< လူကး 3 >

1 အနန္တရံ တိဗိရိယကဲသရသျ ရာဇတွသျ ပဉ္စဒၑေ ဝတ္သရေ သတိ ယဒါ ပန္တီယပီလာတော ယိဟူဒါဒေၑာဓိပတိ ရှေရောဒ် တု ဂါလီလ္ပြဒေၑသျ ရာဇာ ဖိလိပနာမာ တသျ ဘြာတာ တု ယိတူရိယာယာသ္တြာခေါနီတိယာပြဒေၑသျ စ ရာဇာသီတ် လုၐာနီယနာမာ အဝိလီနီဒေၑသျ ရာဇာသီတ္
ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ
2 ဟာနန် ကိယဖာၑ္စေမော် ပြဓာနယာဇာကာဝါသ္တာံ တဒါနီံ သိခရိယသျ ပုတြာယ ယောဟနေ မဓျေပြာန္တရမ် ဤၑွရသျ ဝါကျေ ပြကာၑိတေ သတိ
ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.
3 သ ယရ္ဒ္ဒန ဥဘယတဋပြဒေၑာန် သမေတျ ပါပမောစနာရ္ထံ မနးပရာဝရ္တ္တနသျ စိဟ္နရူပံ ယန္မဇ္ဇနံ တဒီယား ကထား သရွွတြ ပြစာရယိတုမာရေဘေ၊
ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.
4 ယိၑယိယဘဝိၐျဒွက္တၖဂြန္ထေ ယာဒၖၑီ လိပိရာသ္တေ ယထာ, ပရမေၑသျ ပန္ထာနံ ပရိၐ္ကုရုတ သရွွတး၊ တသျ ရာဇပထဉ္စဲဝ သမာနံ ကုရုတာဓုနာ၊
ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
5 ကာရိၐျန္တေ သမုစ္ဆြာယား သကလာ နိမ္နဘူမယး၊ ကာရိၐျန္တေ နတား သရွွေ ပရွွတာၑ္စောပပရွွတား၊ ကာရိၐျန္တေ စ ယာ ဝကြာသ္တား သရွွား သရလာ ဘုဝး၊ ကာရိၐျန္တေ သမာနာသ္တာ ယာ ဥစ္စနီစဘူမယး၊
6 ဤၑွရေဏ ကၖတံ တြာဏံ ဒြက္ၐျန္တိ သရွွမာနဝါး၊ ဣတျေတတ် ပြာန္တရေ ဝါကျံ ဝဒတး ကသျစိဒ် ရဝး။
7 ယေ ယေ လောကာ မဇ္ဇနာရ္ထံ ဗဟိရာယယုသ္တာန် သောဝဒတ် ရေ ရေ သရ္ပဝံၑာ အာဂါမိနး ကောပါတ် ပလာယိတုံ ယုၐ္မာန် ကၑ္စေတယာမာသ?
ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?
8 တသ္မာဒ် ဣဗြာဟီမ် အသ္မာကံ ပိတာ ကထာမီဒၖၑီံ မနောဘိ ရ္န ကထယိတွာ ယူယံ မနးပရိဝရ္တ္တနယောဂျံ ဖလံ ဖလတ; ယုၐ္မာနဟံ ယထာရ္ထံ ဝဒါမိ ပါၐာဏေဘျ ဧတေဘျ ဤၑွရ ဣဗြာဟီမး သန္တာနောတ္ပာဒနေ သမရ္ထး၊
ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.
9 အပရဉ္စ တရုမူလေ'ဓုနာပိ ပရၑုး သံလဂ္နောသ္တိ ယသ္တရုရုတ္တမံ ဖလံ န ဖလတိ သ ဆိဒျတေ'ဂ္နော် နိက္ၐိပျတေ စ၊
ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.
10 တဒါနီံ လောကာသ္တံ ပပြစ္ဆုသ္တရှိ ကိံ ကရ္တ္တဝျမသ္မာဘိး?
೧೦ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,
11 တတး သောဝါဒီတ် ယသျ ဒွေ ဝသနေ ဝိဒျေတေ သ ဝသ္တြဟီနာယဲကံ ဝိတရတု ကိံဉ္စ ယသျ ခါဒျဒြဝျံ ဝိဒျတေ သောပိ တထဲဝ ကရောတု၊
೧೧ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.
12 တတး ပရံ ကရသဉ္စာယိနော မဇ္ဇနာရ္ထမ် အာဂတျ ပပြစ္ဆုး ဟေ ဂုရော ကိံ ကရ္တ္တဝျမသ္မာဘိး?
೧೨ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,
13 တတး သောကထယတ် နိရူပိတာဒဓိကံ န ဂၖဟ္လိတ၊
೧೩ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.
14 အနန္တရံ သေနာဂဏ ဧတျ ပပြစ္ဆ ကိမသ္မာဘိ ရွာ ကရ္တ္တဝျမ်? တတး သောဘိဒဓေ ကသျ ကာမပိ ဟာနိံ မာ ကာရ္ၐ္ဋ တထာ မၖၐာပဝါဒံ မာ ကုရုတ နိဇဝေတနေန စ သန္တုၐျ တိၐ္ဌတ၊
೧೪ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.
15 အပရဉ္စ လောကာ အပေက္ၐယာ သ္ထိတွာ သရွွေပီတိ မနောဘိ ရွိတရ္ကယာဉ္စကြုး, ယောဟနယမ် အဘိၐိက္တသ္တြာတာ န ဝေတိ?
೧೫ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,
16 တဒါ ယောဟန် သရွွာန် ဝျာဇဟာရ, ဇလေ'ဟံ ယုၐ္မာန် မဇ္ဇယာမိ သတျံ ကိန္တု ယသျ ပါဒုကာဗန္ဓနံ မောစယိတုမပိ န ယောဂျောသ္မိ တာဒၖၑ ဧကော မတ္တော ဂုရုတရး ပုမာန် ဧတိ, သ ယုၐ္မာန် ဝဟ္နိရူပေ ပဝိတြ အာတ္မနိ မဇ္ဇယိၐျတိ၊
೧೬ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.
17 အပရဉ္စ တသျ ဟသ္တေ ၑူရ္ပ အာသ္တေ သ သွၑသျာနိ ၑုဒ္ဓရူပံ ပြသ္ဖောဋျ ဂေါဓူမာန် သရွွာန် ဘာဏ္ဍာဂါရေ သံဂြဟီၐျတိ ကိန္တု ဗူၐာဏိ သရွွာဏျနိရွွာဏဝဟ္နိနာ ဒါဟယိၐျတိ၊
೧೭ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
18 ယောဟန် ဥပဒေၑေနေတ္ထံ နာနာကထာ လောကာနာံ သမက္ၐံ ပြစာရယာမာသ၊
೧೮ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.
19 အပရဉ္စ ဟေရောဒ် ရာဇာ ဖိလိပ္နာမ္နး သဟောဒရသျ ဘာရျျာံ ဟေရောဒိယာမဓိ တထာနျာနိ ယာနိ ယာနိ ကုကရ္မ္မာဏိ ကၖတဝါန် တဒဓိ စ
೧೯ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ,
20 ယောဟနာ တိရသ္ကၖတော ဘူတွာ ကာရာဂါရေ တသျ ဗန္ဓနာဒ် အပရမပိ ကုကရ္မ္မ စကာရ၊
೨೦ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು.
21 ဣတး ပူရွွံ ယသ္မိန် သမယေ သရွွေ ယောဟနာ မဇ္ဇိတာသ္တဒါနီံ ယီၑုရပျာဂတျ မဇ္ဇိတး၊
೨೧ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು
22 တဒနန္တရံ တေန ပြာရ္ထိတေ မေဃဒွါရံ မုက္တံ တသ္မာစ္စ ပဝိတြ အာတ္မာ မူရ္တ္တိမာန် ဘူတွာ ကပေါတဝတ် တဒုပရျျဝရုရောဟ; တဒါ တွံ မမ ပြိယး ပုတြသ္တွယိ မမ ပရမး သန္တောၐ ဣတျာကာၑဝါဏီ ဗဘူဝ၊
೨೨ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು.
23 တဒါနီံ ယီၑုး ပြာယေဏ တြိံၑဒွရ္ၐဝယသ္က အာသီတ်၊ လော်ကိကဇ္ဉာနေ တု သ ယူၐဖး ပုတြး,
೨೩ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;
24 ယူၐဖ် ဧလေး ပုတြး, ဧလိရ္မတ္တတး ပုတြး, မတ္တတ် လေဝေး ပုတြး, လေဝိ ရ္မလ္ကေး ပုတြး, မလ္ကိရျာန္နသျ ပုတြး; ယာန္နော ယူၐဖး ပုတြး၊
೨೪ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು;
25 ယူၐဖ် မတ္တထိယသျ ပုတြး, မတ္တထိယ အာမောသး ပုတြး, အာမောသ် နဟူမး ပုတြး, နဟူမ် ဣၐ္လေး ပုတြး ဣၐ္လိရ္နဂေး ပုတြး၊
೨೫ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು;
26 နဂိရ္မာဋး ပုတြး, မာဋ် မတ္တထိယသျ ပုတြး, မတ္တထိယး ၑိမိယေး ပုတြး, ၑိမိယိရျူၐဖး ပုတြး, ယူၐဖ် ယိဟူဒါး ပုတြး၊
೨೬ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು;
27 ယိဟူဒါ ယောဟာနား ပုတြး, ယောဟာနာ ရီၐား ပုတြး, ရီၐား သိရုဗ္ဗာဗိလး ပုတြး, သိရုဗ္ဗာဗိလ် ၑလ္တီယေလး ပုတြး, ၑလ္တီယေလ် နေရေး ပုတြး၊
೨೭ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು;
28 နေရိရ္မလ္ကေး ပုတြး, မလ္ကိး အဒျး ပုတြး, အဒ္ဒီ ကောၐမး ပုတြး, ကောၐမ် ဣလ္မောဒဒး ပုတြး, ဣလ္မောဒဒ် ဧရး ပုတြး၊
೨೮ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು;
29 ဧရ် ယောၑေး ပုတြး, ယောၑိး ဣလီယေၐရး ပုတြး, ဣလီယေၐရ် ယောရီမး ပုတြး, ယောရီမ် မတ္တတး ပုတြး, မတ္တတ လေဝေး ပုတြး၊
೨೯ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು;
30 လေဝိး ၑိမိယောနး ပုတြး, ၑိမိယောန် ယိဟူဒါး ပုတြး, ယိဟူဒါ ယူၐုဖး ပုတြး, ယူၐုဖ် ယောနနး ပုတြး, ယာနန် ဣလီယာကီမး ပုတြး၊
೩೦ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;
31 ဣလိယာကီမ္း မိလေယား ပုတြး, မိလေယာ မဲနနး ပုတြး, မဲနန် မတ္တတ္တသျ ပုတြး, မတ္တတ္တော နာထနး ပုတြး, နာထန် ဒါယူဒး ပုတြး၊
೩೧ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;
32 ဒါယူဒ် ယိၑယး ပုတြး, ယိၑယ ဩဗေဒး ပုတြ, ဩဗေဒ် ဗောယသး ပုတြး, ဗောယသ် သလ္မောနး ပုတြး, သလ္မောန် နဟၑောနး ပုတြး၊
೩೨ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು;
33 နဟၑောန် အမ္မီနာဒဗး ပုတြး, အမ္မီနာဒဗ် အရာမး ပုတြး, အရာမ် ဟိၐြောဏး ပုတြး, ဟိၐြောဏ် ပေရသး ပုတြး, ပေရသ် ယိဟူဒါး ပုတြး၊
೩೩ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;
34 ယိဟူဒါ ယာကူဗး ပုတြး, ယာကူဗ် ဣသှာကး ပုတြး, ဣသှာက် ဣဗြာဟီမး ပုတြး, ဣဗြာဟီမ် တေရဟး ပုတြး, တေရဟ် နာဟောရး ပုတြး၊
೩೪ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು;
35 နာဟောရ် သိရုဂး ပုတြး, သိရုဂ် ရိယွး ပုတြး, ရိယူး ပေလဂး ပုတြး, ပေလဂ် ဧဝရး ပုတြး, ဧဝရ် ၑေလဟး ပုတြး၊
೩೫ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು;
36 ၑေလဟ် ကဲနနး ပုတြး, ကဲနန် အရ္ဖက္ၐဒး ပုတြး, အရ္ဖက္ၐဒ် ၑာမး ပုတြး, ၑာမ် နောဟး ပုတြး, နောဟော လေမကး ပုတြး၊
೩೬ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು;
37 လေမက် မိထူၑေလဟး ပုတြး, မိထူၑေလဟ် ဟနောကး ပုတြး, ဟနောက် ယေရဒး ပုတြး, ယေရဒ် မဟလလေလး ပုတြး, မဟလလေလ် ကဲနနး ပုတြး၊
೩೭ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು;
38 ကဲနန် ဣနောၑး ပုတြး, ဣနောၑ် ၑေတး ပုတြး, ၑေတ် အာဒမး ပုတြ, အာဒမ် ဤၑွရသျ ပုတြး၊
೩೮ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.

< လူကး 3 >