< 2-я Паралипоменон 25 >
1 Двадцати пяти лет воцарился Амасия и двадцать девять лет царствовал в Иерусалиме; имя матери его Иегоаддань из Иерусалима.
ಅಮಚ್ಯನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು.
2 И делал он угодное в очах Господних, но не от полного сердца.
ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ಪೂರ್ಣಹೃದಯದಿಂದಲ್ಲ.
3 Когда утвердилось за ним царство, тогда он умертвил рабов своих, убивших царя, отца его.
ಅವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು.
4 Но детей их не умертвил, так как написано в законе, в книге Моисеевой, где заповедал Господь, говоря: не должны быть умерщвляемы отцы за детей, и дети не должны быть умерщвляемы за отцов, но каждый за свое преступление должен умереть.
ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅಮಚ್ಯನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ.
5 И собрал Амасия Иудеев и поставил их по поколениям под власть тысяченачальников и стоначальников, всех Иудеев и Вениамитян, и пересчитал их от двадцати лет и выше, и нашел их триста тысяч человек отборных, ходящих на войну, держащих копье и щит.
ಇದಲ್ಲದೆ ಅಮಚ್ಯನು ಯೆಹೂದದವರನ್ನು ಕೂಡಿಸಿಕೊಂಡು, ಯೆಹೂದ ಬೆನ್ಯಾಮೀನ್ಯರೆಲ್ಲರಲ್ಲಿ ತಮ್ಮ ಪಿತೃಗಳ ಮನೆಗಳ ಪ್ರಕಾರ ಅವರನ್ನು ಸಾವಿರ ಜನರ ಮೇಲೆ ಅಧಿಪತಿಗಳಾಗಿಯೂ, ನೂರು ಜನರ ಮೇಲೆ ಅಧಿಪತಿಗಳಾಗಿಯೂ ಮಾಡಿದನು. ಅವನು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ಪ್ರಾಯವುಳ್ಳವರನ್ನು ಲೆಕ್ಕಿಸಿ ಆಯ್ದುಕೊಂಡನು. ಯುದ್ಧಕ್ಕೆ ಹೋಗತಕ್ಕಂಥ, ಈಟಿಯನ್ನೂ, ಖೇಡ್ಯವನ್ನೂ ಹಿಡಿದುಕೊಂಡಿರುವಂಥ, ಮೂರು ಲಕ್ಷ ಮಂದಿಯನ್ನು ಕೂಡಿಸಿದನು.
6 И еще нанял из Израильтян сто тысяч храбрых воинов за сто талантов серебра.
ಇದಲ್ಲದೆ ಇಸ್ರಾಯೇಲಿನವರಿಗೆ 3,400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟು, ಪರಾಕ್ರಮಶಾಲಿಗಳಾದ ಒಂದು ಲಕ್ಷ ಮಂದಿಯನ್ನು ಕೂಲಿಗೆ ತೆಗೆದುಕೊಂಡನು.
7 Но человек Божий пришел к нему и сказал: царь! пусть не идет с тобою войско Израильское, потому что нет Господа с Израильтянами, со всеми сынами Ефрема.
ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದಿರಲಿ. ಏಕೆಂದರೆ ಯೆಹೋವ ದೇವರು ಇಸ್ರಾಯೇಲರಾದ ಎಫ್ರಾಯೀಮನ ಸಮಸ್ತ ಜನರ ಸಂಗಡ ಇರುವುದಿಲ್ಲ.
8 Но иди ты один, делай дело, мужественно подвизайся на войне. Иначе повергнет тебя Бог пред лицем врага, ибо есть сила у Бога поддержать и повергнуть.
ನೀವು ಹೋಗಿ ಯುದ್ಧದಲ್ಲಿ ಧೈರ್ಯದಿಂದ ಹೋರಾಡಿದರೂ ದೇವರು ಶತ್ರುವಿನ ಮುಂದೆ ನಿನ್ನನ್ನು ಸೋಲಿಸಿಬಿಡುವರು. ಏಕೆಂದರೆ ಸಹಾಯ ಕೊಡುವುದಕ್ಕೂ, ಬೀಳ ಮಾಡುವುದಕ್ಕೂ ದೇವರಿಗೆ ಶಕ್ತಿ ಉಂಟು,” ಎಂದನು.
9 И сказал Амасия человеку Божию: что же делать со ста талантами, которые я отдал войску Израильскому? И сказал человек Божий: может Господь дать тебе более сего.
ಆಗ ಅಮಚ್ಯನು ದೇವರ ಮನುಷ್ಯನಿಗೆ, “ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ 3,400 ಕಿಲೋಗ್ರಾಂ ಬೆಳ್ಳಿಯನ್ನು ಏನು ಮಾಡಬೇಕು?” ಎಂದನು. ಅದಕ್ಕೆ ದೇವರ ಮನುಷ್ಯನು, “ಯೆಹೋವ ದೇವರು ಇದಕ್ಕಿಂತ ಅಧಿಕವಾಗಿಯೇ ನಿನಗೆ ಕೊಡಲು ಶಕ್ತರು,” ಎಂದನು.
10 И отделил их Амасия, - войско, пришедшее к нему из земли Ефремовой, чтоб они шли в свое место. И возгорелся сильно гнев их на Иудею, и они пошли назад в свое место, в пылу гнева.
ಆಗ ಅಮಚ್ಯನು ಎಫ್ರಾಯೀಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವರನ್ನು ಕಳುಹಿಸಿಬಿಟ್ಟನು. ಆದಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪಗೊಂಡವರಾಗಿ ತಮ್ಮ ಮನೆಗೆ ತಿರುಗಿದರು.
11 А Амасия отважился и повел народ свой, и пошел на долину Соляную и побил сынов Сеира десять тысяч;
ಅಮಚ್ಯನು ತನ್ನನ್ನು ಬಲಪಡಿಸಿ ತನ್ನ ಜನರನ್ನು ನಡೆಸಿಕೊಂಡು ಉಪ್ಪಿನ ತಗ್ಗಿಗೆ ಹೋಗಿ, ಅಲ್ಲಿ ಸೇಯೀರಿನ ಮಕ್ಕಳೊಳಗೆ ಹತ್ತು ಸಾವಿರ ಮಂದಿಯನ್ನು ಹೊಡೆದನು.
12 и десять тысяч живых взяли сыны Иудины в плен, и привели их на вершину скалы, и низринули их с вершины скалы, и все они разбились совершенно.
ಬದುಕಿದ್ದ ಬೇರೆ ಹತ್ತು ಸಾವಿರ ಮಂದಿಯನ್ನು ಯೆಹೂದ್ಯರು ಸೆರೆಯಾಗಿ ಒಯ್ದು, ಬಂಡೆಯ ಶಿಖರಕ್ಕೆ ಅವರನ್ನು ಕರೆದುಕೊಂಡು ಹೋಗಿ, ಅಲ್ಲಿಂದ ಅವರನ್ನು ದಬ್ಬಿ ಸಾಯಿಸಿದರು.
13 Войско же, которое Амасия отослал обратно, чтоб оно не ходило с ним на войну, рассыпалось по городам Иудеи от Самарии до Вефорона и перебило в них три тысячи, и награбило множество добычи.
ತಮ್ಮ ಸಂಗಡ ಯುದ್ಧಕ್ಕೆ ಬಾರದ ಹಾಗೆ ಅಮಚ್ಯನು ಹಿಂದಕ್ಕೆ ಕಳುಹಿಸಿದ ಗುಂಪಿನವರು ಯೆಹೂದದ ಪಟ್ಟಣಗಳ ಮೇಲೆ ದಾಳಿಮಾಡಿ, ಸಮಾರ್ಯ ಮೊದಲುಗೊಂಡು ಬೇತ್ ಹೋರೋನಿನ ಮಟ್ಟಿಗೂ ಮೂರು ಸಾವಿರ ಮಂದಿಯನ್ನು ಕೊಂದು, ಬಹು ಕೊಳ್ಳೆಯನ್ನು ತೆಗೆದುಕೊಂಡು ಹೋದರು.
14 Амасия, придя после поражения Идумеян, принес богов сынов Сеира и поставил их у себя богами, и пред ними кланялся и им кадил.
ಅಮಚ್ಯನು ಎದೋಮ್ಯರನ್ನು ಹೊಡೆದು ತಿರುಗಿ ಬಂದ ತರುವಾಯ, ಸೇಯೀರನ ಮಕ್ಕಳ ದೇವರುಗಳನ್ನು ತೆಗೆದುಕೊಂಡು ಬಂದು, ಅವು ತನಗೆ ದೇವರುಗಳಾಗಿರುವ ಹಾಗೆ ನಿಲ್ಲಿಸಿಕೊಂಡು, ಅವುಗಳ ಮುಂದೆ ಅಡ್ಡಬಿದ್ದು, ಅವುಗಳಿಗೆ ಧೂಪವನ್ನು ಸುಟ್ಟನು.
15 И воспылал гнев Господа на Амасию, и послал Он к нему пророка, и тот сказал ему: зачем ты прибегаешь к богам народа сего, которые не избавили народа своего от руки твоей?
ಆದಕಾರಣ ಯೆಹೋವ ದೇವರ ಕೋಪವು ಅಮಚ್ಯನ ಮೇಲೆ ಬಂತು. ದೇವರು ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿದರು. ಪ್ರವಾದಿಯು ಅರಸನಿಗೆ, “ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆ ಹೋದ ದೇವರುಗಳನ್ನು ನೀನು ವಿಚಾರಿಸುವುದೇನು?” ಎಂದನು.
16 Когда он говорил ему, царь отвечал: разве советником царским поставили тебя? перестань, чтоб не убили тебя. И перестал пророк, сказав: знаю, что решил Бог погубить тебя, потому что ты сделал сие и не слушаешь совета моего.
ಪ್ರವಾದಿಯು ಅರಸನ ಸಂಗಡ ಮಾತನಾಡುತ್ತಿರುವಾಗಲೇ ಅರಸನು ಅವನಿಗೆ, “ಅರಸನ ಆಲೋಚನಾ ಮಂತ್ರಿಯನ್ನಾಗಿ ನಿನ್ನನ್ನು ನೇಮಿಸಿದವರು ಯಾರು? ಸುಮ್ಮನಿರು! ನೀನು ಏಕೆ ಮರಣಹೊಂದಬೇಕೆಂದಿರುವೆ?” ಎಂದನು. ಆಗ ಪ್ರವಾದಿಯು, “ನೀನು ನನ್ನ ಯೋಚನೆಯನ್ನು ಕೇಳದೆ ಇದನ್ನು ಮಾಡಿದ್ದರಿಂದ, ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾರೆಂದು ನಾನು ಬಲ್ಲೆನು,” ಎಂದನು.
17 И посоветовался Амасия, царь Иудейский, и послал к Иоасу, сыну Иоахаза, сына Ииуева, царю Израильскому, сказать: выходи, повидаемся лично.
ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.
18 И послал Иоас, царь Израильский, к Амасии, царю Иудейскому, сказать: терн, который на Ливане, послал к кедру, который на Ливане же, сказать: отдай дочь свою в жену сыну моему. Но прошли звери дикие, которые на Ливане, и истоптали этот терн.
ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು.
19 Ты говоришь: вот я побил Идумеян, - и вознеслось сердце твое до тщеславия. Сиди лучше у себя дома. К чему тебе затевать опасное дело? Падешь ты и Иудея с тобою.
ನೀನು ಎದೋಮ್ಯರನ್ನು ಸೋಲಿಸಿ ಕೀರ್ತಿಯನ್ನು ಪಡೆದುಕೊಂಡೆನಲ್ಲಾ ಎಂದು ನಿನ್ನ ಹೃದಯವು ಗರ್ವಪಡದಿರಲಿ. ಈಗ ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದನು.
20 Но не послушался Амасия, так как от Бога было это, дабы предать их в руку Иоаса за то, что стали прибегать к богам Идумейским.
ಆದರೆ ಅಮಚ್ಯನು ಕೇಳದೆ ಹೋದನು. ಏಕೆಂದರೆ ಯೆಹೂದ್ಯರು ಎದೋಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ, ಅವರನ್ನು ಯೆಹೋವಾಷನ ಕೈಯಲ್ಲಿ ಒಪ್ಪಿಸುವಂತೆ ಇದು ದೇವರಿಂದ ಆಯಿತು.
21 И выступил Иоас, царь Израильский, и увиделись лично, он и Амасия, царь Иудейский, в Вефсамисе Иудейском.
ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ, ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು.
22 И были разбиты Иудеи Израильтянами, и разбежались каждый в шатер свой.
ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು.
23 И Амасию, царя Иудейского, сына Иоаса, сына Иоахазова, захватил Иоас, царь Израильский, в Вефсамисе и привел его в Иерусалим, и разрушил стену Иерусалимскую от ворот Ефремовых до ворот угольных, на четыреста локтей;
ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೋವಾಹಾಜನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಊರಿನ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು, ಮೂಲೆಯ ಬಾಗಿಲವರೆಗೂ, 180 ಮೀಟರ್ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು.
24 и взял все золото и серебро, и все сосуды, находившиеся в доме Божием у Овед-Едома, и сокровища дома царского, и заложников, и возвратился в Самарию.
ಅವನು ಓಬೇದ್ ಏದೋಮನ ಬಳಿಯಲ್ಲಿ ಯೆಹೋವ ದೇವರ ಆಲಯದಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ, ಅರಮನೆಯ ಬೊಕ್ಕಸಗಳನ್ನೂ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.
25 И жил Амасия, сын Иоасов, царь Иудейский, по смерти Иоаса, сына Иоахазова, царя Израильского, пятнадцать лет.
ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು.
26 Прочие дела Амасии, первые и последние, описаны в книге царей Иудейских и Израильских.
ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಯೆಹೂದ ಇಸ್ರಾಯೇಲರ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
27 И после того времени, как Амасия отступил от Господа, составили против него заговор в Иерусалиме, и он убежал в Лахис. И послали за ним в Лахис, и умертвили его там.
ಅಮಚ್ಯನು ಯೆಹೋವ ದೇವರ ಕಡೆಯಿಂದ ತೊಲಗಿಹೋದ ತರುವಾಯ, ಯೆರೂಸಲೇಮಿನವರು ಅವನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.
28 И привезли его на конях, и похоронили его с отцами его в городе Иудином.
ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ಯೆಹೂದದ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು.