< Откровение 20 >

1 И увидел я Ангела, сходящего с неба, который имел ключ от бездны и большую цепь в руке своей. (Abyssos g12)
ಆಗ ಒಬ್ಬ ದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. (Abyssos g12)
2 Он взял дракона, змия древнего, который есть диавол и сатана, и сковал его на тысячу лет,
ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
3 и низверг его в бездну, и заключил его, и положил над ним печать, дабы не прельщал уже народы, доколе не окончится тысяча лет; после же сего ему должно быть освобожденным на малое время. (Abyssos g12)
ಆ ಸಾವಿರ ವರ್ಷ ತೀರುವ ತನಕ ಅವನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೂತನು ಅವನನ್ನು ಅಧೋಲೋಕದಲ್ಲಿ ತಳ್ಳಿ, ಬಾಗಿಲು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು. ಇವುಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗತಕ್ಕದ್ದು. (Abyssos g12)
4 И увидел я престолы и сидящих на них, которым дано было судить, и души обезглавленных за свидетельство Иисуса и за слово Божие, которые не поклонились зверю, ни образу его и не приняли начертания на чело свое и на руку свою. Они ожили и царствовали со Христом тысячу лет.
ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು.
5 Прочие же из умерших не ожили, доколе не окончится тысяча лет. Это - первое воскресение.
ಉಳಿದ ಸತ್ತವರು ಆ ಸಾವಿರ ವರ್ಷ ಗತಿಸುವ ತನಕ ಜೀವಿತರಾಗಲಿಲ್ಲ. ಇದೇ ಪ್ರಥಮ ಪುನರುತ್ಥಾನವು.
6 Блажен и свят имеющий участие в воскресении первом: над ними смерть вторая не имеет власти, но они будут священниками Бога и Христа и будут царствовать с Ним тысячу лет.
ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಧನ್ಯರೂ ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಯೇಸುಕ್ರಿಸ್ತರೊಂದಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷಗಳ ಕಾಲ ಆಳುವರು.
7 Когда же окончится тысяча лет, сатана будет освобожден из темницы своей и выйдет обольщать народы, находящиеся на четырех углах земли, Гога и Магога, и собирать их на брань; число их как песок морской.
ಆ ಸಾವಿರ ವರ್ಷಗಳು ಗತಿಸಿದ ಮೇಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು.
8 И вышли на широту земли, и окружили стан святых и город возлюбленный.
ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು.
9 И ниспал огонь с неба от Бога и пожрал их;
ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.
10 а диавол, прельщавший их, ввержен в озеро огненное и серное, где зверь и лжепророк, и будут мучиться день и ночь во веки веков. (aiōn g165, Limnē Pyr g3041 g4442)
ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. (aiōn g165, Limnē Pyr g3041 g4442)
11 И увидел я великий белый престол и Сидящего на нем, от лица Которого бежало небо и земля, и не нашлось им места.
ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು.
12 И увидел я мертвых, малых и великих, стоящих пред Богом, и книги раскрыты были, и иная книга раскрыта, которая есть книга жизни; и судимы были мертвые по написанному в книгах, сообразно с делами своими.
ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
13 Тогда отдало море мертвых, бывших в нем, и смерть и ад отдали мертвых, которые были в них; и судим был каждый по делам своим. (Hadēs g86)
ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು. (Hadēs g86)
14 И смерть и ад повержены в озеро огненное. Это смерть вторая. (Hadēs g86, Limnē Pyr g3041 g4442)
ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. (Hadēs g86, Limnē Pyr g3041 g4442)
15 И кто не был записан в книге жизни, тот был брошен в озеро огненное. (Limnē Pyr g3041 g4442)
ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು. (Limnē Pyr g3041 g4442)

< Откровение 20 >