< ২ করিন্থিনঃ 5 >
1 ১ অপরম্ অস্মাকম্ এতস্মিন্ পার্থিৱে দূষ্যরূপে ৱেশ্মনি জীর্ণে সতীশ্ৱরেণ নির্ম্মিতম্ অকরকৃতম্ অস্মাকম্ অনন্তকালস্থাযি ৱেশ্মৈকং স্ৱর্গে ৱিদ্যত ইতি ৱযং জানীমঃ| (aiōnios )
ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ. (aiōnios )
2 ২ যতো হেতোরেতস্মিন্ ৱেশ্মনি তিষ্ঠন্তো ৱযং তং স্ৱর্গীযং ৱাসং পরিধাতুম্ আকাঙ্ক্ষ্যমাণা নিঃশ্ৱসামঃ|
ನಮ್ಮ ಪರಲೋಕದ ನಿವಾಸವನ್ನು ನೀವೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಈ ಜೀವನದಲ್ಲಿ ನರಳುತ್ತಿದ್ದೇವೆ.
3 ৩ তথাপীদানীমপি ৱযং তেন ন নগ্নাঃ কিন্তু পরিহিতৱসনা মন্যামহে|
ಏಕೆಂದರೆ, ನಾವು ಪರಲೋಕದ ನಿವಾಸವನ್ನು ಧರಿಸಿಕೊಂಡಾಗ, ಆತ್ಮವಿಲ್ಲದ ದೇಹವಾಗಿ ನಾವು ಇರುವುದಿಲ್ಲ.
4 ৪ এতস্মিন্ দূষ্যে তিষ্ঠনতো ৱযং ক্লিশ্যমানা নিঃশ্ৱসামঃ, যতো ৱযং ৱাসং ত্যক্তুম্ ইচ্ছামস্তন্নহি কিন্তু তং দ্ৱিতীযং ৱাসং পরিধাতুম্ ইচ্ছামঃ, যতস্তথা কৃতে জীৱনেন মর্ত্যং গ্রসিষ্যতে|
ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ಗುಡಾರವೆಂಬ ಹಳೆಯ ಶರೀರವು ನಮ್ಮಿಂದ ಕಳಚಿ ಹೋಗಬೇಕೆಂಬುದು ನಮ್ಮ ಇಷ್ಟವಲ್ಲ. ಆದರೆ ಪರಲೋಕದ ನಿವಾಸವೆಂಬ ನೂತನ ಶರೀರವನ್ನು ನಾವು ಧರಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಶ್ವರವಾದ ಈ ನಮ್ಮ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು.
5 ৫ এতদর্থং ৱযং যেন সৃষ্টাঃ স ঈশ্ৱর এৱ স চাস্মভ্যং সত্যঙ্কারস্য পণস্ৱরূপম্ আত্মানং দত্তৱান্|
ಈ ಉದ್ದೇಶಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು, ಮುಂಬರುವುದರ ಖಾತರಿಯಾಗಿ ನಮಗೆ ತಮ್ಮ ಆತ್ಮವನ್ನೇ ಕೊಟ್ಟಿದ್ದಾರೆ.
6 ৬ অতএৱ ৱযং সর্ৱ্ৱদোৎসুকা ভৱামঃ কিঞ্চ শরীরে যাৱদ্ অস্মাভি র্ন্যুষ্যতে তাৱৎ প্রভুতো দূরে প্রোষ্যত ইতি জানীমঃ,
ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ.
7 ৭ যতো ৱযং দৃষ্টিমার্গে ন চরামঃ কিন্তু ৱিশ্ৱাসমার্গে|
ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ.
8 ৮ অপরঞ্চ শরীরাদ্ দূরে প্রৱস্তুং প্রভোঃ সন্নিধৌ নিৱস্তুঞ্চাকাঙ্ক্ষ্যমাণা উৎসুকা ভৱামঃ|
ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ.
9 ৯ তস্মাদেৱ কারণাদ্ ৱযং তস্য সন্নিধৌ নিৱসন্তস্তস্মাদ্ দূরে প্রৱসন্তো ৱা তস্মৈ রোচিতুং যতামহে|
ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ.
10 ১০ যস্মাৎ শরীরাৱস্থাযাম্ একৈকেন কৃতানাং কর্ম্মণাং শুভাশুভফলপ্রাপ্তযে সর্ৱ্ৱৈস্মাভিঃ খ্রীষ্টস্য ৱিচারাসনসম্মুখ উপস্থাতৱ্যং|
ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು.
11 ১১ অতএৱ প্রভো র্ভযানকৎৱং ৱিজ্ঞায ৱযং মনুজান্ অনুনযামঃ কিঞ্চেশ্ৱরস্য গোচরে সপ্রকাশা ভৱামঃ, যুষ্মাকং সংৱেদগোচরেঽপি সপ্রকাশা ভৱাম ইত্যাশংসামহে|
ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ.
12 ১২ অনেন ৱযং যুষ্মাকং সন্নিধৌ পুনঃ স্ৱান্ প্রশংসাম ইতি নহি কিন্তু যে মনো ৱিনা মুখৈঃ শ্লাঘন্তে তেভ্যঃ প্রত্যুত্তরদানায যূযং যথাস্মাভিঃ শ্লাঘিতুং শক্নুথ তাদৃশম্ উপাযং যুষ্মভ্যং ৱিতরামঃ|
ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.
13 ১৩ যদি ৱযং হতজ্ঞানা ভৱামস্তর্হি তদ্ ঈশ্ৱরার্থকং যদি চ সজ্ঞানা ভৱামস্তর্হি তদ্ যুষ্মদর্থকং|
ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ.
14 ১৪ ৱযং খ্রীষ্টস্য প্রেম্না সমাকৃষ্যামহে যতঃ সর্ৱ্ৱেষাং ৱিনিমযেন যদ্যেকো জনোঽম্রিযত তর্হি তে সর্ৱ্ৱে মৃতা ইত্যাস্মাভি র্বুধ্যতে|
ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು.
15 ১৫ অপরঞ্চ যে জীৱন্তি তে যৎ স্ৱার্থং ন জীৱন্তি কিন্তু তেষাং কৃতে যো জনো মৃতঃ পুনরুত্থাপিতশ্চ তমুদ্দিশ্য যৎ জীৱন্তি তদর্থমেৱ স সর্ৱ্ৱেষাং কৃতে মৃতৱান্|
ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.
16 ১৬ অতো হেতোরিতঃ পরং কোঽপ্যস্মাভি র্জাতিতো ন প্রতিজ্ঞাতৱ্যঃ| যদ্যপি পূর্ৱ্ৱং খ্রীষ্টো জাতিতোঽস্মাভিঃ প্রতিজ্ঞাতস্তথাপীদানীং জাতিতঃ পুন র্ন প্রতিজ্ঞাযতে|
ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ.
17 ১৭ কেনচিৎ খ্রীষ্ট আশ্রিতে নূতনা সৃষ্টি র্ভৱতি পুরাতনানি লুপ্যন্তে পশ্য নিখিলানি নৱীনানি ভৱন্তি|
ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು.
18 ১৮ সর্ৱ্ৱঞ্চৈতদ্ ঈশ্ৱরস্য কর্ম্ম যতো যীশুখ্রীষ্টেন স এৱাস্মান্ স্ৱেন সার্দ্ধং সংহিতৱান্ সন্ধানসম্বন্ধীযাং পরিচর্য্যাম্ অস্মাসু সমর্পিতৱাংশ্চ|
ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ:
19 ১৯ যতঃ ঈশ্ৱরঃ খ্রীষ্টম্ অধিষ্ঠায জগতো জনানাম্ আগাংসি তেষাম্ ঋণমিৱ ন গণযন্ স্ৱেন সার্দ্ধং তান্ সংহিতৱান্ সন্ধিৱার্ত্তাম্ অস্মাসু সমর্পিতৱাংশ্চ|
ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ.
20 ২০ অতো ৱযং খ্রীষ্টস্য ৱিনিমযেন দৌত্যং কর্ম্ম সম্পাদযামহে, ঈশ্ৱরশ্চাস্মাভি র্যুষ্মান্ যাযাচ্যতে ততঃ খ্রীষ্টস্য ৱিনিমযেন ৱযং যুষ্মান্ প্রার্থযামহে যূযমীশ্ৱরেণ সন্ধত্ত|
ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ.
21 ২১ যতো ৱযং তেন যদ্ ঈশ্ৱরীযপুণ্যং ভৱামস্তদর্থং পাপেন সহ যস্য জ্ঞাতেযং নাসীৎ স এৱ তেনাস্মাকং ৱিনিমযেন পাপঃ কৃতঃ|
ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.