< ပြကာၑိတံ 4 >
1 တတး ပရံ မယာ ဒၖၐ္ဋိပါတံ ကၖတွာ သွရ္ဂေ မုက္တံ ဒွါရမ် ဧကံ ဒၖၐ္ဋံ မယာ သဟဘာၐမာဏသျ စ ယသျ တူရီဝါဒျတုလျော ရဝး ပူရွွံ ၑြုတး သ မာမ် အဝေါစတ် သ္ထာနမေတဒ် အာရောဟယ, ဣတး ပရံ ယေန ယေန ဘဝိတဝျံ တဒဟံ တွာံ ဒရ္ၑယိၐျေ၊
ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
2 တေနာဟံ တတ္က္ၐဏာဒ် အာတ္မာဝိၐ္ဋော ဘူတွာ 'ပၑျံ သွရ္ဂေ သိံဟာသနမေကံ သ္ထာပိတံ တတြ သိံဟာသနေ ဧကော ဇန ဥပဝိၐ္ဋော 'သ္တိ၊
ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.
3 သိံဟာသနေ ဥပဝိၐ္ဋသျ တသျ ဇနသျ ရူပံ သူရျျကာန္တမဏေး ပြဝါလသျ စ တုလျံ တတ် သိံဟာသနဉ္စ မရကတမဏိဝဒြူပဝိၑိၐ္ဋေန မေဃဓနုၐာ ဝေၐ္ဋိတံ၊
ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.
4 တသျ သိံဟာသနေ စတုရ္ဒိက္ၐု စတုရွိံၑတိသိံဟာသနာနိ တိၐ္ဌန္တိ တေၐု သိံဟာသနေၐု စတုရွိံၑတိ ပြာစီနလောကာ ဥပဝိၐ္ဋာသ္တေ ၑုဘြဝါသးပရိဟိတာသ္တေၐာံ ၑိရာံသိ စ သုဝရ္ဏကိရီဋဲ ရ္ဘူၐိတာနိ၊
ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.
5 တသျ သိံဟာသနသျ မဓျာတ် တဍိတော ရဝါး သ္တနိတာနိ စ နိရ္ဂစ္ဆန္တိ သိံဟာသနသျာန္တိကေ စ သပ္တ ဒီပါ ဇွလန္တိ တ ဤၑွရသျ သပ္တာတ္မာနး၊
ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.
6 အပရံ သိံဟာသနသျာန္တိကေ သ္ဖဋိကတုလျး ကာစမယော ဇလာၑယော ဝိဒျတေ, အပရမ် အဂြတး ပၑ္စာစ္စ ဗဟုစက္ၐုၐ္မန္တၑ္စတွာရး ပြာဏိနး သိံဟသနသျ မဓျေ စတုရ္ဒိက္ၐု စ ဝိဒျန္တေ၊
ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7 တေၐာံ ပြထမး ပြာဏီ သိံဟာကာရော ဒွိတီယး ပြာဏီ ဂေါဝါတ္သာကာရသ္တၖတီယး ပြာဏီ မနုၐျဝဒွဒနဝိၑိၐ္ဋၑ္စတုရ္ထၑ္စ ပြာဏီ ဥဍ္ဍီယမာနကုရရောပမး၊
ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.
8 တေၐာံ စတုရ္ဏာမ် ဧကဲကသျ ပြာဏိနး ၐဋ် ပက္ၐား သန္တိ တေ စ သရွွာင်္ဂေၐွဘျန္တရေ စ ဗဟုစက္ၐုရွိၑိၐ္ဋား, တေ ဒိဝါနိၑံ န ဝိၑြာမျ ဂဒန္တိ ပဝိတြး ပဝိတြး ပဝိတြး သရွွၑက္တိမာန် ဝရ္တ္တမာနော ဘူတော ဘဝိၐျံၑ္စ ပြဘုး ပရမေၑွရး၊
ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು:
9 ဣတ္ထံ တဲး ပြာဏိဘိသ္တသျာနန္တဇီဝိနး သိံဟာသနောပဝိၐ္ဋသျ ဇနသျ ပြဘာဝေ ဂေါ်ရဝေ ဓနျဝါဒေ စ ပြကီရ္တ္တိတေ (aiōn )
ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ, (aiōn )
10 တေ စတုရွိံၑတိပြာစီနာ အပိ တသျ သိံဟာသနောပဝိၐ္ဋသျာန္တိကေ ပြဏိနတျ တမ် အနန္တဇီဝိနံ ပြဏမန္တိ သွီယကိရီဋာံၑ္စ သိံဟာသနသျာန္တိကေ နိက္ၐိပျ ဝဒန္တိ, (aiōn )
ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, (aiōn )
11 ဟေ ပြဘော ဤၑွရာသ္မာကံ ပြဘာဝံ ဂေါ်ရဝံ ဗလံ၊ တွမေဝါရှသိ သမ္ပြာပ္တုံ ယတ် သရွွံ သသၖဇေ တွယာ၊ တဝါဘိလာၐတၑ္စဲဝ သရွွံ သမ္ဘူယ နိရ္မ္မမေ။
“ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.