< লূকঃ 3 >
1 ১ অনন্তৰং তিবিৰিযকৈসৰস্য ৰাজৎৱস্য পঞ্চদশে ৱৎসৰে সতি যদা পন্তীযপীলাতো যিহূদাদেশাধিপতি ৰ্হেৰোদ্ তু গালীল্প্ৰদেশস্য ৰাজা ফিলিপনামা তস্য ভ্ৰাতা তু যিতূৰিযাযাস্ত্ৰাখোনীতিযাপ্ৰদেশস্য চ ৰাজাসীৎ লুষানীযনামা অৱিলীনীদেশস্য ৰাজাসীৎ
೧ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ
2 ২ হানন্ কিযফাশ্চেমৌ প্ৰধানযাজাকাৱাস্তাং তদানীং সিখৰিযস্য পুত্ৰায যোহনে মধ্যেপ্ৰান্তৰম্ ঈশ্ৱৰস্য ৱাক্যে প্ৰকাশিতে সতি
೨ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು.
3 ৩ স যৰ্দ্দন উভযতটপ্ৰদেশান্ সমেত্য পাপমোচনাৰ্থং মনঃপৰাৱৰ্ত্তনস্য চিহ্নৰূপং যন্মজ্জনং তদীযাঃ কথাঃ সৰ্ৱ্ৱত্ৰ প্ৰচাৰযিতুমাৰেভে|
೩ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು.
4 ৪ যিশযিযভৱিষ্যদ্ৱক্তৃগ্ৰন্থে যাদৃশী লিপিৰাস্তে যথা, পৰমেশস্য পন্থানং পৰিষ্কুৰুত সৰ্ৱ্ৱতঃ| তস্য ৰাজপথঞ্চৈৱ সমানং কুৰুতাধুনা|
೪ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
5 ৫ কাৰিষ্যন্তে সমুচ্ছ্ৰাযাঃ সকলা নিম্নভূমযঃ| কাৰিষ্যন্তে নতাঃ সৰ্ৱ্ৱে পৰ্ৱ্ৱতাশ্চোপপৰ্ৱ্ৱতাঃ| কাৰিষ্যন্তে চ যা ৱক্ৰাস্তাঃ সৰ্ৱ্ৱাঃ সৰলা ভুৱঃ| কাৰিষ্যন্তে সমানাস্তা যা উচ্চনীচভূমযঃ|
೫
6 ৬ ঈশ্ৱৰেণ কৃতং ত্ৰাণং দ্ৰক্ষ্যন্তি সৰ্ৱ্ৱমানৱাঃ| ইত্যেতৎ প্ৰান্তৰে ৱাক্যং ৱদতঃ কস্যচিদ্ ৰৱঃ||
೬
7 ৭ যে যে লোকা মজ্জনাৰ্থং বহিৰাযযুস্তান্ সোৱদৎ ৰে ৰে সৰ্পৱংশা আগামিনঃ কোপাৎ পলাযিতুং যুষ্মান্ কশ্চেতযামাস?
೭ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು?
8 ৮ তস্মাদ্ ইব্ৰাহীম্ অস্মাকং পিতা কথামীদৃশীং মনোভি ৰ্ন কথযিৎৱা যূযং মনঃপৰিৱৰ্ত্তনযোগ্যং ফলং ফলত; যুষ্মানহং যথাৰ্থং ৱদামি পাষাণেভ্য এতেভ্য ঈশ্ৱৰ ইব্ৰাহীমঃ সন্তানোৎপাদনে সমৰ্থঃ|
೮ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.
9 ৯ অপৰঞ্চ তৰুমূলেঽধুনাপি পৰশুঃ সংলগ্নোস্তি যস্তৰুৰুত্তমং ফলং ন ফলতি স ছিদ্যতেঽগ্নৌ নিক্ষিপ্যতে চ|
೯ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.
10 ১০ তদানীং লোকাস্তং পপ্ৰচ্ছুস্তৰ্হি কিং কৰ্ত্তৱ্যমস্মাভিঃ?
೧೦ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ,
11 ১১ ততঃ সোৱাদীৎ যস্য দ্ৱে ৱসনে ৱিদ্যেতে স ৱস্ত্ৰহীনাযৈকং ৱিতৰতু কিংঞ্চ যস্য খাদ্যদ্ৰৱ্যং ৱিদ্যতে সোপি তথৈৱ কৰোতু|
೧೧ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.
12 ১২ ততঃ পৰং কৰসঞ্চাযিনো মজ্জনাৰ্থম্ আগত্য পপ্ৰচ্ছুঃ হে গুৰো কিং কৰ্ত্তৱ্যমস্মাভিঃ?
೧೨ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು,
13 ১৩ ততঃ সোকথযৎ নিৰূপিতাদধিকং ন গৃহ্লিত|
೧೩ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು.
14 ১৪ অনন্তৰং সেনাগণ এত্য পপ্ৰচ্ছ কিমস্মাভি ৰ্ৱা কৰ্ত্তৱ্যম্? ততঃ সোভিদধে কস্য কামপি হানিং মা কাৰ্ষ্ট তথা মৃষাপৱাদং মা কুৰুত নিজৱেতনেন চ সন্তুষ্য তিষ্ঠত|
೧೪ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.
15 ১৫ অপৰঞ্চ লোকা অপেক্ষযা স্থিৎৱা সৰ্ৱ্ৱেপীতি মনোভি ৰ্ৱিতৰ্কযাঞ্চক্ৰুঃ, যোহনযম্ অভিষিক্তস্ত্ৰাতা ন ৱেতি?
೧೫ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು,
16 ১৬ তদা যোহন্ সৰ্ৱ্ৱান্ ৱ্যাজহাৰ, জলেঽহং যুষ্মান্ মজ্জযামি সত্যং কিন্তু যস্য পাদুকাবন্ধনং মোচযিতুমপি ন যোগ্যোস্মি তাদৃশ একো মত্তো গুৰুতৰঃ পুমান্ এতি, স যুষ্মান্ ৱহ্নিৰূপে পৱিত্ৰ আত্মনি মজ্জযিষ্যতি|
೧೬ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು.
17 ১৭ অপৰঞ্চ তস্য হস্তে শূৰ্প আস্তে স স্ৱশস্যানি শুদ্ধৰূপং প্ৰস্ফোট্য গোধূমান্ সৰ্ৱ্ৱান্ ভাণ্ডাগাৰে সংগ্ৰহীষ্যতি কিন্তু বূষাণি সৰ্ৱ্ৱাণ্যনিৰ্ৱ্ৱাণৱহ্নিনা দাহযিষ্যতি|
೧೭ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
18 ১৮ যোহন্ উপদেশেনেত্থং নানাকথা লোকানাং সমক্ষং প্ৰচাৰযামাস|
೧೮ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.
19 ১৯ অপৰঞ্চ হেৰোদ্ ৰাজা ফিলিপ্নাম্নঃ সহোদৰস্য ভাৰ্য্যাং হেৰোদিযামধি তথান্যানি যানি যানি কুকৰ্ম্মাণি কৃতৱান্ তদধি চ
೧೯ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ,
20 ২০ যোহনা তিৰস্কৃতো ভূৎৱা কাৰাগাৰে তস্য বন্ধনাদ্ অপৰমপি কুকৰ্ম্ম চকাৰ|
೨೦ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು.
21 ২১ ইতঃ পূৰ্ৱ্ৱং যস্মিন্ সমযে সৰ্ৱ্ৱে যোহনা মজ্জিতাস্তদানীং যীশুৰপ্যাগত্য মজ্জিতঃ|
೨೧ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು
22 ২২ তদনন্তৰং তেন প্ৰাৰ্থিতে মেঘদ্ৱাৰং মুক্তং তস্মাচ্চ পৱিত্ৰ আত্মা মূৰ্ত্তিমান্ ভূৎৱা কপোতৱৎ তদুপৰ্য্যৱৰুৰোহ; তদা ৎৱং মম প্ৰিযঃ পুত্ৰস্ত্ৱযি মম পৰমঃ সন্তোষ ইত্যাকাশৱাণী বভূৱ|
೨೨ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು.
23 ২৩ তদানীং যীশুঃ প্ৰাযেণ ত্ৰিংশদ্ৱৰ্ষৱযস্ক আসীৎ| লৌকিকজ্ঞানে তু স যূষফঃ পুত্ৰঃ,
೨೩ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು;
24 ২৪ যূষফ্ এলেঃ পুত্ৰঃ, এলিৰ্মত্ততঃ পুত্ৰঃ, মত্তৎ লেৱেঃ পুত্ৰঃ, লেৱি ৰ্মল্কেঃ পুত্ৰঃ, মল্কিৰ্যান্নস্য পুত্ৰঃ; যান্নো যূষফঃ পুত্ৰঃ|
೨೪ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು;
25 ২৫ যূষফ্ মত্তথিযস্য পুত্ৰঃ, মত্তথিয আমোসঃ পুত্ৰঃ, আমোস্ নহূমঃ পুত্ৰঃ, নহূম্ ইষ্লেঃ পুত্ৰঃ ইষ্লিৰ্নগেঃ পুত্ৰঃ|
೨೫ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು;
26 ২৬ নগিৰ্মাটঃ পুত্ৰঃ, মাট্ মত্তথিযস্য পুত্ৰঃ, মত্তথিযঃ শিমিযেঃ পুত্ৰঃ, শিমিযিৰ্যূষফঃ পুত্ৰঃ, যূষফ্ যিহূদাঃ পুত্ৰঃ|
೨೬ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು;
27 ২৭ যিহূদা যোহানাঃ পুত্ৰঃ, যোহানা ৰীষাঃ পুত্ৰঃ, ৰীষাঃ সিৰুব্বাবিলঃ পুত্ৰঃ, সিৰুব্বাবিল্ শল্তীযেলঃ পুত্ৰঃ, শল্তীযেল্ নেৰেঃ পুত্ৰঃ|
೨೭ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು;
28 ২৮ নেৰিৰ্মল্কেঃ পুত্ৰঃ, মল্কিঃ অদ্যঃ পুত্ৰঃ, অদ্দী কোষমঃ পুত্ৰঃ, কোষম্ ইল্মোদদঃ পুত্ৰঃ, ইল্মোদদ্ এৰঃ পুত্ৰঃ|
೨೮ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು;
29 ২৯ এৰ্ যোশেঃ পুত্ৰঃ, যোশিঃ ইলীযেষৰঃ পুত্ৰঃ, ইলীযেষৰ্ যোৰীমঃ পুত্ৰঃ, যোৰীম্ মত্ততঃ পুত্ৰঃ, মত্তত লেৱেঃ পুত্ৰঃ|
೨೯ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು;
30 ৩০ লেৱিঃ শিমিযোনঃ পুত্ৰঃ, শিমিযোন্ যিহূদাঃ পুত্ৰঃ, যিহূদা যূষুফঃ পুত্ৰঃ, যূষুফ্ যোননঃ পুত্ৰঃ, যানন্ ইলীযাকীমঃ পুত্ৰঃ|
೩೦ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;
31 ৩১ ইলিযাকীম্ঃ মিলেযাঃ পুত্ৰঃ, মিলেযা মৈননঃ পুত্ৰঃ, মৈনন্ মত্তত্তস্য পুত্ৰঃ, মত্তত্তো নাথনঃ পুত্ৰঃ, নাথন্ দাযূদঃ পুত্ৰঃ|
೩೧ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;
32 ৩২ দাযূদ্ যিশযঃ পুত্ৰঃ, যিশয ওবেদঃ পুত্ৰ, ওবেদ্ বোযসঃ পুত্ৰঃ, বোযস্ সল্মোনঃ পুত্ৰঃ, সল্মোন্ নহশোনঃ পুত্ৰঃ|
೩೨ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು;
33 ৩৩ নহশোন্ অম্মীনাদবঃ পুত্ৰঃ, অম্মীনাদব্ অৰামঃ পুত্ৰঃ, অৰাম্ হিষ্ৰোণঃ পুত্ৰঃ, হিষ্ৰোণ্ পেৰসঃ পুত্ৰঃ, পেৰস্ যিহূদাঃ পুত্ৰঃ|
೩೩ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು;
34 ৩৪ যিহূদা যাকূবঃ পুত্ৰঃ, যাকূব্ ইস্হাকঃ পুত্ৰঃ, ইস্হাক্ ইব্ৰাহীমঃ পুত্ৰঃ, ইব্ৰাহীম্ তেৰহঃ পুত্ৰঃ, তেৰহ্ নাহোৰঃ পুত্ৰঃ|
೩೪ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು;
35 ৩৫ নাহোৰ্ সিৰুগঃ পুত্ৰঃ, সিৰুগ্ ৰিয্ৱঃ পুত্ৰঃ, ৰিযূঃ পেলগঃ পুত্ৰঃ, পেলগ্ এৱৰঃ পুত্ৰঃ, এৱৰ্ শেলহঃ পুত্ৰঃ|
೩೫ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು;
36 ৩৬ শেলহ্ কৈননঃ পুত্ৰঃ, কৈনন্ অৰ্ফক্ষদঃ পুত্ৰঃ, অৰ্ফক্ষদ্ শামঃ পুত্ৰঃ, শাম্ নোহঃ পুত্ৰঃ, নোহো লেমকঃ পুত্ৰঃ|
೩೬ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು;
37 ৩৭ লেমক্ মিথূশেলহঃ পুত্ৰঃ, মিথূশেলহ্ হনোকঃ পুত্ৰঃ, হনোক্ যেৰদঃ পুত্ৰঃ, যেৰদ্ মহললেলঃ পুত্ৰঃ, মহললেল্ কৈননঃ পুত্ৰঃ|
೩೭ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು;
38 ৩৮ কৈনন্ ইনোশঃ পুত্ৰঃ, ইনোশ্ শেতঃ পুত্ৰঃ, শেৎ আদমঃ পুত্ৰ, আদম্ ঈশ্ৱৰস্য পুত্ৰঃ|
೩೮ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.