္ဋသျ မာနဝသျ ယာဒၖၑီ ယာတနာ ဇာယတေ တဲရပိ တာဒၖၑီ ယာတနာ ပြဒီယတေ၊
ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.
6 တသ္မိန် သမယေ မာနဝါ မၖတျုံ မၖဂယိၐျန္တေ ကိန္တု ပြာပ္တုံ န ၑက္ၐျန္တိ, တေ ပြာဏာန် တျက္တုမ် အဘိလၐိၐျန္တိ ကိန္တု မၖတျုသ္တေဘျော ဒူရံ ပလာယိၐျတေ၊
ಆ ದಿನಗಳಲ್ಲಿ ಜನರು ಮರಣವನ್ನು ಹುಡುಕುವರು, ಆದರೆ ಅದನ್ನು ಯಾವ ರೀತಿಯಿಂದಲೂ ಕಾಣರು; ಅವರು ಸಾಯಲು ಹಾರೈಸುವರು, ಆದರೆ ಮರಣವು ಅವರಿಂದ ಓಡಿ ಹೋಗುವುದು.
7 တေၐာံ ပတင်္ဂါနာမ် အာကာရော ယုဒ္ဓါရ္ထံ သုသဇ္ဇိတာနာမ် အၑွာနာမ် အာကာရသျ တုလျး, တေၐာံ ၑိရးသု သုဝရ္ဏကိရီဋာနီဝ ကိရီဋာနိ ဝိဒျန္တေ, မုခမဏ္ဍလာနိ စ မာနုၐိကမုခတုလျာနိ,
ಆ ಮಿಡತೆಗಳು ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದಂತಿರುವ ಕಿರೀಟಗಳಿದ್ದವು. ಅವುಗಳ ಮುಖವು ಮಾನವರ ಮುಖಗಳಂತೆ ಇದ್ದವು.
8 ကေၑာၑ္စ ယောၐိတာံ ကေၑာနာံ သဒၖၑား, ဒန္တာၑ္စ သိံဟဒန္တတုလျား,
ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು.
9 လော်ဟကဝစဝတ် တေၐာံ ကဝစာနိ သန္တိ, တေၐာံ ပက္ၐာဏာံ ၑဗ္ဒော ရဏာယ ဓာဝတာမၑွရထာနာံ သမူဟသျ ၑဗ္ဒတုလျး၊
ಅವುಗಳಿಗೆ ಕಬ್ಬಿಣದ ಕವಚದಂಥ ಕವಚಗಳಿದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳಂತಿತ್ತು.
10 ဝၖၑ္စိကာနာမိဝ တေၐာံ လာင်္ဂူလာနိ သန္တိ, တေၐု လာင်္ဂူလေၐု ကဏ္ဋကာနိ ဝိဒျန္တေ, အပရံ ပဉ္စ မာသာန် ယာဝတ် မာနဝါနာံ ဟိံသနာယ တေ သာမရ္ထျပြာပ္တား၊
ಅವುಗಳಿಗೆ ಚೇಳಿನಂತೆ ಬಾಲವೂ ಕೊಂಡಿಯೂ ಇದ್ದವು. ಅವುಗಳಿಗೆ ಮನುಷ್ಯರನ್ನು ಐದು ತಿಂಗಳುಗಳ ಕಾಲ ತಮ್ಮ ಬಾಲಗಳಿಂದ ಬಾಧಿಸುವ ಸಾಮರ್ಥ್ಯವಿತ್ತು.
11 တေၐာံ ရာဇာ စ ရသာတလသျ ဒူတသ္တသျ နာမ ဣဗြီယဘာၐယာ အဗဒ္ဒေါန် ယူနာနီယဘာၐယာ စ အပလ္လုယောန် အရ္ထတော ဝိနာၑက ဣတိ၊ (Abyssos )
ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು. (Abyssos )
12 ပြထမး သန္တာပေါ ဂတဝါန် ပၑျ ဣတး ပရမပိ ဒွါဘျာံ သန္တာပါဘျာမ် ဥပသ္ထာတဝျံ၊
ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇವುಗಳ ನಂತರ ಇನ್ನೂ ಎರಡು ವಿಪತ್ತುಗಳು ಬರಲಿವೆ.
13 တတး ပရံ ၐၐ္ဌဒူတေန တူရျျာံ ဝါဒိတာယာမ် ဤၑွရသျာန္တိကေ သ္ထိတာယား သုဝရ္ဏဝေဒျာၑ္စတုၑ္စူဍာတး ကသျစိဒ် ရဝေါ မယာၑြာဝိ၊
ಆರನೆಯ ದೇವದೂತನು ತನ್ನ ತುತೂರಿಯನ್ನು ಊದಲು, ದೇವರ ಮುಂದೆ ಇರುವ ಚಿನ್ನದ ಬಲಿಪೀಠದ ನಾಲ್ಕು ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.
14 သ တူရီဓာရိဏံ ၐၐ္ဌဒူတမ် အဝဒတ်, ဖရာတာချေ မဟာနဒေ ယေ စတွာရော ဒူတာ ဗဒ္ဓါး သန္တိ တာန် မောစယ၊
ಅದು ತುತೂರಿಯನ್ನು ಹೊಂದಿರುವ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾನದಿಯ ಬಳಿ ಕಟ್ಟಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಹೇಳಿತು.
15 တတသ္တဒ္ဒဏ္ဍသျ တဒ္ဒိနသျ တန္မာသသျ တဒွတ္သရသျ စ ကၖတေ နိရူပိတာသ္တေ စတွာရော ဒူတာ မာနဝါနာံ တၖတီယာံၑသျ ဗဓာရ္ထံ မောစိတား၊
ಮಾನವಕುಲದ ಮೂರರಲ್ಲೊಂದು ಭಾಗವನ್ನು ಕೊಲ್ಲುವುದಕ್ಕಾಗಿ ಆ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿಯೇ ಸಿದ್ಧವಾಗಿದ್ದ ನಾಲ್ಕು ದೇವದೂತರನ್ನು ಬಿಡುಗಡೆ ಮಾಡಲಾಯಿತು.
16 အပရမ် အၑွာရောဟိသဲနျာနာံ သံချာ မယာၑြာဝိ, တေ ဝိံၑတိကောဋယ အာသန်၊
ಕುದುರೆ ಸೈನಿಕರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.
17 မယာ ယေ 'ၑွာ အၑွာရောဟိဏၑ္စ ဒၖၐ္ဋာသ္တ ဧတာဒၖၑား, တေၐာံ ဝဟ္နိသွရူပါဏိ နီလပြသ္တရသွရူပါဏိ ဂန္ဓကသွရူပါဏိ စ ဝရ္မ္မာဏျာသန်, ဝါဇိနာဉ္စ သိံဟမူရ္ဒ္ဓသဒၖၑာ မူရ္ဒ္ဓါနး, တေၐာံ မုခေဘျော ဝဟ္နိဓူမဂန္ဓကာ နိရ္ဂစ္ဆန္တိ၊
ನಾನು ನನ್ನ ದರ್ಶನದಲ್ಲಿ ಕುದುರೆಗಳನ್ನೂ ಸವಾರರನ್ನೂ ಕಂಡೆನು. ಅವರ ಕವಚಗಳು ಬೆಂಕಿಯ ಕೆಂಪು, ನೀಲಮಣಿ ಹಾಗೂ ಹಳದಿ ಬಣ್ಣದಂತೆಯೂ ಇದ್ದವು. ಕುದುರೆಗಳ ತಲೆಗಳು ಸಿಂಹದ ತಲೆಗಳಂತಿದ್ದವು. ಅವುಗಳ ಬಾಯೊಳಗಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬಂದವು.
18 ဧတဲသ္တြိဘိ ရ္ဒဏ္ဍဲရရ္ထတသ္တေၐာံ မုခေဘျော နိရ္ဂစ္ဆဒ္ဘိ ရွဟ္နိဓူမဂန္ဓကဲ ရ္မာနုၐာဏာံ တုတီယာံၑော 'ဃာနိ၊
ಅವುಗಳ ಬಾಯೊಳಗಿಂದ ಬಂದ ಬೆಂಕಿ ಹೊಗೆ ಮತ್ತು ಗಂಧಕಗಳೆಂಬ ಮೂರು ಉಪದ್ರವಗಳಿಂದ ಮಾನವಕುಲದ ಮೂರರಲ್ಲೊಂದು ಭಾಗದ ಜನರು ಹತರಾದರು.
19 တေၐာံ ဝါဇိနာံ ဗလံ မုခေၐု လာင်္ဂူလေၐု စ သ္ထိတံ, ယတသ္တေၐာံ လာင်္ဂူလာနိ သရ္ပာကာရာဏိ မသ္တကဝိၑိၐ္ဋာနိ စ တဲရေဝ တေ ဟိံသန္တိ၊
ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲದಲ್ಲಿಯೂ ಇತ್ತು. ಏಕೆಂದರೆ ಅವುಗಳ ಬಾಲಗಳು ತಲೆಗಳನ್ನು ಹೊಂದಿದ್ದ ಸರ್ಪಗಳಂತಿದ್ದವು. ಅವುಗಳಿಂದ ಅವು ಕೇಡನ್ನುಂಟು ಮಾಡುತ್ತವೆ.
20 အပရမ် အဝၑိၐ္ဋာ ယေ မာနဝါ တဲ ရ္ဒဏ္ဍဲ ရ္န ဟတာသ္တေ ယထာ ဒၖၐ္ဋိၑြဝဏဂမနၑက္တိဟီနာန် သွရ္ဏရော်ပျပိတ္တလပြသ္တရကာၐ္ဌမယာန် ဝိဂြဟာန် ဘူတာံၑ္စ န ပူဇယိၐျန္တိ တထာ သွဟသ္တာနာံ ကြိယာဘျး သွမနာံသိ န ပရာဝရ္တ္တိတဝန္တး
ಈ ಉಪದ್ರವಗಳಿಂದ ಸಾಯದೆ ಉಳಿದ ಮನುಷ್ಯರು ಇನ್ನೂ ತಮ್ಮ ದುಷ್ಟಕೃತ್ಯಗಳನ್ನು ಬಿಟ್ಟು ಪಶ್ಚಾತ್ತಾಪ ಪಡಲಿಲ್ಲ. ಅವರು ದೆವ್ವಗಳನ್ನೂ, ನೋಡಲು, ಕೇಳಲು, ನಡೆಯಲು ಆಗದ ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳ ವಿಗ್ರಹಗಳನ್ನು ಆರಾಧಿಸುವುದನ್ನೂ ನಿಲ್ಲಿಸಲಿಲ್ಲ.
21 သွဗဓကုဟကဝျဘိစာရစော်ရျျောဘျော 'ပိ မနာံသိ န ပရာဝရ္တ္တိတဝန္တး၊
ಇದಲ್ಲದೆ ಅವರು ಕೊಲೆ, ಮಾಟ, ಜಾರತ್ವ ಮತ್ತು ಕಳ್ಳತನಗಳಿಗಾಗಿಯೂ ಪಶ್ಚಾತ್ತಾಪ ಪಡಲಿಲ್ಲ.