< ၂ ကရိန္ထိနး 5 >
1 အပရမ် အသ္မာကမ် ဧတသ္မိန် ပါရ္ထိဝေ ဒူၐျရူပေ ဝေၑ္မနိ ဇီရ္ဏေ သတီၑွရေဏ နိရ္မ္မိတမ် အကရကၖတမ် အသ္မာကမ် အနန္တကာလသ္ထာယိ ဝေၑ္မဲကံ သွရ္ဂေ ဝိဒျတ ဣတိ ဝယံ ဇာနီမး၊ (aiōnios )
೧ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ. (aiōnios )
2 ယတော ဟေတောရေတသ္မိန် ဝေၑ္မနိ တိၐ္ဌန္တော ဝယံ တံ သွရ္ဂီယံ ဝါသံ ပရိဓာတုမ် အာကာင်္က္ၐျမာဏာ နိးၑွသာမး၊
೨ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.
3 တထာပီဒါနီမပိ ဝယံ တေန န နဂ္နား ကိန္တု ပရိဟိတဝသနာ မနျာမဟေ၊
೩ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.
4 ဧတသ္မိန် ဒူၐျေ တိၐ္ဌနတော ဝယံ က္လိၑျမာနာ နိးၑွသာမး, ယတော ဝယံ ဝါသံ တျက္တုမ် ဣစ္ဆာမသ္တန္နဟိ ကိန္တု တံ ဒွိတီယံ ဝါသံ ပရိဓာတုမ် ဣစ္ဆာမး, ယတသ္တထာ ကၖတေ ဇီဝနေန မရ္တျံ ဂြသိၐျတေ၊
೪ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ.
5 ဧတဒရ္ထံ ဝယံ ယေန သၖၐ္ဋား သ ဤၑွရ ဧဝ သ စာသ္မဘျံ သတျင်္ကာရသျ ပဏသွရူပမ် အာတ္မာနံ ဒတ္တဝါန်၊
೫ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ.
6 အတဧဝ ဝယံ သရွွဒေါတ္သုကာ ဘဝါမး ကိဉ္စ ၑရီရေ ယာဝဒ် အသ္မာဘိ ရ္နျုၐျတေ တာဝတ် ပြဘုတော ဒူရေ ပြောၐျတ ဣတိ ဇာနီမး,
೬ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ
7 ယတော ဝယံ ဒၖၐ္ဋိမာရ္ဂေ န စရာမး ကိန္တု ဝိၑွာသမာရ္ဂေ၊
೭ನಾವು ನೋಡುತ್ತಾ ನಡೆಯದೇ, ನಂಬುವವರಾಗಿಯೇ ನಡೆಯುತ್ತೇವೆ.
8 အပရဉ္စ ၑရီရာဒ် ဒူရေ ပြဝသ္တုံ ပြဘေား သန္နိဓော် နိဝသ္တုဉ္စာကာင်္က္ၐျမာဏာ ဥတ္သုကာ ဘဝါမး၊
೮ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ.
9 တသ္မာဒေဝ ကာရဏာဒ် ဝယံ တသျ သန္နိဓော် နိဝသန္တသ္တသ္မာဒ် ဒူရေ ပြဝသန္တော ဝါ တသ္မဲ ရောစိတုံ ယတာမဟေ၊
೯ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.
10 ယသ္မာတ် ၑရီရာဝသ္ထာယာမ် ဧကဲကေန ကၖတာနာံ ကရ္မ္မဏာံ ၑုဘာၑုဘဖလပြာပ္တယေ သရွွဲသ္မာဘိး ခြီၐ္ဋသျ ဝိစာရာသနသမ္မုခ ဥပသ္ထာတဝျံ၊
೧೦ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.
11 အတဧဝ ပြဘော ရ္ဘယာနကတွံ ဝိဇ္ဉာယ ဝယံ မနုဇာန် အနုနယာမး ကိဉ္စေၑွရသျ ဂေါစရေ သပြကာၑာ ဘဝါမး, ယုၐ္မာကံ သံဝေဒဂေါစရေ'ပိ သပြကာၑာ ဘဝါမ ဣတျာၑံသာမဟေ၊
೧೧ಆದ್ದರಿಂದ, ಕರ್ತನಲ್ಲಿ ಭಯವುಳ್ಳವರಾಗಿರಬೇಕೆಂದು ನಾವು, ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಎಂಥವರೆಂದು ದೇವರಿಗೆ ಪ್ರಕಟವಾಗಿದ್ದೇವೆ. ಅದು ನಿಮ್ಮ ಮನಸ್ಸಾಕ್ಷಿಗೆ ಕೂಡಾ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ.
12 အနေန ဝယံ ယုၐ္မာကံ သန္နိဓော် ပုနး သွာန် ပြၑံသာမ ဣတိ နဟိ ကိန္တု ယေ မနော ဝိနာ မုခဲး ၑ္လာဃန္တေ တေဘျး ပြတျုတ္တရဒါနာယ ယူယံ ယထာသ္မာဘိး ၑ္လာဃိတုံ ၑက္နုထ တာဒၖၑမ် ဥပါယံ ယုၐ္မဘျံ ဝိတရာမး၊
೧೨ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
13 ယဒိ ဝယံ ဟတဇ္ဉာနာ ဘဝါမသ္တရှိ တဒ် ဤၑွရာရ္ထကံ ယဒိ စ သဇ္ဉာနာ ဘဝါမသ္တရှိ တဒ် ယုၐ္မဒရ္ထကံ၊
೧೩ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ.
14 ဝယံ ခြီၐ္ဋသျ ပြေမ္နာ သမာကၖၐျာမဟေ ယတး သရွွေၐာံ ဝိနိမယေန ယဒျေကော ဇနော'မြိယတ တရှိ တေ သရွွေ မၖတာ ဣတျာသ္မာဘိ ရ္ဗုဓျတေ၊
೧೪ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ.
15 အပရဉ္စ ယေ ဇီဝန္တိ တေ ယတ် သွာရ္ထံ န ဇီဝန္တိ ကိန္တု တေၐာံ ကၖတေ ယော ဇနော မၖတး ပုနရုတ္ထာပိတၑ္စ တမုဒ္ဒိၑျ ယတ် ဇီဝန္တိ တဒရ္ထမေဝ သ သရွွေၐာံ ကၖတေ မၖတဝါန်၊
೧೫ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.
16 အတော ဟေတောရိတး ပရံ ကော'ပျသ္မာဘိ ရ္ဇာတိတော န ပြတိဇ္ဉာတဝျး၊ ယဒျပိ ပူရွွံ ခြီၐ္ဋော ဇာတိတော'သ္မာဘိး ပြတိဇ္ဉာတသ္တထာပီဒါနီံ ဇာတိတး ပုန ရ္န ပြတိဇ္ဉာယတေ၊
೧೬ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ.
17 ကေနစိတ် ခြီၐ္ဋ အာၑြိတေ နူတနာ သၖၐ္ဋိ ရ္ဘဝတိ ပုရာတနာနိ လုပျန္တေ ပၑျ နိခိလာနိ နဝီနာနိ ဘဝန္တိ၊
೧೭ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.
18 သရွွဉ္စဲတဒ် ဤၑွရသျ ကရ္မ္မ ယတော ယီၑုခြီၐ္ဋေန သ ဧဝါသ္မာန် သွေန သာရ္ဒ္ဓံ သံဟိတဝါန် သန္ဓာနသမ္ဗန္ဓီယာံ ပရိစရျျာမ် အသ္မာသု သမရ္ပိတဝါံၑ္စ၊
೧೮ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ;
19 ယတး ဤၑွရး ခြီၐ္ဋမ် အဓိၐ္ဌာယ ဇဂတော ဇနာနာမ် အာဂါံသိ တေၐာမ် ၒဏမိဝ န ဂဏယန် သွေန သာရ္ဒ္ဓံ တာန် သံဟိတဝါန် သန္ဓိဝါရ္တ္တာမ် အသ္မာသု သမရ္ပိတဝါံၑ္စ၊
೧೯ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.
20 အတော ဝယံ ခြီၐ္ဋသျ ဝိနိမယေန ဒေါ်တျံ ကရ္မ္မ သမ္ပာဒယာမဟေ, ဤၑွရၑ္စာသ္မာဘိ ရျုၐ္မာန် ယာယာစျတေ တတး ခြီၐ္ဋသျ ဝိနိမယေန ဝယံ ယုၐ္မာန် ပြာရ္ထယာမဟေ ယူယမီၑွရေဏ သန္ဓတ္တ၊
೨೦ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ.
21 ယတော ဝယံ တေန ယဒ် ဤၑွရီယပုဏျံ ဘဝါမသ္တဒရ္ထံ ပါပေန သဟ ယသျ ဇ္ဉာတေယံ နာသီတ် သ ဧဝ တေနာသ္မာကံ ဝိနိမယေန ပါပး ကၖတး၊
೨೧ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ನೀತಿವಂತರಾಗಬೇಕೆಂದು ದೇವರು ಹೀಗೆ ಮಾಡಿದರು.