< 1 Corinteni 9 >

1 Nu sunt apostol? Nu sunt liber? Nu am văzut pe Isus Cristos, Domnul nostru? Nu sunteți voi lucrarea mea în Domnul?
ನಾನು ಸ್ವತಂತ್ರನಲ್ಲವೋ? ನಾನು ಅಪೊಸ್ತಲನಲ್ಲವೋ? ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ?
2 Dacă nu sunt apostol altora vă sunt totuși fără îndoială vouă; fiindcă sigiliul apostoliei mele sunteți voi în Domnul.
ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ.
3 Răspunsul meu pentru cei ce mă cercetează este acesta:
ನನ್ನನ್ನು ವಿಮರ್ಶಿಸುವವರಿಗೆ ನನ್ನ ಪ್ರತ್ಯುತ್ತರವೇನೆಂದರೆ,
4 Nu avem dreptul să mâncăm și să bem?
ಅನ್ನ, ಪಾನಗಳಿಗೆ ನಮಗೆ ಹಕ್ಕಿಲ್ಲವೇ?
5 Nu avem dreptul să luăm cu noi soră, soție, ca și ceilalți apostoli și ca frații Domnului și Chifa?
ಕ್ರೈಸ್ತವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಸಂಚರಿಸುವುದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ, ಕರ್ತನ ಸಹೋದರರಂತೆಯ, ಮತ್ತು ಕೇಫನಂತೆಯೂ ನಮಗೆ ಹಕ್ಕಿಲ್ಲವೇ?
6 Ori numai eu și Barnaba nu avem dreptul să nu lucrăm?
ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ?
7 Cine se duce vreodată să se războiască pe propria sa cheltuială? Cine sădește o vie și nu mănâncă din rodul ei? Sau cine paște o turmă și nu mănâncă din laptele turmei?
ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ?
8 Vorbesc acestea ca un om, sau nu spune și legea la fel?
ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ?
9 Fiindcă este scris în legea lui Moise: Să nu legi gura boului ce treieră grâne! De boi se îngrijește Dumnezeu?
“ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂದು” ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಚಿಂತಿಸುವುದು ಎತ್ತುಗಳಿಗಾಗಿಯೋ?
10 Sau spune anume pentru noi? Fără îndoială, pentru noi este scris că cel ce ară, este dator să are în speranță; și cel ce treieră în speranță, ar trebui să fie părtaș la speranța lui.
೧೦ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು.
11 Dacă noi v-am semănat lucrurile spirituale, este mare lucru dacă noi vom secera ale voastre lucruri carnale?
೧೧ನಾವು ನಿಮ್ಮಲ್ಲಿ ಆತ್ಮೀಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ?
12 Dacă alții sunt părtași acestei autorități asupra voastră, nu cu atât mai mult noi? Totuși nu ne-am folosit de acest drept, ci suportăm toate, ca nu cumva să împiedicăm evanghelia lui Cristos.
೧೨ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು.
13 Nu știți că cei care lucrează în cele sfinte, mănâncă din ale templului? Și că aceia care servesc la altar, sunt părtași cu altarul?
೧೩ದೇವಾಲಯದಲ್ಲಿ ಸೇವೆ ಸಲ್ಲಿಸುವವರು ದೇವಾಲಯದಿಂದ ತಮ್ಮ ಬದುಕನ್ನು ಸಾಗಿಸಬೇಕೆಂದೂ ಮತ್ತು ಯಜ್ಞವೇದಿಯ ಬಳಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?
14 Chiar așa a rânduit Domnul, ca toți cei ce predică evanghelia să trăiască din evanghelie.
೧೪ಅದೇ ರೀತಿಯಾಗಿ ಕರ್ತನು ಸಹ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ತಮ್ಮ ಜೀವನಮಾಡಬೇಕೆಂದು ಆಜ್ಞಾಪಿಸಿದ್ದಾನೆ.
15 Dar eu nu m-am folosit de niciunul dintre acestea; și nu am scris acestea ca așa să fie făcute pentru mine, fiindcă mi-ar fi mai bine să mor, decât ca cineva să îmi zădărnicească fala.
೧೫ನಾನಂತೂ ಇವುಗಳಲ್ಲಿ ಒಂದನ್ನೂ ಪಾಲಿಸಲಿಲ್ಲ. ನನಗೆ ಏನಾದರೂ ಸಿಕ್ಕಬೇಕೆಂಬ ಉದ್ದೇಶದಿಂದ ನಾನು ಇದನ್ನು ಬರೆಯುತ್ತಿಲ್ಲ. ಯಾರಾದರೂ ಈ ಹೊಗಳಿಕೆಯನ್ನು ವ್ಯರ್ಥಮಾಡುವುದಕ್ಕಿಂತ ಸಾಯುವುದೇ ನನಗೆ ಲೇಸು.
16 Fiindcă deși predic evanghelia, eu nu am de ce să mă fălesc; fiindcă este pusă asupra mea o obligație; și îmi este vai mie dacă nu predic evanghelia.
೧೬ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ!
17 Deoarece, dacă practic aceasta de bunăvoie, am răsplată; iar dacă [o] fac împotriva voii mele, o administrare a evangheliei îmi este încredințată.
೧೭ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ.
18 Care este atunci răsplata mea? Este ca, predicând evanghelia, să pot face evanghelia lui Cristos fără cheltuială, ca să nu abuzez de puterea mea în evanghelie.
೧೮ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.
19 Fiindcă deși sunt liber față de toți, totuși m-am făcut rob tuturor, ca să câștig pe cei mai mulți.
೧೯ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು.
20 Și iudeilor m-am făcut ca iudeu, ca să câștig pe iudei; celor de sub lege, ca fiind sub lege, ca să câștig pe cei de sub lege;
೨೦ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು.
21 Celor fără lege, ca fără lege (nefiind fără lege față de Dumnezeu, ci sub lege față de Cristos), ca să câștig pe cei fără lege.
೨೧ನಾನು ದೇವರ ಧರ್ಮಶಾಸ್ತ್ರ ಇಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ಧರ್ಮಶಾಸ್ತ್ರಕ್ಕೆ ಹೊರತಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಧರ್ಮಶಾಸ್ತ್ರ ಬಾಹಿರನಂತಾದೆನು.
22 Celor slabi m-am făcut asemenea celor slabi, ca să câștig pe cei slabi. M-am făcut toate tuturor, ca oricum să salvez pe unii.
೨೨ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲರಂತಾದೆನು.
23 Și fac aceasta pentru evanghelie, ca să mă fac părtaș al ei cu voi.
೨೩ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿ, ನಾನು ಇತರರ ಸಂಗಡ ಸುವಾರ್ತೆಯ ಆಶೀರ್ವಾದದಲ್ಲಿ ಪಾಲುಗಾರನಾಗಬೇಕೆಂದು ಇದನ್ನು ಮಾಡುತ್ತಿದ್ದೇನೆ.
24 Nu știți că cei ce aleargă într-o cursă, toți aleargă, dar unul primește premiul? Alergați astfel ca să îl obțineți.
೨೪ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಒಬ್ಬನು ಮಾತ್ರ ಜಯಮಾಲೆಯನ್ನು ಪಡೆಯುತ್ತಾನೆ ಎಂಬುದು ನಿಮಗೆ ತಿಳಿಯದೋ? ಅವರಂತೆ ನೀವೂ ಸಹ ಬಹುಮಾನವನ್ನು ಗೆಲ್ಲಬೇಕೆಂದು ಓಡಿರಿ.
25 Dar oricine se străduiește pentru măiestrie se înfrânează în toate. Și ei fac aceasta ca să obțină o coroană putrezitoare, dar noi una neputrezitoare.
೨೫ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ.
26 Eu de aceea astfel alerg, dar nu ca în nesiguranță. Astfel lupt, dar nu ca unul care lovește în aer.
೨೬ಆದ್ದರಿಂದ ನಾನು ಸಹ ಗೊತ್ತುಗುರಿಯಿಲ್ಲದವನಂತೆ ಓಡುವುದಿಲ್ಲ; ಗಾಳಿಯೊಂದಿಗೆ ಗುದ್ದಾಡುವವನಂತೆ ಹೋರಾಡುವುದಿಲ್ಲ.
27 Ci îmi disciplinez trupul și îl țin în supunere, ca nu cumva în vreun fel după ce am predicat altora, eu însumi să fiu descalificat.
೨೭ಇತರರಿಗೆ ಬೋಧಿಸಿದ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ ಸ್ವಾಧಿನದಲ್ಲಿಟ್ಟುಕೊಳ್ಳುತ್ತೇನೆ.

< 1 Corinteni 9 >