< 1 Regii 13 >
1 Şi, iată, a venit un om al lui Dumnezeu din Iuda prin cuvântul DOMNULUI la Betel; şi Ieroboam stătea în picioare lângă altar pentru a arde tămâie.
೧ಆಗ ಯೆಹೂದ ದೇಶದವನಾದ ಒಬ್ಬ ದೇವರ ಮನುಷ್ಯನು ಯೆಹೋವನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪಹಾಕುವುದಕ್ಕಾಗಿ ಯಜ್ಞವೇದಿಯ ಹತ್ತಿರ ನಿಂತುಕೊಂಡಿದ್ದನು
2 Şi el a strigat împotriva altarului prin cuvântul DOMNULUI şi a spus: Altarule, altarule, astfel spune DOMNUL: Iată, un fiu se va naşte casei lui David, pe nume Iosia; şi pe tine, el va oferi pe preoţii înălţimilor, care ard tămâie pe tine şi oase de oameni vor fi arse pe tine.
೨ಆಗ ಆ ಮನುಷ್ಯನು ಯೆಹೋವನ ಅಪ್ಪಣೆಯಿಂದ ಯಜ್ಞವೇದಿಯನ್ನು ಕುರಿತು, “ವೇದಿಯೇ, ವೇದಿಯೇ, ದಾವೀದನ ಸಂತಾನದಲ್ಲಿ ಯೋಷೀಯನು ಎಂಬ ಒಬ್ಬ ಮನುಷ್ಯನು ಹುಟ್ಟುವನು. ಅವನು ನಿನ್ನ ಮೇಲೆ ಧೂಪಹಾಕುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಯಜ್ಞಮಾಡುವನು. ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು ಎಂದು ಯೆಹೋವನು ಹೇಳುತ್ತಾನೆ” ಅಂದನು.
3 Şi a dat un semn în acea zi, spunând: Acesta este semnul despre care DOMNUL a vorbit: Iată, altarul va fi despicat şi cenuşa care este pe el va fi vărsată.
೩ಇದಲ್ಲದೆ ಅವನು, “ನನ್ನ ಮಾತು ಯೆಹೋವನದು ಎಂಬುವುದಕ್ಕೆ ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಗುವುದೇ ಗುರುತಾಗಿರುವುದು” ಎಂದು ಹೇಳಿದನು.
4 Şi s-a întâmplat, când împăratul Ieroboam a auzit spusa omului lui Dumnezeu, pe care a strigat-o împotriva altarului din Betel, că şi-a întins mâna de la altar, spunând: Prindeţi-l. Şi mâna pe care o întinsese împotriva lui, s-a uscat, astfel încât nu a putut să o tragă din nou la el.
೪ಬೇತೇಲಿನ ಯಜ್ಞವೇದಿಯ ಬಳಿಯಲ್ಲಿ ನಿಂತಿದ್ದ ಅರಸನು ಆ ದೇವರ ಮನುಷ್ಯನು ವೇದಿಗೆ ವಿರುದ್ಧವಾಗಿ ನುಡಿದಿದ್ದನ್ನು ಕೇಳಿ, “ಕೈಚಾಚಿ ಅವನನ್ನು ಹಿಡಿಯಿರಿ” ಎಂದು ಆಜ್ಞಾಪಿಸಿದನು. ಕೂಡಲೇ ಅವನ ಕೈ ಬತ್ತಿ ಹೋಯಿತು. ಅವನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಅಗಲ್ಲಿಲ್ಲ.
5 Altarul de asemenea s-a despicat şi cenuşa s-a vărsat de pe altar, conform cu semnul pe care omul lui Dumnezeu îl dăduse prin cuvântul DOMNULUI.
೫ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಯಿತು. ಹೀಗೆ ಆ ದೇವರ ಮನುಷ್ಯನು ಯೆಹೋವನ ಅಪ್ಪಣೆಯಿಂದ ಹೇಳಿದ ಗುರುತು ನೆರವೇರಿತು.
6 Şi împăratul a răspuns şi a zis omului lui Dumnezeu: Roagă acum faţa DOMNULUI Dumnezeului tău şi roagă-te pentru mine, ca mâna mea să îmi fie refăcută. Şi omul lui Dumnezeu a implorat pe DOMNUL şi mâna împăratului i-a fost refăcută din nou, şi mâna a devenit precum era înainte.
೬ಅರಸನು ಆ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ಪ್ರಸನನ್ನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು” ಎಂದು ಕೇಳಿದನು. ದೇವರ ಮನುಷ್ಯನು ಯೆಹೋವನನ್ನು ಬೇಡಿಕೊಂಡಿದ್ದರಿಂದ ಅರಸನ ಕೈ ವಾಸಿಯಾಗಿ ಮುಂಚಿನಂತೆ ಆಯಿತು.
7 Şi împăratul i-a spus omului lui Dumnezeu: Vino acasă cu mine şi răcoreşte-te şi îţi voi da o răsplată.
೭ಆಗ ಅರಸನು ಅವನಿಗೆ, “ನನ್ನ ಮನೆಗೆ ಬಾ, ಸ್ವಲ್ಪ ಊಟ ಮಾಡಿ ವಿಶ್ರಾಂತಿ ಪಡೆದುಕೋ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ” ಎಂದನು.
8 Şi omul lui Dumnezeu a spus împăratului: Dacă mi-ai da jumătate din casa ta, nu voi intra cu tine, nici nu voi mânca pâine nici nu voi bea apă în acest loc;
೮ಆದರೆ ದೇವರ ಮನುಷ್ಯನು ಅರಸನಿಗೆ, “ನೀನು ನನಗೆ ನಿನ್ನ ಆಸ್ತಿಯಲ್ಲಿ ಅರ್ಧವನ್ನು ಕೊಟ್ಟರೂ, ನಾನು ನಿನ್ನ ಸಂಗಡ ಬರುವುದಿಲ್ಲ. ಇಲ್ಲಿ ಅನ್ನ ಪಾನಗಳನ್ನು ತೆಗೆದುಕೊಳ್ಳುವುದಿಲ್ಲ.
9 Pentru că astfel mi s-a poruncit prin cuvântul DOMNULUI, spunând: Să nu mănânci pâine, nici să nu bei apă, nici să nu te întorci pe aceeaşi cale pe care ai venit.
೯ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ ಮತ್ತು ಹಿಂದಿರುಗಿ ಹೋಗುವಾಗ ಬೇರೆ ದಾರಿಯಿಂದ ಹೋಗಬೇಕೆಂತಲೂ ನನಗೆ ಯೆಹೋವನ ಅಪ್ಪಣೆಯಾಗಿದೆ” ಎಂದು ಹೇಳಿದನು.
10 Astfel el a mers pe altă cale şi nu s-a întors pe calea pe care venise la Betel.
೧೦ಆ ದೇವರ ಮನುಷ್ಯನು ಬಂದ ದಾರಿಯನ್ನು ಬಿಟ್ಟು ಇನ್ನೊಂದು ದಾರಿಯನ್ನು ಹಿಡಿದು ಹೊರಟು ಹೋದನು.
11 Şi acolo în Betel locuia un profet bătrân; şi fiii săi au venit şi i-au spus toate lucrările pe care omul lui Dumnezeu le făcuse în acea zi în Betel; cuvintele pe care le spusese împăratului, pe acestea le-au spus de asemenea tatălui lor.
೧೧ಬೇತೇಲಿನಲ್ಲಿ ಒಬ್ಬ ವೃದ್ಧ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ದೇವರ ಮನುಷ್ಯನು ಆ ದಿನ ಬೇತೇಲಿನಲ್ಲಿ ಮಾಡಿದ್ದನ್ನೂ ಮತ್ತು ಅವನು ಅರಸನಿಗೆ ಹೇಳಿದ್ದನ್ನೂ ತಮ್ಮ ತಂದೆಗೆ ತಿಳಿಸಿದರು.
12 Şi tatăl lor le-a spus: Pe ce cale a mers el? Şi fiii săi văzuseră pe ce cale mersese omul lui Dumnezeu, care venise din Iuda.
೧೨ತಂದೆಯು ಅವರನ್ನು, “ಅವನು ಯಾವ ದಾರಿಯಿಂದ ಹೋದನು?” ಎಂದು ಕೇಳಲು ಅವರು ಯೆಹೂದ ದೇಶದವನಾದ ಆ ದೇವರ ಮನುಷ್ಯನು ಹೋದ ದಾರಿಯನ್ನು ತೋರಿಸಿದರು.
13 Şi a spus fiilor săi: Înşeuaţi-mi măgarul. Astfel ei i-au înşeuat măgarul; şi a călărit pe el,
೧೩ಆಗ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿಹಾಕಿರಿ” ಎಂದು ಆಜ್ಞಾಪಿಸಿಲು ಅವರು ತಡಿಹಾಕಿದರು. ಅವನು ಕತ್ತೆಯ ಮೇಲೆ ಕುಳಿತುಕೊಂಡು ಹೊರಟನು.
14 Şi a mers după omul lui Dumnezeu şi l-a găsit şezând sub un stejar; şi i-a spus: Eşti tu omul lui Dumnezeu care a venit din Iuda? Şi el a spus: Eu sunt.
೧೪ದೇವರ ಮನುಷ್ಯನ ಹಿಂದೆ ಹೋಗಿ ಏಲಾ ವೃಕ್ಷದ ಕೆಳಗೆ ಕುಳಿತ್ತಿದ್ದ ಅವನನ್ನು ಕಂಡು, “ಯೆಹೂದದಿಂದ ಬಂದ ದೇವರ ಮನುಷ್ಯನು ನೀನೋ?” ಎಂದು ಕೇಳಿದನು. ಅವನು ಹೌದೆಂದನು.
15 Atunci el i-a spus: Vino acasă cu mine şi mănâncă pâine.
೧೫ಆಗ ಆ ಮುದುಕನು ಅವನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡು” ಎಂದು ಹೇಳಿದನು.
16 Iar el a spus: Nu pot să mă întorc cu tine, nici să intru cu tine; nici nu voi mânca pâine, nici nu voi bea apă cu tine în acest loc;
೧೬ಅದಕ್ಕೆ ಅವನು, “ನಾನು ನಿನ್ನ ಸಂಗಡ ಬರವುದಿಲ್ಲ ಮತ್ತು ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವುದಿಲ್ಲ.
17 Pentru că mi s-a spus prin cuvântul DOMNULUI: Să nu mănânci pâine, nici să nu bei apă acolo, nici să te întorci din nou pe calea pe care ai venit.
೧೭ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ, ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಿಂದ ಹಿಂದಿರುಗಿ ಹೋಗಬೇಕೆಂದು ನನಗೆ ಯೆಹೋವನ ಅಪ್ಪಣೆಯಾಗಿದೆ” ಎಂದು ಉತ್ತರಕೊಟ್ಟನು.
18 El i-a spus: Eu sunt de asemenea profet precum eşti şi tu; şi un înger mi-a vorbit prin cuvântul DOMNULUI, spunând: Adu-l înapoi cu tine la casa ta, ca să mănânce pâine şi să bea apă. Dar el îl minţea.
೧೮ಆಗ ಆ ಮುದುಕನು, “ನಾನು ನಿನ್ನಂತೆ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು, ನಿನ್ನನ್ನು ಕರೆದುಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ದೇವರ ಮನುಷ್ಯನಿಗೆ ಪ್ರವಾದಿ ಹೇಳಿದ ಮಾತು ಸುಳ್ಳಾಗಿತ್ತು.
19 Astfel el s-a întors cu el şi a mâncat pâine în casa lui şi a băut apă.
೧೯ದೇವರ ಮನುಷ್ಯನು ಆ ಪ್ರವಾದಿಯ ಮಾತನ್ನು ನಂಬಿ ಅವನ ಮನೆಗೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು.
20 Şi s-a întâmplat, pe când şedeau la masă, că a venit cuvântul DOMNULUI la profetul care îl adusese înapoi;
೨೦ಅವರು ಊಟಮಾಡುತ್ತಿರುವಾಗ ದೇವರ ಮನುಷ್ಯನನ್ನು ತನ್ನ ಮನೆಗೆ ಕರೆದುಕೊಂಡು ಬಂದ ಪ್ರವಾದಿಗೆ ಯೆಹೋವನು ಒಂದು ವಾಕ್ಯವನ್ನು ದಯಪಾಲಿಸಿದನು.
21 Şi el a strigat către omul lui Dumnezeu care venise din Iuda, spunând: Astfel spune DOMNUL: Pentru că nu ai făcut ce a poruncit gura DOMNULUI şi nu ai păzit porunca pe care DOMNUL Dumnezeul tău ţi-o poruncise,
೨೧ಅವನು ಆ ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಆತನ ಆಜ್ಞೆಯನ್ನು ಮೀರಿ ಅವಿಧೇಯನಾಗಿ,
22 Ci ai venit înapoi şi ai mâncat pâine şi ai băut apă în locul despre care DOMNUL ţi-a spus: Să nu mănânci pâine şi să nu bei apă; trupul tău mort nu va intra în mormântul părinţilor tăi.
೨೨ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ ಹಿಂದಿರುಗಿ ಬಂದದ್ದರಿಂದ, ನಿನ್ನ ಶವವು ನಿನ್ನ ಕುಟುಂಬ ಸ್ಮಶಾನಭೂಮಿಯನ್ನು ಸೇರುವುದೇ ಇಲ್ಲವೆಂದು ಯೆಹೋವನು ಹೇಳುತ್ತಾನೆ” ಅಂದನು.
23 Şi s-a întâmplat, după ce a mâncat pâine şi după ce a băut, că a înşeuat măgarul pentru el, adică, pentru profetul pe care îl întorsese.
೨೩ಅನ್ನಪಾನಗಳನ್ನು ತೆಗೆದುಕೊಂಡ ನಂತರ ಅವನು ತಾನು ಕರೆದುಕೊಂದು ಬಂದಿದ್ದ ಪ್ರವಾದಿಗೋಸ್ಕರ ಕತ್ತೆಗೆ ತಡಿಹಾಕಿಸಿದನು.
24 Şi după ce a plecat, l-a întâlnit pe cale un leu şi l-a ucis; şi trupul său mort era aruncat în cale şi măgarul stătea lângă el, leul de asemenea stătea lângă trupul mort.
೨೪ದೇವರ ಮನುಷ್ಯನು ಸ್ವಲ್ಪ ದೂರ ಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದು ಹಾಕಿತು. ಅವನ ಶವವು ದಾರಿಯಲ್ಲಿಯೇ ಬಿದ್ದಿತ್ತು. ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು.
25 Şi, iată, au trecut nişte oameni şi au văzut trupul mort aruncat în cale şi leul stând lângă trupul mort; şi au venit şi au spus aceasta în cetatea unde locuia profetul cel bătrân.
೨೫ಹಾದುಹೋಗುವವರು ಶವವು ದಾರಿಯಲ್ಲಿ ಬಿದ್ದಿರುವುದನ್ನೂ, ಸಿಂಹವು ಅದರ ಬಳಿಯಲ್ಲಿ ನಿಂತಿರುವುದನ್ನೂ ಕಂಡು ವೃದ್ಧ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು.
26 Şi când profetul care îl adusese înapoi din cale a auzit despre aceasta, a spus: Este omul lui Dumnezeu, care nu a făcut ce a poruncit cuvântul DOMNULUI; pentru aceasta DOMNUL l-a dat leului, care l-a sfâşiat şi l-a ucis, conform cuvântului DOMNULUI, pe care i-l spusese.
೨೬ಅವನನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದ ಪ್ರವಾದಿಯು ಈ ಸುದ್ದಿಯನ್ನು ಕೇಳಿ ಅವರಿಗೆ, “ಆ ಶವವು ದೇವರ ಮನುಷ್ಯನದೇ ಆಗಿರಬೇಕು. ಅವನು ಯೆಹೋವನ ಆಜ್ಞೆಗೆ ಅವೀಧೆಯನಾದ್ದರಿಂದ ಯೆಹೋವನು ಅವನ ವಿಷಯದಲ್ಲಿ ತಾನು ಹೇಳಿದ ಮಾತು ನೆರವೇರುವಂತೆ ಅವನನ್ನು ಸಿಂಹದ ಬಾಯಿಗೆ ಒಪ್ಪಿಸಿದನು. ಅದು ಅವನ ಮೇಲೆ ಹಾರಿ ಅವನನ್ನು ಕೊಂದುಬಿಟ್ಟಿತು” ಎಂದು ಹೇಳಿದನು.
27 Şi a vorbit fiilor săi, zicând: Înşeuaţi-mi măgarul. Şi l-au înşeuat.
೨೭ಅವನು, “ಕತ್ತೆಗೆ ತಡಿಹಾಕಿರಿ” ಎಂದು ಮಕ್ಕಳಿಗೆ ಆಜ್ಞಾಪಿಸಲು ಅವರು ತಡಿಹಾಕಿದರು.
28 Şi a mers şi a găsit trupul său mort aruncat în cale şi măgarul şi leul stând lângă trupul mort; leul nu mâncase trupul mort, nici nu sfâşiase măgarul.
೨೮ಅವನು ಹೋಗಿ ಶವವು ದಾರಿಯಲ್ಲಿ ಬಿದ್ದಿರುವುದನ್ನೂ ಕತ್ತೆಯೂ ಸಿಂಹವೂ ಅದರ ಬಳಿಯಲ್ಲಿ ನಿಂತಿರುವುದನ್ನು ಕಂಡನು. ಸಿಂಹವು ಶವವನ್ನು ತಿನ್ನಲಿಲ್ಲ, ಕತ್ತೆಯನ್ನು ಕೊಲ್ಲಲೂ ಇಲ್ಲ.
29 Şi profetul a ridicat trupul mort al omului lui Dumnezeu şi l-a pus pe măgar şi l-a adus înapoi; şi profetul cel bătrân a intrat în cetate, pentru a-l jeli şi pentru a-l îngropa.
೨೯ಪ್ರವಾದಿಯು ದೇವರ ಮನುಷ್ಯನ ಶವವನ್ನು ಹೂಣಿಟ್ಟು, ಗೋಳಾಡಬೇಕೆಂದು ಕತ್ತೆಯ ಮೇಲೆ ಹಾಕಿ, ತನ್ನ ಊರಿಗೆ ತೆಗೆದುಕೊಂಡು ಬಂದು,
30 Şi a pus trupul său mort în propriul său mormânt; şi ei l-au jelit, spunând: Vai, fratele meu!
೩೦ತನ್ನ ಸ್ಮಶಾನಭೂಮಿಯಲ್ಲಿ ಅದನ್ನು ಸಮಾಧಿಮಾಡಿದನು. ಅವರು, “ಅಯ್ಯೋ, ನನ್ನ ಸಹೋದರನೇ!” ಎಂದು ಗೋಳಾಡಿದರು.
31 Şi s-a întâmplat, după ce l-a îngropat, că a vorbit fiilor săi, spunând: La moartea mea, înmormântaţi-mă în mormântul unde este înmormântat omul lui Dumnezeu; să îmi puneţi oasele lângă oasele lui;
೩೧ಅನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ನನ್ನ ಶವವನ್ನು ದೇವರ ಮನುಷ್ಯನ ಶವವಿರುವಲ್ಲೇ ಸಮಾಧಿಮಾಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳು ಇರುವಲ್ಲೇ ಇಡಿರಿ.
32 Fiindcă spusa pe care el a strigat-o prin cuvântul DOMNULUI împotriva altarului din Betel şi împotriva tuturor caselor înălţimilor care sunt în cetăţile din Samaria, se va întâmpla negreşit.
೩೨ಅವನು ಯೆಹೋವನ ಅಪ್ಪಣೆಯಿಂದ ಬೇತೇಲಿನ ಯಜ್ಞವೇದಿಗೆ ವಿರುದ್ಧವಾಗಿಯೂ ಸಮಾರ್ಯದ ಪಟ್ಟಣಗಳಲ್ಲಿರುವ ಎಲ್ಲಾ ಪೂಜಾಸ್ಥಳಗಳ ವಿರುದ್ಧವಾಗಿಯೂ, ಹೇಳಿದ ಮಾತುಗಳು ಸಂದೇಹವಿಲ್ಲದೆ ನೆರವೇರುವವು” ಎಂದನು.
33 După acest lucru Ieroboam nu s-a întors de la calea lui cea rea, ci a făcut din nou, din oamenii cei mai de jos, preoţi ai înălţimilor; oricine voia, îl consacra şi el devenea unul din preoţii înălţimilor.
೩೩ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ, ಪುನಃ ಕನಿಷ್ಠರಾದ ಜನರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು.
34 Şi acest lucru a fost păcat casei lui Ieroboam, chiar până la stârpire şi nimicire de pe faţa pământului.
೩೪ಈ ಕಾರಣದಿಂದ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ತೆಗೆದುಹಾಕಲ್ಪಟ್ಟು ನಿರ್ನಾಮವಾದರು.