< Gênesis 28 >
1 Então Isaque chamou a Jacó, e o abençoou, e mandou-lhe dizendo: Não tomes mulher das filhas de Canaã.
ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಆಜ್ಞಾಪಿಸಿದ್ದೇನೆಂದರೆ, “ಕಾನಾನ್ಯರ ಸ್ತ್ರೀಯರನ್ನು ನೀನು ಮದುವೆಯಾಗಬಾರದು.
2 Levanta-te, vai a Padã-Arã, à casa de Betuel, pai de tua mãe, e toma ali mulher das filhas de Labão, irmão de tua mãe.
ಕೂಡಲೇ ನಿನ್ನ ತಾಯಿಯ ತಂದೆ ಬೆತೂಯೇಲನು ಇರುವ ಪದ್ದನ್ ಅರಾಮಿಗೆ ಹೋಗು. ನಿನ್ನ ತಾಯಿಯ ಸಹೋದರ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೋ.
3 E o Deus Todo-Poderoso te abençoe e te faça frutificar, e te multiplique, até vir a ser congregação de povos;
ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಿ, ನೀನು ದೊಡ್ಡ ಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ.
4 E te dê a bênção de Abraão, e à tua descendência contigo, para que herdes a terra de tuas peregrinações, que Deus deu a Abraão.
ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ನೀನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೂ, ನಿನ್ನ ಸಂತತಿಗೂ ಕೊಡಲಿ,” ಎಂದನು.
5 Assim enviou Isaque a Jacó, o qual foi a Padã-Arã, a Labão, filho de Betuel arameu, irmão de Rebeca, mãe de Jacó e de Esaú.
ಇಸಾಕನು ಯಾಕೋಬನನ್ನು ಕಳುಹಿಸಿದಾಗ, ಅವನು ಪದ್ದನ್ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿ ರೆಬೆಕ್ಕಳ ಸಹೋದರ ಅರಾಮಿನವನಾದ ಬೆತೂಯೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
6 E viu Esaú como Isaque havia abençoado a Jacó, e lhe havia enviado a Padã-Arã, para tomar para si mulher dali; e que quando lhe abençoou, lhe havia mandado, dizendo: Não tomarás mulher das filhas de Canaã;
ಇಸಾಕನು ಯಾಕೋಬನನ್ನು ಆಶೀರ್ವದಿಸಿ, ಅವನಿಗೆ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ಪದ್ದನ್ ಅರಾಮಿಗೆ ಕಳುಹಿಸಿದ್ದನ್ನೂ, ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ, ಅವನಿಗೆ, “ಕಾನಾನ್ಯರ ಪುತ್ರಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳಬಾರದು,” ಎಂದು ಆಜ್ಞಾಪಿಸಿದ್ದನ್ನೂ, ಏಸಾವನು ತಿಳಿದುಕೊಂಡನು.
7 E que Jacó havia obedecido a seu pai e a sua mãe, e se havia ido a Padã-Arã.
ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ, ಪದ್ದನ್ ಅರಾಮಿಗೆ ಹೋದದ್ದನ್ನೂ
8 Esaú viu que as filhas de Canaã pareciam mal ao seu pai Isaque.
ಕಾನಾನ್ಯರ ಪುತ್ರಿಯರು ತನ್ನ ತಂದೆ ಇಸಾಕನಿಗೆ ಮೆಚ್ಚಿಗೆಯಾಗಲಿಲ್ಲವೆಂದು ಏಸಾವನು ತಿಳಿದು,
9 Então Esaú foi a Ismael, e tomou para si por mulher, além de suas outras mulheres, a Maalate, filha de Ismael, filho de Abraão, irmã de Nebaiote.
ಅವನು ಇಷ್ಮಾಯೇಲನ ಬಳಿಗೆ ಹೋಗಿ, ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗ ಇಷ್ಮಾಯೇಲನ ಮಗಳೂ, ನೆಬಾಯೋತನ ತಂಗಿಯೂ ಆಗಿರುವ ಮಹಲತ್ ಎಂಬವಳನ್ನೂ ಮದುವೆಮಾಡಿಕೊಂಡನು.
10 E Jacó saiu de Berseba, e foi a Harã;
ಆಗ ಯಾಕೋಬನು ಬೇರ್ಷೆಬದಿಂದ ಹಾರಾನಿನ ಕಡೆಗೆ ಹೊರಟನು.
11 ele chegou a um lugar, e ali dormiu, porque o sol já se havia posto. E tomou uma das pedras daquele lugar e a pôs por sua cabeceira, e deitou-se naquele lugar.
ಅವನು ಒಂದು ಸ್ಥಳಕ್ಕೆ ಸೇರಿದಾಗ, ಸೂರ್ಯಾಸ್ತಮವಾದದ್ದರಿಂದ ಅಲ್ಲಿ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ತಲೆ ದಿಂಬನ್ನಾಗಿ ಇಟ್ಟುಕೊಂಡು, ಆ ಸ್ಥಳದಲ್ಲಿ ಮಲಗಿಕೊಂಡನು.
12 E sonhou, e eis uma escada que estava posta na terra, e seu topo tocava no céu; e eis que anjos de Deus subiam e desciam por ela.
ಆಗ ಅವನು ಒಂದು ಕನಸುಕಂಡನು. ಏಣಿಯು ಭೂಮಿಯ ಮೇಲೆ ನಿಂತಿತ್ತು. ಅದರ ತುದಿಯು ಪರಲೋಕಕ್ಕೆ ಮುಟ್ಟಿತ್ತು. ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
13 E eis que o SENHOR estava no alto dela, e disse: “Eu sou o SENHOR, o Deus de teu pai Abraão, e o Deus de Isaque; a terra em que estás deitado, eu a darei a ti e à tua descendência.
ಇದಲ್ಲದೆ ಯೆಹೋವ ದೇವರು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರೂ, ಇಸಾಕನ ದೇವರೂ ಆದ ಯೆಹೋವ ದೇವರು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು.
14 E a tua descendência será como o pó da terra, e te estenderás ao ocidente, ao oriente, ao norte, e ao sul; e todas as famílias da terra serão abençoadas em ti e na tua descendência.
ನಿನ್ನ ಸಂತತಿಯು ಭೂಮಿಯ ಧೂಳಿನಂತೆ ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣೋತ್ತರಗಳಿಗೆ ಹರಡಿಕೊಳ್ಳುವೆ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಜನರು ಆಶೀರ್ವಾದ ಹೊಂದುವರು.
15 E eis que eu estou contigo, e te guardarei por onde quer que fores, e te farei voltar a esta terra; porque não te deixarei, até que eu tenha feito o que te disse.”
ಇಗೋ, ನಾನು ನಿನ್ನ ಸಂಗಡ ಇದ್ದು, ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಈ ದೇಶಕ್ಕೆ ನಿನ್ನನ್ನು ತಿರುಗಿ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವವರೆಗೆ ನಿನ್ನನ್ನು ಬಿಡುವುದಿಲ್ಲ,” ಎಂದರು.
16 Jacó despertou-se de seu sonho, e disse: “Certamente o SENHOR está neste lugar, e eu não sabia.”
ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ನಿಶ್ಚಯವಾಗಿ ಈ ಸ್ಥಳದಲ್ಲಿ ಯೆಹೋವ ದೇವರು ಇದ್ದಾರೆ. ಇದನ್ನು ನಾನು ಅರಿಯಲಿಲ್ಲ,” ಎಂದನು.
17 E teve medo, e disse: “Quão temível é este lugar! Não é outra coisa, senão casa de Deus e porta do céu.”
ಅವನು ಭಯಪಟ್ಟು, “ಈ ಸ್ಥಳವು ಎಷ್ಟೋ ಗಂಭೀರವಾದದ್ದು, ಇದು ದೇವರ ಮನೆಯೇ ಹೊರತು ಬೇರೆಯಲ್ಲ. ಇದೇ ಪರಲೋಕದ ಬಾಗಿಲು,” ಎಂದನು.
18 Jacó levantou-se de manhã cedo, tomou a pedra que havia colocado de cabeceira, e a pôs por coluna, e derramou azeite sobre ela.
ಯಾಕೋಬನು ಬೆಳಿಗ್ಗೆ ಎದ್ದು, ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು, ಅದನ್ನು ಸ್ತಂಭವಾಗಿ ನೆಟ್ಟು, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
19 E chamou o nome daquele lugar Betel, porém antes o nome da cidade era Luz.
ಇದಲ್ಲದೆ ಅವನು ಆ ಸ್ಥಳಕ್ಕೆ, ಬೇತೇಲ್, ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಸ್ಥಳಕ್ಕೆ, ಲೂಜ್ ಎಂದು ಹೆಸರಿತ್ತು.
20 E Jacó fez um voto, dizendo: “Se Deus for comigo, e me guardar nesta viagem que vou, e me der pão para comer e roupa para vestir,
ಆಗ ಯಾಕೋಬನು ಪ್ರಮಾಣಮಾಡಿ, “ದೇವರು ನನ್ನ ಸಂಗಡ ಇದ್ದು, ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ ನನಗೆ ಕೊಟ್ಟು,
21 e se eu voltar em paz à casa de meu pai, o SENHOR será meu Deus,
ನನ್ನನ್ನು ಸಮಾಧಾನವಾಗಿ ನನ್ನ ತಂದೆಯ ಮನೆಗೆ ತಿರುಗಿ ಬರಮಾಡಿದರೆ, ಯೆಹೋವ ನನಗೆ ದೇವರಾಗಿರುವರು.
22 e esta pedra que pus por coluna será casa de Deus; e de tudo o que me deres, darei a ti o dízimo.
ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವುದು. ಆಗ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ದೇವರಿಗೆ ನಾನು ಖಂಡಿತವಾಗಿ ಕೊಡುವೆನು,” ಎಂದನು.