< မထိး 2 >

1 အနန္တရံ ဟေရောဒ် သံဇ္ဉကေ ရာဇ္ဉိ ရာဇျံ ၑာသတိ ယိဟူဒီယဒေၑသျ ဗဲတ္လေဟမိ နဂရေ ယီၑော် ဇာတဝတိ စ, ကတိပယာ ဇျောတိရွွုဒး ပူရွွသျာ ဒိၑော ယိရူၑာလမ္နဂရံ သမေတျ ကထယမာသုး,
ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು,
2 ယော ယိဟူဒီယာနာံ ရာဇာ ဇာတဝါန်, သ ကုတြာသ္တေ? ဝယံ ပူရွွသျာံ ဒိၑိ တိၐ္ဌန္တသ္တဒီယာံ တာရကာမ် အပၑျာမ တသ္မာတ် တံ ပြဏန္တုမ် အဂမာမ၊
“ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು.
3 တဒါ ဟေရောဒ် ရာဇာ ကထာမေတာံ နိၑမျ ယိရူၑာလမ္နဂရသ္ထိတဲး သရွွမာနဝဲး သာရ္ဒ္ဓမ် ဥဒွိဇျ
ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು.
4 သရွွာန် ပြဓာနယာဇကာန် အဓျာပကာံၑ္စ သမာဟူယာနီယ ပပြစ္ဆ, ခြီၐ္ဋး ကုတြ ဇနိၐျတေ?
ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು.
5 တဒါ တေ ကထယာမာသုး, ယိဟူဒီယဒေၑသျ ဗဲတ္လေဟမိ နဂရေ, ယတော ဘဝိၐျဒွါဒိနာ ဣတ္ထံ လိခိတမာသ္တေ,
ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ,
6 သရွွာဘျော ရာဇဓာနီဘျော ယိဟူဒီယသျ နီဝၖတး၊ ဟေ ယီဟူဒီယဒေၑသျေ ဗဲတ္လေဟမ် တွံ န စာဝရာ၊ ဣသြာယေလီယလောကာန် မေ ယတော ယး ပါလယိၐျတိ၊ တာဒၖဂေကော မဟာရာဇသ္တွန္မဓျ ဥဒ္ဘဝိၐျတီ။
“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು.
7 တဒါနီံ ဟေရောဒ် ရာဇာ တာန် ဇျောတိရွွိဒေါ ဂေါပနမ် အာဟူယ သာ တာရကာ ကဒါ ဒၖၐ္ဋာဘဝတ်, တဒ် ဝိနိၑ္စယာမာသ၊
ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು,
8 အပရံ တာန် ဗဲတ္လေဟမံ ပြဟီတျ ဂဒိတဝါန်, ယူယံ ယာတ, ယတ္နာတ် တံ ၑိၑုမ် အနွိၐျ တဒုဒ္ဒေၑေ ပြာပ္တေ မဟျံ ဝါရ္တ္တာံ ဒါသျထ, တတော မယာပိ ဂတွာ သ ပြဏံသျတေ၊
“ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು.
9 တဒါနီံ ရာဇ္ဉ ဧတာဒၖၑီမ် အာဇ္ဉာံ ပြာပျ တေ ပြတသ္ထိရေ, တတး ပူရွွရ္သျာံ ဒိၑိ သ္ထိတဲသ္တဲ ရျာ တာရကာ ဒၖၐ္ဋာ သာ တာရကာ တေၐာမဂြေ ဂတွာ ယတြ သ္ထာနေ ၑိၑူရာသ္တေ, တသျ သ္ထာနသျောပရိ သ္ထဂိတာ တသျော်၊
ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು.
10 တဒ် ဒၖၐ္ဋွာ တေ မဟာနန္ဒိတာ ဗဘူဝုး,
೧೦ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು.
11 တတော ဂေဟမဓျ ပြဝိၑျ တသျ မာတြာ မရိယမာ သာဒ္ဓံ တံ ၑိၑုံ နိရီက္ၐယ ဒဏ္ဍဝဒ် ဘူတွာ ပြဏေမုး, အပရံ သွေၐာံ ဃနသမ္ပတ္တိံ မောစယိတွာ သုဝရ္ဏံ ကုန္ဒုရုံ ဂန္ဓရမဉ္စ တသ္မဲ ဒရ္ၑနီယံ ဒတ္တဝန္တး၊
೧೧ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.
12 ပၑ္စာဒ် ဟေရောဒ် ရာဇသျ သမီပံ ပုနရပိ ဂန္တုံ သွပ္န ဤၑွရေဏ နိၐိဒ္ဓါး သန္တော 'နျေန ပထာ တေ နိဇဒေၑံ ပြတိ ပြတသ္ထိရေ၊
೧೨ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.
13 အနန္တရံ တေၐု ဂတဝတ္မု ပရမေၑွရသျ ဒူတော ယူၐဖေ သွပ္နေ ဒရ္ၑနံ ဒတွာ ဇဂါဒ, တွမ် ဥတ္ထာယ ၑိၑုံ တန္မာတရဉ္စ ဂၖဟီတွာ မိသရ္ဒေၑံ ပလာယသွ, အပရံ ယာဝဒဟံ တုဘျံ ဝါရ္တ္တာံ န ကထယိၐျာမိ, တာဝတ် တတြဲဝ နိဝသ, ယတော ရာဇာ ဟေရောဒ် ၑိၑုံ နာၑယိတုံ မၖဂယိၐျတေ၊
೧೩ಜ್ಞಾನಿಗಳು ಹೋದ ಮೇಲೆ ದೇವದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಎದ್ದು ಕೂಸನ್ನೂ, ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗು, ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು” ಎಂದನು.
14 တဒါနီံ ယူၐဖ် ဥတ္ထာယ ရဇနျာံ ၑိၑုံ တန္မာတရဉ္စ ဂၖဟီတွာ မိသရ္ဒေၑံ ပြတိ ပြတသ္ထေ,
೧೪ಅದೇ ರಾತ್ರಿ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಹೆರೋದನು ತೀರಿಹೋಗುವ ತನಕ ಅವರು ಅಲ್ಲೇ ಇದ್ದರು.
15 ဂတွာ စ ဟေရောဒေါ နၖပတေ ရ္မရဏပရျျန္တံ တတြ ဒေၑေ နျုဝါသ, တေန မိသရ္ဒေၑာဒဟံ ပုတြံ သွကီယံ သမုပါဟူယမ်၊ ယဒေတဒွစနမ် ဤၑွရေဏ ဘဝိၐျဒွါဒိနာ ကထိတံ တတ် သဖလမဘူတ်၊
೧೫ಹೀಗೆ, “ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು” ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.
16 အနန္တရံ ဟေရောဒ် ဇျောတိရွိဒ္ဘိရာတ္မာနံ ပြဝဉ္စိတံ ဝိဇ္ဉာယ ဘၖၑံ စုကောပ; အပရံ ဇျောတိရွွိဒ္ဘျသ္တေန ဝိနိၑ္စိတံ ယဒ် ဒိနံ တဒ္ဒိနာဒ် ဂဏယိတွာ ဒွိတီယဝတ္သရံ ပြဝိၐ္ဋာ ယာဝန္တော ဗာလကာ အသ္မိန် ဗဲတ္လေဟမ္နဂရေ တတ္သီမမဓျေ စာသန်, လောကာန် ပြဟိတျ တာန် သရွွာန် ဃာတယာမာသ၊
೧೬ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.
17 အတး အနေကသျ ဝိလာပသျ နိနာဒ: ကြန္ဒနသျ စ၊ ၑောကေန ကၖတၑဗ္ဒၑ္စ ရာမာယာံ သံနိၑမျတေ၊ သွဗာလဂဏဟေတောရွဲ ရာဟေလ် နာရီ တု ရောဒိနီ၊ န မနျတေ ပြဗောဓန္တု ယတသ္တေ နဲဝ မန္တိ ဟိ။
೧೭ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಹೀಗೆ ನೆರವೇರಿತು; ಅದೇನೆಂದರೆ,
18 ယဒေတဒ် ဝစနံ ယိရီမိယနာမကဘဝိၐျဒွါဒိနာ ကထိတံ တတ် တဒါနီံ သဖလမ် အဘူတ်၊
೧೮“ರಾಮದಲ್ಲಿ ಬೊಬ್ಬೆಯು ಕೇಳಿಸಿತು; ಆಕ್ರಂದನವೂ ಬಹು ಗೋಳಾಟವೂ ಉಂಟಾದವು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಗೋಳಾಡಿ ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದಲಾರದೆ ಇದ್ದಳು” ಎಂಬುದೇ.
19 တဒနန္တရံ ဟေရေဒိ ရာဇနိ မၖတေ ပရမေၑွရသျ ဒူတော မိသရ္ဒေၑေ သွပ္နေ ဒရ္ၑနံ ဒတ္တွာ ယူၐဖေ ကထိတဝါန္
೧೯ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು,
20 တွမ် ဥတ္ထာယ ၑိၑုံ တန္မာတရဉ္စ ဂၖဟီတွာ ပုနရပီသြာယေလော ဒေၑံ ယာဟီ, ယေ ဇနား ၑိၑုံ နာၑယိတုမ် အမၖဂယန္တ, တေ မၖတဝန္တး၊
೨೦“ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು” ಎಂದು ಹೇಳಿದನು.
21 တဒါနီံ သ ဥတ္ထာယ ၑိၑုံ တန္မာတရဉ္စ ဂၖဟ္လန် ဣသြာယေလ္ဒေၑမ် အာဇဂါမ၊
೨೧ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.
22 ကိန္တု ယိဟူဒီယဒေၑေ အရ္ခိလာယနာမ ရာဇကုမာရော နိဇပိတု ရှေရောဒး ပဒံ ပြာပျ ရာဇတွံ ကရောတီတိ နိၑမျ တတ် သ္ထာနံ ယာတုံ ၑင်္ကိတဝါန်, ပၑ္စာတ် သွပ္န ဤၑွရာတ် ပြဗောဓံ ပြာပျ ဂါလီလ္ဒေၑသျ ပြဒေၑဲကံ ပြသ္ထာယ နာသရန္နာမ နဂရံ ဂတွာ တတြ နျုၐိတဝါန်,
೨೨ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆ ಎಂದು ಕೇಳಿ ಅಲ್ಲಿಗೆ ಹೋಗುವುದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು.
23 တေန တံ နာသရတီယံ ကထယိၐျန္တိ, ယဒေတဒွါကျံ ဘဝိၐျဒွါဒိဘိရုက္တ္တံ တတ် သဖလမဘဝတ်၊
೨೩ಅಲ್ಲಿರುವ ನಜರೇತೆಂಬ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನು ನಜರೇತಿನವನೆಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳು ಹೇಳಿರುವ ಮಾತು ನೆರವೇರಿತು.

< မထိး 2 >