< ပြကာၑိတံ 19 >
1 တတး ပရံ သွရ္ဂသ္ထာနာံ မဟာဇနတာယာ မဟာၑဗ္ဒော 'ယံ မယာ ၑြူတး, ဗြူတ ပရေၑွရံ ဓနျမ် အသ္မဒီယော ယ ဤၑွရး၊ တသျာဘဝတ် ပရိတြာဏာံ ပြဘာဝၑ္စ ပရာကြမး၊
೧ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “ಹಲ್ಲೆಲೂಯಾ. ರಕ್ಷಣೆಯೂ, ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ဝိစာရာဇ္ဉာၑ္စ တသျဲဝ သတျာ နျာယျာ ဘဝန္တိ စ၊ ယာ သွဝေၑျာကြိယာဘိၑ္စ ဝျကရောတ် ကၖတ္သ္နမေဒိနီံ၊ တာံ သ ဒဏ္ဍိတဝါန် ဝေၑျာံ တသျာၑ္စ ကရတသ္တထာ၊ ၑောဏိတသျ သွဒါသာနာံ သံၑောဓံ သ ဂၖဟီတဝါန်။
೨ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಎಂದು ಹೇಳಿ,
3 ပုနရပိ တဲရိဒမုက္တံ ယထာ, ဗြူတ ပရေၑွရံ ဓနျံ ယန္နိတျံ နိတျမေဝ စ၊ တသျာ ဒါဟသျ ဓူမော 'သော် ဒိၑမူရ္ဒ္ဓွမုဒေၐျတိ။ (aiōn )
೩ಎರಡನೆಯ ಸಾರಿ, “ಹಲ್ಲೆಲೂಯಾ ಎಂದು ಆರ್ಭಟಿಸಿ, ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ” ಎಂದು ಹೇಳಿದರು. (aiōn )
4 တတး ပရံ စတုရွွိံၑတိပြာစီနာၑ္စတွာရး ပြာဏိနၑ္စ ပြဏိပတျ သိံဟာသနောပဝိၐ္ဋမ် ဤၑွရံ ပြဏမျာဝဒန်, တထာသ္တု ပရမေၑၑ္စ သရွွဲရေဝ ပြၑသျတာံ။
೪ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ, “ಆಮೆನ್, ಹಲ್ಲೆಲೂಯಾ” ಎಂದರು.
5 အနန္တရံ သိံဟာသနမဓျာဒ် ဧၐ ရဝေါ နိရ္ဂတော, ယထာ, ဟေ ဤၑွရသျ ဒါသေယာသ္တဒ္ဘက္တား သကလာ နရား၊ ယူယံ က္ၐုဒြာ မဟာန္တၑ္စ ပြၑံသတ ဝ ဤၑွရံ။
೫ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, “ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು ನಮ್ಮ ದೇವರನ್ನು ಕೊಂಡಾಡಿರಿ” ಎಂದು ಹೇಳಿತು.
6 တတး ပရံ မဟာဇနတာယား ၑဗ္ဒ ဣဝ ဗဟုတောယာနာဉ္စ ၑဗ္ဒ ဣဝ ဂၖရုတရသ္တနိတာနာဉ္စ ၑဗ္ဒ ဣဝ ၑဗ္ဒော 'ယံ မယာ ၑြုတး, ဗြူတ ပရေၑွရံ ဓနျံ ရာဇတွံ ပြာပ္တဝါန် ယတး၊ သ ပရမေၑွရော 'သ္မာကံ ယး သရွွၑက္တိမာန် ပြဘုး၊
೬ತರುವಾಯ ಬಹುದೊಡ್ಡ ಜನರ ಸಮೂಹದ ಶಬ್ದವು ಜಲಪ್ರವಾಹದ ಘೋಷದಂತೆಯೂ ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, “ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ.
7 ကီရ္တ္တယာမး သ္တဝံ တသျ ဟၖၐ္ဋာၑ္စောလ္လာသိတာ ဝယံ၊ ယန္မေၐၑာဝကသျဲဝ ဝိဝါဟသမယော 'ဘဝတ်၊ ဝါဂ္ဒတ္တာ စာဘဝတ် တသ္မဲ ယာ ကနျာ သာ သုသဇ္ဇိတာ၊
೭ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು.
8 ပရိဓာနာယ တသျဲ စ ဒတ္တး ၑုဘြး သုစေလကး။
೮ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ).
9 သ သုစေလကး ပဝိတြလောကာနာံ ပုဏျာနိ၊ တတး သ မာမ် ဥက္တဝါန် တွမိဒံ လိခ မေၐၑာဝကသျ ဝိဝါဟဘောဇျာယ ယေ နိမန္တြိတာသ္တေ ဓနျာ ဣတိ၊ ပုနရပိ မာမ် အဝဒတ်, ဣမာနီၑွရသျ သတျာနိ ဝါကျာနိ၊
೯ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, “ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿ, “ಈ ಮಾತುಗಳು ದೇವರ ಸತ್ಯವಚನಗಳಾಗಿವೆ” ಅಂದನು.
10 အနန္တရံ အဟံ တသျ စရဏယောရန္တိကေ နိပတျ တံ ပြဏန္တုမုဒျတး၊ တတး သ မာမ် ဥက္တဝါန် သာဝဓာနသ္တိၐ္ဌ မဲဝံ ကုရု ယီၑေား သာက္ၐျဝိၑိၐ္ဋဲသ္တဝ ဘြာတၖဘိသ္တွယာ စ သဟဒါသော 'ဟံ၊ ဤၑွရမေဝ ပြဏမ ယသ္မာဒ် ယီၑေား သာက္ၐျံ ဘဝိၐျဒွါကျသျ သာရံ၊
೧೦ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು ಅವನು, “ಹೀಗೆ ಮಾಡಬೇಡ ನೋಡು, ನಾನು ನಿನಗೂ, ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು.
11 အနန္တရံ မယာ မုက္တး သွရ္ဂော ဒၖၐ္ဋး, ဧကး ၑွေတဝရ္ဏော 'ၑွော 'ပိ ဒၖၐ္ဋသ္တဒါရူဎော ဇနော ဝိၑွာသျး သတျမယၑ္စေတိ နာမ္နာ ချာတး သ ယာထာရ္ထျေန ဝိစာရံ ယုဒ္ဓဉ္စ ကရောတိ၊
೧೧ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ ನಂಬಿಗಸ್ತನು, ಸತ್ಯವಂತನು ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ.
12 တသျ နေတြေ 'ဂ္နိၑိခါတုလျေ ၑိရသိ စ ဗဟုကိရီဋာနိ ဝိဒျန္တေ တတြ တသျ နာမ လိခိတမသ္တိ တမေဝ ဝိနာ နာပရး ကော 'ပိ တန္နာမ ဇာနာတိ၊
೧೨ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತಿವೆ, ಆತನ ತಲೆಯ ಮೇಲೆ ಅನೇಕ ಕಿರೀಟಗಳುಂಟು, ಆತನಿಗೆ ಒಂದು ಹೆಸರು ಬರೆದುಕೊಡಲ್ಪಟ್ಟಿದೆ, ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.
13 သ ရုဓိရမဂ္နေန ပရိစ္ဆဒေနာစ္ဆာဒိတ ဤၑွရဝါဒ ဣတိ နာမ္နာဘိဓီယတေ စ၊
೧೩ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.
14 အပရံ သွရ္ဂသ္ထသဲနျာနိ ၑွေတာၑွာရူဎာနိ ပရိဟိတနိရ္မ္မလၑွေတသူက္ၐ္မဝသ္တြာဏိ စ ဘူတွာ တမနုဂစ္ဆန္တိ၊
೧೪ಪರಲೋಕದಲ್ಲಿರುವ ಸೈನ್ಯವು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು.
15 တသျ ဝက္တြာဒ် ဧကသ္တီက္ၐဏး ခင်္ဂေါ နိရ္ဂစ္ဆတိ တေန ခင်္ဂေန သရွွဇာတီယာသ္တေနာဃာတိတဝျား သ စ လော်ဟဒဏ္ဍေန တာန် စာရယိၐျတိ သရွွၑက္တိမတ ဤၑွရသျ ပြစဏ္ဍကောပရသောတ္ပာဒကဒြာက္ၐာကုဏ္ဍေ ယဒျတ် တိၐ္ဌတိ တတ် သရွွံ သ ဧဝ ပဒါဘျာံ ပိနၐ္ဋိ၊
೧೫ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ. ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು. ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.
16 အပရံ တသျ ပရိစ္ဆဒ ဥရသိ စ ရာဇ္ဉာံ ရာဇာ ပြဘူနာံ ပြဘုၑ္စေတိ နာမ နိခိတမသ္တိ၊
೧೬ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ “ರಾಜಾಧಿರಾಜನೂ ಕರ್ತಾಧಿ ಕರ್ತನೂ” ಎಂಬ ಹೆಸರು ಬರೆದಿದೆ.
17 အနန္တရံ သူရျျေ တိၐ္ဌန် ဧကော ဒူတော မယာ ဒၖၐ္ဋး, အာကာၑမဓျ ဥဍ္ဍီယမာနာန် သရွွာန် ပက္ၐိဏး ပြတိ သ ဥစ္စဲးသွရေဏေဒံ ဃောၐယတိ, အတြာဂစ္ဆတ၊
೧೭ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ,
18 ဤၑွရသျ မဟာဘောဇျေ မိလတ, ရာဇ္ဉာံ ကြဝျာဏိ သေနာပတီနာံ ကြဝျာဏိ ဝီရာဏာံ ကြဝျာဏျၑွာနာံ တဒါရူဎာနာဉ္စ ကြဝျာဏိ ဒါသမုက္တာနာံ က္ၐုဒြမဟတာံ သရွွေၐာမေဝ ကြဝျာဏိ စ ယုၐ္မာဘိ ရ္ဘက္ၐိတဝျာနိ၊
೧೮ರಾಜರ ಮಾಂಸವನ್ನೂ, ಸಹಸ್ರಾಧಿಪತಿಗಳ ಮಾಂಸವನ್ನೂ, ಪರಾಕ್ರಮಶಾಲಿಗಳ ಮಾಂಸವನ್ನೂ, ಕುದುರೆಗಳ ಮಾಂಸವನ್ನೂ, ಕುದುರೆ ಸವಾರರ ಮಾಂಸವನ್ನೂ, ಸ್ವತಂತ್ರರೂ, ದಾಸರೂ, ಶ್ರೇಷ್ಠರು ಮತ್ತು ಕನಿಷ್ಠರು ಇವರೆಲ್ಲರ ಮಾಂಸವನ್ನೂ ತಿನ್ನುವುದಕ್ಕೆ ಬನ್ನಿರಿ” ಎಂದು ಹೇಳಿದನು.
19 တတး ပရံ တေနာၑွာရူဎဇနေန တဒီယသဲနျဲၑ္စ သာရ္ဒ္ဓံ ယုဒ္ဓံ ကရ္တ္တုံ သ ပၑုး ပၖထိဝျာ ရာဇာနသ္တေၐာံ သဲနျာနိ စ သမာဂစ္ဆန္တီတိ မယာ ဒၖၐ္ဋံ၊
೧೯ತರುವಾಯ ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು.
20 တတး သ ပၑု ရ္ဓၖတော ယၑ္စ မိထျာဘဝိၐျဒွက္တာ တသျာန္တိကေ စိတြကရ္မ္မာဏိ ကုရွွန် တဲရေဝ ပၑွင်္ကဓာရိဏသ္တတ္ပြတိမာပူဇကာံၑ္စ ဘြမိတဝါန် သော 'ပိ တေန သာရ္ဒ္ဓံ ဓၖတး၊ တော် စ ဝဟ္နိဂန္ဓကဇွလိတဟြဒေ ဇီဝန္တော် နိက္ၐိပ္တော်၊ (Limnē Pyr )
೨೦ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಗೆ ಹಾಕಲಾಯಿತು. (Limnē Pyr )
21 အဝၑိၐ္ဋာၑ္စ တသျာၑွာရူဎသျ ဝက္တြနိရ္ဂတခင်္ဂေန ဟတား, တေၐာံ ကြဝျဲၑ္စ ပက္ၐိဏး သရွွေ တၖပ္တိံ ဂတား၊
೨೧ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು, ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.