< လူကး 16 >
1 အပရဉ္စ ယီၑုး ၑိၐျေဘျောနျာမေကာံ ကထာံ ကထယာမာသ ကသျစိဒ် ဓနဝတော မနုၐျသျ ဂၖဟကာရျျာဓီၑေ သမ္ပတ္တေရပဝျယေ'ပဝါဒိတေ သတိ
೧ಯೇಸು ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ, “ಐಶ್ವರ್ಯವಂತನಾದ ಒಬ್ಬ ಮನುಷ್ಯನಿಗೆ ಒಬ್ಬ ಪಾರುಪಾತ್ಯಗಾರನಿದ್ದನು. ಅವನ ಕುರಿತು ಯಜಮಾನನ ಬಳಿಯಲ್ಲಿ, ಇವನು ನಿನ್ನ ಆಸ್ತಿಯನ್ನು ಹಾಳುಮಾಡುತ್ತಾ ಇದ್ದಾನೆ ಎಂದು ಯಾರೋ ದೂರು ಹೇಳಿರಲಾಗಿ,
2 တသျ ပြဘုသ္တမ် အာဟူယ ဇဂါဒ, တွယိ ယာမိမာံ ကထာံ ၑၖဏောမိ သာ ကီဒၖၑီ? တွံ ဂၖဟကာရျျာဓီၑကရ္မ္မဏော ဂဏနာံ ဒရ္ၑယ ဂၖဟကာရျျာဓီၑပဒေ တွံ န သ္ထာသျသိ၊
೨ಯಜಮಾನನು ಅವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವ ಸಂಗತಿ? ನಿನ್ನ ಪಾರುಪಾತ್ಯೆಯ ಲೆಕ್ಕವನ್ನು ಒಪ್ಪಿಸು, ನೀನು ಇನ್ನು ಪಾರುಪಾತ್ಯಗಾರನಾಗಿರುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು.
3 တဒါ သ ဂၖဟကာရျျာဓီၑော မနသာ စိန္တယာမာသ, ပြဘု ရျဒိ မာံ ဂၖဟကာရျျာဓီၑပဒါဒ် ဘြံၑယတိ တရှိ ကိံ ကရိၐျေ'ဟံ? မၖဒံ ခနိတုံ မမ ၑက္တိ ရ္နာသ္တိ ဘိက္ၐိတုဉ္စ လဇ္ဇိၐျေ'ဟံ၊
೩ಹೀಗಿರಲಾಗಿ ಆ ಪಾರುಪಾತ್ಯಗಾರನು, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಪಾರುಪಾತ್ಯೆಯ ಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ, ಭಿಕ್ಷೆ ಬೇಡುವುದಕ್ಕೆ ನನಗೆ ನಾಚಿಕೆಯಾಗುತ್ತದೆ.
4 အတဧဝ မယိ ဂၖဟကာရျျာဓီၑပဒါတ် စျုတေ သတိ ယထာ လောကာ မဟျမ် အာၑြယံ ဒါသျန္တိ တဒရ္ထံ ယတ္ကရ္မ္မ မယာ ကရဏီယံ တန် နိရ္ဏီယတေ၊
೪ಈ ಪಾರುಪಾತ್ಯೆಯ ಕೆಲಸದಿಂದ ನನ್ನನ್ನು ತೆಗೆದ ಮೇಲೆ ಜನರು ನನ್ನನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ತನ್ನೊಳಗೆ ಅಂದುಕೊಂಡು,
5 ပၑ္စာတ် သ သွပြဘောရေကဲကမ် အဓမရ္ဏမ် အာဟူယ ပြထမံ ပပြစ္ဆ, တွတ္တော မေ ပြဘုဏာ ကတိ ပြာပျမ်?
೫ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನೂ ಕರೆದು ಮೊದಲನೆಯವನನ್ನು, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕು?’ ಎಂದು ಕೇಳಲು,
6 တတး သ ဥဝါစ, ဧကၑတာဎကတဲလာနိ; တဒါ ဂၖဟကာရျျာဓီၑး ပြောဝါစ, တဝ ပတြမာနီယ ၑီဃြမုပဝိၑျ တတြ ပဉ္စာၑတံ လိခ၊
೬ಅವನು ‘ನೂರು ಬುದ್ದಲಿ ಎಣ್ಣೆ’ ಎಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಐವತ್ತು ಬುದ್ದಲಿ ಎಂದು ಬರೆ’ ಎಂದು ಹೇಳಿದನು.
7 ပၑ္စာဒနျမေကံ ပပြစ္ဆ, တွတ္တော မေ ပြဘုဏာ ကတိ ပြာပျမ်? တတး သောဝါဒီဒ် ဧကၑတာဎကဂေါဓူမား; တဒါ သ ကထယာမာသ, တဝ ပတြမာနီယ အၑီတိံ လိခ၊
೭ಬಳಿಕ ಮತ್ತೊಬ್ಬನನ್ನು, ‘ನೀನು ಎಷ್ಟು ಕೊಡಬೇಕು?’ ಎಂದು ಕೇಳಲು ಅವನು, ‘ನೂರು ಖಂಡುಗ ಗೋದಿ’ ಅಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಎಂದು ಬರೆ’ ಎಂದು ಹೇಳಿದನು.
8 တေနဲဝ ပြဘုသ္တမယထာရ္ထကၖတမ် အဓီၑံ တဒ္ဗုဒ္ဓိနဲပုဏျာတ် ပြၑၑံသ; ဣတ္ထံ ဒီပ္တိရူပသန္တာနေဘျ ဧတတ္သံသာရသျ သန္တာနာ ဝရ္တ္တမာနကာလေ'ဓိကဗုဒ္ဓိမန္တော ဘဝန္တိ၊ (aiōn )
೮ಯಜಮಾನನು ಇದನ್ನು ಕೇಳಿ ಅಪ್ರಾಮಾಣಿಕನಾದ ಆ ಪಾರುಪಾತ್ಯಗಾರನನ್ನು ಕುರಿತು, ಇವನು ಜಾಣತನ ಮಾಡಿದನು ಎಂದು ಹೊಗಳಿದನು. ಏಕೆಂದರೆ ಈ ಲೋಕದ ಜನರು ತಮ್ಮ ವಿಷಯಗಳಲ್ಲಿ ಬೆಳಕಿನ ಜನರಿಗಿಂತಲೂ ಜಾಣರಾಗಿದ್ದಾರೆ. (aiōn )
9 အတော ဝဒါမိ ယူယမပျယထာရ္ထေန ဓနေန မိတြာဏိ လဘဓွံ တတော ယုၐ္မာသု ပဒဘြၐ္ဋေၐွပိ တာနိ စိရကာလမ် အာၑြယံ ဒါသျန္တိ၊ (aiōnios )
೯“ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ. (aiōnios )
10 ယး ကၑ္စိတ် က္ၐုဒြေ ကာရျျေ ဝိၑွာသျော ဘဝတိ သ မဟတိ ကာရျျေပိ ဝိၑွာသျော ဘဝတိ, ကိန္တု ယး ကၑ္စိတ် က္ၐုဒြေ ကာရျျေ'ဝိၑွာသျော ဘဝတိ သ မဟတိ ကာရျျေပျဝိၑွာသျော ဘဝတိ၊
೧೦ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು.
11 အတဧဝ အယထာရ္ထေန ဓနေန ယဒိ ယူယမဝိၑွာသျာ ဇာတာသ္တရှိ သတျံ ဓနံ ယုၐ္မာကံ ကရေၐု ကး သမရ္ပယိၐျတိ?
೧೧ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು?
12 ယဒိ စ ပရဓနေန ယူယမ် အဝိၑွာသျာ ဘဝထ တရှိ ယုၐ္မာကံ သွကီယဓနံ ယုၐ္မဘျံ ကော ဒါသျတိ?
೧೨ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು?
13 ကောပိ ဒါသ ဥဘော် ပြဘူ သေဝိတုံ န ၑက္နောတိ, ယတ ဧကသ္မိန် ပြီယမာဏော'နျသ္မိန္နပြီယတေ ယဒွါ ဧကံ ဇနံ သမာဒၖတျ တဒနျံ တုစ္ဆီကရောတိ တဒွဒ် ယူယမပိ ဓနေၑွရော် သေဝိတုံ န ၑက္နုထ၊
೧೩ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು.
14 တဒဲတား သရွွား ကထား ၑြုတွာ လောဘိဖိရူၑိနသ္တမုပဇဟသုး၊
೧೪ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು.
15 တတး သ ဥဝါစ, ယူယံ မနုၐျာဏာံ နိကဋေ သွာန် နိရ္ဒောၐာန် ဒရ္ၑယထ ကိန္တု ယုၐ္မာကမ် အန္တးကရဏာနီၑွရော ဇာနာတိ, ယတ် မနုၐျာဏာမ် အတိ ပြၑံသျံ တဒ် ဤၑွရသျ ဃၖဏျံ၊
೧೫ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
16 ယောဟန အာဂမနပရျျနတံ ယုၐ္မာကံ သမီပေ ဝျဝသ္ထာဘဝိၐျဒွါဒိနာံ လေခနာနိ စာသန် တတး ပြဘၖတိ ဤၑွရရာဇျသျ သုသံဝါဒး ပြစရတိ, ဧကဲကော လောကသ္တန္မဓျံ ယတ္နေန ပြဝိၑတိ စ၊
೧೬“ಧರ್ಮಶಾಸ್ತ್ರವೂ ಪ್ರವಾದನೆಗಳೂ ಯೋಹಾನನ ತನಕವೇ. ಆ ನಂತರದ ದಿನಗಳಿಂದ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಲಿದೆ. ಅದರಲ್ಲಿ ಎಲ್ಲರೂ ಬಲವಂತವಾಗಿ ನುಗ್ಗಲು ಯತ್ನಿಸುತ್ತಿದ್ದಾರೆ.
17 ဝရံ နဘသး ပၖထိဝျာၑ္စ လောပေါ ဘဝိၐျတိ တထာပိ ဝျဝသ္ထာယာ ဧကဗိန္ဒောရပိ လောပေါ န ဘဝိၐျတိ၊
೧೭ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದು ಹೋಗುವುದಕ್ಕಿಂತಲೂ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.
18 ယး ကၑ္စိတ် သွီယာံ ဘာရျျာံ ဝိဟာယ သ္တြိယမနျာံ ဝိဝဟတိ သ ပရဒါရာန် ဂစ္ဆတိ, ယၑ္စ တာ တျက္တာံ နာရီံ ဝိဝဟတိ သောပိ ပရဒါရာန ဂစ္ဆတိ၊
೧೮“ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.
19 ဧကော ဓနီ မနုၐျး ၑုက္လာနိ သူက္ၐ္မာဏိ ဝသ္တြာဏိ ပရျျဒဓာတ် ပြတိဒိနံ ပရိတောၐရူပေဏာဘုံက္တာပိဝစ္စ၊
೧೯“ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು.
20 သရွွာင်္ဂေ က္ၐတယုက္တ ဣလိယာသရနာမာ ကၑ္စိဒ် ဒရိဒြသ္တသျ ဓနဝတော ဘောဇနပါတြာတ် ပတိတမ် ဥစ္ဆိၐ္ဋံ ဘောက္တုံ ဝါဉ္ဆန် တသျ ဒွါရေ ပတိတွာတိၐ္ဌတ်;
೨೦ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು.
21 အထ ၑွာန အာဂတျ တသျ က္ၐတာနျလိဟန်၊
೨೧ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 ကိယတ္ကာလာတ္ပရံ သ ဒရိဒြး ပြာဏာန် ဇဟော်; တတး သွရ္ဂီယဒူတာသ္တံ နီတွာ ဣဗြာဟီမး ကြောဍ ဥပဝေၑယာမာသုး၊
೨೨ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು.
23 ပၑ္စာတ် သ ဓနဝါနပိ မမာရ, တံ ၑ္မၑာနေ သ္ထာပယာမာသုၑ္စ; ကိန္တု ပရလောကေ သ ဝေဒနာကုလး သန် ဦရ္ဒ္ဓွာံ နိရီက္ၐျ ဗဟုဒူရာဒ် ဣဗြာဟီမံ တတ္ကြောဍ ဣလိယာသရဉ္စ ဝိလောကျ ရုဝန္နုဝါစ; (Hadēs )
೨೩ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ, (Hadēs )
24 ဟေ ပိတရ် ဣဗြာဟီမ် အနုဂၖဟျ အင်္ဂုလျဂြဘာဂံ ဇလေ မဇ္ဇယိတွာ မမ ဇိဟွာံ ၑီတလာံ ကရ္တ္တုမ် ဣလိယာသရံ ပြေရယ, ယတော ဝဟ္နိၑိခါတောဟံ ဝျထိတောသ္မိ၊
೨೪‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು.
25 တဒါ ဣဗြာဟီမ် ဗဘာၐေ, ဟေ ပုတြ တွံ ဇီဝန် သမ္ပဒံ ပြာပ္တဝါန် ဣလိယာသရသ္တု ဝိပဒံ ပြာပ္တဝါန် ဧတတ် သ္မရ, ကိန္တု သမ္ပြတိ တသျ သုခံ တဝ စ ဒုးခံ ဘဝတိ၊
೨೫ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.
26 အပရမပိ ယုၐ္မာကမ် အသ္မာကဉ္စ သ္ထာနယော ရ္မဓျေ မဟဒွိစ္ဆေဒေါ'သ္တိ တတ ဧတတ္သ္ထာနသျ လောကာသ္တတ် သ္ထာနံ ယာတုံ ယဒွါ တတ္သ္ထာနသျ လောကာ ဧတတ် သ္ထာနမာယာတုံ န ၑက္နုဝန္တိ၊
೨೬ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು’ ಅಂದನು.
27 တဒါ သ ဥက္တဝါန်, ဟေ ပိတသ္တရှိ တွာံ နိဝေဒယာမိ မမ ပိတု ရ္ဂေဟေ ယေ မမ ပဉ္စ ဘြာတရး သန္တိ
೨೭ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.
28 တေ ယထဲတဒ် ယာတနာသ္ထာနံ နာယာသျန္တိ တထာ မန္တြဏာံ ဒါတုံ တေၐာံ သမီပမ် ဣလိယာသရံ ပြေရယ၊
೨೮ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ’ ಅಂದನು.
29 တတ ဣဗြာဟီမ် ဥဝါစ, မူသာဘဝိၐျဒွါဒိနာဉ္စ ပုသ္တကာနိ တေၐာံ နိကဋေ သန္တိ တေ တဒွစနာနိ မနျန္တာံ၊
೨೯ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ, ಅವುಗಳನ್ನು ಕೇಳಲಿ’ ಅನ್ನಲು,
30 တဒါ သ နိဝေဒယာမာသ, ဟေ ပိတရ် ဣဗြာဟီမ် န တထာ, ကိန္တု ယဒိ မၖတလောကာနာံ ကၑ္စိတ် တေၐာံ သမီပံ ယာတိ တရှိ တေ မနာံသိ ဝျာဃောဋယိၐျန္တိ၊
೩೦ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು.
31 တတ ဣဗြာဟီမ် ဇဂါဒ, တေ ယဒိ မူသာဘဝိၐျဒွါဒိနာဉ္စ ဝစနာနိ န မနျန္တေ တရှိ မၖတလောကာနာံ ကသ္မိံၑ္စိဒ် ဥတ္ထိတေပိ တေ တသျ မန္တြဏာံ န မံသျန္တေ၊
೩೧ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”