< ပြေရိတား 15 >
1 ယိဟူဒါဒေၑာတ် ကိယန္တော ဇနာ အာဂတျ ဘြာတၖဂဏမိတ္ထံ ၑိက္ၐိတဝန္တော မူသာဝျဝသ္ထယာ ယဒိ ယုၐ္မာကံ တွက္ဆေဒေါ န ဘဝတိ တရှိ ယူယံ ပရိတြာဏံ ပြာပ္တုံ န ၑက္ၐျထ၊
೧ಬಳಿಕ ಕೆಲವರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು; “ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿರುವ ನಿಯಮದ ಪ್ರಕಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು” ಎಂಬುದಾಗಿ ಸಹೋದರರಿಗೆ ಉಪದೇಶಮಾಡುತ್ತಿದ್ದರು.
2 ပေါ်လဗရ္ဏဗ္ဗော် တဲး သဟ ဗဟူန် ဝိစာရာန် ဝိဝါဒါံၑ္စ ကၖတဝန္တော်, တတော မဏ္ဍလီယနောကာ ဧတသျား ကထာယာသ္တတ္တွံ ဇ္ဉာတုံ ယိရူၑာလမ္နဂရသ္ထာန် ပြေရိတာန် ပြာစီနာံၑ္စ ပြတိ ပေါ်လဗရ္ဏဗ္ဗာပြဘၖတီန် ကတိပယဇနာန် ပြေၐယိတုံ နိၑ္စယံ ကၖတဝန္တး၊
೨ಅವರೊಂದಿಗೆ ಪೌಲ ಮತ್ತು ಬಾರ್ನಬರಿಗೆ ಚರ್ಚೆಯೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಪೌಲ, ಬಾರ್ನಬರು ಮತ್ತು ತಮ್ಮಲ್ಲಿ ಬೇರೆ ಕೆಲವರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು ಸಹೋದರರು ತೀರ್ಮಾನಿಸಿದರು.
3 တေ မဏ္ဍလျာ ပြေရိတား သန္တး ဖဲဏီကီၑောမိရောန္ဒေၑာဘျာံ ဂတွာ ဘိန္နဒေၑီယာနာံ မနးပရိဝရ္တ္တနသျ ဝါရ္တ္တယာ ဘြာတၖဏာံ ပရမာဟ္လာဒမ် အဇနယန်၊
೩ಆದುದರಿಂದ ಸಭೆಯವರು ಅವರನ್ನು ಸಾಗ ಕಳುಹಿಸಲು, ಅವರು ಫೊಯಿನಿಕೆ ಮತ್ತು ಸಮಾರ್ಯ ಸೀಮೆಗಳನ್ನು ಹಾದು ಹೋಗುತ್ತಿರುವಾಗ ಅನ್ಯಜನರು ಕರ್ತನ ಕಡೆಗೆ ತಿರುಗಿಕೊಂಡ ಸಂಗತಿಯನ್ನು ಅಲ್ಲಿದ್ದ ಸಹೋದರರಿಗೆ ವಿವರವಾಗಿ ಹೇಳಿ ಅವರೆಲ್ಲರನ್ನು ಬಹಳವಾಗಿ ಸಂತೋಷಪಡಿಸಿದರು.
4 ယိရူၑာလမျုပသ္ထာယ ပြေရိတဂဏေန လောကပြာစီနဂဏေန သမာဇေန စ သမုပဂၖဟီတား သန္တး သွဲရီၑွရော ယာနိ ကရ္မ္မာဏိ ကၖတဝါန် တေၐာံ သရွွဝၖတ္တာန္တာန် တေၐာံ သမက္ၐမ် အကထယန်၊
೪ಅವರು ಯೆರೂಸಲೇಮಿಗೆ ಬಂದ ಮೇಲೆ ಸಭೆಯವರೂ ಅಪೊಸ್ತಲರೂ ಸಭೆಯ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
5 ကိန္တု ဝိၑွာသိနး ကိယန္တး ဖိရူၑိမတဂြာဟိဏော လောကာ ဥတ္ထာယ ကထာမေတာံ ကထိတဝန္တော ဘိန္နဒေၑီယာနာံ တွက္ဆေဒံ ကရ္တ္တုံ မူသာဝျဝသ္ထာံ ပါလယိတုဉ္စ သမာဒေၐ္ဋဝျမ်၊
೫ಆದರೆ ಫರಿಸಾಯ ಮತದವರಲ್ಲಿ ಯೇಸುವನ್ನು ನಂಬಿದ್ದ ಕೆಲವರು ಎದ್ದು; “ದೇವರ ಕಡೆಗೆ ತಿರುಗಿಕೊಂಡಿರುವ ಅನ್ಯಜನರಿಗೆ ಸುನ್ನತಿಮಾಡಿಸಬೇಕು, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಕ್ಕೆ ಅವರಿಗೆ ಅಪ್ಪಣೆಕೊಡಬೇಕು” ಎಂದು ಹೇಳಿದರು.
6 တတး ပြေရိတာ လောကပြာစီနာၑ္စ တသျ ဝိဝေစနာံ ကရ္တ္တုံ သဘာယာံ သ္ထိတဝန္တး၊
೬ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ, ಅವರಲ್ಲಿ ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವರಿಗೆ;
7 ဗဟုဝိစာရေၐု ဇာတၐု ပိတရ ဥတ္ထာယ ကထိတဝါန်, ဟေ ဘြာတရော ယထာ ဘိန္နဒေၑီယလောကာ မမ မုခါတ် သုသံဝါဒံ ၑြုတွာ ဝိၑွသန္တိ တဒရ္ထံ ဗဟုဒိနာတ် ပူရွွမ် ဤၑွရောသ္မာကံ မဓျေ မာံ ဝၖတွာ နိယုက္တဝါန်၊
೭“ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ದೇವರು ಬಹಳ ದಿನಗಳ ಹಿಂದೆ ನಿಮ್ಮೊಳಗಿಂದ ನನ್ನನ್ನು ಆರಿಸಿಕೊಂಡದ್ದು ನಿಮಗೇ ತಿಳಿದಿದೆ.
8 အန္တရျျာမီၑွရော ယထာသ္မဘျံ တထာ ဘိန္နဒေၑီယေဘျး ပဝိတြမာတ္မာနံ ပြဒါယ ဝိၑွာသေန တေၐာမ် အန္တးကရဏာနိ ပဝိတြာဏိ ကၖတွာ
೮ಮತ್ತು ಹೃದಯವನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮವರವನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಸಾಕ್ಷಿಕೊಟ್ಟನು.
9 တေၐာမ် အသ္မာကဉ္စ မဓျေ ကိမပိ ဝိၑေၐံ န သ္ထာပယိတွာ တာနဓိ သွယံ ပြမာဏံ ဒတ္တဝါန် ဣတိ ယူယံ ဇာနီထ၊
೯ಇದಲ್ಲದೆ ಆತನು ನಮಗೂ, ಅವರಿಗೂ ಏನೂ ಭೇದಮಾಡದೆ ಅವರ ಹೃದಯಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
10 အတဧဝါသ္မာကံ ပူရွွပုရုၐာ ဝယဉ္စ သွယံ ယဒျုဂသျ ဘာရံ သောဎုံ န ၑက္တား သမ္ပြတိ တံ ၑိၐျဂဏသျ သ္ကန္ဓေၐု နျသိတုံ ကုတ ဤၑွရသျ ပရီက္ၐာံ ကရိၐျထ?
೧೦ಹೀಗಿರುವುದರಿಂದ ನಮ್ಮ ಪೂರ್ವಿಕರಾಗಲಿ, ನಾವಾಗಲಿ ಹೊರಲಾಗದ ನೋಗವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಏಕೆ?
11 ပြဘော ရျီၑုခြီၐ္ဋသျာနုဂြဟေဏ တေ ယထာ ဝယမပိ တထာ ပရိတြာဏံ ပြာပ္တုမ် အာၑာံ ကုရ္မ္မး၊
೧೧ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬುದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು” ಎಂದು ಹೇಳಿದನು.
12 အနန္တရံ ဗရ္ဏဗ္ဗာပေါ်လာဘျာမ် ဤၑွရော ဘိန္နဒေၑီယာနာံ မဓျေ ယဒျဒ် အာၑ္စရျျမ် အဒ္ဘုတဉ္စ ကရ္မ္မ ကၖတဝါန် တဒွၖတ္တာန္တံ တော် သွမုခါဘျာမ် အဝရ္ဏယတာံ သဘာသ္ထား သရွွေ နီရဝါး သန္တး ၑြုတဝန္တး၊
೧೨ಗುಂಪುಸೇರಿದ್ದವರೆಲ್ಲರೂ ಈ ಮಾತುಗಳನ್ನು ಕೇಳಿ ಮೌನವಾಗಿದ್ದು ಬಾರ್ನಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕ ಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ವಿವರಿಸಿದ್ದನ್ನು ಕಿವಿಗೊಟ್ಟು ಕೇಳಿದರು.
13 တယေား ကထာယာံ သမာပ္တာယာံ သတျာံ ယာကူဗ် ကထယိတုမ် အာရဗ္ဓဝါန္
೧೩ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ;
14 ဟေ ဘြာတရော မမ ကထာယာမ် မနော နိဓတ္တ၊ ဤၑွရး သွနာမာရ္ထံ ဘိန္နဒေၑီယလောကာနာမ် မဓျာဒ် ဧကံ လောကသံဃံ ဂြဟီတုံ မတိံ ကၖတွာ ယေန ပြကာရေဏ ပြထမံ တာန် ပြတိ ကၖပါဝလေကနံ ကၖတဝါန် တံ ၑိမောန် ဝရ္ဏိတဝါန်၊
೧೪“ಸಹೋದರರೇ, ನಾನು ಹೇಳುವುದನ್ನು ಕೇಳಿರಿ. ದೇವರು ಮೊದಲು ಅನ್ಯಜನರನ್ನು ಕೃಪಾಕಟಾಕ್ಷದಿಂದ ನೋಡಿ ತನ್ನ ಹೆಸರಿಗಾಗಿ ಅವರೊಳಗಿನಿಂದ ಒಬ್ಬ ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.
15 ဘဝိၐျဒွါဒိဘိရုက္တာနိ ယာနိ ဝါကျာနိ တဲး သာရ္ဒ္ဓမ် ဧတသျဲကျံ ဘဝတိ ယထာ လိခိတမာသ္တေ၊
೧೫ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ. ಹೇಗೆಂದರೆ;
16 သရွွေၐာံ ကရ္မ္မဏာံ ယသ္တု သာဓကး ပရမေၑွရး၊ သ ဧဝေဒံ ဝဒေဒွါကျံ ၑေၐား သကလမာနဝါး၊ ဘိန္နဒေၑီယလောကာၑ္စ ယာဝန္တော မမ နာမတး၊ ဘဝန္တိ ဟိ သုဝိချာတာသ္တေ ယထာ ပရမေၑိတုး၊
೧೬“‘ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಪುನಃ ಕಟ್ಟುವೆನು. ಪಾಳು ಬಿದ್ದದ್ದನ್ನು ಜೀರ್ಣೋದ್ಧಾರಮಾಡಿ ಸುಭದ್ರವಾಗಿ ನಿಲ್ಲಿಸುವೆನು.
17 တတွံ သမျက် သမီဟန္တေ တန္နိမိတ္တမဟံ ကိလ၊ ပရာဝၖတျ သမာဂတျ ဒါယူဒး ပတိတံ ပုနး၊ ဒူၐျမုတ္ထာပယိၐျာမိ တဒီယံ သရွွဝသ္တု စ၊ ပတိတံ ပုနရုထာပျ သဇ္ဇယိၐျာမိ သရွွထာ။
೧೭ಮನುಷ್ಯರಲ್ಲಿ ಉಳಿದ ಜನರು ಅಂದರೆ ದೇವಜನರೆನಿಸಿಕೊಳ್ಳುವ ಸಕಲ ಜನಾಂಗಗಳೂ ಕರ್ತನನ್ನು ಹುಡುಕುವರು ಎಂದು
18 အာ ပြထမာဒ် ဤၑွရး သွီယာနိ သရွွကရ္မ္မာဏိ ဇာနာတိ၊ (aiōn )
೧೮ಅನಾದಿಕಾಲದಿಂದ ಈ ಕಾರ್ಯಗಳನ್ನು ತಿಳಿಯಪಡಿಸುವ ಕರ್ತನು ನುಡಿಯುತ್ತಾನೆ’ ಎಂದು ಬರೆದದೆ. (aiōn )
19 အတဧဝ မမ နိဝေဒနမိဒံ ဘိန္နဒေၑီယလောကာနာံ မဓျေ ယေ ဇနာ ဤၑွရံ ပြတိ ပရာဝရ္တ္တန္တ တေၐာမုပရိ အနျံ ကမပိ ဘာရံ န နျသျ
೧೯“ಹೀಗಿರಲಾಗಿ ನನ್ನ ಅಭಿಪ್ರಾಯ ಏನೆಂದರೆ; ಅನ್ಯಜನರಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವವರನ್ನು ತೊಂದರೆಪಡಿಸಬಾರದು.
20 ဒေဝတာပြသာဒါၑုစိဘက္ၐျံ ဝျဘိစာရကရ္မ္မ ကဏ္ဌသမ္ပီဍနမာရိတပြာဏိဘက္ၐျံ ရက္တဘက္ၐျဉ္စ ဧတာနိ ပရိတျက္တုံ လိခါမး၊
೨೦ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ಹಾದರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವಿರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆಯೋಣ ಎಂದು ತೀರ್ಮಾನಿಸಿದರು.
21 ယတး ပူရွွကာလတော မူသာဝျဝသ္ထာပြစာရိဏော လောကာ နဂရေ နဂရေ သန္တိ ပြတိဝိၑြာမဝါရဉ္စ ဘဇနဘဝနေ တသျား ပါဌော ဘဝတိ၊
೨೧ಏಕೆಂದರೆ ಪುರಾತನಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ” ಎಂದು ಹೇಳಿದನು.
22 တတး ပရံ ပြေရိတဂဏော လောကပြာစီနဂဏး သရွွာ မဏ္ဍလီ စ သွေၐာံ မဓျေ ဗရ္ၑဗ္ဗာ နာမ္နာ ဝိချာတော မနောနီတော် ကၖတွာ ပေါ်လဗရ္ဏဗ္ဗာဘျာံ သာရ္ဒ္ဓမ် အာန္တိယခိယာနဂရံ ပြတိ ပြေၐဏမ် ဥစိတံ ဗုဒ္ဓွာ တာဘျာံ ပတြံ ပြဲၐယန်၊
೨೨ಆಗ ಅಪೊಸ್ತಲರೂ, ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಮತ್ತು ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು,
23 တသ္မိန် ပတြေ လိခိတမိံဒ, အာန္တိယခိယာ-သုရိယာ-ကိလိကိယာဒေၑသ္ထဘိန္နဒေၑီယဘြာတၖဂဏာယ ပြေရိတဂဏသျ လောကပြာစီနဂဏသျ ဘြာတၖဂဏသျ စ နမသ္ကာရး၊
೨೩ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ; “ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ, ಅಂತಿಯೋಕ್ಯ, ಸಿರಿಯ, ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೂ ಮಾಡುವ ವಂದನೆ;
24 ဝိၑေၐတော'သ္မာကမ် အာဇ္ဉာမ် အပြာပျာပိ ကိယန္တော ဇနာ အသ္မာကံ မဓျာဒ် ဂတွာ တွက္ဆေဒေါ မူသာဝျဝသ္ထာ စ ပါလယိတဝျာဝိတိ ယုၐ္မာန် ၑိက္ၐယိတွာ ယုၐ္မာကံ မနသာမသ္ထဲရျျံ ကၖတွာ ယုၐ္မာန် သသန္ဒေဟာန် အကုရွွန် ဧတာံ ကထာံ ဝယမ် အၑၖန္မ၊
೨೪“ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ,
25 တတ္ကာရဏာဒ် ဝယမ် ဧကမန္တြဏား သန္တး သဘာယာံ သ္ထိတွာ ပြဘော ရျီၑုခြီၐ္ဋသျ နာမနိမိတ္တံ မၖတျုမုခဂတာဘျာမသ္မာကံ
೨೫ನಾವು ಕೆಲವರನ್ನು ಆರಿಸಿಕೊಂಡು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ,
26 ပြိယဗရ္ဏဗ္ဗာပေါ်လာဘျာံ သာရ္ဒ္ဓံ မနောနီတလောကာနာံ ကေၐာဉ္စိဒ် ယုၐ္မာကံ သန္နိဓော် ပြေၐဏမ် ဥစိတံ ဗုဒ္ဓဝန္တး၊
೨೬ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು.
27 အတော ယိဟူဒါသီလော် ယုၐ္မာန် ပြတိ ပြေၐိတဝန္တး, ဧတယော ရ္မုခါဘျာံ သရွွာံ ကထာံ ဇ္ဉာသျထ၊
೨೭ಆದುದರಿಂದ ಯೂದನನ್ನೂ, ಸೀಲನನ್ನೂ ಕಳುಹಿಸಿಕೊಡುತ್ತಿದ್ದೇವೆ. ಅವರು ನಾವು ಬರೆದಿರುವ ಈ ಸಂಗತಿಗಳನ್ನು ಬಾಯಿಮಾತಿನಿಂದಲೂ ನಿಮಗೆ ತಿಳಿಸುವರು.
28 ဒေဝတာပြသာဒဘက္ၐျံ ရက္တဘက္ၐျံ ဂလပီဍနမာရိတပြာဏိဘက္ၐျံ ဝျဘိစာရကရ္မ္မ စေမာနိ သရွွာဏိ ယုၐ္မာဘိသ္တျာဇျာနိ; ဧတတ္ပြယောဇနီယာဇ္ဉာဝျတိရေကေန ယုၐ္မာကမ် ဥပရိ ဘာရမနျံ န နျသိတုံ ပဝိတြသျာတ္မနော'သ္မာကဉ္စ ဥစိတဇ္ဉာနမ် အဘဝတ်၊
೨೮ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ.
29 အတဧဝ တေဘျး သရွွေဘျး သွေၐု ရက္ၐိတေၐု ယူယံ ဘဒြံ ကရ္မ္မ ကရိၐျထ၊ ယုၐ္မာကံ မင်္ဂလံ ဘူယာတ်၊
೨೯ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.”
30 တေ ဝိသၖၐ္ဋား သန္တ အာန္တိယခိယာနဂရ ဥပသ္ထာယ လောကနိဝဟံ သံဂၖဟျ ပတြမ် အဒဒန်၊
೩೦ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು.
31 တတသ္တေ တတ္ပတြံ ပဌိတွာ သာန္တွနာံ ပြာပျ သာနန္ဒာ အဘဝန်၊
೩೧ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು.
32 ယိဟူဒါသီလော် စ သွယံ ပြစာရကော် ဘူတွာ ဘြာတၖဂဏံ နာနောပဒိၑျ တာန် သုသ္ထိရာန် အကုရုတာမ်၊
೩೨ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು.
33 ဣတ္ထံ တော် တတြ တဲး သာကံ ကတိပယဒိနာနိ ယာပယိတွာ ပၑ္စာတ် ပြေရိတာနာံ သမီပေ ပြတျာဂမနာရ္ထံ တေၐာံ သန္နိဓေး ကလျာဏေန ဝိသၖၐ္ဋာဝဘဝတာံ၊
೩೩ಅಲ್ಲಿ ಕೆಲವು ಕಾಲ ಕಳೆದ ನಂತರ ತಮ್ಮನ್ನು ಕಳುಹಿಸಿದವರ ಬಳಿಗೆ ಪುನಃ ಹೋಗುವುದಕ್ಕೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡರು.
34 ကိန္တု သီလသ္တတြ သ္ထာတုံ ဝါဉ္ဆိတဝါန်၊
೩೪ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.
35 အပရံ ပေါ်လဗရ္ဏဗ္ဗော် ဗဟဝး ၑိၐျာၑ္စ လောကာန် ဥပဒိၑျ ပြဘေား သုသံဝါဒံ ပြစာရယန္တ အာန္တိယခိယာယာံ ကာလံ ယာပိတဝန္တး၊
೩೫ಆದರೆ ಪೌಲನೂ ಮತ್ತು ಬಾರ್ನಬನೂ ಅಂತಿಯೋಕ್ಯದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಉಪದೇಶಮಾಡುತ್ತಾ ಕರ್ತನ ವಾಕ್ಯವೆಂಬ ಸುವಾರ್ತೆಯನ್ನು ಸಾರುತ್ತಾ ಇದ್ದರು.
36 ကတိပယဒိနေၐု ဂတေၐု ပေါ်လော ဗရ္ဏဗ္ဗာမ် အဝဒတ် အာဂစ္ဆာဝါံ ယေၐု နဂရေၐွီၑွရသျ သုသံဝါဒံ ပြစာရိတဝန္တော် တာနိ သရွွနဂရာဏိ ပုနရ္ဂတွာ ဘြာတရး ကီဒၖၑား သန္တီတိ ဒြၐ္ဋုံ တာန် သာက္ၐာတ် ကုရွွး၊
೩೬ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ; “ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಊರುಗಳಿಗೆ ಪುನಃ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ” ಎಂದು ಹೇಳಿದನು.
37 တေန မာရ္ကနာမ္နာ ဝိချာတံ ယောဟနံ သင်္ဂိနံ ကရ္တ္တုံ ဗရ္ဏဗ္ဗာ မတိမကရောတ်,
೩೭ಅದಕ್ಕೆ ಬಾರ್ನಬನು ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು
38 ကိန္တု သ ပူရွွံ တာဘျာံ သဟ ကာရျျာရ္ထံ န ဂတွာ ပါမ္ဖူလိယာဒေၑေ တော် တျက္တဝါန် တတ္ကာရဏာတ် ပေါ်လသ္တံ သင်္ဂိနံ ကရ္တ္တုမ် အနုစိတံ ဇ္ဉာတဝါန်၊
೩೮ತಮ್ಮ ಸಂಗಡ ಕರೆದುಕೊಂಡುಹೋಗಬೇಕೆಂದಿದ್ದಾಗ ಪೌಲನು; ನಮ್ಮೊಂದಿಗೆ ಸೇವೆಗೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟುಬಿಟ್ಟವನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ನೆನಸಿದನು.
39 ဣတ္ထံ တယောရတိၑယဝိရောဓသျောပသ္ထိတတွာတ် တော် ပရသ္ပရံ ပၖထဂဘဝတာံ တတော ဗရ္ဏဗ္ဗာ မာရ္ကံ ဂၖဟီတွာ ပေါတေန ကုပြောပဒွီပံ ဂတဝါန်;
೩೯ಈ ವಿಷಯದಲ್ಲಿ ತೀವ್ರವಾದ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸಮುದ್ರ ಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು.
40 ကိန္တု ပေါ်လး သီလံ မနောနီတံ ကၖတွာ ဘြာတၖဘိရီၑွရာနုဂြဟေ သမရ္ပိတး သန် ပြသ္ထာယ
೪೦ಪೌಲನು ಸೀಲನನ್ನು ಆರಿಸಿಕೊಂಡು ಸಹೋದರರಿಂದ ಕರ್ತನ ಕೃಪಾಶ್ರಯಕ್ಕೆ ಒಪ್ಪಿಸಲ್ಪಟ್ಟವನಾಗಿ ಅಲ್ಲಿಂದ
41 သုရိယာကိလိကိယာဒေၑာဘျာံ မဏ္ဍလီး သ္ထိရီကုရွွန် အဂစ္ဆတ်၊
೪೧ಹೊರಟು ಸಿರಿಯ ಮತ್ತು ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.