< Apocalipse 10 >

1 E eu vi outro forte anjo descendo do céu, vestido com uma nuvem; e por cima de [sua] cabeça [estava] o arco colorido celeste; e o rosto dele [era] como o sol, e os pés dele como coluna de fogo.
ಆಗ ನಾನು ಮತ್ತೊಬ್ಬ ಬಲಿಷ್ಠನಾದ ದೇವದೂತನು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಮುಗಿಲ ಬಿಲ್ಲು ಇತ್ತು. ಅವನ ಮುಖವು ಸೂರ್ಯನಂತಿದ್ದು, ಅವನ ಕಾಲುಗಳು ಅಗ್ನಿಸ್ತಂಭಗಳಂತಿದ್ದವು.
2 E na mão dele tinha um livrinho aberto; e pôs seu pé direito sobre o mar, e o esquerdo sobre a terra.
ಅವನು ತನ್ನ ಕೈಯಲ್ಲಿ ತೆರೆದಿದ್ದ ಒಂದು ಚಿಕ್ಕ ಸುರುಳಿಯನ್ನು ಹಿಡಿದುಕೊಂಡಿದ್ದನು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೂ ತನ್ನ ಎಡಗಾಲನ್ನು ಭೂಮಿಯ ಮೇಲೂ ಇಟ್ಟುಕೊಂಡು,
3 E clamou em alta voz, como quando o leão ruge; e quando ele clamou, os sete trovões falaram suas vozes.
ಸಿಂಹದ ಘರ್ಜನೆಯಂತೆ ಮಹಾ ಸ್ವರದಿಂದ ಕೂಗಿದನು. ಅವನು ಕೂಗಿದಾಗ, ಏಳು ಗುಡುಗುಗಳು ಮಾತನಾಡಿದವು.
4 E quando os sete trovões falaram suas vozes, eu estava a pondo de escrevê [-las]; mas eu ouvi uma voz do céu me dizer: “Sela as coisas que os sete trovões falaram, e não as escrevas.”
ಏಳು ಗುಡುಗುಗಳು ಮಾತನಾಡಿದಾಗ, ನಾನು ಬರೆಯಬೇಕೆಂದಿದ್ದೆನು. ಆದರೆ ಪರಲೋಕದಿಂದ ಬಂದ ಶಬ್ದವು, “ನೀನು ಆ ಏಳು ಗುಡುಗುಗಳು ಹೇಳಿರುವುದನ್ನು ಮುದ್ರೆಹಾಕಿ ಮುಚ್ಚಿಡು. ಅದನ್ನು ಬರೆಯಬೇಡ,” ಎಂದು ಹೇಳುವುದನ್ನು ಕೇಳಿದೆನು.
5 E o anjo que eu vi estar sobre o mar e sobre a terra levantou sua mão ao céu,
ಆಗ ಸಮುದ್ರದ ಮೇಲೂ ಭೂಮಿಯ ಮೇಲೂ ನಿಂತಿರುವ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,
6 E jurou por aquele que vive para todo o sempre, o qual criou o céu e as coisas que nele há, e a terra e as coisas que nela há, e o mar e as coisas que nele há, que não haverá mais tempo; (aiōn g165)
ಯುಗಯುಗಾಂತರಕ್ಕೂ ಜೀವಿಸುವವರೂ ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿದವರ ಮೇಲೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಇನ್ನು ಆಲಸ್ಯವಾಗುವುದಿಲ್ಲ! (aiōn g165)
7 Mas [que] nos dias da voz do sétimo anjo, quando sua trombeta estiver a ponto de tocar, o mistério de Deus se cumprirá, assim como ele bem anunciou aos seus servos e profetas.
ಆದರೆ ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಬೇಕೆಂದಿರುವ ದಿನಗಳಲ್ಲಿ ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ಪ್ರಕಟಿಸಿದಂತೆಯೇ, ದೇವರ ರಹಸ್ಯವು ನೆರವೇರುವುದು.”
8 E a voz que eu tinha ouvido do céu voltou a falar comigo, e disse: “Vai, [e] toma o livrinho aberto da mão do anjo que está sobre o mar e sobre a terra.”
ಆಗ ಪರಲೋಕದಿಂದ ನಾನು ಕೇಳಿದ್ದ ಧ್ವನಿಯು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವ ದೇವದೂತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ಹೇಳಿತು.
9 E eu fui até o anjo, dizendo-lhe: “Dá-me o livrinho.” E ele me disse: “Toma-o, e come-o; e fará amargo o teu ventre, mas em tua boca será doce como mel.”
ಆಗ ನಾನು ದೇವದೂತನ ಬಳಿ ಹೋಗಿ, ಅವನನ್ನು, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಅವನು ನನಗೆ, “ಇದನ್ನು ತೆಗೆದುಕೊಂಡು ತಿನ್ನು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು. ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು,” ಎಂದು ಹೇಳಿದನು.
10 E eu tomei o livrinho da mão do anjo, e comi; e ele era em minha boca doce como o mel; mas quando eu o comi, meu ventre ficou amargo.
ನಾನು ದೇವದೂತನ ಕೈಯಿಂದ ಆ ಚಿಕ್ಕ ಸುರುಳಿಯನ್ನು ತೆಗೆದುಕೊಂಡು ತಿಂದೆನು. ಇದರ ರುಚಿಯು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಾಗ, ನನ್ನ ಹೊಟ್ಟೆ ಕಹಿಯಾಯಿತು.
11 E ele me disse: “É necessário que profetizes outra vez a muitos povos, nações, línguas e reis.”
ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.

< Apocalipse 10 >