< তীতঃ 1 >
1 ১ অনন্তজীৱনস্যাশাতো জাতাযা ঈশ্ৱৰভক্তে ৰ্যোগ্যস্য সত্যমতস্য যৎ তৎৱজ্ঞানং যশ্চ ৱিশ্ৱাস ঈশ্ৱৰস্যাভিৰুচিতলোকৈ ৰ্লভ্যতে তদৰ্থং (aiōnios )
೧ದೇವರ ಸೇವಕನೂ, ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ.
2 ২ যীশুখ্ৰীষ্টস্য প্ৰেৰিত ঈশ্ৱৰস্য দাসঃ পৌলোঽহং সাধাৰণৱিশ্ৱাসাৎ মম প্ৰকৃতং ধৰ্ম্মপুত্ৰং তীতং প্ৰতি লিখমি|
೨ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.
3 ৩ নিষ্কপট ঈশ্ৱৰ আদিকালাৎ পূৰ্ৱ্ৱং তৎ জীৱনং প্ৰতিজ্ঞাতৱান্ স্ৱনিৰূপিতসমযে চ ঘোষণযা তৎ প্ৰকাশিতৱান্|
೩ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ. (aiōnios )
4 ৪ মম ত্ৰাতুৰীশ্ৱৰস্যাজ্ঞযা চ তস্য ঘোষণং মযি সমৰ্পিতম্ অভূৎ| অস্মাকং তাত ঈশ্ৱৰঃ পৰিত্ৰাতা প্ৰভু ৰ্যীশুখ্ৰীষ্টশ্চ তুভ্যম্ অনুগ্ৰহং দযাং শান্তিঞ্চ ৱিতৰতু|
೪ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ.
5 ৫ ৎৱং যদ্ অসম্পূৰ্ণকাৰ্য্যাণি সম্পূৰযে ৰ্মদীযাদেশাচ্চ প্ৰতিনগৰং প্ৰাচীনগণান্ নিযোজযেস্তদৰ্থমহং ৎৱাং ক্ৰীত্যুপদ্ৱীপে স্থাপযিৎৱা গতৱান্|
೫ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ.
6 ৬ তস্মাদ্ যো নৰো ঽনিন্দিত একস্যা যোষিতঃ স্ৱামী ৱিশ্ৱাসিনাম্ অপচযস্যাৱাধ্যৎৱস্য ৱা দোষেণালিপ্তানাঞ্চ সন্তানানাং জনকো ভৱতি স এৱ যোগ্যঃ|
೬ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.
7 ৭ যতো হেতোৰদ্যক্ষেণেশ্ৱৰস্য গৃহাদ্যক্ষেণেৱানিন্দনীযেন ভৱিতৱ্যং| তেন স্ৱেচ্ছাচাৰিণা ক্ৰোধিনা পানাসক্তেন প্ৰহাৰকেণ লোভিনা ৱা ন ভৱিতৱ্যং
೭ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,
8 ৮ কিন্ত্ৱতিথিসেৱকেন সল্লোকানুৰাগিণা ৱিনীতেন ন্যায্যেন ধাৰ্ম্মিকেণ জিতেন্দ্ৰিযেণ চ ভৱিতৱ্যং,
೮ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, ಜಿತೇಂದ್ರಿಯನೂ ಆಗಿದ್ದು,
9 ৯ উপদেশে চ ৱিশ্ৱস্তং ৱাক্যং তেন ধাৰিতৱ্যং যতঃ স যদ্ যথাৰ্থেনোপদেশেন লোকান্ ৱিনেতুং ৱিঘ্নকাৰিণশ্চ নিৰুত্তৰান্ কৰ্ত্তুং শক্নুযাৎ তদ্ আৱশ্যকং|
೯ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು.
10 ১০ যতস্তে বহৱো ঽৱাধ্যা অনৰ্থকৱাক্যৱাদিনঃ প্ৰৱঞ্চকাশ্চ সন্তি ৱিশেষতশ্ছিন্নৎৱচাং মধ্যে কেচিৎ তাদৃশা লোকাঃ সন্তি|
೧೦ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ.
11 ১১ তেষাঞ্চ ৱাগ্ৰোধ আৱশ্যকো যতস্তে কুৎসিতলাভস্যাশযানুচিতানি ৱাক্যানি শিক্ষযন্তো নিখিলপৰিৱাৰাণাং সুমতিং নাশযন্তি|
೧೧ಅವರು ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ.
12 ১২ তেষাং স্ৱদেশীয একো ভৱিষ্যদ্ৱাদী ৱচনমিদমুক্তৱান্, যথা, ক্ৰীতীযমানৱাঃ সৰ্ৱ্ৱে সদা কাপট্যৱাদিনঃ| হিংস্ৰজন্তুসমানাস্তে ঽলসাশ্চোদৰভাৰতঃ||
೧೨“ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ.
13 ১৩ সাক্ষ্যমেতৎ তথ্যং, অতো হেতোস্ত্ৱং তান্ গাঢং ভৰ্ত্সয তে চ যথা ৱিশ্ৱাসে স্ৱস্থা ভৱেযু
೧೩ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ,
14 ১৪ ৰ্যিহূদীযোপাখ্যানেষু সত্যমতভ্ৰষ্টানাং মানৱানাম্ আজ্ঞাসু চ মনাংসি ন নিৱেশযেযুস্তথাদিশ|
೧೪ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು.
15 ১৫ শুচীনাং কৃতে সৰ্ৱ্ৱাণ্যেৱ শুচীনি ভৱন্তি কিন্তু কলঙ্কিতানাম্ অৱিশ্ৱাসিনাঞ্চ কৃতে শুচি কিমপি ন ভৱতি যতস্তেষাং বুদ্ধযঃ সংৱেদাশ্চ কলঙ্কিতাঃ সন্তি|
೧೫ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.
16 ১৬ ঈশ্ৱৰস্য জ্ঞানং তে প্ৰতিজানন্তি কিন্তু কৰ্ম্মভিস্তদ্ অনঙ্গীকুৰ্ৱ্ৱতে যতস্তে গৰ্হিতা অনাজ্ঞাগ্ৰাহিণঃ সৰ্ৱ্ৱসৎকৰ্ম্মণশ্চাযোগ্যাঃ সন্তি|
೧೬ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.