< မထိး 17 >
1 အနန္တရံ ၐဍ္ဒိနေဘျး ပရံ ယီၑုး ပိတရံ ယာကူဗံ တတ္သဟဇံ ယောဟနဉ္စ ဂၖဟ္လန် ဥစ္စာဒြေ ရွိဝိက္တသ္ထာနမ် အာဂတျ တေၐာံ သမက္ၐံ ရူပမနျတ် ဒဓာရ၊
೧ಆರು ದಿನಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಅವನ ತಮ್ಮ ಯೋಹಾನನನ್ನೂ ಮಾತ್ರ ಏಕಾಂತವಾಗಿ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು.
2 တေန တဒါသျံ တေဇသွိ, တဒါဘရဏမ် အာလောကဝတ် ပါဏ္ဍရမဘဝတ်၊
೨ಅಲ್ಲಿ ಆತನು ಅವರ ಮುಂದೆ ರೂಪಾಂತರಗೊಂಡನು. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.
3 အနျစ္စ တေန သာကံ သံလပန္တော် မူသာ ဧလိယၑ္စ တေဘျော ဒရ္ၑနံ ဒဒတုး၊
೩ಇಗೋ, ಮೋಶೆಯೂ ಎಲೀಯನೂ ಆತನ ಸಂಗಡ ಮಾತನಾಡುತ್ತಾ ಅವರಿಗೆ ಕಾಣಿಸಿಕೊಂಡರು.
4 တဒါနီံ ပိတရော ယီၑုံ ဇဂါဒ, ဟေ ပြဘော သ္ထိတိရတြာသ္မာကံ ၑုဘာ, ယဒိ ဘဝတာနုမနျတေ, တရှိ ဘဝဒရ္ထမေကံ မူသာရ္ထမေကမ် ဧလိယာရ္ထဉ္စဲကမ် ဣတိ တြီဏိ ဒူၐျာဏိ နိရ္မ္မမ၊
೪ಆಗ ಪೇತ್ರನು ಯೇಸುವಿಗೆ, “ಕರ್ತನೇ, ನಾವು ಇಲ್ಲೇ ಇರುವುದು ಒಳ್ಳೆಯದು. ನೀನು ಬಯಸುವುದಾದರೆ, ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು” ಎಂದು ಹೇಳಿದನು.
5 ဧတတ္ကထနကာလ ဧက ဥဇ္ဇဝလး ပယောဒသ္တေၐာမုပရိ ဆာယာံ ကၖတဝါန်, ဝါရိဒါဒ် ဧၐာ နဘသီယာ ဝါဂ် ဗဘူဝ, မမာယံ ပြိယး ပုတြး, အသ္မိန် မမ မဟာသန္တောၐ ဧတသျ ဝါကျံ ယူယံ နိၑာမယတ၊
೫ಆತನು ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಇದಲ್ಲದೆ ಆ ಮೋಡದೊಳಗಿನಿಂದ “ಈತನು ಪ್ರಿಯನಾಗಿರುವ ನನ್ನ ಮಗನು ಈತನನ್ನು ನಾನು ಮೆಚ್ಚಿದ್ದೇನೆ ಈತನಿಗೆ ಕಿವಿಗೊಡಿರಿ” ಎಂದು ಹೇಳುವ ವಾಣಿವುಂಟಾಯಿತು.
6 ကိန္တု ဝါစမေတာံ ၑၖဏွန္တဧဝ ၑိၐျာ မၖၑံ ၑင်္ကမာနာ နျုဗ္ဇာ နျပတန်၊
೬ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು.
7 တဒါ ယီၑုရာဂတျ တေၐာံ ဂါတြာဏိ သ္ပၖၑန် ဥဝါစ, ဥတ္တိၐ္ဌတ, မာ ဘဲၐ္ဋ၊
೭ಆದರೆ ಯೇಸು ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, “ಏಳಿರಿ ಹೆದರಬೇಡಿರಿ” ಅಂದನು.
8 တဒါနီံ နေတြာဏျုန္မီလျ ယီၑုံ ဝိနာ ကမပိ န ဒဒၖၑုး၊
೮ಅವರು ಕಣ್ಣೆತ್ತಿ ಮೇಲೆ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
9 တတး ပရမ် အဒြေရဝရောဟဏကာလေ ယီၑုသ္တာန် ဣတျာဒိဒေၑ, မနုဇသုတသျ မၖတာနာံ မဓျာဒုတ္ထာနံ ယာဝန္န ဇာယတေ, တာဝတ် ယုၐ္မာဘိရေတဒ္ဒရ္ၑနံ ကသ္မဲစိဒပိ န ကထယိတဝျံ၊
೯ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ಅವರಿಗೆ, “ಈ ದರ್ಶನದ ಬಗ್ಗೆ ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬಾರದು” ಎಂದು ಆಜ್ಞಾಪಿಸಿದನು.
10 တဒါ ၑိၐျာသ္တံ ပပြစ္ဆုး, ပြထမမ် ဧလိယ အာယာသျတီတိ ကုတ ဥပါဓျာယဲရုစျတေ?
೧೦ಆಗ ಆತನ ಶಿಷ್ಯರು, “ಎಲೀಯನು ಮೊದಲು ಬರುವುದು ಅವಶ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ ಏಕೆ?” ಎಂದು ಆತನನ್ನು ಕೇಳಿದರು.
11 တတော ယီၑုး ပြတျဝါဒီတ်, ဧလိယး ပြာဂေတျ သရွွာဏိ သာဓယိၐျတီတိ သတျံ,
೧೧ಯೇಸು ಅವರಿಗೆ, “ಎಲೀಯನು ಮೊದಲು ಬರುವುದು ನಿಜ. ಬಂದು ಎಲ್ಲವನ್ನು ಪುನಃ ಸ್ಥಾಪಿಸುವನು.
12 ကိန္တွဟံ ယုၐ္မာန် ဝစ္မိ, ဧလိယ ဧတျ ဂတး, တေ တမပရိစိတျ တသ္မိန် ယထေစ္ဆံ ဝျဝဇဟုး; မနုဇသုတေနာပိ တေၐာမန္တိကေ တာဒၖဂ် ဒုးခံ ဘောက္တဝျံ၊
೧೨ಆದರೆ ನಾನು ನಿಮಗೆ ಹೇಳುತ್ತೇನೆ, ಎಲೀಯನು ಬಂದಾಯಿತು, ಆದರೆ ಜನರು ಅವನನ್ನು ಗುರುತಿಸದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದರು. ಅದರಂತೆಯೇ ಮನುಷ್ಯಕುಮಾರನು ಸಹ ಅವರಿಂದ ಹಿಂಸೆಗೊಳಗಾಗುವನು” ಎಂದು ಉತ್ತರ ಕೊಟ್ಟನು.
13 တဒါနီံ သ မဇ္ဇယိတာရံ ယောဟနမဓိ ကထာမေတာံ ဝျာဟၖတဝါန်, ဣတ္ထံ တစ္ဆိၐျာ ဗုဗုဓိရေ၊
೧೩ಸ್ನಾನಿಕನಾದ ಯೋಹಾನನ ವಿಷಯವಾಗಿ ತಮ್ಮೊಂದಿಗೆ ಮಾತನಾಡಿದನೆಂದು ಆಗ ಶಿಷ್ಯರು ತಿಳಿದುಕೊಂಡರು.
14 ပၑ္စာတ် တေၐု ဇနနိဝဟသျာန္တိကမာဂတေၐု ကၑ္စိတ် မနုဇသ္တဒန္တိကမေတျ ဇာနူနီ ပါတယိတွာ ကထိတဝါန်,
೧೪ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತಿರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ,
15 ဟေ ပြဘော, မတ္ပုတြံ ပြတိ ကၖပါံ ဝိဒဓာတု, သောပသ္မာရာမယေန ဘၖၑံ ဝျထိတး သန် ပုနး ပုန ရွဟ္နော် မုဟု ရ္ဇလမဓျေ ပတတိ၊
೧೫“ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ.
16 တသ္မာဒ် ဘဝတး ၑိၐျာဏာံ သမီပေ တမာနယံ ကိန္တု တေ တံ သွာသ္ထံ ကရ္တ္တုံ န ၑက္တား၊
೧೬ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು.
17 တဒါ ယီၑုး ကထိတဝါန် ရေ အဝိၑွာသိနး, ရေ ဝိပထဂါမိနး, ပုနး ကတိကာလာန် အဟံ ယုၐ္မာကံ သန္နိဓော် သ္ထာသျာမိ? ကတိကာလာန် ဝါ ယုၐ္မာန် သဟိၐျေ? တမတြ မမာန္တိကမာနယတ၊
೧೭ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ” ಅಂದನು.
18 ပၑ္စာဒ် ယီၑုနာ တရ္ဇတဧဝ သ ဘူတသ္တံ ဝိဟာယ ဂတဝါန်, တဒ္ဒဏ္ဍဧဝ သ ဗာလကော နိရာမယော'ဘူတ်၊
೧೮ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.
19 တတး ၑိၐျာ ဂုပ္တံ ယီၑုမုပါဂတျ ဗဘာၐိရေ, ကုတော ဝယံ တံ ဘူတံ တျာဇယိတုံ န ၑက္တား?
೧೯ತರುವಾಯ ಶಿಷ್ಯರು ಏಕಾಂತವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು ಕೇಳಿದರು?”
20 ယီၑုနာ တေ ပြောက္တား, ယုၐ္မာကမပြတျယာတ်;
೨೦ಆತನು ಅವರಿಗೆ, “ನಿಮ್ಮ ಅಪನಂಬಿಕೆಯಿಂದಲೇ ಆಗಲಿಲ್ಲ. ಸಾಸಿವೇ ಕಾಳಿನಷ್ಟು ನಂಬಿಕೆ ನಿಮಗೆ ಇರುವುದಾದರೆ,
21 ယုၐ္မာနဟံ တထျံ ဝစ္မိ ယဒိ ယုၐ္မာကံ သရ္ၐပဲကမာတြောပိ ဝိၑွာသော ဇာယတေ, တရှိ ယုၐ္မာဘိရသ္မိန် ၑဲလေ တွမိတး သ္ထာနာတ် တတ် သ္ထာနံ ယာဟီတိ ဗြူတေ သ တဒဲဝ စလိၐျတိ, ယုၐ္မာကံ ကိမပျသာဓျဉ္စ ကရ္မ္မ န သ္ထာသျာတိ၊ ကိန္တု ပြာရ္ထနောပဝါသော် ဝိနဲတာဒၖၑော ဘူတော န တျာဇျေတ၊
೨೧ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಅಲ್ಲಿಗೆ ಸರಿದು ಹೋಗು’ ಎಂದು ಹೇಳಿದರೂ ಅದು ಹೋಗುವುದು ಮತ್ತು ನಿಮಗೆ ಅಸಾಧ್ಯವಾದುದು ಒಂದೂ ಇರುವುದಿಲ್ಲ” ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆತನು, ಈ ರೀತಿಯ ದೆವ್ವಗಳು ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವರೀತಿಯಿಂದಲೂ ಇವುಗಳು ಬಿಟ್ಟು ಹೋಗುವುದಿಲ್ಲವೆಂದು ಅವರಿಗೆ ಹೇಳಿದನು.
22 အပရံ တေၐာံ ဂါလီလ္ပြဒေၑေ ဘြမဏကာလေ ယီၑုနာ တေ ဂဒိတား, မနုဇသုတော ဇနာနာံ ကရေၐု သမရ္ပယိၐျတေ တဲ ရှနိၐျတေ စ,
೨೨ಅವರು ಗಲಿಲಾಯದಲ್ಲಿ ವಾಸಿಸುತ್ತಿರುವಾಗಲೇ ಯೇಸು ಶಿಷ್ಯರಿಗೆ, “ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು.
23 ကိန္တု တၖတီယေ'ဟိန မ ဥတ္ထာပိၐျတေ, တေန တေ ဘၖၑံ ဒုးခိတာ ဗဘူဝး၊
೨೩ಅವರು ಆತನನ್ನು ಕೊಲ್ಲುವರು, ಆದರೆ ಸತ್ತು ಮೂರನೆಯ ದಿನದಲ್ಲಿ ಆತನು ಜೀವಿತನಾಗಿ ಎಬ್ಬಿಸಲ್ಪಡುವನು” ಎಂದು ಹೇಳಿದನು. ಅದನ್ನು ಕೇಳಿ ಅವರು ಬಹಳ ದುಃಖಪಟ್ಟರು.
24 တဒနန္တရံ တေၐု ကဖရ္နာဟူမ္နဂရမာဂတေၐု ကရသံဂြာဟိဏး ပိတရာန္တိကမာဂတျ ပပြစ္ဆုး, ယုၐ္မာကံ ဂုရုး ကိံ မန္ဒိရာရ္ထံ ကရံ န ဒဒါတိ? တတး ပိတရး ကထိတဝါန် ဒဒါတိ၊
೨೪ಅವರು ಕಪೆರ್ನೌಮಿಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು ಸಂಗ್ರಹಿಸುವವರು ಪೇತ್ರನ ಬಳಿಗೆ ಬಂದು, “ನಿಮ್ಮ ಗುರುವು ದೇವಾಲಯದ ತೆರಿಗೆಯನ್ನು ಕಟ್ಟುವುದಿಲ್ಲವೇ” ಎಂದು ಕೇಳಲು, “ಹೌದು ಕಟ್ಟುವನು” ಅಂದನು.
25 တတသ္တသ္မိန် ဂၖဟမဓျမာဂတေ တသျ ကထာကထနာတ် ပူရွွမေဝ ယီၑုရုဝါစ, ဟေ ၑိမောန်, မေဒိနျာ ရာဇာနး သွသွာပတျေဘျး ကိံ ဝိဒေၑိဘျး ကေဘျး ကရံ ဂၖဟ္လန္တိ? အတြ တွံ ကိံ ဗုဓျသေ? တတး ပိတရ ဥက္တဝါန်, ဝိဒေၑိဘျး၊
೨೫ಪೇತ್ರನು ಮನೆಯೊಳಗೆ ಬಂದಾಗ, ಅವನು ಬಾಯಿ ತೆರೆದು ಮಾತನಾಡುವ ಮೊದಲೇ, ಯೇಸು ಅವನಿಗೆ, “ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಕಂದಾಯವನ್ನಾಗಲಿ ತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಪ್ರಜೆಗಳಿಂದಲೋ ಅಥವಾ ಪರರಿಂದಲೋ?” ಎಂದು ಕೇಳಿದನು.
26 တဒါ ယီၑုရုက္တဝါန်, တရှိ သန္တာနာ မုက္တား သန္တိ၊
೨೬ಅವನು, “ಪರರಿಂದ” ಎಂದು ಉತ್ತರ ಕೊಡಲು, ಯೇಸು ಅವನಿಗೆ, “ಹಾಗಾದರೆ ಪ್ರಜೆಗಳು ಅದನ್ನು ಕೊಡಬೇಕಾಗಿಲ್ಲವೇ.
27 တထာပိ ယထာသ္မာဘိသ္တေၐာမန္တရာယော န ဇနျတေ, တတ္ကၖတေ ဇလဓေသ္တီရံ ဂတွာ ဝဍိၑံ က္ၐိပ, တေနာဒေါ် ယော မီန ဥတ္ထာသျတိ, တံ ဃၖတွာ တန္မုခေ မောစိတေ တောလကဲကံ ရူပျံ ပြာပ္သျသိ, တဒ် ဂၖဟီတွာ တဝ မမ စ ကၖတေ တေဘျော ဒေဟိ၊
೨೭ಆದರೂ ನಾವು ಅವರಿಗೆ ಅಡ್ಡಿಯಾಗದಂತೆ, ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕಿ ಮೊದಲು ಸಿಕ್ಕುವ ಮೀನನ್ನು ಹಿಡಿದು, ಅದರ ಬಾಯಿ ತೆರೆದು ನೋಡು ಅದರಲ್ಲಿ ಒಂದುಬೆಳ್ಳಿ ನಾಣ್ಯ ಸಿಕ್ಕುವುದು. ಅದನ್ನು ತೆಗೆದುಕೊಂಡು ನನಗೋಸ್ಕರ ಮತ್ತು ನಿನಗೋಸ್ಕರ ತೆರಿಗೆ ಹಣ ಕೊಡು” ಎಂದು ಹೇಳಿದನು.