< ယောဟနး 19 >

1 ပီလာတော ယီၑုမ် အာနီယ ကၑယာ ပြာဟာရယတ်၊
ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು.
2 ပၑ္စာတ် သေနာဂဏး ကဏ္ဋကနိရ္မ္မိတံ မုကုဋံ တသျ မသ္တကေ သမရ္ပျ ဝါရ္တ္တာကီဝရ္ဏံ ရာဇပရိစ္ဆဒံ ပရိဓာပျ,
ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ,
3 ဟေ ယိဟူဒီယာနာံ ရာဇန် နမသ္ကာရ ဣတျုက္တွာ တံ စပေဋေနာဟန္တုမ် အာရဘတ၊
ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು.
4 တဒါ ပီလာတး ပုနရပိ ဗဟိရ္ဂတွာ လောကာန် အဝဒတ်, အသျ ကမပျပရာဓံ န လဘေ'ဟံ, ပၑျတ တဒ် ယုၐ္မာန် ဇ္ဉာပယိတုံ ယုၐ္မာကံ သန္နိဓော် ဗဟိရေနမ် အာနယာမိ၊
ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು.
5 တတး ပရံ ယီၑုး ကဏ္ဋကမုကုဋဝါန် ဝါရ္တ္တာကီဝရ္ဏဝသနဝါံၑ္စ ဗဟိရာဂစ္ဆတ်၊ တတး ပီလာတ ဥက္တဝါန် ဧနံ မနုၐျံ ပၑျတ၊
ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು.
6 တဒါ ပြဓာနယာဇကား ပဒါတယၑ္စ တံ ဒၖၐ္ဋွာ, ဧနံ ကြုၑေ ဝိဓ, ဧနံ ကြုၑေ ဝိဓ, ဣတျုက္တွာ ရဝိတုံ အာရဘန္တ၊ တတး ပီလာတး ကထိတဝါန် ယူယံ သွယမ် ဧနံ နီတွာ ကြုၑေ ဝိဓတ, အဟမ် ဧတသျ ကမပျပရာဓံ န ပြာပ္တဝါန်၊
ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು.
7 ယိဟူဒီယား ပြတျဝဒန် အသ္မာကံ ယာ ဝျဝသ္ထာသ္တေ တဒနုသာရေဏာသျ ပြာဏဟနနမ် ဥစိတံ ယတောယံ သွမ် ဤၑွရသျ ပုတြမဝဒတ်၊
ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.
8 ပီလာတ ဣမာံ ကထာံ ၑြုတွာ မဟာတြာသယုက္တး
ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು,
9 သန် ပုနရပိ ရာဇဂၖဟ အာဂတျ ယီၑုံ ပၖၐ္ဋဝါန် တွံ ကုတြတျော လောကး? ကိန္တု ယီၑသ္တသျ ကိမပိ ပြတျုတ္တရံ နာဝဒတ်၊
ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ.
10 ၁ တတး ပီလာတ် ကထိတဝါန တွံ ကိံ မယာ သာရ္ဒ္ဓံ န သံလပိၐျသိ? တွာံ ကြုၑေ ဝေဓိတုံ ဝါ မောစယိတုံ ၑက္တိ ရ္မမာသ္တေ ဣတိ ကိံ တွံ န ဇာနာသိ? တဒါ ယီၑုး ပြတျဝဒဒ် ဤၑွရေဏာဒံ မမောပရိ တဝ ကိမပျဓိပတိတွံ န ဝိဒျတေ, တထာပိ ယော ဇနော မာံ တဝ ဟသ္တေ သမာရ္ပယတ် တသျ မဟာပါတကံ ဇာတမ်၊
೧೦ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.
11 တဒါ ယီၑုး ပြတျဝဒဒ် ဤၑွရေဏာဒတ္တံ မမောပရိ တဝ ကိမပျဓိပတိတွံ န ဝိဒျတေ, တထာပိ ယော ဇနော မာံ တဝ ဟသ္တေ သမာရ္ပယတ် တသျ မဟာပါတကံ ဇာတမ်၊
೧೧ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.
12 တဒါရဘျ ပီလာတသ္တံ မောစယိတုံ စေၐ္ဋိတဝါန် ကိန္တု ယိဟူဒီယာ ရုဝန္တော ဝျာဟရန် ယဒီမံ မာနဝံ တျဇသိ တရှိ တွံ ကဲသရသျ မိတြံ န ဘဝသိ, ယော ဇနး သွံ ရာဇာနံ ဝက္တိ သဧဝ ကဲမရသျ ဝိရုဒ္ဓါံ ကထာံ ကထယတိ၊
೧೨ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು.
13 ဧတာံ ကထာံ ၑြုတွာ ပီလာတော ယီၑုံ ဗဟိရာနီယ နိသ္တာရောတ္သဝသျ အာသာဒနဒိနသျ ဒွိတီယပြဟရာတ် ပူရွွံ ပြသ္တရဗန္ဓနနာမ္နိ သ္ထာနေ 'ရ္ထာတ် ဣဗြီယဘာၐယာ ယဒ် ဂဗ္ဗိထာ ကထျတေ တသ္မိန် သ္ထာနေ ဝိစာရာသန ဥပါဝိၑတ်၊
೧೩ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು.
14 အနန္တရံ ပီလာတော ယိဟူဒီယာန် အဝဒတ်, ယုၐ္မာကံ ရာဇာနံ ပၑျတ၊
೧೪ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು.
15 ကိန္တု ဧနံ ဒူရီကုရု, ဧနံ ဒူရီကုရု, ဧနံ ကြုၑေ ဝိဓ, ဣတိ ကထာံ ကထယိတွာ တေ ရဝိတုမ် အာရဘန္တ; တဒါ ပီလာတး ကထိတဝါန် ယုၐ္မာကံ ရာဇာနံ ကိံ ကြုၑေ ဝေဓိၐျာမိ? ပြဓာနယာဇကာ ဥတ္တရမ် အဝဒန် ကဲသရံ ဝိနာ ကောပိ ရာဇာသ္မာကံ နာသ္တိ၊
೧೫ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು.
16 တတး ပီလာတော ယီၑုံ ကြုၑေ ဝေဓိတုံ တေၐာံ ဟသ္တေၐု သမာရ္ပယတ်, တတသ္တေ တံ ဓၖတွာ နီတဝန္တး၊
೧೬ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು.
17 တတး ပရံ ယီၑုး ကြုၑံ ဝဟန် ၑိရးကပါလမ် အရ္ထာဒ် ယဒ် ဣဗြီယဘာၐယာ ဂုလ္ဂလ္တာံ ဝဒန္တိ တသ္မိန် သ္ထာန ဥပသ္ထိတး၊
೧೭ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ.
18 တတသ္တေ မဓျသ္ထာနေ တံ တသျောဘယပါရ္ၑွေ ဒွါဝပရော် ကြုၑေ'ဝိဓန်၊
೧೮ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು.
19 အပရမ် ဧၐ ယိဟူဒီယာနာံ ရာဇာ နာသရတီယယီၑုး, ဣတိ ဝိဇ္ဉာပနံ လိခိတွာ ပီလာတသ္တသျ ကြုၑောပရိ သမယောဇယတ်၊
೧೯ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು.
20 သာ လိပိး ဣဗြီယယူနာနီယရောမီယဘာၐာဘိ ရ္လိခိတာ; ယီၑေား ကြုၑဝေဓနသ္ထာနံ နဂရသျ သမီပံ, တသ္မာဒ် ဗဟဝေါ ယိဟူဒီယာသ္တာံ ပဌိတုမ် အာရဘန္တ၊
೨೦ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.
21 ယိဟူဒီယာနာံ ပြဓာနယာဇကား ပီလာတမိတိ နျဝေဒယန် ယိဟူဒီယာနာံ ရာဇေတိ ဝါကျံ န ကိန္တု ဧၐ သွံ ယိဟူဒီယာနာံ ရာဇာနမ် အဝဒဒ် ဣတ္ထံ လိခတု၊
೨೧ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು.
22 တတး ပီလာတ ဥတ္တရံ ဒတ္တဝါန် ယလ္လေခနီယံ တလ္လိခိတဝါန်၊
೨೨ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು.
23 ဣတ္ထံ သေနာဂဏော ယီၑုံ ကြုၑေ ဝိဓိတွာ တသျ ပရိဓေယဝသ္တြံ စတုရော ဘာဂါန် ကၖတွာ ဧကဲကသေနာ ဧကဲကဘာဂမ် အဂၖဟ္လတ် တသျောတ္တရီယဝသ္တြဉ္စာဂၖဟ္လတ်၊ ကိန္တူတ္တရီယဝသ္တြံ သူစိသေဝနံ ဝိနာ သရွွမ် ဦတံ၊
೨೩ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
24 တသ္မာတ္တေ ဝျာဟရန် ဧတတ် ကး ပြာပ္သျတိ? တန္န ခဏ္ဍယိတွာ တတြ ဂုဋိကာပါတံ ကရဝါမ၊ ဝိဘဇန္တေ'ဓရီယံ မေ ဝသနံ တေ ပရသ္ပရံ၊ မမောတ္တရီယဝသ္တြာရ္ထံ ဂုဋိကာံ ပါတယန္တိ စ၊ ဣတိ ယဒွါကျံ ဓရ္မ္မပုသ္တကေ လိခိတမာသ္တေ တတ် သေနာဂဏေနေတ္ထံ ဝျဝဟရဏာတ် သိဒ္ဓမဘဝတ်၊
೨೪ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.
25 တဒါနီံ ယီၑော ရ္မာတာ မာတု ရ္ဘဂိနီ စ ယာ က္လိယပါ ဘာရျျာ မရိယမ် မဂ္ဒလီနီ မရိယမ် စ ဧတာသ္တသျ ကြုၑသျ သန္နိဓော် သမတိၐ္ဌန်၊
೨೫ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು.
26 တတော ယီၑုး သွမာတရံ ပြိယတမၑိၐျဉ္စ သမီပေ ဒဏ္ဍာယမာနော် ဝိလောကျ မာတရမ် အဝဒတ်, ဟေ ယောၐိဒ် ဧနံ တဝ ပုတြံ ပၑျ,
೨೬ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು.
27 ၑိၐျန္တွဝဒတ်, ဧနာံ တဝ မာတရံ ပၑျ၊ တတး သ ၑိၐျသ္တဒ္ဃဋိကာယာံ တာံ နိဇဂၖဟံ နီတဝါန်၊
೨೭ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.
28 အနန္တရံ သရွွံ ကရ္မ္မာဓုနာ သမ္ပန္နမဘူတ် ယီၑုရိတိ ဇ္ဉာတွာ ဓရ္မ္မပုသ္တကသျ ဝစနံ ယထာ သိဒ္ဓံ ဘဝတိ တဒရ္ထမ် အကထယတ် မမ ပိပါသာ ဇာတာ၊
೨೮ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು.
29 တတသ္တသ္မိန် သ္ထာနေ အမ္လရသေန ပူရ္ဏပါတြသ္ထိတျာ တေ သ္ပဉ္ဇမေကံ တဒမ္လရသေနာရ္ဒြီကၖတျ ဧသောဗ္နလေ တဒ် ယောဇယိတွာ တသျ မုခသျ သန္နိဓာဝသ္ထာပယန်၊
೨೯ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು.
30 တဒါ ယီၑုရမ္လရသံ ဂၖဟီတွာ သရွွံ သိဒ္ဓမ် ဣတိ ကထာံ ကထယိတွာ မသ္တကံ နမယန် ပြာဏာန် ပရျျတျဇတ်၊
೩೦ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು.
31 တဒွိနမ် အာသာဒနဒိနံ တသ္မာတ် ပရေ'ဟနိ ဝိၑြာမဝါရေ ဒေဟာ ယထာ ကြုၑောပရိ န တိၐ္ဌန္တိ, ယတး သ ဝိၑြာမဝါရော မဟာဒိနမာသီတ်, တသ္မာဒ် ယိဟူဒီယား ပီလာတနိကဋံ ဂတွာ တေၐာံ ပါဒဘဉ္ဇနသျ သ္ထာနာန္တရနယနသျ စာနုမတိံ ပြာရ္ထယန္တ၊
೩೧ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು.
32 အတး သေနာ အာဂတျ ယီၑုနာ သဟ ကြုၑေ ဟတယေား ပြထမဒွိတီယစောရယေား ပါဒါန် အဘဉ္ဇန်;
೩೨ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು.
33 ကိန္တု ယီၑေား သန္နိဓိံ ဂတွာ သ မၖတ ဣတိ ဒၖၐ္ဋွာ တသျ ပါဒေါ် နာဘဉ္ဇန်၊
೩೩ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
34 ပၑ္စာဒ် ဧကော ယောဒ္ဓါ ၑူလာဃာတေန တသျ ကုက္ၐိမ် အဝိဓတ် တတ္က္ၐဏာတ် တသ္မာဒ် ရက္တံ ဇလဉ္စ နိရဂစ္ဆတ်၊
೩೪ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.
35 ယော ဇနော'သျ သာက္ၐျံ ဒဒါတိ သ သွယံ ဒၖၐ္ဋဝါန် တသျေဒံ သာက္ၐျံ သတျံ တသျ ကထာ ယုၐ္မာကံ ဝိၑွာသံ ဇနယိတုံ ယောဂျာ တတ် သ ဇာနာတိ၊
೩೫ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.
36 တသျဲကမ် အသ္ဓျပိ န ဘံက္ၐျတေ,
೩೬ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು.
37 တဒွဒ် အနျၑာသ္တြေပိ လိချတေ, ယထာ, "ဒၖၐ္ဋိပါတံ ကရိၐျန္တိ တေ'ဝိဓန် ယန္တု တမ္ပြတိ၊ "
೩೭“ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ.
38 အရိမထီယနဂရသျ ယူၐဖ္နာမာ ၑိၐျ ဧက အာသီတ် ကိန္တု ယိဟူဒီယေဘျော ဘယာတ် ပြကာၑိတော န ဘဝတိ; သ ယီၑော ရ္ဒေဟံ နေတုံ ပီလာတသျာနုမတိံ ပြာရ္ထယတ, တတး ပီလာတေနာနုမတေ သတိ သ ဂတွာ ယီၑော ရ္ဒေဟမ် အနယတ်၊
೩೮ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು.
39 အပရံ ယော နိကဒီမော ရာတြော် ယီၑေား သမီပမ် အဂစ္ဆတ် သောပိ ဂန္ဓရသေန မိၑြိတံ ပြာယေဏ ပဉ္စာၑတ္သေဋကမဂုရုံ ဂၖဟီတွာဂစ္ဆတ်၊
೩೯ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
40 တတသ္တေ ယိဟူဒီယာနာံ ၑ္မၑာနေ သ္ထာပနရီတျနုသာရေဏ တတ္သုဂန္ဓိဒြဝျေဏ သဟိတံ တသျ ဒေဟံ ဝသ္တြေဏာဝေၐ္ဋယန်၊
೪೦ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.
41 အပရဉ္စ ယတြ သ္ထာနေ တံ ကြုၑေ'ဝိဓန် တသျ နိကဋသ္ထောဒျာနေ ယတြ ကိမပိ မၖတဒေဟံ ကဒါပိ နာသ္ထာပျတ တာဒၖၑမ် ဧကံ နူတနံ ၑ္မၑာနမ် အာသီတ်၊
೪೧ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ.
42 ယိဟူဒီယာနာမ် အာသာဒနဒိနာဂမနာတ် တေ တသ္မိန် သမီပသ္ထၑ္မၑာနေ ယီၑုမ် အၑာယယန်၊
೪೨ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.

< ယောဟနး 19 >