< မထိး 21 >

1 အနန္တရံ တေၐု ယိရူၑာလမ္နဂရသျ သမီပဝေရ္တ္တိနော ဇဲတုနနာမကဓရာဓရသျ သမီပသ္ထ္တိံ ဗဲတ္ဖဂိဂြာမမ် အာဂတေၐု, ယီၑုး ၑိၐျဒွယံ ပြေၐယန် ဇဂါဒ,
ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ
2 ယုဝါံ သမ္မုခသ္ထဂြာမံ ဂတွာ ဗဒ္ဓါံ ယာံ သဝတ္သာံ ဂရ္ဒ္ဒဘီံ ဟဌာတ် ပြာပ္သျထး, တာံ မောစယိတွာ မဒန္တိကမ် အာနယတံ၊
ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ.
3 တတြ ယဒိ ကၑ္စိတ် ကိဉ္စိဒ် ဝက္ၐျတိ, တရှိ ဝဒိၐျထး, ဧတသျာံ ပြဘေား ပြယောဇနမာသ္တေ, တေန သ တတ္က္ၐဏာတ် ပြဟေၐျတိ၊
ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು.
4 သီယောနး ကနျကာံ ယူယံ ဘာၐဓွမိတိ ဘာရတီံ၊ ပၑျ တေ နမြၑီလး သန် နၖပ အာရုဟျ ဂရ္ဒဘီံ၊ အရ္ထာဒါရုဟျ တဒွတ္သမာယာသျတိ တွဒန္တိကံ၊
ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ,
5 ဘဝိၐျဒွါဒိနောက္တံ ဝစနမိဒံ တဒါ သဖလမဘူတ်၊
“ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು.
6 အနန္တရံ တော် ၑ္ၐျိ ယီၑော ရျထာနိဒေၑံ တံ ဂြာမံ ဂတွာ
ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು.
7 ဂရ္ဒဘီံ တဒွတ္သဉ္စ သမာနီတဝန္တော်, ပၑ္စာတ် တဒုပရိ သွီယဝသနာနီ ပါတယိတွာ တမာရောဟယာမာသတုး၊
ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು.
8 တတော ဗဟဝေါ လောကာ နိဇဝသနာနိ ပထိ ပြသာရယိတုမာရေဘိရေ, ကတိပယာ ဇနာၑ္စ ပါဒပပရ္ဏာဒိကံ ဆိတွာ ပထိ ဝိသ္တာရယာမာသုး၊
ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
9 အဂြဂါမိနး ပၑ္စာဒ္ဂါမိနၑ္စ မနုဇာ ဥစ္စဲရ္ဇယ ဇယ ဒါယူဒး သန္တာနေတိ ဇဂဒုး ပရမေၑွရသျ နာမ္နာ ယ အာယာတိ သ ဓနျး, သရွွောပရိသ္ထသွရ္ဂေပိ ဇယတိ၊
ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು.
10 ဣတ္ထံ တသ္မိန် ယိရူၑာလမံ ပြဝိၐ္ဋေ ကော'ယမိတိ ကထနာတ် ကၖတ္သ္နံ နဂရံ စဉ္စလမဘဝတ်၊
೧೦ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು.
11 တတြ လောကေား ကထယာမာသုး, ဧၐ ဂါလီလ္ပြဒေၑီယ-နာသရတီယ-ဘဝိၐျဒွါဒီ ယီၑုး၊
೧೧ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು.
12 အနန္တရံ ယီၑုရီၑွရသျ မန္ဒိရံ ပြဝိၑျ တန္မဓျာတ် ကြယဝိကြယိဏော ဝဟိၑ္စကာရ; ဝဏိဇာံ မုဒြာသနာနီ ကပေါတဝိကြယိဏာဉ္စသနာနီ စ နျုဝ္ဇယာမာသ၊
೧೨ಬಳಿಕ ಯೇಸು ದೇವಾಲಯದೊಳಗೆ ಹೋಗಿ ಅದರಲ್ಲಿ ಮಾರುವ ಕೊಳ್ಳುವ ಎಲ್ಲರನ್ನೂ ಹೊರಡಿಸಿಬಿಟ್ಟು ಹಣ ವಿನಿಮಯದಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಕೆಡವಿಹಾಕಿದನು.
13 အပရံ တာနုဝါစ, ဧၐာ လိပိရာသ္တေ, "မမ ဂၖဟံ ပြာရ္ထနာဂၖဟမိတိ ဝိချာသျတိ", ကိန္တု ယူယံ တဒ် ဒသျူနာံ ဂဟွရံ ကၖတဝန္တး၊
೧೩ಆತನು ಅವರಿಗೆ, “‘ನನ್ನ ಮನೆಯು ಪ್ರಾರ್ಥನಾಲಯವಾಗಿದೆ’ ಎಂದು ಬರೆದಿದೆ; ಆದರೆನೀವು ಅದನ್ನು ಕಳ್ಳರ ಗವಿ ಮಾಡುತ್ತಿದ್ದೀರಿ” ಎಂದು ಹೇಳಿದನು.
14 တဒနန္တရမ် အန္ဓခဉ္စလောကာသ္တသျ သမီပမာဂတား, သ တာန် နိရာမယာန် ကၖတဝါန်၊
೧೪ಆಗ ಅಲ್ಲಿದ್ದ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಆತನು ಅವರನ್ನು ಸ್ವಸ್ಥಮಾಡಿದನು.
15 ယဒါ ပြဓာနယာဇကာ အဓျာပကာၑ္စ တေန ကၖတာနျေတာနိ စိတြကရ္မ္မာဏိ ဒဒၖၑုး, ဇယ ဇယ ဒါယူဒး သန္တာန, မန္ဒိရေ ဗာလကာနာမ် ဧတာဒၖၑမ် ဥစ္စဓွနိံ ၑုၑြုဝုၑ္စ, တဒါ မဟာကြုဒ္ဓါ ဗဘူဝး,
೧೫ಆದರೆ ಮುಖ್ಯಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ನೋಡಿ ಹಾಗು “ದಾವೀದನ ಕುಮಾರನಿಗೆ ಹೊಸನ್ನ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿ ಕೋಪಗೊಂಡರು.
16 တံ ပပြစ္ဆုၑ္စ, ဣမေ ယဒ် ဝဒန္တိ, တတ် ကိံ တွံ ၑၖဏောၐိ? တတော ယီၑုသ္တာန် အဝေါစတ်, သတျမ်; သ္တနျပါယိၑိၑူနာဉ္စ ဗာလကာနာဉ္စ ဝက္တြတး၊ သွကီယံ မဟိမာနံ တွံ သံပြကာၑယသိ သွယံ၊ ဧတဒွါကျံ ယူယံ ကိံ နာပဌတ?
೧೬ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು.
17 တတသ္တာန် ဝိဟာယ သ နဂရာဒ် ဗဲထနိယာဂြာမံ ဂတွာ တတြ ရဇနီံ ယာပယာမာသ၊
೧೭ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಮಲಗಿದನು.
18 အနန္တရံ ပြဘာတေ သတိ ယီၑုး ပုနရပိ နဂရမာဂစ္ဆန် က္ၐုဓာရ္တ္တော ဗဘူဝ၊
೧೮ಬೆಳಗ್ಗೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಬರುತ್ತಿರುವಾಗ ಹಸಿದಿದ್ದನು.
19 တတော မာရ္ဂပါရ္ၑွ ဥဍုမ္ဗရဝၖက္ၐမေကံ ဝိလောကျ တတ္သမီပံ ဂတွာ ပတြာဏိ ဝိနာ ကိမပိ န ပြာပျ တံ ပါဒပံ ပြောဝါစ, အဒျာရဘျ ကဒါပိ တွယိ ဖလံ န ဘဝတု; တေန တတ္က္ၐဏာတ် သ ဥဍုမ္ဗရမာဟီရုဟး ၑုၐ္ကတာံ ဂတး၊ (aiōn g165)
೧೯ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಹತ್ತಿರಕ್ಕೆ ಹೋಗಿ ಅದರಲ್ಲಿ ಬರೀ ಎಲೆಗಳು ಮಾತ್ರ ಇರುವುದನ್ನು ಕಂಡು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಎಂದೆಂದಿಗೂ ಫಲವು ಫಲಿಸದೆ ಹೋಗಲಿ” ಎಂದು ಹೇಳಿದನು. ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು. (aiōn g165)
20 တဒ် ဒၖၐ္ဋွာ ၑိၐျာ အာၑ္စရျျံ ဝိဇ္ဉာယ ကထယာမာသုး, အား, ဥဍုမွရပါဒပေါ'တိတူရ္ဏံ ၑုၐ္ကော'ဘဝတ်၊
೨೦ಶಿಷ್ಯರು ಅದನ್ನು ನೋಡಿ ಬೆರಗಾಗಿ, “ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿಹೋಯಿತಲ್ಲಾ” ಎಂದು ಆಶ್ಚರ್ಯಗೊಂಡರು.
21 တတော ယီၑုသ္တာနုဝါစ, ယုၐ္မာနဟံ သတျံ ဝဒါမိ, ယဒိ ယူယမသန္ဒိဂ္ဓား ပြတီထ, တရှိ ယူယမပိ ကေဝလောဍုမွရပါဒပံ ပြတီတ္ထံ ကရ္တ္တုံ ၑက္ၐျထ, တန္န, တွံ စလိတွာ သာဂရေ ပတေတိ ဝါကျံ ယုၐ္မာဘိရသ္မိန ၑဲလေ ပြောက္တေပိ တဒဲဝ တဒ် ဃဋိၐျတေ၊
೨೧ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು.
22 တထာ ဝိၑွသျ ပြာရ္ထျ ယုၐ္မာဘိ ရျဒ် ယာစိၐျတေ, တဒေဝ ပြာပ္သျတေ၊
೨೨ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ” ಅಂದನು.
23 အနန္တရံ မန္ဒိရံ ပြဝိၑျောပဒေၑနသမယေ တတ္သမီပံ ပြဓာနယာဇကား ပြာစီနလောကာၑ္စာဂတျ ပပြစ္ဆုး, တွယာ ကေန သာမရ္ထျနဲတာနိ ကရ္မ္မာဏိ ကြိယန္တေ? ကေန ဝါ တုဘျမေတာနိ သာမရ္ထျာနိ ဒတ္တာနိ?
೨೩ತರುವಾಯ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿರುವಾಗ ಮುಖ್ಯಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.
24 တတော ယီၑုး ပြတျဝဒတ်, အဟမပိ ယုၐ္မာန် ဝါစမေကာံ ပၖစ္ဆာမိ, ယဒိ ယူယံ တဒုတ္တရံ ဒါတုံ ၑက္ၐျထ, တဒါ ကေန သာမရ္ထျေန ကရ္မ္မာဏျေတာနိ ကရောမိ, တဒဟံ ယုၐ္မာန် ဝက္ၐျာမိ၊
೨೪ಯೇಸು ಅವರಿಗೆ ಹೇಳಿದ್ದೇನೆಂದರೆ, “ನಾನೂ ಸಹ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರಿಸಿದರೆ ಆಗ ನಾನು ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.
25 ယောဟနော မဇ္ဇနံ ကသျာဇ္ဉယာဘဝတ်? ကိမီၑွရသျ မနုၐျသျ ဝါ? တတသ္တေ ပရသ္ပရံ ဝိဝိစျ ကထယာမာသုး, ယဒီၑွရသျေတိ ဝဒါမသ္တရှိ ယူယံ တံ ကုတော န ပြတျဲတ? ဝါစမေတာံ ဝက္ၐျတိ၊
೨೫ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂದಿತು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ?” ಅಂದನು. ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ’ ಎಂದು ನಮಗೆ ಕೇಳಿಯಾನು;
26 မနုၐျသျေတိ ဝက္တုမပိ လောကေဘျော ဗိဘီမး, ယတး သရွွဲရပိ ယောဟန် ဘဝိၐျဒွါဒီတိ ဇ္ဉာယတေ၊
೨೬‘ಮನುಷ್ಯರಿಂದ ಬಂದಿತೆಂದು’ ಹೇಳಿದರೆ, ನಮಗೆ ಜನರ ಭಯವಿದೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರಲ್ಲಾ” ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
27 တသ္မာတ် တေ ယီၑုံ ပြတျဝဒန်, တဒ် ဝယံ န ဝိဒ္မး၊ တဒါ သ တာနုက္တဝါန်, တရှိ ကေန သာမရထျေန ကရ္မ္မာဏျေတာနျဟံ ကရောမိ, တဒပျဟံ ယုၐ္မာန် န ဝက္ၐျာမိ၊
೨೭ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ.
28 ကသျစိဇ္ဇနသျ ဒွေါ် သုတာဝါသ္တာံ သ ဧကသျ သုတသျ သမီပံ ဂတွာ ဇဂါဒ, ဟေ သုတ, တွမဒျ မမ ဒြာက္ၐာက္ၐေတြေ ကရ္မ္မ ကရ္တုံ ဝြဇ၊
೨೮ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ನೀನು ಹೋಗಿ ಈ ದಿನ ದ್ರಾಕ್ಷಾತೋಟದಲ್ಲಿ ಕೆಲಸ ಮಾಡು’ ಎಂದು ಹೇಳಲು
29 တတး သ ဥက္တဝါန်, န ယာသျာမိ, ကိန္တု ၑေၐေ'နုတပျ ဇဂါမ၊
೨೯ಅವನು ಪ್ರತ್ಯುತ್ತರವಾಗಿ, ‘ನಾನು ಹೋಗುವುದಿಲ್ಲವೆಂದು’ ಹೇಳಿದ್ದಾಗ್ಯೂ ತರುವಾಯ ತನ್ನ ಮನಸ್ಸನ್ನು ಬದಲಿಸಿ, ತೋಟಕ್ಕೆ ಹೋದನು.
30 အနန္တရံ သောနျသုတသျ သမီပံ ဂတွာ တထဲဝ ကထ္တိဝါန်; တတး သ ပြတျုဝါစ, မဟေစ္ဆ ယာမိ, ကိန္တု န ဂတး၊
೩೦ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು, ‘ನಾನು ಹೋಗುತ್ತೇನಪ್ಪಾ’ ಎಂದು ಹೇಳಿದರೂ ಅವನು ಹೋಗಲೇ ಇಲ್ಲ.
31 ဧတယေား ပုတြယော ရ္မဓျေ ပိတုရဘိမတံ ကေန ပါလိတံ? ယုၐ္မာဘိး ကိံ ဗုဓျတေ? တတသ္တေ ပြတျူစုး, ပြထမေန ပုတြေဏ၊ တဒါနီံ ယီၑုသ္တာနုဝါစ, အဟံ ယုၐ္မာန် တထျံ ဝဒါမိ, စဏ္ဍာလာ ဂဏိကာၑ္စ ယုၐ္မာကမဂြတ ဤၑွရသျ ရာဇျံ ပြဝိၑန္တိ၊
೩೧ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು? ಎಂದು ಕೇಳಿದ್ದಕ್ಕೆ ಅವರು, ‘ಮೊಲನೆಯವನೇ’” ಅಂದರು. ಆಗ ಯೇಸು ಅವರಿಗೆ, ಸುಂಕದವರೂ, ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
32 ယတော ယုၐ္မာကံ သမီပံ ယောဟနိ ဓရ္မ္မပထေနာဂတေ ယူယံ တံ န ပြတီထ, ကိန္တု စဏ္ဍာလာ ဂဏိကာၑ္စ တံ ပြတျာယန်, တဒ် ဝိလောကျာပိ ယူယံ ပြတျေတုံ နာခိဒျဓွံ၊
೩೨ಯಾಕೆಂದರೆ, ಯೋಹಾನನು ನೀತಿಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರು, ವೇಶ್ಯೆಯರು ಅವನನ್ನು ನಂಬಿದರು; ನೀವು ಇದನ್ನು ನೋಡಿದ್ದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.
33 အပရမေကံ ဒၖၐ္ဋာန္တံ ၑၖဏုတ, ကၑ္စိဒ် ဂၖဟသ္ထး က္ၐေတြေ ဒြာက္ၐာလတာ ရောပယိတွာ တစ္စတုရ္ဒိက္ၐု ဝါရဏီံ ဝိဓာယ တန္မဓျေ ဒြာက္ၐာယန္တြံ သ္ထာပိတဝါန်, မာဉ္စဉ္စ နိရ္မ္မိတဝါန်, တတး ကၖၐကေၐု တတ် က္ၐေတြံ သမရ္ပျ သွယံ ဒူရဒေၑံ ဇဂါမ၊
೩೩“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನುಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನುಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು.
34 တဒနန္တရံ ဖလသမယ ဥပသ္ထိတေ သ ဖလာနိ ပြာပ္တုံ ကၖၐီဝလာနာံ သမီပံ နိဇဒါသာန် ပြေၐယာမာသ၊
೩೪ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು,
35 ကိန္တု ကၖၐီဝလာသ္တသျ တာန် ဒါသေယာန် ဓၖတွာ ကဉ္စန ပြဟၖတဝန္တး, ကဉ္စန ပါၐာဏဲရာဟတဝန္တး, ကဉ္စန စ ဟတဝန္တး၊
೩೫ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು.
36 ပုနရပိ သ ပြဘုး ပြထမတော'ဓိကဒါသေယာန် ပြေၐယာမာသ, ကိန္တု တေ တာန် ပြတျပိ တထဲဝ စကြုး၊
೩೬ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು.
37 အနန္တရံ မမ သုတေ ဂတေ တံ သမာဒရိၐျန္တေ, ဣတျုက္တွာ ၑေၐေ သ နိဇသုတံ တေၐာံ သန္နိဓိံ ပြေၐယာမာသ၊
೩೭ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.
38 ကိန္တု တေ ကၖၐီဝလား သုတံ ဝီက္ၐျ ပရသ္ပရမ် ဣတိ မန္တြယိတုမ် အာရေဘိရေ, အယမုတ္တရာဓိကာရီ ဝယမေနံ နိဟတျာသျာဓိကာရံ သွဝၑီကရိၐျာမး၊
೩೮ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು
39 ပၑ္စာတ် တေ တံ ဓၖတွာ ဒြာက္ၐာက္ၐေတြာဒ် ဗဟိး ပါတယိတွာဗဓိၐုး၊
೩೯ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.
40 ယဒါ သ ဒြာက္ၐာက္ၐေတြပတိရာဂမိၐျတိ, တဒါ တာန် ကၖၐီဝလာန် ကိံ ကရိၐျတိ?
೪೦ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು.
41 တတသ္တေ ပြတျဝဒန်, တာန် ကလုၐိဏော ဒါရုဏယာတနာဘိရာဟနိၐျတိ, ယေ စ သမယာနုကြမာတ် ဖလာနိ ဒါသျန္တိ, တာဒၖၑေၐု ကၖၐီဝလေၐု က္ၐေတြံ သမရ္ပယိၐျတိ၊
೪೧ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು.
42 တဒါ ယီၑုနာ တေ ဂဒိတား, ဂြဟဏံ န ကၖတံ ယသျ ပါၐာဏသျ နိစာယကဲး၊ ပြဓာနပြသ္တရး ကောဏေ သဧဝ သံဘဝိၐျတိ၊ ဧတတ် ပရေၑိတုး ကရ္မ္မာသ္မဒၖၐ္ဋာဝဒ္ဘုတံ ဘဝေတ်၊ ဓရ္မ္မဂြန္ထေ လိခိတမေတဒွစနံ ယုၐ္မာဘိး ကိံ နာပါဌိ?
೪೨ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’
43 တသ္မာဒဟံ ယုၐ္မာန် ဝဒါမိ, ယုၐ္မတ္တ ဤၑွရီယရာဇျမပနီယ ဖလောတ္ပာဒယိတြနျဇာတယေ ဒါယိၐျတေ၊
೪೩ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.
44 ယော ဇန ဧတတ္ပာၐာဏောပရိ ပတိၐျတိ, တံ သ ဘံက္ၐျတေ, ကိန္တွယံ ပါၐာဏော ယသျောပရိ ပတိၐျတိ, တံ သ ဓူလိဝတ် စူရ္ဏီကရိၐျတိ၊
೪೪ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅದು ಅವನನ್ನು ಪುಡಿಪುಡಿ ಮಾಡುವುದು” ಎಂದು ಹೇಳಿದನು.
45 တဒါနီံ ပြာဓနယာဇကား ဖိရူၑိနၑ္စ တသျေမာံ ဒၖၐ္ဋာန္တကထာံ ၑြုတွာ သော'သ္မာနုဒ္ဒိၑျ ကထိတဝါန်, ဣတိ ဝိဇ္ဉာယ တံ ဓရ္တ္တုံ စေၐ္ဋိတဝန္တး;
೪೫ಮುಖ್ಯಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಾನೆಂದು ತಿಳಿದುಕೊಂಡು. ಯೇಸುವನ್ನು ಬಂಧಿಸಲು ಸಂದರ್ಭ ನೋಡುತ್ತಿದ್ದರು;
46 ကိန္တု လောကေဘျော ဗိဘျုး, ယတော လောကဲး သ ဘဝိၐျဒွါဒီတျဇ္ဉာယိ၊
೪೬ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.

< မထိး 21 >