< ပြေရိတား 11 >
1 ဣတ္ထံ ဘိန္နဒေၑီယလောကာ အပီၑွရသျ ဝါကျမ် အဂၖဟ္လန် ဣမာံ ဝါရ္တ္တာံ ယိဟူဒီယဒေၑသ္ထပြေရိတာ ဘြာတၖဂဏၑ္စ ၑြုတဝန္တး၊
೧ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.
2 တတး ပိတရေ ယိရူၑာလမ္နဂရံ ဂတဝတိ တွက္ဆေဒိနော လောကာသ္တေန သဟ ဝိဝဒမာနာ အဝဒန်,
೨ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಮಾಡಿಸಿಕೊಂಡಿದ್ದ ಯೆಹೂದ್ಯರು;
3 တွမ် အတွက္ဆေဒိလောကာနာံ ဂၖဟံ ဂတွာ တဲး သာရ္ဒ္ဓံ ဘုက္တဝါန်၊
೩“ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ” ಎಂದು ಅವನ ಕೂಡ ವಾದಿಸಿದರು.
4 တတး ပိတရ အာဒိတး ကြမၑသ္တတ္ကာရျျသျ သရွွဝၖတ္တာန္တမာချာတုမ် အာရဗ္ဓဝါန်၊
೪ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ,
5 ယာဖောနဂရ ဧကဒါဟံ ပြာရ္ထယမာနော မူရ္စ္ဆိတး သန် ဒရ္ၑနေန စတုရ္ၐု ကောဏေၐု လမ္ဗနမာနံ ဝၖဟဒွသ္တြမိဝ ပါတြမေကမ် အာကာၑဒဝရုဟျ မန္နိကဋမ် အာဂစ္ဆဒ် အပၑျမ်၊
೫ಹೇಳಿದ್ದೇನಂದರೆ; “ನಾನು ಯೊಪ್ಪ ಎಂಬ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಾ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು” ಅದೇನೆಂದರೆ, ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದು ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ನಾನಿದ್ದಲ್ಲಿಗೆ ಇಳಿದು ಬಂದಿತು.
6 ပၑ္စာတ် တဒ် အနနျဒၖၐ္ဋျာ ဒၖၐ္ဋွာ ဝိဝိစျ တသျ မဓျေ နာနာပြကာရာန် ဂြာမျဝနျပၑူန် ဥရောဂါမိခေစရာံၑ္စ ဒၖၐ္ဋဝါန်;
೬ಅದೇನೆಂದು ತಿಳಿದುಕೊಳ್ಳುವುದಕ್ಕೆ ನಾನು ಅದನ್ನು ಚೆನ್ನಾಗಿ ನೋಡಿದಾಗ, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳು, ಕಾಡುಮೃಗಳು, ಹರಿದಾಡುವ ಕ್ರಿಮಿಕೀಟಗಳನ್ನೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳನ್ನೂ ಕಂಡೆನು.
7 ဟေ ပိတရ တွမုတ္ထာယ ဂတွာ ဘုံက္ၐွ မာံ သမ္ဗောဓျ ကထယန္တံ ၑဗ္ဒမေကံ ၑြုတဝါံၑ္စ၊
೭ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.
8 တတောဟံ ပြတျဝဒံ, ဟေ ပြဘော နေတ္ထံ ဘဝတု, ယတး ကိဉ္စန နိၐိဒ္ဓမ် အၑုစိ ဒြဝျံ ဝါ မမ မုခမဓျံ ကဒါပိ န ပြာဝိၑတ်၊
೮ಅದಕ್ಕೆ ನಾನು; “ಬೇಡವೇ ಬೇಡ, ಕರ್ತನೇ, ಹೊಲೆಯಾದ ಪದಾರ್ಥವಾಗಲಿ, ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ” ಅಂದೆನು.
9 အပရမ် ဤၑွရော ယတ် ၑုစိ ကၖတဝါန် တန္နိၐိဒ္ဓံ န ဇာနီဟိ ဒွိ ရ္မာမ္ပြတီဒၖၑီ ဝိဟာယသီယာ ဝါဏီ ဇာတာ၊
೯ಅದಕ್ಕೆ; “ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆ ಎನ್ನಬಾರದು” ಎಂಬುದಾಗಿ ಎರಡನೆಯ ಸಾರಿಯೂ ಆಕಾಶದಿಂದ ವಾಣಿಯಾಯಿತು.
10 တြိရိတ္ထံ သတိ တတ် သရွွံ ပုနရာကာၑမ် အာကၖၐ္ဋံ၊
೧೦ಹೀಗೆ ಮೂರು ಸಾರಿ ಆಯಿತು. ಅನಂತರ ಎಲ್ಲವೂ ತಿರುಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
11 ပၑ္စာတ် ကဲသရိယာနဂရာတ် တြယော ဇနာ မန္နိကဋံ ပြေၐိတာ ယတြ နိဝေၑနေ သ္ထိတောဟံ တသ္မိန် သမယေ တတြောပါတိၐ္ဌန်၊
೧೧ಆ ಕ್ಷಣದಲ್ಲೇ ಮೂವರು ಪುರುಷರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.
12 တဒါ နိးသန္ဒေဟံ တဲး သာရ္ဒ္ဓံ ယာတုမ် အာတ္မာ မာမာဒိၐ္ဋဝါန်; တတး ပရံ မယာ သဟဲတေၐု ၐဍ္ဘြာတၖၐု ဂတေၐု ဝယံ တသျ မနုဇသျ ဂၖဟံ ပြာဝိၑာမ၊
೧೨ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.
13 သောသ္မာကံ နိကဋေ ကထာမေတာမ် အကထယတ် ဧကဒါ ဒူတ ဧကး ပြတျက္ၐီဘူယ မမ ဂၖဟမဓျေ တိၐ္ဋန် မာမိတျာဇ္ဉာပိတဝါန်, ယာဖောနဂရံ ပြတိ လောကာန် ပြဟိတျ ပိတရနာမ္နာ ဝိချာတံ ၑိမောနမ် အာဟူယယ;
೧೩ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು.
14 တတသ္တဝ တွဒီယပရိဝါရာဏာဉ္စ ယေန ပရိတြာဏံ ဘဝိၐျတိ တတ် သ ဥပဒေက္ၐျတိ၊
೧೪ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.
15 အဟံ တာံ ကထာမုတ္ထာပျ ကထိတဝါန် တေန ပြထမမ် အသ္မာကမ် ဥပရိ ယထာ ပဝိတြ အာတ္မာဝရူဎဝါန် တထာ တေၐာမပျုပရိ သမဝရူဎဝါန်၊
೧೫ನಾನು ಮಾತನಾಡುವುದಕ್ಕೆ ಪ್ರಾರಂಭಿಸಿದಾಗ, ಪವಿತ್ರಾತ್ಮವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು.
16 တေန ယောဟန် ဇလေ မဇ္ဇိတဝါန် ဣတိ သတျံ ကိန္တု ယူယံ ပဝိတြ အာတ္မနိ မဇ္ဇိတာ ဘဝိၐျထ, ဣတိ ယဒွါကျံ ပြဘုရုဒိတဝါန် တတ် တဒါ မယာ သ္မၖတမ်၊
೧೬ಆಗ; “ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಕರ್ತನು ಹೇಳಿದ ಮಾತುಗಳು ನನ್ನ ನೆನಪಿಗೆ ಬಂದಿತು.
17 အတး ပြဘာ ယီၑုခြီၐ္ဋေ ပြတျယကာရိဏော ယေ ဝယမ် အသ္မဘျမ် ဤၑွရော ယဒ် ဒတ္တဝါန် တတ် တေဘျော လောကေဘျောပိ ဒတ္တဝါန် တတး ကောဟံ? ကိမဟမ် ဤၑွရံ ဝါရယိတုံ ၑက္နောမိ?
೧೭ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.
18 ကထာမေတာံ ၑြုဝါ တေ က္ၐာန္တာ ဤၑွရသျ ဂုဏာန် အနုကီရ္တ္တျ ကထိတဝန္တး, တရှိ ပရမာယုးပြာပ္တိနိမိတ္တမ် ဤၑွရောနျဒေၑီယလောကေဘျောပိ မနးပရိဝရ္တ္တနရူပံ ဒါနမ် အဒါတ်၊
೧೮ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.
19 သ္တိဖာနံ ပြတိ ဥပဒြဝေ ဃဋိတေ ယေ ဝိကီရ္ဏာ အဘဝန် တဲ ဖဲနီကီကုပြာန္တိယခိယာသု ဘြမိတွာ ကေဝလယိဟူဒီယလောကာန် ဝိနာ ကသျာပျနျသျ သမီပ ဤၑွရသျ ကထာံ န ပြာစာရယန်၊
೧೯ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನಿಕೆ, ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು.
20 အပရံ တေၐာံ ကုပြီယား ကုရီနီယာၑ္စ ကိယန္တော ဇနာ အာန္တိယခိယာနဂရံ ဂတွာ ယူနာနီယလောကာနာံ သမီပေပိ ပြဘောရျီၑေား ကထာံ ပြာစာရယန်၊
೨೦ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು.
21 ပြဘေား ကရသ္တေၐာံ သဟာယ အာသီတ် တသ္မာဒ် အနေကေ လောကာ ဝိၑွသျ ပြဘုံ ပြတိ ပရာဝရ္တ္တန္တ၊
೨೧ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.
22 ဣတိ ဝါရ္တ္တာယာံ ယိရူၑာလမသ္ထမဏ္ဍလီယလောကာနာံ ကရ္ဏဂေါစရီဘူတာယာမ် အာန္တိယခိယာနဂရံ ဂန္တု တေ ဗရ္ဏဗ္ဗာံ ပြဲရယန်၊
೨೨ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
23 တတော ဗရ္ဏဗ္ဗာသ္တတြ ဥပသ္ထိတး သန် ဤၑွရသျာနုဂြဟသျ ဖလံ ဒၖၐ္ဋွာ သာနန္ဒော ဇာတး,
೨೩ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.
24 သ သွယံ သာဓု ရွိၑွာသေန ပဝိတြေဏာတ္မနာ စ ပရိပူရ္ဏး သန် ဂနောနိၐ္ဋယာ ပြဘာဝါသ္ထာံ ကရ္တ္တုံ သရွွာန် ဥပဒိၐ္ဋဝါန် တေန ပြဘေား ၑိၐျာ အနေကေ ဗဘူဝုး၊
೨೪ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು, ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು.
25 ၑေၐေ ၑော်လံ မၖဂယိတုံ ဗရ္ဏဗ္ဗာသ္တာရ္ၐနဂရံ ပြသ္ထိတဝါန်၊ တတြ တသျောဒ္ဒေၑံ ပြာပျ တမ် အာန္တိယခိယာနဂရမ် အာနယတ်;
೨೫ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು.
26 တတသ္တော် မဏ္ဍလီသ္ထလောကဲး သဘာံ ကၖတွာ သံဝတ္သရမေကံ ယာဝဒ် ဗဟုလောကာန် ဥပါဒိၑတာံ; တသ္မိန် အာန္တိယခိယာနဂရေ ၑိၐျား ပြထမံ ခြီၐ္ဋီယနာမ္နာ ဝိချာတာ အဘဝန်၊
೨೬ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.
27 တတး ပရံ ဘဝိၐျဒွါဒိဂဏေ ယိရူၑာလမ အာန္တိယခိယာနဂရမ် အာဂတေ သတိ
೨೭ಅ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
28 အာဂါဗနာမာ တေၐာမေက ဥတ္ထာယ အာတ္မနး ၑိက္ၐယာ သရွွဒေၑေ ဒုရ္ဘိက္ၐံ ဘဝိၐျတီတိ ဇ္ဉာပိတဝါန်; တတး က္လော်ဒိယကဲသရသျာဓိကာရေ သတိ တတ် ပြတျက္ၐမ် အဘဝတ်၊
೨೮ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.
29 တသ္မာတ် ၑိၐျာ ဧကဲကၑး သွသွၑက္တျနုသာရတော ယိဟူဒီယဒေၑနိဝါသိနာံ ဘြတၖဏာံ ဒိနယာပနာရ္ထံ ဓနံ ပြေၐယိတုံ နိၑ္စိတျ
೨೯ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.
30 ဗရ္ဏဗ္ဗာၑော်လယော ရ္ဒွါရာ ပြာစီနလောကာနာံ သမီပံ တတ် ပြေၐိတဝန္တး၊
೩೦ಹಾಗೆಯೇ ಮಾಡಿ, ಅದನ್ನು ಬಾರ್ನಬನ ಮತ್ತು ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿಕೊಟ್ಟರು.