< প্ৰেৰিতাঃ 1 >

1 হে থিযফিল, যীশুঃ স্ৱমনোনীতান্ প্ৰেৰিতান্ পৱিত্ৰেণাত্মনা সমাদিশ্য যস্মিন্ দিনে স্ৱৰ্গমাৰোহৎ যাং যাং ক্ৰিযামকৰোৎ যদ্যদ্ উপাদিশচ্চ তানি সৰ্ৱ্ৱাণি পূৰ্ৱ্ৱং মযা লিখিতানি|
ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,
2 স স্ৱনিধনদুঃখভোগাৎ পৰম্ অনেকপ্ৰত্যযক্ষপ্ৰমাণৌঃ স্ৱং সজীৱং দৰ্শযিৎৱা
ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.
3 চৎৱাৰিংশদ্দিনানি যাৱৎ তেভ্যঃ প্ৰেৰিতেভ্যো দৰ্শনং দত্ত্ৱেশ্ৱৰীযৰাজ্যস্য ৱৰ্ণনম অকৰোৎ|
ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.
4 অনন্তৰং তেষাং সভাং কৃৎৱা ইত্যাজ্ঞাপযৎ, যূযং যিৰূশালমোঽন্যত্ৰ গমনমকৃৎৱা যস্তিন্ পিত্ৰাঙ্গীকৃতে মম ৱদনাৎ কথা অশৃণুত তৎপ্ৰাপ্তিম্ অপেক্ষ্য তিষ্ঠত|
ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,
5 যোহন্ জলে মজ্জিতাৱান্ কিন্ত্ৱল্পদিনমধ্যে যূযং পৱিত্ৰ আত্মনি মজ্জিতা ভৱিষ্যথ|
ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.
6 পশ্চাৎ তে সৰ্ৱ্ৱে মিলিৎৱা তম্ অপৃচ্ছন্ হে প্ৰভো ভৱান্ কিমিদানীং পুনৰপি ৰাজ্যম্ ইস্ৰাযেলীযলোকানাং কৰেষু সমৰ্পযিষ্যতি?
ಕೂಡಿಬಂದವರು ಆತನನ್ನು, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು
7 ততঃ সোৱদৎ যান্ সৰ্ৱ্ৱান্ কালান্ সমযাংশ্চ পিতা স্ৱৱশেঽস্থাপযৎ তান্ জ্ঞাতৃং যুষ্মাকম্ অধিকাৰো ন জাযতে|
ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.
8 কিন্তু যুষ্মাসু পৱিত্ৰস্যাত্মন আৱিৰ্ভাৱে সতি যূযং শক্তিং প্ৰাপ্য যিৰূশালমি সমস্তযিহূদাশোমিৰোণদেশযোঃ পৃথিৱ্যাঃ সীমাং যাৱদ্ যাৱন্তো দেশাস্তেষু যৰ্ৱ্ৱেষু চ মযি সাক্ষ্যং দাস্যথ|
ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.
9 ইতি ৱাক্যমুক্ত্ৱা স তেষাং সমক্ষং স্ৱৰ্গং নীতোঽভৱৎ, ততো মেঘমাৰুহ্য তেষাং দৃষ্টেৰগোচৰোঽভৱৎ|
ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.
10 ১০ যস্মিন্ সমযে তে ৱিহাযসং প্ৰত্যনন্যদৃষ্ট্যা তস্য তাদৃশম্ ঊৰ্দ্ৱ্ৱগমনম্ অপশ্যন্ তস্মিন্নেৱ সমযে শুক্লৱস্ত্ৰৌ দ্ৱৌ জনৌ তেষাং সন্নিধৌ দণ্ডাযমানৌ কথিতৱন্তৌ,
೧೦ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.
11 ১১ হে গালীলীযলোকা যূযং কিমৰ্থং গগণং প্ৰতি নিৰীক্ষ্য দণ্ডাযমানাস্তিষ্ঠথ? যুষ্মাকং সমীপাৎ স্ৱৰ্গং নীতো যো যীশুস্তং যূযং যথা স্ৱৰ্গম্ আৰোহন্তম্ অদৰ্শম্ তথা স পুনশ্চাগমিষ্যতি|
೧೧“ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.
12 ১২ ততঃ পৰং তে জৈতুননাম্নঃ পৰ্ৱ্ৱতাদ্ ৱিশ্ৰামৱাৰস্য পথঃ পৰিমাণম্ অৰ্থাৎ প্ৰাযেণাৰ্দ্ধক্ৰোশং দুৰস্থং যিৰূশালম্নগৰং পৰাৱৃত্যাগচ্ছন্|
೧೨ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.
13 ১৩ নগৰং প্ৰৱিশ্য পিতৰো যাকূব্ যোহন্ আন্দ্ৰিযঃ ফিলিপঃ থোমা বৰ্থজমযো মথিৰাল্ফীযপুত্ৰো যাকূব্ উদ্যোগা শিমোন্ যাকূবো ভ্ৰাতা যিহূদা এতে সৰ্ৱ্ৱে যত্ৰ স্থানে প্ৰৱসন্তি তস্মিন্ উপৰিতনপ্ৰকোষ্ঠে প্ৰাৱিশন্|
೧೩ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.
14 ১৪ পশ্চাদ্ ইমে কিযত্যঃ স্ত্ৰিযশ্চ যীশো ৰ্মাতা মৰিযম্ তস্য ভ্ৰাতৰশ্চৈতে সৰ্ৱ্ৱ একচিত্তীভূত সততং ৱিনযেন ৱিনযেন প্ৰাৰ্থযন্ত|
೧೪ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.
15 ১৫ তস্মিন্ সমযে তত্ৰ স্থানে সাকল্যেন ৱিংশত্যধিকশতং শিষ্যা আসন্| ততঃ পিতৰস্তেষাং মধ্যে তিষ্ঠন্ উক্তৱান্
೧೫ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು,
16 ১৬ হে ভ্ৰাতৃগণ যীশুধাৰিণাং লোকানাং পথদৰ্শকো যো যিহূদাস্তস্মিন্ দাযূদা পৱিত্ৰ আত্মা যাং কথাং কথযামাস তস্যাঃ প্ৰত্যক্ষীভৱনস্যাৱশ্যকৎৱম্ আসীৎ|
೧೬“ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.
17 ১৭ স জনোঽস্মাকং মধ্যৱৰ্ত্তী সন্ অস্যাঃ সেৱাযা অংশম্ অলভত|
೧೭ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.”
18 ১৮ তদনন্তৰং কুকৰ্ম্মণা লব্ধং যন্মূল্যং তেন ক্ষেত্ৰমেকং ক্ৰীতম্ অপৰং তস্মিন্ অধোমুখে ভৃমৌ পতিতে সতি তস্যোদৰস্য ৱিদীৰ্ণৎৱাৎ সৰ্ৱ্ৱা নাড্যো নিৰগচ্ছন্|
೧೮(ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.
19 ১৯ এতাং কথাং যিৰূশালম্নিৱাসিনঃ সৰ্ৱ্ৱে লোকা ৱিদান্তি; তেষাং নিজভাষযা তৎক্ষেত্ৰঞ্চ হকল্দামা, অৰ্থাৎ ৰক্তক্ষেত্ৰমিতি ৱিখ্যাতমাস্তে|
೧೯ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ‘ಅಕೆಲ್ದಾಮಾ,’ ಅಂದರೆ ರಕ್ತದ ಹೊಲ ಎಂಬ ಹೆಸರು ಬಂದಿತು.)
20 ২০ অন্যচ্চ, নিকেতনং তদীযন্তু শুন্যমেৱ ভৱিষ্যতি| তস্য দূষ্যে নিৱাসাৰ্থং কোপি স্থাস্যতি নৈৱ হি| অন্য এৱ জনস্তস্য পদং সংপ্ৰাপ্স্যতি ধ্ৰুৱং| ইত্থং গীতপুস্তকে লিখিতমাস্তে|
೨೦ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.
21 ২১ অতো যোহনো মজ্জনম্ আৰভ্যাস্মাকং সমীপাৎ প্ৰভো ৰ্যীশোঃ স্ৱৰ্গাৰোহণদিনং যাৱৎ সোস্মাকং মধ্যে যাৱন্তি দিনানি যাপিতৱান্
೨೧ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು
22 ২২ তাৱন্তি দিনানি যে মানৱা অস্মাভিঃ সাৰ্দ্ধং তিষ্ঠন্তি তেষাম্ একেন জনেনাস্মাভিঃ সাৰ্দ্ধং যীশোৰুত্থানে সাক্ষিণা ভৱিতৱ্যং|
೨೨
23 ২৩ অতো যস্য ৰূঢি ৰ্যুষ্টো যং বৰ্শব্বেত্যুক্ত্ৱাহূযন্তি স যূষফ্ মতথিশ্চ দ্ৱাৱেতৌ পৃথক্ কৃৎৱা ত ঈশ্ৱৰস্য সন্নিধৌ প্ৰাৰ্য্য কথিতৱন্তঃ,
೨೩ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ,
24 ২৪ হে সৰ্ৱ্ৱান্তৰ্য্যামিন্ পৰমেশ্ৱৰ, যিহূদাঃ সেৱনপ্ৰেৰিতৎৱপদচ্যুতঃ
೨೪“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.
25 ২৫ সন্ নিজস্থানম্ অগচ্ছৎ, তৎপদং লব্ধুম্ এনযো ৰ্জনযো ৰ্মধ্যে ভৱতা কোঽভিৰুচিতস্তদস্মান্ দৰ্শ্যতাং|
೨೫
26 ২৬ ততো গুটিকাপাটে কৃতে মতথিৰ্নিৰচীযত তস্মাৎ সোন্যেষাম্ একাদশানাং প্ৰৰিতানাং মধ্যে গণিতোভৱৎ|
೨೬ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.

< প্ৰেৰিতাঃ 1 >